ಸ್ವಾವಲಂಬಿ ಭಾರತಕ್ಕೆ ಪಣತೊಡಬೇಕಿದೆ


Team Udayavani, Aug 15, 2020, 7:15 AM IST

Make in india 1

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮ ಭಾರತ.

ಹಲವು ಆಚಾರ, ವಿಚಾರ ಸಂಪ್ರದಾಯಗಳನ್ನು ಹೊಂದಿದ್ದರೂ ಏಕತೆಯನ್ನು ಪ್ರತಿಪಾದಿಸುತ್ತದೆ.

ರಾಷ್ಟ್ರೀಯ ಭಾವೈಕ್ಯದಿಂದ ಸಾರುವ ಸಾಲು ಹಬ್ಬಗಳ ಆಚರಣೆಯನ್ನು ದೇಶದಲ್ಲಿ ಕಾಣಬಹುದು.

ಯಾವುದೇ ಜಾತಿ, ಮತ, ಧರ್ಮಗಳ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಾರೆ.

ಭಾರತಕ್ಕೆ ತನ್ನದೇ ಆದ ಸ್ವಂತ ಶಕ್ತಿಯಿದೆ. ಸ್ವಾವಲಂಬಿತನವನ್ನು ರೂಢಿಸಿಕೊಂಡಿದೆ. ಇದು ಮುಂದೊಂದು ದಿನ ವಿಶ್ವಕ್ಕೆ ಮಹಾನ್‌ ಕೊಡುಗೆಯಾಗಲಿದೆ.

ಭಾರತ ಕೃಷಿ ಪ್ರಧಾನ ರಾಷ್ಟ್ರ. ದೇಶದ ಬಹುತೇಕರ ಸ್ವಾವಲಂಬಿ ಜೀವನಕ್ಕೆ ಇದು ಅನುಕೂಲವಾಗಿದೆ. ದೇಶದ ಗ್ರಾಮೀಣ ಭಾಗದಲ್ಲಿ ಮೂಲ ಕಸುಬು ಕೃಷಿ ಕ್ಷೇತ್ರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದೆಡೆಗಿನ ಒಲುವು ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಗಮನಹರಿಸುವುದು ಕೂಡ ಅಗತ್ಯ. ಏಕೆಂದರೆ ದೇಶದ ಅಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಅಗ್ರಗಣ್ಯವಾಗಿದೆ.

ಸ್ವದೇಶಿ ವಸ್ತುಗಳ ಬಳಕೆ ವೃದ್ಧಿಯಾಗಲಿ
ದಿನ ನಿತ್ಯ ವಸ್ತುಗಳಿಗೆ ವಿದೇಶಿ ವಸ್ತುಗಳನ್ನು ಬಳಸುವುದರ ಬದಲು ಸ್ವದೇಶಿ ವಸ್ತುಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಇದು ಸ್ವದೇಶಿ ಭಾರತಕ್ಕೆ ಕೂಡ ಪ್ರೋತ್ಸಾಹದಾಯಕವಾಗಲಿದೆ. ಬಡವರು, ದಿನಗೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರು, ರೈತರು, ಸ್ವಯಂ ಉದ್ಯೋಗಿಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ, ಅತಿಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಉತ್ಪಾದಕ ಹಾಗೂ ಸೇವಾ ವಲಯಗಳಿಗೆ ಉದ್ಯೋಗಾವಕಾಶವನ್ನು ನೀಡುವ ಮೂಲಕ ಸ್ವದೇಶಿ ವಸ್ತುಗಳ ಉತ್ಪನ್ನ ಹಾಗೂ ಬಳಕೆಯನ್ನು ಜಾಸ್ತಿ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ಕೋವಿಡ್‌-19ರಿಂದ ಜನರಿಗೆ ಸ್ವಾವಲಂಬನೆಯ ಬದುಕಿನ ಪಾಠ ಅರಿವಾಗಿದೆ . ಜನರು ತಮ್ಮ ದೈನಂದಿನ ವಸ್ತುಗಳಿಗೆ ಬೇರೆಯವರ ಪರ ಅವಲಂಬಿತವಾಗಿಲ್ಲ ಎಂಬುದು ಸಾಬೀತುಪಡಿಸಿದೆ. ಸಣ್ಣ ಸಣ್ಣ ಕೈಗಾರಿಕೆಗಳಿಗೆ ಕೃಷಿ ವಲಯಗಳಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಸ್ವದೇಶಿ ಉತ್ಪನ್ನಗಳ ತಯಾರಿಕೆಗೂ ನಾವು ಉತ್ತೇಜಿಸಬೇಕು. ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಆತ್ಮ ನಿರ್ಭರದಿಂದ ಆತ್ಮವಿಶ್ವಾಸ ಭಾರತ ನಮ್ಮದಾಗಬೇಕು.

ಕೆಲವೊಂದು ಪರಂಪರೆಯ ಉತ್ಪನ್ನಗಳಿಗೆ ಪ್ರೋತ್ಸಾಹದ ಜತೆಯಲ್ಲಿ ಉತ್ಪಾದಕರಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಖರೀದಿದಾರರು ಸಹ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವಲ್ಲಿ ಆಸಕ್ತಿ ವಹಿಸಿ ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸುವತ್ತ ಗಮನ ಹರಿಸಬೇಕು.

ಸ್ಥಳೀಯರಿಂದಲೇ ತಯಾರಾಗುವ ವಸ್ತುಗಳನ್ನು ಖರೀದಿಸುವ ಮೂಲಕ ಸ್ವದೇಶಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಬೇಕು. ಹಾಗೆಯೇ ವಿದೇಶಗಳಿಗೆ ನಮ್ಮ ಭಾರತ ಮಾದರಿಯಾಗಬೇಕು. ಸ್ವಾವಲಂಬನೆಯ ಬದುಕೇ ಉತ್ತಮ ಎಂದೆನಿಸಬೇಕು. ಅಭಿವೃದ್ಧಿಯ ಕಡೆಗೆ ನಮ್ಮ ಭಾರತ ಜಯವನ್ನು ಸಾಧಿಸಬೇಕು. ಸ್ವಾವಲಂಬನೆಯ ಭಾರತಕ್ಕೆ ನಾವೆಲ್ಲರೂ ಕೊಡುಗೆಯಾಗಬೇಕು ಎಂಬುದು ನಮ್ಮೆಲ್ಲರ ಸದಾಶಯ.

ರೋಶನಿ, ಕಲ್ಯಾಣಪುರ, ಮಿಲಾಗ್ರಿಸ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.