Confidence: ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು


Team Udayavani, Dec 3, 2023, 3:50 PM IST

10-uv-fusion

ಸಾಧನೆಯ ಹಾದಿಗೆ ಆತ್ಮವಿಶ್ವಾಸವೇ ಮೆಟ್ಟಿಲು. ಆತ್ಮವಿಶ್ವಾಸ ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಗುರಿ ತಲುಪುವ ದಾರಿಯಲ್ಲಿ ಏನೇ ಅಡ್ಡಿಯಾದರೂ ನಾನು ಎದುರಿಸುತ್ತೇನೆ, ನನ್ನ ಸಾಧನೆಗೆ ಅಡ್ಡಿಪಡಿಸುವವರನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಒಂದಲ್ಲ ಒಂದು ದಿನ ನಮಗೆ ಯಶಸ್ಸು ಖಂಡಿತ.

ಆತ್ಮವಿಶ್ವಾಸ ಎಂಬುದು ವ್ಯಕ್ತಿಯ ಬಳಿ ಇರುವ ಅತ್ಯಮೂಲ್ಯ ಆಸ್ತಿಗಳಲ್ಲೊಂದು. ಅದನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಭಳಕೆ ಮಾಡಿದರೆ ಆತನನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಆದ್ದರಿಂದಲೇ ಆತ್ಮವಿಶ್ವಾಸ ವ್ಯಕ್ತಿಯ ಯಶಸ್ಸಿನ ಮೊದಲ ಮೆಟ್ಟಿಲು ಎನ್ನುತ್ತಾರೆ. ತನ್ನ ಗುಣ ನಡತೆ, ಸ್ವಭಾವ, ನಡವಳಿಕೆಗಳನ್ನು ತಾನೇ ಮೆಚ್ಚಿಕೊಳ್ಳುವುದು ಮತ್ತು ಸ್ವಸಾಮರ್ಥಯದ ಬಗ್ಗೆ ವ್ಯಕ್ತಿಗಿರುವ ನಂಬಿಕೆಯೇ ಆತ್ಮವಿಶ್ವಾಸ.

ಆತ್ಮವಿಶ್ವಾಸ ಇದ್ದವರು ಸೋಲುವುದಿಲ್ಲ ಎಂದಲ್ಲ. ಆತ್ಮವಿಶ್ವಾಸ ಇದ್ದರೆ ಮಾಡಬೇಕಾಗಿರುವ ಕೆಲಸವನ್ನು ಆರಂಭಿಸಲು ಪ್ರೇರಣೆ ಸಿಗುತ್ತದೆ. ಅಷ್ಟೇ ಅಲ್ಲ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತೋರಿಸಿಕೊಡುತ್ತದೆ. ಮನಸ್ಸಿನ ಆಲೋಚನೆಯಂತೆ ಏನೋ ಮಾಡಬೇಕು ಎಂದುಕೊಂಡಿರುತ್ತೀರಿ. ಆ ಕೆಲಸ ಶುರು ಮಾಡುವ ಮೊದಲೇ ಆ ಕುರಿತು ನಕಾರಾತ್ಮಕ ಫಲಿತಾಂಶವೇ ಕಣ್ಣ ಮುಂದೆ ಕಾಣಿಸಿಕೊಳ್ಳಬಹುದು. ಇದರಿಂದ ನಮ್ಮೊಳಗಿನ ಸಾಮರ್ಥ್ಯ ಕುಂಠಿತವಾಗಬಹುದು. ಇಂತಹ ಭಯದಿಂದ ಹೊರಬರಲು ಪ್ರಯತ್ನಿಸಬೇಕು. ತನ್ನ ಬಗ್ಗೆ ಬೆಳೆಸಿಕೊಂಡು ಬಂದಿದ್ದ ನಂಬಿಕೆಗಳನ್ನು ಬಿಟ್ಟು ಹೊಸತನ್ನು ಕಂಡುಕೊಳ್ಳಬೇಕು. ಇತರರು ನಮ್ಮನ್ನು ಅಳೆಯುವ ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು.

ದೋಣಿ ನಡೆಸಲು ಹರಿಗೋಲು ಎಷ್ಟು ಮುಖ್ಯವೋ ನಮ್ಮ ಬದುಕು ಸಾಗಿಸಲು ಆತ್ಮವಿಶ್ವಾಸ ಅಷ್ಟೇ ಮುಖ್ಯ. ಇದೊಂದಿದ್ದರೆ ನಮಗೆ ಎಂಥ ಕಷ್ಟದ ಪರಿಸ್ಥಿತಿ, ಸವಾಲುಗಳನ್ನೂ ಎದುರಿಸಬಹುದು. ಅಲ್ಲದೆ ಸವಾಲಿನ ಪ್ರಥಮಾರ್ಧವನ್ನು ಗೆದ್ದಂತೆ. ಇಲ್ಲವಾದರೆ ಸವಾಲುಗಳನ್ನು ಕಂಡಕೂಡಲೇ ಗಾಳಿ ತೆಗೆದ ಬಲೂನಿನಂತೆ ಕುಗ್ಗಿ ಬಿಡುತ್ತೇವೆ.

ನಮ್ಮಿಂದ ಈ ಕಾರ್ಯ ನಡೆಸಲು ಸಾಧ್ಯವೋ ಎಂದು ಚಿಂತಿಸುತ್ತಾ ಕೂತರೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಪ್ರಯತ್ನಶೀಲರಾದಾಗ ಎಂತಹ ಕಠಿನ ಕೆಲಸವಾದರೂ ಸಾಧಿಸುವ ಛಲ, ಧೈರ್ಯ ನಮ್ಮಲ್ಲಿ ಮೂಡಿ ಯಶಸ್ಸು ಹೊಂದಲು ಸಾಧ್ಯವಿದೆ.

ಆತ್ಮವಿಶ್ವಾಸದ ಇನ್ನೊಂದು ಮುಖ ಧೈರ್ಯ. ಧೈರ್ಯದಿಂದ ಮುಂದುವರಿದಾಗ ಜಯ ಖಂಡಿತ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ಧೈರ್ಯ, ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಇಲ್ಲದವರನ್ನು ಹೇಡಿಗಳು, ಸೋಮಾರಿಗಳು, ತಮ್ಮ ಬಗ್ಗೆ ಅಪನಂಬಿಕೆ ಉಳ್ಳವರು ಎನ್ನಲಾಗುತ್ತದೆ. ಯಾವುದೇ ಕೆಲಸಗಳನ್ನು ಮಾಡಬೇಕಾಗಿ ಬಂದಾಗಲೂ “ನನ್ನಿಂದ ಆಗೋದಿಲ್ಲ’, “ನನಗೆ ಸಾಧ್ಯವಿಲ್ಲ’ ಎನ್ನುವುದೇ ಅವಿಶ್ವಾಸದ ಕುರುಹು. ಪ್ರತಿಯೊಬ್ಬನ ವರ್ತನೆ, ವ್ಯಕ್ತಿತ್ವದಿಂದ ಆತನ ಜೀವನ ಮೌಲ್ಯ ನಿರ್ಧರಿಸಲಾಗುತ್ತದೆ ಅಥವಾ ವ್ಯಕ್ತವಾಗುತ್ತದೆ. ಮೌಲ್ಯಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಗಳನ್ನು ಬೆಳೆಸುತ್ತವೆ. ಇದರಿಂದ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ.

ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸುವಾಗ ಒಮ್ಮೆ ಸೋಲಾಯಿತೆಂದು ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವುದಲ್ಲ. “ಮರಳಿ ಯತ್ನವ ಮಾಡು’ ಎಂಬಂತೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲಿನಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಪಾಠ ಕಲಿಯುತ್ತೇವೆ. ಅನುಭವ ಗಳಿಸುತ್ತೇವೆ. ನಮ್ಮಲ್ಲಿರುವ ಅಹಂಕಾರ ದೂರವಾಗುತ್ತದೆ. ಆದ್ದರಿಂದ ಸೋಲು ಬಂತೆಂದು ಹತಾಶರಾಗುವುದು ಬೇಡ. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ, ಆತ್ಮವಿಶ್ವಾಸ ವೃದ್ಧಿಸಿಕೊಂಡು ಪ್ರಯತ್ನಶೀಲರಾಗುವುದು ತುಂಬಾ ಮುಖ್ಯ.

 ಸದಾಶಿವ ಬಿ.ಎನ್‌. ಉಡುಪಿ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.