ಹೃದಯ ಸ್ಪರ್ಶಿ ಪುಟ್‌ಬಾಲ್‌ ತಾರೆ ಕಾರ್ಸನ್‌ ಪಿಕೆಟ್‌

ಕ್ರೀಡಾಂಗಣದಲ್ಲಿ ದೇವನ ಸೃಷ್ಠಿ ಕೈಕುಲುಕುತಿದೆ

Team Udayavani, May 31, 2020, 2:08 PM IST

ಹೃದಯ ಸ್ಪರ್ಶಿ ಪುಟ್‌ಬಾಲ್‌ ತಾರೆ ಕಾರ್ಸನ್‌ ಪಿಕೆಟ್‌

ಹುಟ್ಟುವಾಗಲೇ ನ್ಯೂನತೆಯಿಂದ ಭೂಮಿಗೆ ಬಂದು ಬೆಳಕೆಂಬ ಕೋಲನ್ನು ಹಿಡಿದು ಕತ್ತಲ ನೆರಳನ್ನು ಸೆದೆಬಡಿಯುವ ಮೂಲಕ ತಾನು ಸಶಕ್ತ ಎಂದು ತೋರಿಸುವ ಅದೆಷ್ಟೋ ಅದಮ್ಯ ಪ್ರತಿಭೆಗಳು ನಮ್ಮ ಮುಂದಿವೆ.

ಅಂಥರ ಸಾಲಿನಲ್ಲಿ ನಿಲ್ಲುವ ಕಾರ್ಸನ್‌ ಪಿಕೆಟ್‌ ಮೂಲತಃ ಅಮೆರಿಕ ದೇಶದವರು. ಫ‌ುಟ್‌ಬಾಲ್‌ ಆಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.

ತನ್ನ ಎಡಗೈ ಇಲ್ಲದಿದ್ದರೂ ಅದರಿಂದ ನಾನು ಏನನ್ನು ಕಳೆದುಕೊಂಡಿಲ್ಲ ಎಂಬ ಮಾತುಗಳನ್ನು ಅವರ ಸಾಧನೆಗಳೇ ಹೇಳುತ್ತವೆ.

ಒರ್ನಲ್ಟೋದ ಪ್ರತಿಷ್ಠಿತ ತಂಡವಾದ ಎನ್‌ಡಬ್ಲ್ಯೂಎಸ್‌ಎಲ್‌ ತಂಡದಲ್ಲಿ ಆಡುತ್ತಿರುವ ಇವರು, ತಮ್ಮ 25ನೇ ವರ್ಷಕ್ಕೆ ಉತ್ತಮ ಗೋಲ್‌ ಡಿಫೆಂಡರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಅರಳು ಪ್ರತಿಭೆ ಕಾರ್ಸಲ್‌
ಹುಟ್ಟುತ್ತಲೇ ಎಡಗೈ ಇಲ್ಲದೇ ಜನಿಸಿದ ಕಾರ್ಸಲ್‌ ಫ‌ುಟ್‌ಬಾಲ್‌ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕ್ರೀಡಾ ಲೋಕದಲ್ಲಿ ಬೆಳೆಯುತ್ತಿರುವ ಅರಳು ಪ್ರತಿಭೆ. ಆಕೆ ತನ್ನಲ್ಲಿ ನ್ಯೂನತೆ ಇದೆ ತಾನು ಅಸಹಾಯಕಳು ಎಂದು ಕೈ ಕಟ್ಟಿ ಕುಳಿತವಳಲ್ಲ. ಅವಕಾಶವನ್ನು ಸೃಷ್ಟಿಸಿಕೊಂಡು ಉತ್ಸಾಹದ ಚಿಲುಮೆಯಾಗಿ ಇತರರಿಗೆ ಸ್ಪೂರ್ತಿಯ ದೀಪವಾಗಿ ತನ್ನ ಬದುಕನ್ನು ಬೆಳಗಿಸಿಕೊಂಡ ದಿಟ್ಟ ಆಟಗಾರ್ತಿ. ಕಾಲೇಜು ದಿನಗಳಲ್ಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರೇರಣಾಶಕ್ತಿ ಈ ಕ್ರೀಡಾಪಟು

ಈ ಕಾರ್ಸಲ್‌ ಜೋಸೆಫ್ ಎಂಬ ಒಂದು ಪುಟ್ಟ ಮಗುವಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಜೋಸೆಫ್ ಕೂಡ ಹುಟ್ಟುವಾಗಲೇ ತನ್ನ ಎಡಗೈ ಕಳೆದುಕೊಂಡಿದ್ದ ಮಗು. ಆತನಿಗೆ ತನ್ನಂತೆ ಕಾಣುವ ಕ್ರೀಡಾ ತಾರೆ ಕಾರ್ಸಲ್‌ ಎಲ್ಲಿಲ್ಲದ ಅಚ್ಚು ಮೆಚ್ಚು.

ಈ ಹಿನ್ನೆಲೆ ಕಳೆದ ತಿಂಗಳು ಪಂದ್ಯವೊಂದನ್ನು ನೋಡಲು ಜೋಸೆಫ್ ತನ್ನ ಇಷ್ಟ ದೇವತೆ ಕಾರ್ಸ್‌ಲ್‌ರನ್ನು ಭೇಟಿಯಾಗಿದ್ದರು. ಮಾತ್ರವಲ್ಲದೇ ಎಡಗೈ ಇಲ್ಲದ ಇಬ್ಬರೂ ಪರಸ್ಪರ ಕೈಕುಲುಕಿಕೊಂಡಿದ್ದಾರೆ. ಇನ್ನು ಆ ಎರಡು ವರ್ಷದ ಪೋರನ ಅಪ್ಪಟ ಪ್ರೀತಿಗೆ ಮಾರಿಹೋಗಿರುವ ಕಾರ್ಸಲ್‌ ಕ್ರೀಡಾಂಗಣದಲ್ಲಿ ಆ ಮಗುವನ್ನು ಮುದ್ದಾಡಿದ್ದಾರೆ.

ಆ ಮಗುವಿನ ಪೋಷಕರು ಕಾರ್ಸಲ್‌ ಪಿಕೆಟ್‌ರೊಂದಿಗೆ ಮಗು ಕೈ ಕುಲುಕುವ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಾವಿರಾರು ಕ್ರೀಡಾಭಿಮಾನಿಗಳಿದ್ದ ಕ್ರೀಡಾಂಗಣ ಇಂತಹ ಒಂದು ಹೃದಯ ಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಎಲ್ಲರ ಕಣ್ಣಂಚಿನಲ್ಲಿ ನೀರು ತೊಟ್ಟಿಕ್ಕುತ್ತಿತ್ತು.

– ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.