Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ
Team Udayavani, May 4, 2024, 3:30 PM IST
ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಚುನಾವಣೆಗಳು ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ. ಜನರೇ ತಮ್ಮ ಪ್ರತಿನಿಧಿಗಳನ್ನು ಆರಿಸುವ ಪ್ರಕ್ರಿಯೆ. ಹಿಂದೆ ಚುನಾವಣೆಯ ಮಾಹಿತಿಯನ್ನು ಜನರಿಗೆ ತಲುಪಿಸುವುದು ಕ್ಲಿಷ್ಟಕರ ಸಂಗತಿಯಾಗಿತ್ತು. ಆದರೆ ಈಗ ಕಾಲಬದಲಾಗಿದೆ. ಎಲ್ಲವೂ ನಮ್ಮ ಬೆರಳ ತುದಿಯಲ್ಲೇ ಇದೆ. ಅಕ್ಷರಸ್ತರಿಂದ ಹಿಡಿದು ಅನಕ್ಷರಸ್ತರವರೆಗೂ ಯಾವುದೇ ವಿಚಾರಗಳನ್ನು ತಿಳಿಯಲು ಸಾಮಾಜಿಕ ಜಾಲತಾಣಗಳು ಸಹಾಯ ಮಾಡುತ್ತವೆ.
ಇಂದು ಮತದಾನದ ಮಾಹಿತಿ, ರಾಜಕೀಯ ಅಭ್ಯರ್ಥಿಗಳ ವಿಚಾರಗಳನ್ನು ಮತದಾರರ ತನಕ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಬಹುದೊಡ್ಡದು. ಮಾಧ್ಯಮಗಳು ಚುನಾವಣಾ ಆಯೋಗದ ಶಕ್ತಿಯಾಗಿ ಕೆಲಸಮಾಡುತ್ತಿದೆ ಎಂದೂ ಹೇಳಬಹುದು. ಚುನಾವಣೆ ಘೋಷಣೆ ಆದಾಗಿನಿಂದ ಹಿಡಿದು ಪಲಿತಾಂಶ ಹೊರಬೀಳುವ ತನಕದ ಕ್ಷಣಕ್ಷಣದ ಮಾಹಿತಿಯನ್ನು ಪ್ರಜೆಗಳಿಗೆ ತಲುಪಿಸುವ ಕಾರ್ಯವನ್ನು ಈ ಮಾಧ್ಯಮಗಳು ಮಾಡುತ್ತವೆ ಎಂದರೆ ತಪ್ಪಿಲ್ಲ. ಚುನಾವಣೆ ಸಂದರ್ಭ ಸಾಮಾಜಿಕ ಮಾಧ್ಯಮಗಳ ಪಾತ್ರಗಳು ಈ ಕೆಳಗಿನಂತಿವೆ
ಎಂ.ಸಿ.ಎಂ.ಸಿ. ಕಮಿಟಿ : ಎಂ.ಸಿ.ಎಂ.ಸಿ. ಕಮಿಟಿ ಎಂದರೆ ಭಾರತ ಚುನಾವಣಾ ಆಯೋಗ ಚುನಾವಣೆ ಸಮಯದಲ್ಲಿ ರಾಜಕೀಯ ವ್ಯಕ್ತಿಗಳು ಹಣ, ಉಡುಗೊರೆ ನೀಡಿ ಮಾಧ್ಯಮದಲ್ಲಿ ವ್ಯಕ್ತಿ ಮತ್ತು ಪಕ್ಷದ ಪರವಾಗಿ ಪ್ರಕಟವಾಗುವ ಸುದ್ದಿ, ಜಾಹೀರಾತುಗಳನ್ನು ತಪ್ಪಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಮಾಧ್ಯಮ ಪ್ರಮಾಣಿಕರಣ ಮತ್ತು ಮೇಲ್ವಿಚಾರಣಾ ಸಮಿತಿ ಮಾಡಿದೆ. ಈ ಸಮಿತಿಯು ರಾಜಕೀಯ ಸುದ್ದಿ ಮತ್ತು ವಿಶ್ಲೇಷಣೆ ಮಾಡದೇ ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತದೆ ಮತ್ತು ಮಾಧ್ಯಮಗಳ ಮೇಲೆ ಸದಾ ನಿಗಾ ಇಟ್ಟಿರುತ್ತದೆ. ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣಿಕರಣ ಮೇಲುಸ್ತುವಾರಿ ಸಮಿತಿ(ಎಂಸಿಎಂಸಿ)ಯ ಪೂರ್ವಾನುಮತಿ ಕಡ್ಡಾಯವಾಗಿದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ರಾಜಕೀಯ ಪಕ್ಷ, ವ್ಯಕ್ತಿಗಳ ಜಾಹೀರಾತುಗಳ ಪೂರ್ವಾನುಮತಿ ಅತ್ಯಗತ್ಯ ಆಗಿರುತ್ತದೆ.
ಮೊಬೈಲ್ ಅಪ್ಲಿಕೇಷನ್
ಚುನಾವಣಾ ಆಯೋಗವು ಮುಕ್ತ ಮತ್ತು ನಿಪಕ್ಷಪಾತ, ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಸಾರ್ವಜನಿಕರು ಸಹಭಾಗಿಯಾಗುವ ದೃಷ್ಟಿಯಿಂದ ಹಲವು ಮೊಬೈಲ್ ಅಪ್ಲಿಕೇಷನ್ ಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಪ್ರಮುಖವಾದವು ಕೆಳಗಿನಂತಿವೆ.
ಸಿ-ವಿಜಿಲ್: ಈ ಆಪ್ ಮೂಲಕ ಸಾರ್ವಜನಿಕರು ತಮ್ಮ ಸುತ್ತಮುತ್ತ ಕಂಡುಬರುವ ಚುನಾವಣ ಆಕ್ರಮ ಮತ್ತು ನೀತಿ ಸಂಹಿತೆ ಉಲಂಘನೆ ಪ್ರಕರಣಗಳ ಕುರಿತು ನೇರವಾಗಿ ಆಯೋಗಕ್ಕೆ ದೂರು ನೀಡಬಹುದು.
ಸುವಿಧಾ ಅಪ್ಲಿಕೇಷನ್: ಚುನಾವಣೆ ಅವಧಿಯಲ್ಲಿ ಅಭ್ಯರ್ಥಿಗಳಿಗೆ ನಾಮ ನಿರ್ದೇಶನ ಮತ್ತು ಅನುಮತಿ ಪ್ರಕ್ರಿಯೆಗೆ ಸಹಾಯ ಮಾಡಲು ಆಯೋಗವು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಫಾರ್ಮ್ ಡೌನ್ ಲೋಡ್ ಮಾಡಬಹುದು.
ದಿವ್ಯಾಂಗರಿಗೆ ಸಕ್ಷಮ್ ಆ್ಯಪ್: ಚುನಾವಣ ಆಯೋಗ ದಿವ್ಯಾಂಗರಿಗೆ ಕೆಲವು ವಿಶೇಷ ಸೇವೆಗಳನ್ನು ಒದಗಿಸಿದ್ದು, ಈ ಸೇವೆಗಳನ್ನು ಪಡೆಯಲು ಈ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಅಪರಾಧ, ಪೂರ್ವಾಪರಗಳ ಬಗ್ಗೆ ನಾಗರಿಕರು ತಿಳಿದುಕೊಳ್ಳಲು ಈ ಆ್ಯಪ್ ಸಹಾಯ ಮಾಡುತ್ತದೆ.
ಚುನಾವಣ ಜಾಗೃತಿ ಮತ್ತು ಮತದಾರರ ಶಿಕ್ಷಣಕ್ಕೆ ಉತ್ತೇಜನ ನೀಡಲು ಚುನಾವಣ ಆಯೋಗ ಕೈಗೊಂಡಿರುವ ಪ್ರಯತ್ನಕ್ಕೆ ಮಾಧ್ಯಮ ಜತೆ ಜತೆಯಾಗಿ ಕೆಲಸಮಾಡುತ್ತದೆ. ಜನವರಿ 25 ರಾಷ್ಟ್ರೀಯ ಮತದಾರರ ದಿನದಂದು ಚುನಾವಣೆ ಬಗ್ಗೆ ಸರಿಯಾದ ಮಾಹಿತಿ ನೀಡಿ ಮತದಾರರ ಜಾಗೃತಿ ಮಾಡಿದ ಹಲವು ದಿನಪತ್ರಿಕೆಗಳು ಮತ್ತು ರೇಡಿಯೋಗಳನ್ನು ಭಾರತದ ಮಾನ್ಯ ರಾಷ್ಟ್ರಪತಿಗಳು ಸಮ್ಮಾನಿಸಿದ್ದಾರೆ ಇದು ಹೆಮ್ಮಯ ವಿಷಯವಾಗಿದೆ. ಮತದಾನ ನಮ್ಮೆಲ್ಲರ ಹಕ್ಕು ತಪ್ಪದೆ ಕಡ್ಡಾಯವಾಗಿ ಮೇ 7ರಂದು ಮತದಾನ ಮಾಡಿ ನಮ್ಮ ಹಕ್ಕನ್ನು ಚಲಾಯಿಸೋಣ.
ಕಿರಣ್ ಕುಮಾರ್ ಪಿ.
ಚನ್ನಪಟ್ಟಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.