Social Media: ಸಾಮಾಜಿಕ ಜಾಲತಾಣವೆಂಬ ಸಂಕೋಲೆ


Team Udayavani, Oct 15, 2023, 3:20 PM IST

Social Media: ಸಾಮಾಜಿಕ ಜಾಲತಾಣವೆಂಬ ಸಂಕೋಲೆ

ಬದಲಾದ ಈ ವರ್ತಮಾನದಲ್ಲಿ ಆಧುನಿಕತೆಯ ವಿಸ್ತಾರತೆ ಜಗದಗಲ ಪಸರಿಸಿದೆ. ಡಿಜಿಟಲ್‌ ಯುಗ ಎಂದೇ ಹೇಳಬಹುದಾದ ಜಾಯಮಾನ ನಮ್ಮದಾಗಿದೆ. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಜಾಲತಾಣವನ್ನು ಬಿಟ್ಟು ಇರುವವರು ಯಾರೂ ಇಲ್ಲ ಎಂದೇ ಹೇಳಬಹುದು.

ಯಾವಾಗ ಡಿಜಿಟಲ್‌ ಯುಗ ಪ್ರಾರಂಭವಾಯಿತೊ ಆಗಿನಿಂದ ಸಂಬಂಧಗಳಿಗೆ ನೀಡುವ ಬೆಲೆ ಕಡಿಮೆಯಾಗುತ್ತಿದೆ. ಸದ್ಯ ನಮ್ಮ ಜೀವನ ಯಾಂತ್ರಿಕವಾಗಿ ನಡೆಯುತ್ತಿದೆ. ತಂತ್ರಜ್ಞಾನವನ್ನು ನಾವು ಬಳಸುವ ಬದಲು ತಂತ್ರಜ್ಞಾನವೇ ನಮ್ಮನ್ನು ಬಳಸಿಕೊಳ್ಳುತ್ತಿದೆ ಎಂದರೂ ತಪ್ಪಾಗಲಾರದು. ಅತಿಯಾದರೆ ಅಮೃತವೂ ವಿಷ ಆಗುತ್ತದೆ ಎಂಬಂತೆ ತಂತ್ರಜ್ಞಾನದಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲ ಕೂಡ ಇದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳ ಕೆಟ್ಟ ಪ್ರಭಾವದಿಂದ ವಿದ್ಯಾರ್ಥಿಗಳು ಓದಿನ ಕಡೆ ಗಮನ ವಹಿಸದೆ ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂತಹ ಜಾಲತನಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಮೊದಲು ಗ್ರಂಥಾಲಯಗಳನ್ನು ತಮ್ಮ ಜ್ಞಾನಾರ್ಜನೆಗಾಗಿ ಬಳಸಿಕೊಳ್ಳುತ್ತಿದ್ದ ಕಾಲದಿಂದ ಸ್ಮಾರ್ಟ್‌ಫೋನ್‌ ಒಂದಿದ್ದರೆ ಸಾಕು ಎಲ್ಲ ಮಾಹಿತಿ ಸಿಗುತ್ತದೆ ಎಂದು ಯೋಚಿಸುವುದನ್ನು ಹೆಚ್ಚಿನವರು ಕಲಿತುಕೊಂಡಿದ್ದಾರೆ. ಸುಲಭವಾಗಿ ಮಾಹಿತಿ ಸಿಗುತ್ತದೆ ಹೌದು, ಆದರೆ ಆ ವಿಷಯಗಳ ಆಳವನ್ನು ಹುಡುಕುವ ಶೈಲಿಗಳನ್ನು ಕಲಿತಿಲ್ಲ. ಚಿಕ್ಕ ಮಾಹಿತಿಗಳನ್ನು ಪಡೆದುಕೊಂಡು ಅಷ್ಟೇ ಮಾಹಿತಿ ಸಾಕು ಎಂದು ಸುಮ್ಮನಾಗುತ್ತಿದ್ದಾರೆ.

ಕಳೆದು ಹೋದ ಸಮಯ ಮತ್ತೆ ಬಾರದು ಎಂದು ಹೇಳುವ ಹಾಗೆ ನೇರ ಸಂಪರ್ಕಕ್ಕೆ ಹೆಚ್ಚು ಸಮಯ ಕೊಡದೆ ಫೋನ್‌ಗಳಲ್ಲಿ ಸಂದೇಶವನ್ನು ಕಳಿಸುವುದು ಹಾಗೂ ಮಾತನಾಡುವುದು ಹೆಚ್ಚಾಗುತ್ತಿದೆ. ಎದುರಲ್ಲಿಯೇ ಇರುವ ವ್ಯಕ್ತಿಗೆ ಸಮಯವನ್ನು ನೀಡದೆ ಗೊತ್ತಿರದ ವ್ಯಕ್ತಿಗಳ ಜತೆಗೂ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರಾಗಿ ಮಾತಾನಾಡುವವರನ್ನು ಇಂದು ನಾವು ಕಾಣಬಹುದು. ನಮ್ಮ ದಿನಿತ್ಯದ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ಹಂಚಿಕೊಂಡು ಅಪಾಯವನ್ನು ತಂದುಕೊಳ್ಳುವ ಪ್ರಕರಣಗಳು ಕೂಡ ಇತ್ತೀಚೆಗೆ ಹೆಚ್ಚಾಗುತ್ತಿದೆ.

ಜ್ಞಾನ, ಅಭಿವೃದ್ಧಿ ಹಾಗೂ ತಿಳಿಯದ ವಿಷಯದ ಕುರಿತು ತಿಳಿದುಕೊಳ್ಳಲು ಇಂಟರ್‌ನೆಟ್‌ ಬಳಸಬೇಕು. ಅದನ್ನು ಬಿಟ್ಟು ಇವನ್ನು ನಮಗೆ ಬೇಕಾದ ರೀತಿಯಲ್ಲಿ ತಿರುಚಿ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಮಿತಿಯಾಗಿ ಒಳ್ಳಯ ಕೆಲಸಕ್ಕಾಗಿ ಇವೆಲ್ಲ ತಂತ್ರಜ್ಞಾನ ಬಳಸಿಕೊಂಡರೆ ನಾವು ಉತ್ತಮ ಜ್ಞಾನ ಕೌಶಲ ಹೊಂದಿ ಸಂತೋಷದ ಬಾಳ್ವೆ ಮಾಡಲು ಸಾಧ್ಯ.

-  ಲಿಖೀತಾ ಹೆಗಡೆ. ಎಸ್‌.ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.