UV Fusion: ಸೋಶಿಯಲ್ ಮೀಡಿಯಾ ಮತ್ತು ಕನ್ನಡ
Team Udayavani, Dec 2, 2023, 7:45 AM IST
ಈಗೆಲ್ಲಾ ಸೋಶಿಯಲ್ ಮೀಡಿಯಾ ಅಲೆ ಜೋರಾಗೆ ಇದೆ ವಾಟ್ಸ್‌ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಎಕ್ಸ್, ಟೆಲಿಗ್ರಾಂ, ಶೇರ್ ಚಾಟ್, ಯೂಟ್ಯೂಬ್ ಹೀಗೆ ಹತ್ತು ಹಲವು ಸೋಶಿಯಲ್ ಮೀಡಿಯಾ ಪ್ಲ್ರಾಟ್‌ಫಾರ್ಮ್ ಗಳು ನಮ್ಮ ಬೆರಳ ತುದಿಯಲ್ಲಿ ಜಗತ್ತನ್ನೇ ಮುಂದಿ ಡುತ್ತವೆ. ಹರೆಯದ ಮಕ್ಕಳಿಂದ ಹಿಡಿದು ಯುವಕ ಯುವತಿಯರು, ವಯಸ್ಕರವರೆಗೂ ಈ ಸೋಶಿಯಲ್ ಮೀಡಿಯಾ ವಲಯ ವಿಸ್ತಾರವಾಗಿದೆ.
ಮನೋರಂಜನೆಯ ವೀಡಿಯೋಗಳು, ಅನುಕರಣೆಯ ರೀಲ್ಸ್‌ಗಳು ಈಗ ಟ್ರೆಂಡ್‌ನಲ್ಲಿದೆ. ಇಂತಹ ಪ್ಲ್ರಾಟ್‌ಫಾರ್ಮ್ಗಳಲ್ಲಿ ಕನ್ನಡಿಗರ ಸಂಖ್ಯೆಯೇನು ಕಡಿಮೆ ಇಲ್ಲ. ಗ್ರೂಪ್‌ಗಳು, ಕಂಟೆಂಟ್ ಕ್ರಿಯೇಟರ್ಸ್‌ಗಳು, ಟ್ರೋಲ್ ಪೇಜ್‌ಗಳು ಲೆಕ್ಕಕ್ಕೆ ಸಿಗದಷ್ಟಿವೆ. ಈ ನಡುವೆ ತೀರ ನಿರ್ಲಕ್ಷಿಸಲ್ಪಟ್ಟ ಕನ್ನಡ ಕಾಳಜಿ. ಅದೇ ಕನ್ನಡವನ್ನು ತಪ್ಪಾಗಿ ಬರೆಯುವುದು ಹಾಗೂ ತಪ್ಪು ಕನ್ನಡದ ಬಳಕೆ. ಕನ್ನಡದಲ್ಲಿ ಪೋಸ್ಟ್‌ಗಳನ್ನು ಮಾಡಿದ್ರೆ ಹೆಚ್ಚು ಜನರನ್ನ ತಲುಪುತ್ತವೆ ಹೆಚ್ಚು ಲೈಕ್ಸ್‌ಗಳು ಬರುತ್ತವೆ ಅಂತ ಯೋಚಿಸೋ ಎಷ್ಟೋ ಟ್ರೋಲ್ ಪೇಜ್‌ಗಳು ಎಷ್ಟೋ ಕಂಟೆಂಟ್ ಕ್ರಿಯೇಟ್‌ಗಳು ಪೋಸ್ಟ್‌ಗಳಲ್ಲಿ ತಪ್ಪು ತಪ್ಪಾದ ಕನ್ನಡ ಅಡಿಬರಹವನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಇನ್ನೂ ಕಾಮೆಂಟ್ ಬಾಕ್ಸ್ ಎಂಬ ಅಭಿಪ್ರಾಯ ಖಾತೆಯನ್ನು ತೆರೆಯುವುದೇ ಬೇಡ ಇದು ಕನ್ನಡವ? ಎನ್ನುವಷ್ಟು ದಿಗಿಲಾಗುತ್ತದೆ.
ಮೊಬೈಲ್ ಅಂತ ಆಧುನಿಕ ಉಪಕರಣ ಬಳಸುವವರು ಜಾಣರೇ ಸರಿ ಇಂತಹ ಜಾಣರು ಕನ್ನಡವನ್ನು ಸರಿಯಾಗಿ ಬರೆಯುವುದರಲ್ಲಿ ಯಾಕೆ ಎಡವುತಿದ್ದಾರೆ? ಕನ್ನಡ ಬಳಸುತ್ತಿದ್ದಾರೆ ಎಂದು ಸಂತಸ ಪಡುವುದೋ ಇಲ್ಲ. ಇಂತಹ ಕನ್ನಡ ಬಳಕೆಯನ್ನು ಯಾಕೆ ಮಾಡುತ್ತಿದ್ದಾರೆ ಎಂದು ಸಂತಾಪ ಸೂಚಿಸುವುದೋ ತಿಳಿಯುತ್ತಿಲ್ಲ. ಪಾಂಡಿತ್ಯ ಕನ್ನಡವನ್ನೋ ಅಥವಾ ಅತ್ಯಂತ ಕ್ಲಿಷ್ಟಕರಗಳ ಪದಗಳ ಪ್ರಯೋಗ ಮಾಡಬೇಕೆನ್ನುವುದು ಖಂಡಿತ ನನ್ನ ವಾದ ಅಲ್ಲ. ಕನಿಷ್ಠ ಕಾಗುಣಿತ ಒತ್ತಕ್ಷರ ಹೃಸ್ವಸ್ವರ ದೀರ್ಘಸ್ವರಗಳ ನಡುವಿನ ವ್ಯತ್ಯಾಸ ಇವಿಷ್ಟಾದರೂ ಸರಿ ಇರಬಾರದೆ? ಕನ್ನಡಿಗರೇ ಕನ್ನಡವನ್ನು ಕೊಂದರೆ ಅದರ ಉಳಿವಿಗೆ ಹೋರಾಟ ಮಾಡಲು ಅನ್ಯ ಭಾಷಿಗರು ಬರಲು ಸಾಧ್ಯವೆ? ಅಂತಹದ್ದೊಂದು ಗತಿ ಬರದಿರಲಿ. ಈ ಎಲ್ಲ ಸನ್ನಿವೇಶಗಳನ್ನು ನೋಡುವಾಗ ನಾವೆಲ್ಲ ನಂಬರ್ ಒನ್ ಅಲ್ಲ ನವೆಂಬರ್ 1 ಕನ್ನಡಿಗರಾಗಿದ್ದೇವೆ ಅನ್ನೋದು ಸ್ಪಷ್ಟವಾಗುತ್ತಿದೆ.
ಸಿನೆಮಾ ನಟಿ ಒಬ್ಬರು ಸಂದರ್ಶನ ಒಂದರಲ್ಲಿ ಮಾತ ನಾಡುವಾಗ ಉಚ್ಚಾರ ಮಾಡಿದ ಕನ್ನಡ ಸರಿ ಇಲ್ಲವೆಂದು ಕಮೆಂಟಿಸಿದ್ದ ಆ ಬೃಹಸ್ಪತಿಯ ಕನ್ನಡವೇ ತಪ್ಪಾಗಿದೆ. ಒಂದರ್ಥದಲ್ಲಿ ಇಬ್ಬರೂ ಒಂದೇ ದೋಣಿಯಲ್ಲಿದ್ದಾರೆ.
ಇತ್ತೀಚೆಗಂತೂ ಇಂತಹ ಉದಾಹರಣೆಗಳು ಬಹಳಷ್ಟು.. ಕನ್ನಡ ಬಳಸಬೇಕು ಎಂದು ಅದೆಷ್ಟೋ ಅನ್ಯ ರಾಜ್ಯದ ಅನ್ಯ ಭಾಷಿಗರಿಗೆ ಸಲಹೆ ನೀಡೋ ನಾವು ಅದೆಷ್ಟು ಸರಿಯ ಕನ್ನಡವನ್ನು ಬಳಸುತ್ತಿದ್ದೇವೆ. ನಮ್ಮ ಕನ್ನಡಿಗರ ಕನ್ನಡ ಅದೆಷ್ಟು ಶುದ್ಧವಾಗಿದೆ. ತಪ್ಪಾಗುವುದು ಸಹಜ ಆದರೆ ಸರಿಪಡಿಸದೆ ಅದನ್ನೇ ಮುಂದುವರಿಸುತ್ತಿರುವುದು ವಿಷಾದನೀಯ.
ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂಬ ಕುವೆಂಪುರವರ ಸಾಲುಗಳನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ನಂಬಲು ಅಸಾಧ್ಯವಾಗಿಸುವ ನಿಲುವು ಮೂಡಿಸುವ ಮುಂಚೂಣಿಯಲ್ಲಿದ್ದೇವೆ ನಾವು. ಕನ್ನಡ ಭಾಷೆಯ ಮೇಲೆ ನಮಗೆ ಹಕ್ಕಿದೆ. ಅದನ್ನು ನಮ್ಮ ಧ್ವನಿಯಾಗಿ ಬಳಸುವ ಅಧಿಕಾರವೂ ಕನ್ನಡಿಗರಾದ ನಮಗಿದೆ. ಆದರೆ ಅಶುದ್ಧ ಕನ್ನಡದ ಬಳಕೆಯಿಂದ ಕನ್ನಡಕ್ಕೆ ಅವಮಾನ ಮಾಡುವುದು ಅದೆಷ್ಟು ಸರಿ?
ಕನ್ನಡವನ್ನು ಸರಿಪಡಿಸುವುದು ನಮ್ಮ ಕೈಯಲ್ಲೇ ಇದೆ ಕನ್ನಡಿಗರಾದ ನಮಗೆ ಬೇರಾರೂ ಕನ್ನಡವನ್ನು ಹೇಳಿ ಕೊಡಬೇಕಾಗಿಲ್ಲ.. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಾಗ ಅಥವಾ ಅಡಿ ಬರಹಗಳನ್ನ ಬರೆಯುವಾಗ ಒಂದಷ್ಟು ನಿಗಾ ವಹಿಸಿ ತನ್ನ ಕನ್ನಡ ಸರಿಯಾಗಿದೆಯೇ? ವ್ಯಾಕರಣದ ಶುದ್ಧತೆ ಇದೆಯೇ? ಎಂದು ಅವಲೋಕನ ಮಾಡಿದ್ರೆ ಎಷ್ಟೋ ತಪ್ಪುಗಳನ್ನ ತಿದ್ದಿಕೊಳ್ಳಬಹುದು.
ನಾವು ಮಾಡುವಂತ ಪೋಸ್ಟ್‌ಗಳು ಅದೆಷ್ಟೋ ಜನರನ್ನು ತಲುಪುತ್ತವೆ ಹೀಗಿರುವಾಗ ನಮ್ಮ ಸಣ್ಣಪುಟ್ಟ ತಪ್ಪುಗಳನ್ನು ನಾವೇ ಸರಿಪಡಿಸಿ ಬರೆದರೆ ಕನ್ನಡ ಕನ್ನಡವಾಗಿಯೇ ಇರಬಹುದು ಇನ್ನೂ ನೂರು ಕಾಲ. ಸರಿಗನ್ನಡವನ್ನು ಬಳಸಿದಾಗ ಮಾತ್ರ ಅದು ಸಿರಿಗನ್ನಡವಾಗುವುದು. ಕನ್ನಡವನ್ನು ಖಂಡಿತವಾಗಿಯೂ ಬೆಳೆಸಬೇಕಾಗಿಲ್ಲ ಅದು ಹೆಮ್ಮರ ವಾಗಿ ಬೆಳೆದಾಗಿದೆ ಅದನ್ನ ಬಳಸಬೇಕಷ್ಟೇ. ಅಲ್ಲ ಅದನ್ನ ಸರಿಯಾಗಿ ಬಳಸಬೇಕು ಎಂಬ ಕಳಕಳಿ.
-ನೈದಿಲೆ ಶೇಷೇಗೌಡ
ಎಸ್‌ಡಿಎಂ ಕಾಲೇಜು ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.