Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ


Team Udayavani, Apr 18, 2024, 3:53 PM IST

17

ಶಿರಸಿ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶ್ರೀ ಮಾರಿಕಾಂಬೆ ಹಾಗೂ ಅವಳ ಜಾತ್ರೆ. ಇದು ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಯನ್ನು ಕೂಡ ಮೂಡಿಗೇರಿಸಿಕೊಂಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ವಿದೇಶಗಳಿಂದಲೂ, ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಬಂದು ದೇವಿಯ ಆಶೀರ್ವಾದ ಪಡೆದುಕೊಳ್ಳುತ್ತಾರೆ.

ಮಾರಿಕಾಂಬೆ ದೇವಾಲಯವನ್ನು ಮಾರಿಗುಡಿ, ಅಮ್ನೋರ ಗುಡಿ ಎಂದಲೂ ಕರೆಯಲಾಗುತ್ತದೆ.

ಈ ದೇವಾಲಯವು 1688 ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗಿದೆ. ಈಕೆ ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯಕ್ಕ ಎಂಬ ಮಾತಿದೆ.

ಬಹಳ ಹಿಂದೆ ಒಬ್ಬ ಬ್ರಾಹ್ಮಣನಿದ್ದ. ಮಹಾ ಪಂಡಿತನು ಆಗಿದ್ದ. ಈತನಿಗೆ ಒಬ್ಬಳು ಸುಂದರವಾದ ಮಗಳಿದ್ದಳು. ಒಮ್ಮೆ ಒಬ್ಬ ಕೆಳವರ್ಗದ ಯುವಕ ವೇದ ಕಲಿಯುವ ಆಸೆಯಿಂದ ಈಕೆಯು ತಂದೆಯ ಬಳಿ ತಾನು ಬ್ರಾಹ್ಮಣ ಅಂತ ಸುಳ್ಳು ಹೇಳಿ ಶಿಷ್ಯನಾಗಿ ವೇದ ಕಲಿಯುತ್ತಾನೆ. ನಂತರ ಯುವಕ ಯುವತಿಯ ನಡುವೆ ಪ್ರೀತಿ ಹುಟ್ಟುತ್ತದೆ. ನಂತರ ಬ್ರಾಹ್ಮಣ ಇವರಿಬ್ಬರೂ ಮದುವೆ ಮಾಡಿಸಿ ಮನೆ ಅಳಿಯನನ್ನಾಗಿ ಮಾಡಿಕೊಳ್ಳುತ್ತಾನೆ. ಮಕ್ಕಳು ಜನಿಸಿದ ಮೇಲೆ ಮಕ್ಕಳನ್ನು ಹೊರಗಡೆ ಕರೆದೊಯ್ದು ತಾನು ಕೂಡ ಮಾಂಸವನ್ನು ತಿಂದು,ಅವರಿಗೂ ಮಾಂಸವನ್ನು ಪರಿಚಯಿಸುತ್ತಾನೆ. ಒಂದು ದಿನ ಈ ವಿಷಯ ಆಕೆಗೆ ತಿಳಿದು ರುದ್ರಾವತಾರ ತಾಳುತ್ತಾಳೆ. ಅವಳಿಂದ ತಪ್ಪಿಸಿಕೊಳ್ಳಲು ಆತ ಕುರಿ, ಕೋಳಿ, ಕೋಣಗಳ ರೂಪ ತಾಳಿ ದರೂ ಆಕೆ ಎಲ್ಲವನ್ನೂ ಸಂಹರಿಸಿ ಗಂಡನನ್ನು ಕೊಂದು ಮನೆಗೆ ಬೆಂಕಿ ಹಚ್ಚಿ ಕಾಣೆಯಾಗುತ್ತಾಳೆ. ನಂತರ ಕೊನೆಯಲ್ಲಿ ದೈವತ್ವವನ್ನು ಪಡೆಯುತ್ತಾಳೆ ಎಂದು ಪುರಾತನ ಕಥೆಯಲ್ಲಿದೆ. ಆದರೆ ಇದನ್ನು ಹಲವು ಚಿಂತಕರು ಒಪ್ಪುವುದಿಲ್ಲ. ಈ ಕಥೆಯನ್ನು ಮೇಲ್ವರ್ಗದವರು ಸೃಷ್ಟಿ ಮಾಡಿದ್ದಾರೆ ಎಂದು ನಂಬಿದ್ದಾರೆ.

ಈ ದೇವಸ್ಥಾನದ ಇತಿಹಾಸ ವೆನೆಂದರೆ ದೇವಿಯ ವಿಗ್ರಹವು ಹಾನಗಲ್‌ ನಿಂದ ಶಿರಸಿಗೆ ಬಂದಿತೆಂದು ಪುರಾಣ ಕಥೆ ಹೇಳುತ್ತದೆ.ಮೊದಲು ಹಾನಗಲ್‌ ನಲ್ಲಿ ಜಾತ್ರೆ ನಡೆಯುತ್ತಿತ್ತು. ಒಂದು ಸಲ ಜಾತ್ರಾ ಮಹೋತ್ಸವ ದ ಬಳಿಕ ದೇವಿಯ ವಿಗ್ರಹ ಹಾಗೂ ಆಕೆಯ ಚಿನ್ನಾಭರಣ ಗಳನ್ನು ಪೆಟ್ಟಿಗೆ ಯಲ್ಲಿ ಹಾಕಿಟ್ಟಿದ್ದರಂತೆ, ಅದನ್ನು ನೋಡಿದ ಕಳ್ಳರು ದೇವಿಯ ಆಭರಣನೆತ್ತಿಕೊಂಡು ವಿಗ್ರಹವಿದ್ದ ಪೆಟ್ಟಿಗೆಯನ್ನು ಶಿರಸಿ ಯ ಕೆರೆಯಲ್ಲಿ ಹಾಕಿದರಂತೆ. ಒಂದು ರಾತ್ರಿ ದೇವಿ ಭಕ್ತನೊಬ್ಬನ ಕನಸಿನಲ್ಲಿ ಬಂದು “ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ.

ನನ್ನನ್ನು ಮೇಲೆತ್ತು ಎಂದು ಹೇಳುತ್ತಾಳೆ. ಅದರಂತೆ ಪೆಟ್ಟಿಗೆ ಯನ್ನು ತೆಗೆದು ದೇವಿಯನ್ನು ವೈಶಾಖ ಶುದ್ಧ ಅಷ್ಠಮಿಯ ಮಂಗಳವಾರ ದಂದು ಪ್ರತಿಷ್ಠಾಪನೆ ಮಾಡುತ್ತಾರೆ. ಅದುವೇ ಶ್ರೀ ಮಾರಿಕಾಂಬೆ ದೇವಾಲಯ. ನಂತರ ದೇವಿಯ ವಿಗ್ರಹ ಸಿಕ್ಕ ಕೆರೆಯನ್ನು ದೇವಿಕೆರೆ ಎಂದು ನಾಮಕರಣ ಮಾಡಲಾಯಿತು. ಹೀಗೆ ಇದು ಹಲವು ವಿಶೇಷತೆ ಯಿಂದ ಕೂಡಿದೆ.  ಈ ಕಥೆಗಳನ್ನಾ ಓದಿದ ಮೇಲೆ ನಿಮಗೂ ಜಾತ್ರೆಗೆ ಬರಬೇಕು ದೇವಿಯ ಆಶೀರ್ವಾದ ಪಡಿಬೇಕು ಅಂತ ಆಸೆಯಾಗ್ತಾ… ಇರಬೇಕು ಅಲ್ವಾ..?? ಮತ್ತೆ ಯಾಕೆ ತಡಾ….??

-ಕಾವ್ಯಾ ಹೆಗಡೆ

ಎಂ.ಇ.ಎಸ್‌, ಶಿರಸಿ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.