UV Fusion: ಮೌನಕ್ಕಿದೆ ನೂರೆಂಟು ಅರ್ಥ…
Team Udayavani, Nov 15, 2023, 9:00 AM IST
ಮಾತಿಗಿಂತ ಮೌನದ ಸದ್ದು ಜಾಸ್ತಿ. ಕೇಳಲು ಕಿವಿಯ ಅಗತ್ಯವಿಲ್ಲ. ಆಲಿಸಲು ಹೃದಯ ಬೇಕು ಅಷ್ಟೇ. ಅರೇ ಹೃದಯ ಆಲಿಸುತ್ತದೆಯಾ? ಹೌದು ಆಲಿಸುತ್ತದೆ. ಕಂಗಳ ನೋಟಕೆ ಯೋಚನೆಯ ನೆಂಟಸ್ತಿಗೆ ಹೊಸೆದು ಹೃದಯವೂ ಆಲಿಸಬಲ್ಲದು. ಬೇಕಾದರೆ ನೀವೇ ಪ್ರಯತ್ನಿಸಿ ನಿಮ್ಮ ಮನೆಯಂಗಳದ ಕಡೆ ಒಮ್ಮೆ ಕಣ್ಣು ಹಾಯಿಸಿ. ಆ ಹಸುರು ಸಸಿಗಳ ನೋಡಿ, ಹಕ್ಕಿಗಳ ಇಂಚರ ಕೇಳಿ. ಮರದ ಕೊಂಬೆಗಳನೇರಿ ಆಹಾರದ ಆಸೆಗೆ ಮನೆಯಂಗಳದೊರೆಗೆ ಇಳಿದು ಬಂದ ಕೋತಿ ಮರಿಯನ್ನು ತಾಯಿ ಕೋತಿ ಕೈಹಿಡಿದು ಎಳೆದೊಯ್ಯುವಾಗ ಅದರ ಕಣ್ಣಲ್ಲಿ ನಮ್ಮ ಮೇಲಿನ ಭಯ ಕಂದನ ಮೇಲಿನ ಪ್ರೀತಿ ಕೋತಿ ಮರಿಯ ಕಣ್ಣೊಳಗಿನ ನಿರಾಸೆಗಳ ನಡುವೆ ತಾಯಿಯೆಂದರೆ ಜೀವಗಳ ಮೀರಿದಾಕೆ. ಹೆಣ್ಣೆಂಬ ಹಣತೆ ಜಗತ್ತಿಗೆ ಕೊಟ್ಟ ಪರಿಪೂರ್ಣತೆ ಎಂಬುದು ಮೌನವೇ ಹೇಳಿತಲ್ಲ. ಮಾತೇಕೆ ಇಲ್ಲಿ? ಬೇಕಾಗಲಿಲ್ಲ.
ಇನ್ನೂ ಬಸ್ಸಿನ ಕಿಟಕಿಬದಿಯಲಿ ಅದೆಷ್ಟೋ ಜೀವಂತ ಪುಸ್ತಕಗಳ ನಿತ್ಯ ಓದುಗ ನಾನು. ಒಂದಿಷ್ಟು ಇಲ್ಲಿಯೇ ಹಂಚಿಕೊಳ್ಳುತ್ತೇನೆ. ಮೇಲಿನ ಮಂಗನಲ್ಲೂ ಮಮತೆ ಕಂಡರೇ ಇಲ್ಲಿ ಊರಿನ ರಸ್ತೆಗಳ ಬೀದಿಯಲ್ಲಿ ಅಡ್ಡದಿಡ್ಡಿ ಸಂಜೆ ಹೊತ್ತಿಗೆ ಮುಳುಗೋ ಸೂರ್ಯನಿಗೆ ಮದ್ಯದಲ್ಲೇ ಅರ್ಘ‍್ಯ ಕೊಟ್ಟು ಮಕ್ಕಳು, ಮನೆಯವರ ಮರ್ಯಾದೆಯನೊಬ್ಬ ಅಪ್ಪ ಮಣ್ಣಿಗೆ ಸೆಯುತ್ತಾನೆ. ಇನ್ನೊಬ್ಬರು ಹೊರಟ ಬಸ್ಸಿಗೆ ಮಗನಿಗೆಂದು ತಂದ ಸಣ್ಣ ಸೈಕಲನ್ನು ಜಾಗವೇ ಇಲ್ಲದ ಬಸ್ಸಿನೊಳಗೆ ತುರುಕಿಸುತ್ತಾ ಮಗನ ಖುಷಿಯ ನೆನೆದು ಈಗಲೇ ಮಂದಹಾಸದಿಂದ ಬೆಳಗುತ್ತಾನೆ. ಇನ್ನೂ ಕೈಯಲ್ಲಿ ಕೀಚೈನು ಹಿಡಿದು, ಬಣ್ಣ ಬಣ್ಣದ ಬಲೂನು ಹಿಡಿದು ರಸ್ತೆಗಳ ನಡುವೆ ವಾಹನಗಳನ್ನೇ ಹೆದರಿಸುತ್ತಾ ದಿಟ್ಟ ಹೆಜ್ಜೆ ಇಡುತ್ತಾ ಅದನ್ನ ಮಾರಿ ದುಡ್ಡುನೆಣಿಸೋ ಬುದ್ಧಿವಂತಿಕೆ ಬದುಕಿನ ಪಾಠವೆಂಬುದನ್ನು ಹೇಳಿತು.
ಒಮ್ಮೆ ಕಾಲೇಜಿಂದ ಹೊರಟಿದ್ದು ತಡವಾದ ಕಾರಣ ಯಾವತ್ತೂ ಹೋಗದ ನಾನು ಸರಕಾರಿ ಬಸ್ ಹತ್ತಿದ್ದೆ. ಪಾಸ್ ಮಾಡಿಸಿಕೊಳ್ಳಲು ಓಡಾಡಲಾರದ ಸೋಮಾರಿತನ ಇದಕ್ಕೆ ಕಾರಣ ಎನ್ನಬಹುದಾದರೂ, ಬಸ್ಸು ನಮ್ಮೂರಿನ ದಾರಿಗೆ ಅಪರೂಪದ ಅತಿಥಿ ಎಂಬ ಸಬೂಬು ಸಹ ಕೊಡಬಹುದು. ಅಂದು ಬಸ್ಸಿನೊಂದಿಗೆ ಓಟಕ್ಕಿಳಿದ ಬೀದಿದೀಪಗಳು, ಸೀಟನೊರಗಿ ಕಿಟಕಿಗೆ ತಲೆ ಕೊಟ್ಟು ಮನೆ ಸೇರುವ ಕಾತರದಲ್ಲಿ ಸೋತ ಜೀವಗಳಲ್ಲಿ ಅದೇ ಮೌನ.
ಸಣ್ಣದೊಂದು ಕಂಡಕ್ಟರ್ ಸೀಟಿ, ಗುನುಗುವ ಊರ ಹೆಸರು ಅಯ್ಯೋ ಇನ್ನೆಷ್ಟು ದೂರವಪ್ಪ ಎಂಬ ಭಾವದ ಪೀಕಲಾಟ ಒಬ್ಬೊಬ್ಬರೇ ಕಡಿಮೆಯಾಗುತ್ತಾ ಒಂಟಿಯಾಗುವ ಭಯದೊಳಗೆ ಡ್ರೈವರ್ ಎಕ್ಸಲರೇಟರ್ ಮೆಟ್ಟಿದಾಗೆಲ್ಲ ಬಸ್‌ನ ಮತ್ತದೇ ಏಕಾಂತದ ಕೂಗು, ಅಪರಿಚಿತರ ನಡುವೆ ಸಂಭಾಷಣೆ ಶುರುವಾಗಿ ಪರಿಚಯವಾಗುವ ಮುನ್ನ ಅಲ್ಲೇ ಕೊನೆಯಾಗಿ ಎಲ್ಲ ಮುಗಿದು ಗುರುತೇ ಇಲ್ಲದಂತೆ ಬಸ್‌ಗೆ ಬೆನ್ನು ಹಾಕಿ ದಾರಿ ಹಿಡಿವವರ ಕಂಡರೆ ಇಷ್ಟೇ ತಾನೆ ಬದುಕು? ಅಂತ ಬರೆದು ಪೂರ್ಣ ವಿರಾಮ ಇಡಬೇಕೆಂದು ಕೊಂಡೆ ಬರೆಯುತಿದ್ದದ್ದು. ಆದರೆ ಅಷ್ಟರೊಳಗೆ ಕಂಡಕ್ಟರ್ ಬಂದು ನನ್ನ ಪಕ್ಕ ಕೂತಿದ್ದರು ಕನ್ನಡ ಬರಿತಿದ್ದಿಯಾ? ಅನ್ನೋ ಅವರ ಧನಿಯಲ್ಲಿ ಉತ್ತರ ಕರ್ನಾಟಕದ ಆ ಕನ್ನಡದ ಘಮವಿತ್ತು.
ಹೌದೆಂದಾಗ ನಾ ಓದೆನಪ್ಪಾ ಅಂತ ಪೋನ್ ತಗೊಂಡು ಓದಿ ನಂಗೆ ಇದೆಲ್ಲ ಭಾರೀ ಇಷ್ಟ ನೋಡು, ನನ್ನ ನಂಬರ್ ತಗೋ ನಾನು ಓದಿ ಖುಷಿ ಪಡ್ತಿನಿ ಅಂತ ತಮ್ಮ ನಂಬರ್ ನೀಡಿ ಬೆನ್ನು ತಟ್ಟಿ ಮತ್ತೆ ಹೊರಟರು ದೂರದ ನಿಲ್ದಾಣಕ್ಕೆ ಸೀಟಿ ಹೊಡೆಯುತ್ತಾ ಸಿಪಾಯಿಯಂತೆ. ಇಲ್ಲಿ ಅವರ ಮಾತ ಹಿಂದಿದ್ದದ್ದು ಮೌನದಲ್ಲೇ ಎಲ್ಲವನ್ನು ಅರ್ಥೈಸಿಕೊಳ್ಳೋ ಗುಣ. ಅವರೆಷ್ಟು ಜನರನ್ನು ನಿತ್ಯ ಹೀಗೆ ಮೌನದಲ್ಲಿ ಗಮನಿಸಿ ಸಣ್ಣದೊಂದು ಶ್ಲಾಘನೆ ನೀಡಿ ನನ್ನಂತೆ ಅವರೆಲ್ಲರ ಖುಷಿ ಪಡಿಸಿರಬಹುದು ಅಲ್ಲವೆ? ಮಾತು ಮೌನ ಒಂದೇ ನಾಣ್ಯದ ಎರಡು ಮುಖಗಳಂತೆ. ಎಲ್ಲ ಸಲ ಮಾತು ಅರ್ಥವಾಗಬೇಕೆನ್ನುವ ಆವಶ್ಯಕತೆ ಇಲ್ಲ.
ಮೌನ ಎಲ್ಲಕ್ಕಿಂತ ಜಾಸ್ತಿಯೇ ಅರ್ಥೈಸಬಲ್ಲದು. ಚೂರು ಮೌನಕ್ಕೂ ಮಾತಾಗಲು ಬಿಡಿ; ಹೃದಯ ಸ್ವಲ್ಪ ಅದಕ್ಕೆ ಖಾಲಿ ಇಡಿ ಎನ್ನುವ ಒಂದೇ ಕೊರಿಕೆಯೊಂದಿಗೆ. ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ, ಸುಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯ್ಯುವವರೇ ಗುರುಗಳು. ಒಂದು ಮಗುವನ್ನು ಬೆಳೆಸಿ ಪ್ರಭುದ್ಧರನ್ನಾಗಿ ಮಾಡಲು ತಂದೆ ತಾಯಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಗುರು.
ಸರಿಯಾದ ಗುರುವು ಇಲ್ಲದಿದ್ದಲ್ಲಿ ಮಕ್ಕಳ ಬುದ್ಧಿಮತ್ತೆ ಶೂನ್ಯವಾಗಿರುತ್ತದೆ. ಗುರುಗಳೆಂದರೆ ದೇವರಿಗೆ ಸಮಾನವಾದವರು. ಕಣ್ಣಿಗೆ ಕಾಣುವ ದೇವರೆಂದರೆ ತಂದೆ -ತಾಯಿ ಮತ್ತು ಗುರು. ಗುರುವನ್ನು ನಾವು ಎರಡನೆಯ ಪೋಷಕರೆಂದೇ ಹೇಳಬಹುದು. ಕುಂಬಾರ ಮಣ್ಣನ್ನು ಕಲಸಿ ಹದಮಾಡಿ ಹೇಗೆ ಮಡಿಕೆಯನ್ನು ತಯಾರಿಸುತ್ತಾನೋ ಹಾಗೆಯೇ ಗುರುಗಳು ತಮ್ಮ ಶಿಷ್ಯರನ್ನು ತಮ್ಮ ಸ್ವಂತ ಮಕ್ಕಳಂತೆಯೇ ಕಂಡು, ಮಾರ್ಗದರ್ಶನವನಿತ್ತು, ತಿದ್ಧಿ, ತೀಡಿ ಪ್ರಭುದ್ಧರನ್ನಾಗಿ ಮಾಡುತ್ತಾರೆ. ತನ್ನ ಶಿಷ್ಯರಿಗೆ ಪಾಠವನ್ನು ಬೋಧಿಸುವುದರಲ್ಲಿ ಮಾತ್ರವಲ್ಲದೆ, ಅವರು ತನ್ನ ಶಿಷ್ಯರ ಜೀವನದಲ್ಲಿ ಪ್ರಭಾವವನ್ನುಂಟು ಮಾಡಿ ಅವರನ್ನು ಬದಲಾಯಿಸುವಲ್ಲಿ ಕೂಡ ಸಮರ್ಥರು.
ಕೇವಲ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರವನ್ನು ಮಾತ್ರವಲ್ಲದೆ, ಶಿಷ್ಯನ ಅಂಧಕಾರವನ್ನು ತೊಡೆದು ಹಾಕಿ, ಕಲ್ಮಶ ಇಲ್ಲವಾಗಿಸಿ, ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿ ಜ್ಞಾನವೆಂಬ ಅಕ್ಷರವನ್ನು ಬಿತ್ತಲು ಸಾಮರ್ಥ್ಯವುಳ್ಳವರೇ ಗುರುಗಳು. ಗುರುಗಳಲ್ಲಿರುವ ಧನಾತ್ಮಕ ಶಕ್ತಿಯನ್ನು ಶಿಷ್ಯರಿಗೆ ಧಾರೆಯೆರೆದು ಅವರ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ನೀಡುವಲ್ಲಿ ಅವರ ಪಾತ್ರ ಬಹಳ ಮುಖ್ಯವಾದದ್ದು. ಗುರುವೆಂದರೆ ಶಕ್ತಿ. ಗುರುಗಳು ಇರುವುದೇ ತನ್ನ ಶಿಷ್ಯರನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಬೆಳೆಸುವುದಕ್ಕಾಗಿ, ಸಂಸ್ಕಾರಯುತರನ್ನಾಗಿ ರೂಪಿಸುವುದಕ್ಕಾಗಿ. ಬದುಕುವ ಕಲೆಯನ್ನು ಕಲಿಸುವವರು ಗುರುಗಳು.
ಚಿಕ್ಕಂದಿನಿಂದಲೇ ಹಿರಿಯರನ್ನು ಗೌರವಿಸಲು ಮನೆಯವರು ಮನೆಯಲ್ಲಿ ಕಲಿಸುತ್ತಾರೆ ಆದರೆ ಅದನ್ನು ಪೂರ್ಣಗೊಳಿಸುವಂತಹ ಕಾರ್ಯವನ್ನು ಗುರುಗಳು ಮಾಡುತ್ತಾರೆ. ಗುರುಗಳು ತನ್ನಲ್ಲಿನ ಸೃಜನಶೀಲತೆಯನ್ನು ಶಿಷ್ಯಂದಿರಲ್ಲಿ ಮೈಗೂಡಿಸುವಲ್ಲಿ ಬಹಳ ದೊಡ್ಡದಾದ ಪಾತ್ರವನ್ನು ವಹಿಸುತ್ತಾರೆ. ತನ್ನ ಸ್ಫೂರ್ತಿದಾಯಕ ಮಾತುಗಳಿಂದ ಶಿಷ್ಯರನ್ನು ಹುರಿದುಂಬಿಸುವವರೇ ಗುರುಗಳು. ಆದುದರಿಂದ ನಾವು ನಮ್ಮ ಜೀವನದಲ್ಲಿ ಗುರು ಗಳನ್ನು ಸದಾಕಾಲವೂ ಗೌರವಿಸುತ್ತಾ, ಸ್ಮರಿಸುತ್ತಲೇ ಇರಬೇಕು. ದೇವಿಪ್ರಸಾದ ಶೆಟ್ಟಿ ಡಾ| ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜು, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.