ಕಣ್ಮನ ಸೆಳೆಯುವ ಸಾತೋಡ್ಡಿ ಜಲಪಾತ


Team Udayavani, Apr 12, 2021, 6:28 PM IST

Sathodi Falls near Yellapur

ಪ್ರತಿಯೊಬ್ಬರಿಗೂ ಪ್ರವಾಸ ಎಂಬುದು ಮನಸ್ಸಿಗೆ ಮುದ ನೀಡುವಂತದ್ದು.

ಎಲ್ಲರಿಗೂ ಒಂದೆರಡು ದಿನ ಎಲ್ಲಿಯಾದರೂ ಹಸುರು ಸಿರಿಯಲ್ಲಿ ಅಥವಾ ಸಮುದ್ರ ತೀರದ ಪ್ರದೇಶಗಳಲ್ಲಿ ಸಮಯ ಕಳೆಯಬೇಕು, ದೇಹ ಮನಸ್ಸಿಗೆ ಸ್ವಲ್ಪ ವಿರಾಮ ನೀಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಮಗೂ ಹೀಗೆ ಅನಿಸಿದ್ದು ಸುಳ್ಳಲ್ಲ.

ಡಿಸೆಂಬರ್‌ನಲ್ಲಿ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಅನಿವಾರ್ಯ ಕಾರಣ ಜತೆಗೆ ಕೋವಿಡ್‌ ನಿರ್ಬಂಧಗಳು ಪ್ರವಾಸಕ್ಕೆ ಅಡ್ಡಿಯಾಗಿದ್ದವು. ಈ ಕಾರಣದಿಂದ ಬದಲಾವಣೆಗಾಗಿ ನಾನು ಮತ್ತು ನನ್ನ ಗೆಳೆಯರಾದ ಗಣೇಶ ಮತ್ತು ಬಸವರಾಜ ಎಲ್ಲಿಗಾದರೂ ಹೊರಡಲು ತೀರ್ಮಾನಿಸಿದೆವು. ವಯಸ್ಸಿನಲ್ಲಿ ಚಿಕ್ಕವರಾದರೂ ನಮ್ಮ ಸ್ನೇಹಕ್ಕೆ ಮಾತ್ರ ವಯಸ್ಸಿನ ಅಡ್ಡಿ ಇಲ್ಲ. ಎಲ್ಲಿಗಾದರೂ ಪ್ರವಾಸಕ್ಕೆ ಹೋಗಬೇಕು ಅಂತ ಆಗಾಗ ಚರ್ಚೆ ನಡೆಸುತ್ತಿದ್ದೆವು.

ಶಾಂತವಾಗಿರುವ, ಹಸುರಿನಿಂದ ಕೂಡಿದ ಸ್ಥಳಕ್ಕೆ ಭೇಟಿ ನೀಡಬೇಕು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು. ಅದರಂತೆ ಸಾತೋಡ್ಡಿ ಜಲಪಾತಕ್ಕೆ ಹೋಗುವುದು ಎಂದು ತೀರ್ಮಾನಿಸಲಾಯಿತು. ಅದರಂತೆ ಬೈಕ್‌ನಲ್ಲಿ ತೆರಳುವುದಕ್ಕೆ ನಿರ್ಧರಿಸಿದೆವು.

ಗಣೇಶ ಮತ್ತು ಬಸವರಾಜ ಅವರಿಗೆ ರಜೆ ಇರುವುದರಿಂದ ರವಿವಾರ ನಮ್ಮ ಪ್ರವಾಸದ ದಿನ ನಿಗಧಿಯಾಯಿತು. ನಿರ್ಧರಿಸಿದ ದಿನದಂದು ಬೆಳಗ್ಗೆ ಬೈಕ್‌ ಹತ್ತಿ ಹುಬ್ಬಳ್ಳಿ-ಕಲಘಟಗಿ-ಯಲ್ಲಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಕ್‌ನಲ್ಲಿ ಪ್ರಯಾಣ ಬೆಳೆಸಿದೆವು. ಬೆಳ್ಳಂಬೆಳಗ್ಗೆ ಚಳಿ ಇದ್ದರೂ ನಮ್ಮ ಯಾತ್ರೆ ಖುಷಿಯಿಂದ ಪ್ರಾರಂಭವಾಯಿತು. ಕ್ರಮೇಣ ಸೂರ್ಯನ ಕಿರಣಗಳು ನಮ್ಮನ್ನು ಸೋಕಿ ಸ್ವಲ್ಪ ಮಟ್ಟಿಗೆ ಚಳಿ ಕಡಿಮೆಯಾಯಿತು.

ಬಿಸಿಲಿನ ತಾಪ ಹೆಚ್ಚಾಗತೊಡಗಿತು. ಗೆಳೆಯರು ಉಪಾಹಾರ ಮುಗಿಸಿ ಪ್ರಯಾಣ ಪ್ರಾರಂಭ ಮುಂದುವರಿಸುವ ಎಂದಾಗ ನನಗೂ ಸರಿ ಎನಿಸಿತು. ದೇವಿಕೊಪ್ಪದಲ್ಲಿ ಹೊಟೇಲ್‌ ಒಂದರಲ್ಲಿ ತಿಂಡಿ ಮುಗಿಸಿ, ಉತ್ತರ ಕರ್ನಾಟಕದ ಕಡಕ್‌ ಚಾ ಕುಡಿದ ಮೇಲೆ ನಮ್ಮ ಬೈಕ್‌ನ ಚಕ್ರ ಮುಂದುವರಿಯಿತು.

ಬಳಿಕ ಎಲ್ಲೂ ನಿಲ್ಲದೆ ನಿರಂತರ ಪ್ರಯಾಣ ಬೆಳೆಸಿ ಯಲ್ಲಾಪುರ ತಲುಪಿದೆವು.ಅಲ್ಲಿಂದ ಸಾತೋಡ್ಡಿ ಜಲಪಾತಕ್ಕೆ 25 ಕಿ.ಮೀ. ಅಂತರ. ದಾರಿ ಉದ್ದಕ್ಕೂ ಹಚ್ಚ ಹಸುರಿನ ನೋಟ ನಮ್ಮ ಗಮನ ಸೆಳೆಯಿತು. ದಾರಿ ಮಧ್ಯ ಅಲ್ಲಲ್ಲಿ ಕಚ್ಛಾ ರಸ್ತೆ ಇದೆ. ಉಳಿದಂತೆ ಸಿಸಿ ರಸ್ತೆ, ಡಾಂಬರ ರಸ್ತೆಯೂ ಸಿಗುತ್ತದೆ. ಹಚ್ಚ ಹಸುರಿನ ಪ್ರದೇಶದಲ್ಲಿ ಗಾಡಿ ನಿಲ್ಲಿಸಿ ಫೋಟೋ ಶೂಟ್‌ ಮಾಡಿಸಿಕೊಂಡವು. ಸುಂದರ ಪ್ರಕೃತಿ ಮಡಿಲಲ್ಲಿ ವಿಹರಿಸುತ್ತ ದಾರಿ ಕ್ರಮಿಸಿದ್ದೇ ಗೊತ್ತಾಗಲಿಲ್ಲ. ಜಲಪಾತದ ಪ್ರವೇಶ ದ್ವಾರ ತಲುಪಿದೆವು. ಅಲ್ಲಿ ವಾಹನ ನಿಲುಗಡೆ ಮಾಡಿದೆವು. ಪಾರ್ಕಿಂಗ್‌ ಬೈಕ್‌ಗೆ 10 ರೂ.(ಒಬ್ಬರಿಗೆ 10 ರೂ.)ಶುಲ್ಕ ಪಾವತಿ ಮಾಡಿದೆವು. ಅಲ್ಲಿಂದ 1 ಕಿ.ಮೀ. ನಡೆದು ಜಲಪಾತ ತಲುಪಿದೆವು. ಅಲ್ಲಿಯೇ ಇದ್ದ ಹೋಟೆಲ್‌ ಒಂದರಲ್ಲಿ ಊಟಕ್ಕೆ ಪಲಾವ್‌ ಪಾರ್ಸಲ್‌ ತೆಗೆದುಕೊಂಡೆವು.

1 ಕಿ.ಮೀ. ದೂರ ಹೇಗೆ ಸಾಗಿದೆವು ಎಂದು ಗೊತ್ತಾಗಲಿಲ್ಲ. ಹಚ್ಚ ಹಸುರಿನ ವಾತಾವರಣ ಜತೆಗೆ ಸುಸಜ್ಜಿತ ರಸ್ತೆ. ಜಲಪಾತ ಸಮಿಪಿಸುತ್ತಿದ್ದಂತೆ ಎತ್ತರದಿಂದ ಧುಮುಕುವ ನೀರಿನ ಸಪ್ಪಳವೇ ರೋಮಾಂಚನಕಾರಿ ಅನುಭವ. ನಡೆದ ಸುಸ್ತೆಲ್ಲ ಅಲ್ಲಿಗೇ ಮಾಯ. ಜಲಪಾತ ಹತ್ತಿರ ಹೋದಂತೆ ಮತ್ತಷ್ಟು ಖುಷಿ ಉಲ್ಬಣಗೊಂಡು ಕೇಕೆ ಹಾಕಲು ಪ್ರಾರಂಭಿಸಿದೆವು. ಅಅನಂತರ ಅಲ್ಲಿಯೇ ಸ್ನಾನ ಮಾಡಿ ನೀರಿನಲ್ಲಿ 1-2 ಗಂಟೆಗಳ ಕಾಲ ಕಳೆದೆವು. ಒಂದೆಡೆ ಹಚ್ಚ ಹಸುರಿನ ಕಾಡು, ಎತ್ತರದಿಂದ ಧುಮುಕುವ ಜಲಪಾತ ನೋಡಿ ನಮ್ಮನ್ನೆ ನಾವು ಮರೆತು ಕಾಲ ಕಳೆದವು.

ಜತೆಗೆ ಸಾಕಷ್ಟು ಫೋಟೋವನ್ನೂ ಕ್ಲಿಕ್ಕಿಸಿಕೊಂಡೆವು. ನೀರಿನಲ್ಲಿ ಆಟ ಆಡಿದ ಬಳಿಕ ಹೊಟ್ಟೆ ಚುರುಗಟ್ಟಲು ಆರಂಭಿಸಿತು. ಹೀಗಾಗಿ ನಾವು ಒಯ್ದ ಪಲಾವ್‌ ತಿನ್ನಲು ಸೂಕ್ತ ಜಾಗ ಹುಡುಕಿ ಕುಳಿತೆವು. ಆ ಸಂದರ್ಭದಲ್ಲಿ ಕಪಿ ಸೈನ್ಯ ಹಾಜರಾಯಿತು. ಅವುಗಳಿಗೂ ಸ್ವಲ್ಪ ಊಟ ನೀಡಿ, ನಾವೂ ಮಾಡಿದೆವು. ಅನಂತರ ಒಲ್ಲದ ಮನಸ್ಸಿನಿಂದ ಬರಬೇಕಾಯಿತು. ಊರಿನ ಕಡೆಗೆ ಪ್ರಯಾಣ ಆರಂಭಿಸಿದೆವು. 6 ಕಿ.ಮೀ. ಕ್ರಮಿಸಿ ಶಿವಪುರ ತೂಗು ಸೇತುವೆ ನೋಡಿಕೊಂಡು ಊರ ಕಡೆಗೆ ಬೈಕ್‌ ಓಡಿಸಿದೆವು.


ಮುತ್ತಪ್ಪ ಎಸ್‌. ಕ್ಯಾಲಕೊಂಡ

ಕರ್ನಾಟಕ ಜಾನಪದ ವಿ.ವಿ.ಗೋಟಗೋಡಿ, ಶಿಗ್ಗಾವಿ

ಟಾಪ್ ನ್ಯೂಸ್

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.