UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ


Team Udayavani, Nov 13, 2024, 5:39 PM IST

12-uv-fusion

ಹಬ್ಬ ಹರಿದಿನಗಳೆಂದರೆ ಎಲ್ಲಿಲ್ಲದ ಸಂಭ್ರಮ. ಆಚರಣೆಯ ಹಿಂದಿನ ದಿನವೇ ಎಲ್ಲ ತಯಾರಿಗಳನ್ನು ಮಾಡಿಕೊಂಡು ಹಬ್ಬದ ದಿನದಂದು ಸಂತಸ, ಸಡಗರದಿಂದ ತಮ್ಮ ಮಕ್ಕಳನ್ನು ಒಳಗೊಂಡಂತೆ ಸಂಪ್ರದಾಯದಿಂದ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹಿರಿಯರು ನಡೆದು ಬಂದ ಹಾದಿಯಲ್ಲಿ ಕಿರಿಯವರಾದ ನಾವುಗಳು ನಮ್ಮ ಆಚರಣೆಗಳನ್ನೇ ಮರೆತುಬಿಡುತ್ತಿದ್ದೇವೆ. ಇಂದಿನ ಯುಗದಲ್ಲಿ ಅದೆಷ್ಟೋ ಯುವಕರಿಗೆ ನಮ್ಮಲ್ಲಿ ನಡೆಯುವ ಹಬ್ಬ ಹರಿದಿನಗಳ ಸಂಪ್ರದಾಯ, ಆಚಾರ ವಿಚಾರಗಳು, ಅವುಗಳಲ್ಲಿನ ನಂಬಿಕೆ ಇವುಗಳ ಬಗೆಗಿನ ಪರಿಚಯವೇ ಇಲ್ಲದಂತಾಗಿಬಿಟ್ಟಿದೆ.

ಅಲ್ಲದೆ ತಂತ್ರಜ್ಞಾನದ ಬಳಕೆಯು ಅತ್ಯಂತ ಹೆಚ್ಚಿನ ರೀತಿಯಲ್ಲಿದ್ದು, ನಮ್ಮನ್ನು ನಾವು ಇಂಟರ್ನೆಟ್‌ ಯುಗ, ಡಿಜಿಟಲ್‌ ಮಾಧ್ಯಮಗಳ ಯುಗ ಇವುಗಳ ಸುತ್ತ ಸುತ್ತುವಂತೆ ಮಾರ್ಪಡುತ್ತಿದ್ದೇವೆ ಹಾಗೂ ಮಾರ್ಪಟ್ಟಿದ್ದೇವೆ. ಆದರೆ ಹಿಂದಿನ ದಿನಗಳಲ್ಲಿ ಅಂದರೆ ಸಾಮಾಜಿಕ ಜಾಲತಾಣ, ಇಂಟರ್ನೆಟ್‌, ತಂತ್ರಜ್ಞಾನ ಇವೆಲ್ಲವೂ ಬರುವ ಮೊದಲು ಯುವಕರೂ ಸೇರಿದಂತೆ ನಮ್ಮ ಸುತ್ತ ಮುತ್ತಲಿನ ಚಟುವಟಿಕೆಗಳನ್ನು, ಆಚರಣೆಗಳನ್ನು ಮೈಗೂಡಿಸಿಕೊಂಡಿದ್ದೆವು. ದುರದೃಷ್ಟವಶಾತ್‌ ಈಗಿನ ಯುವಜನರಿಗೆ ಹಿಂದಿನ ವಿಷಯ ಜ್ಞಾನವು ಮಾಸಿಹೋಗಿದೆ. ಇವೆಲ್ಲದರ ಕಡೆಗಿನ ಒಲವು ಕಡಿಮೆಯಾಗುತ್ತಿದೆ.

ಹಬ್ಬಗಳು ನಮ್ಮ ಸಾಮಾಜಿಕ ಕೌಶಲಗಳು, ಅದರಲ್ಲಿನ ಆಚರಣೆಯ ಮಹತ್ವ ಇವೆಲ್ಲವನ್ನೂ ಒಳಗೊಂಡು ಜನರನ್ನು ಒಂದುಗೂಡಿಸಿ ಎಲ್ಲರೂ ಸಂಭ್ರಮಿಸುವ ಸಂತಸದ ದಿನವಾಗಿದೆ. ಇವುಗಳು ನಮಗೆ ಪ್ರತಿಯೊಂದು ಅಂಶವನ್ನು ಅನುಭವಿಸಲು ಮತ್ತು ಆಚರಿಸಲು ಭವ್ಯವಾದ ಮಾರ್ಗವನ್ನು ರೂಪಿಸಿಕೊಡುತ್ತವೆ. ಅಲ್ಲದೇ ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ಬಗ್ಗೆ ಬಲವಾದ ಗೌರವವನ್ನು ಬೆಳೆಸಿಕೊಳ್ಳಲು ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಹಬ್ಬಗಳ ಆಚರಣೆಯು ನಮ್ಮ ಕುಟುಂಬ ಸ್ನೇಹಿತರೊಂದಿಗೆ ಸುಂದರವಾದ ಕ್ಷಣವನ್ನು ಕಲ್ಪಿಸಿಕೊಡುವಲ್ಲಿ ಹಾಗೂ ಮಹತ್ವಪೂರ್ಣವಾದ ನೆನಪುಗಳನ್ನು ಕಟ್ಟಿಕೊಡುತ್ತವೆ.ಆದರೆ ಇಂದು ಅವುಗಳು ಕೇವಲ ನೆನಪಾಗಿಯೇ ಉಳಿದುಬಿಡುತ್ತದೆ ಎಂಬ ಅಧ್ಯಾಯವನ್ನು ಸೃಷ್ಟಿಸುತ್ತಿದೆ. ಹೌದು, ಇಂದಿನ ಜನಾಂಗದಲ್ಲಿ ಅದರಲ್ಲೂ ಯುವಕರಲ್ಲಿ ಹಬ್ಬಗಳ ಪಾತ್ರ ಬಹಳ ದೊಡ್ಡದಿದೆ. ಏಕೆಂದರೆ ಪ್ರಸ್ತುತ ಕಾಲಘಟ್ಟದ ಯುವಕರಿಗೆ ನಮ್ಮ ದೇಶದಲ್ಲಿನ ಆಚಾರ ವಿಚಾರಗಳು,ಹಿರಿಯರು ನಡೆಸಿಕೊಂಡು ಬಂದಂತಹ ಪದ್ಧತಿಗಳು, ಪರಂಪರಾ ಭಾಷಾ ಪರಿಚಯ, ಹಬ್ಬಗಳಲ್ಲಿನ ಆಹಾರ ಪದ್ಧತಿ, ವೇಷಭೂಷಣ,ಅಲಂಕಾರ,ಉಡುಗೆ ತೊಡುಗೆ ಇವೆಲ್ಲದರ ಕುರಿತಾಗಿ ಅಸಂಖ್ಯ ಮಾಹಿತಿಯನ್ನು ತಿಳಿದಿದ್ದಾರೆಯೇ ಹೊರತು ಅವುಗಳ ಕಡೆಗಿನ ಆಸಕ್ತಿಯನ್ನು, ಇಂತಹದ್ದೊಂದು ವಿಚಾರ ಇತ್ತೆಂಬುದನ್ನೇ ಮರೆತುಬಿಟ್ಟಿದ್ದಾರೆ.

ಇಂತಹ ಆಚರಣೆಗಳ ವಿಷಯವನ್ನೇ ತೆಗೆದುಕೊಂಡರೆ ಇಂದಿನ ಅದೆಷ್ಟೋ ಮಕ್ಕಳಿಗೆ ತಮ್ಮ ತಮ್ಮ ಮನೆಗಳಲ್ಲಿ ಯಾವ ಹಬ್ಬ ಹದಿರಿನಗಳನ್ನು ಮಾಡುತ್ತಾರೆ. ಅದರ ವೈಶಿಷ್ಟ್ಯತೆ ಏನು ಎಂಬುದು ತಿಳಿದಿರುವುದಿಲ್ಲ. ಅದರ ಬದಲಿಗೆ ಕೇವಲ ತಮ್ಮ ಕೆಲಸವಾಯಿತು, ತಾವಾಯಿತು ಎಂಬಂತೆ ಮೂಲೆಗುಂಪಾಗಿ ಬಿಟ್ಟಿದ್ದಾರೆ.

ಇಂದಿನ ದಿನಗಳಲ್ಲಿ ಮಕ್ಕಳು ಸ್ಲೇಟು ಬಳಪ ಹಿಡಿಯುವುದನ್ನು ಬಿಟ್ಟು ಸ್ಮಾರ್ಟ್‌ ಫೋನ್‌ ಎಂಬ ಗೀಳನ್ನು ಬೆಳೆಸಿಕೊಂಡು ತಮ್ಮ ಸುತ್ತ ಮುತ್ತಲಿನ ಆಗು ಹೋಗುಗಳನ್ನು ಮರೆತು ತಮ್ಮ ನಡುವೆಯೇ ಒಂದು ಚೌಕಟ್ಟನ್ನು ಸೃಷ್ಟಿಸಿಕೊಂಡು ಬದುಕುತ್ತಿದ್ದಾರೆ. ಆ ಚೌಕಟ್ಟಿನಿಂದ ಹೊರ ಬರಲು ಮುಖ್ಯವಾಗಿ ಪೋಷಕರು ತಮ್ಮ ತಮ್ಮ ಮಕ್ಕಳೊಂದಿಗೆ ಬೆರೆತು ಪ್ರಸ್ತುತ ವಯೋಮಾನದಲ್ಲಿ ಏನಾಗುತ್ತಿದೆ,ಯಾವ ರೀತಿಯ ಆಚರಣೆಗಳು ನಡೆಯುತ್ತಿವೆ. ನಮ್ಮ ಸಂಸ್ಕೃತಿ, ಸಾಮಾಜಿಕ ಕೌಶಲಗಳು ಏನಿವೆ ಅದರಲ್ಲಿ ನಮ್ಮ ಪಾತ್ರವೇನು ಎಂಬುದನ್ನು ತಿಳಿಸುವಂತಹ ಪ್ರಯತ್ನಗಳು ನಡೆಯಬೇಕಿವೆ. ಹಬ್ಬಗಳಲ್ಲಿ ಆಚಾರಗಳು,ಮಹತ್ವ ಎಲ್ಲವನ್ನೂ ತಿಳಿದು ಪ್ರತಿಯೊಂದು ಹಬ್ಬಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರೊಂದಿಗೆ ಬೆರೆತು ಸಮಾಜದ ಸಂಪ್ರದಾಯವನ್ನು ಉಳಿಸುವಲ್ಲಿ ಪಾತ್ರವಹಿಸಬೇಕಿದೆ.

-ಮೇಘಾ ಡಿ. ಕಿರಿಮಂಜೇಶ್ವರ

ವಿ.ವಿ., ಬೆಂಗಳೂರು

ಟಾಪ್ ನ್ಯೂಸ್

Priyank ಆಕ್ರೋಶ: ರಜಾಕಾರರ ದಾಳಿ & ಖರ್ಗೆ ಕುಟುಂಬದ ದುರಂತ, ಸಿಎಂ ಯೋಗಿ ಮಾತಿನ ಮರ್ಮವೇನು?

Priyank ಆಕ್ರೋಶ: ರಜಾಕಾರರ ದಾಳಿ & ಖರ್ಗೆ ಕುಟುಂಬದ ದುರಂತ, ಸಿಎಂ ಯೋಗಿ ಮಾತಿನ ಮರ್ಮವೇನು?

ಎಡ ಕಣ್ಣಿನ ಬದಲಿಗೆ ಬಲ ಕಣ್ಣಿಗೆ ಶಸ್ತ್ರಚಿಕಿತ್ಸೆ, ಮನೆಗೆ ಬಂದಾಗಲೇ ಗೊತ್ತು ವೈದ್ಯರ ಯಡವಟ್ಟು

ಎಡ ಕಣ್ಣಿನ ಬದಲು ಬಲ ಕಣ್ಣಿಗೆ ಶಸ್ತ್ರಚಿಕಿತ್ಸೆ… ಮನೆಗೆ ಬಂದಾಗಲೇ ಗೊತ್ತು ವೈದ್ಯರ ಯಡವಟ್ಟು

Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ

Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ

Karkala: ಬೋಳದಲ್ಲಿ ಅಬಕಾರಿ ದಾಳಿ… ಅಕ್ರಮ ದಾಸ್ತಾನಿಸಿರಿದ್ದ ಮದ್ಯದ ಬಾಕ್ಸ್ ಗಳು ವಶಕ್ಕೆ

Karkala: ಬೋಳದಲ್ಲಿ ಅಬಕಾರಿ ದಾಳಿ… ಅಕ್ರಮ ದಾಸ್ತಾನಿಸಿರಿದ್ದ ಮದ್ಯದ ಬಾಕ್ಸ್ ಗಳು ವಶಕ್ಕೆ

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

7-uv-fusion

UV Fusion: ಅನಿವಾರ್ಯವೆಂಬ ಆತಂಕ

MUST WATCH

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

ಹೊಸ ಸೇರ್ಪಡೆ

Ekamra Sports Lit Festival

Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ

7

Malpe: ಫಿಶರೀಸ್‌ ಕಾಲೇಜು ಆವರಣ ಕೊಳಚೆ ಮುಕ್ತಿ

6

Kaup ತಾಲೂಕಿನಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಬೆಳೆ ಕಟಾವು

Priyank ಆಕ್ರೋಶ: ರಜಾಕಾರರ ದಾಳಿ & ಖರ್ಗೆ ಕುಟುಂಬದ ದುರಂತ, ಸಿಎಂ ಯೋಗಿ ಮಾತಿನ ಮರ್ಮವೇನು?

Priyank ಆಕ್ರೋಶ: ರಜಾಕಾರರ ದಾಳಿ & ಖರ್ಗೆ ಕುಟುಂಬದ ದುರಂತ, ಸಿಎಂ ಯೋಗಿ ಮಾತಿನ ಮರ್ಮವೇನು?

5

Kundapura: ಎಂಟು ಗಂಟೆ ಕಾಲ ನಡೆದ ಕುಂದಾಪುರ ಪುರಸಭೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.