School Memories: ತರಗತಿಯಲ್ಲಿ ಉಪ್ಪುಖಾರ


Team Udayavani, Sep 25, 2024, 1:50 PM IST

8-uv-fusion

ತರಗತಿ ಕೊಠಡಿ ಬರೀ ಡೆಸ್ಕಾ, ಬೆಂಚು, ಬೋರ್ಡ್‌, ಕಿಟಕಿ ಬಾಗಿಲುಗಳಿರುವ ಜಾಗವಲ್ಲ. ಇದು ವಿದ್ಯಾರ್ಥಿ, ಶಿಕ್ಷಕರಲ್ಲಿ ಸಾವಿರಾರು ಸವಿಸವಿ ನೆನಪುಗಳನ್ನು ಸೃಷ್ಟಿಸುವ, ಹೊಸ ಹುರುಪನ್ನು ಬಿತ್ತುವ ಜಾಗ. ಕಲಿಕೆಗೆ ಜೀವ ತುಂಬುವ ಮಾಂತ್ರಿಕ ಸ್ಥಳವೇ ಈ ತರಗತಿ ಕೊಠಡಿಗಳು.

ವಿದ್ಯಾರ್ಥಿ ಜೀವನದಲ್ಲಿ ನನ್ನ ಅತ್ಯುತ್ತಮ ಭಾಗವೆಂದರೆ ಅದು ಪ್ರೌಢ ಶಿಕ್ಷಣದ ಸಮಯ. ಮುಂದಿನ ಬೆಂಚಿನಲ್ಲಿ ಕುಳಿತು ಶಿಕ್ಷಕರಿಗೆ ಸ್ಪಷ್ಟವಾಗಿ ಕಾಣಬಾರದೆಂದು ನಾನು ಹಾಗೂ ಸಹಪಾಠಿಗಳು ಅವರಿಂದ ಆದಷ್ಟು ದೂರವಿದ್ದು, ಗೋಡೆಯ ಹತ್ತಿರವಿರುವ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಇದು ನಮ್ಮ ರಹಸ್ಯ ಅಡುಗೆ ಸ್ಥಳವೂ ಆಗಿತ್ತು. ಹೌದು. ನಾನು ಹಾಗೂ ನನ್ನ ಸಹಪಾಠಿಗಳು ಇಲ್ಲಿ ಕುಳಿತು ಒಂದು ಚಿಕ್ಕ ಸ್ಟೋರ್‌ ರೂಮನ್ನೇ ತೆರೆದಿದ್ದೆವು. ಇಲ್ಲಿ ಉಪ್ಪು, ಮೆಣಸಿನ ಹುಡಿ, ಚಾಕು… ಹೀಗೆ ನಮ್ಮ ತರಗತಿಯಲ್ಲಿ ಯಾರಿಗೆ ಬೇಕಾದರೂ ನಮ್ಮಲ್ಲಿ ಲಭ್ಯವಿರುತ್ತಿತ್ತು.

ನಮ್ಮ ತರಗತಿಯ ಹುಡುಗರು ಊಟದ ವಿರಾಮದ ಬಳಿಕ ಶಾಲೆಯ ಬದಿಯಲ್ಲಿರುವ ಮಾವಿನ ಮರಕ್ಕೆ ಕಲ್ಲು ಬಿಸಾಡಿ ಸುಮಾರು 4ರಿಂದ 5 ಮಾವಿನ ಕಾಯಿಗಳನ್ನು ತಂದು ಕೊಡುತ್ತಿದ್ದರು. ಊಟದ ಅನಂತರದ ಮೊದಲ ತರಗತಿಯಲ್ಲಿ ನಮ್ಮದೇ ಕ್ಯಾಟರಿಂಗ್‌ ವ್ಯವಸ್ಥೆಯಂತೆ ಈ ಕಾಯಿಗಳನ್ನು ಸಮವಾಗಿ ಚಿಕ್ಕ ಚಿಕ್ಕ ತುಂಡುಗಳಂತೆ ಕತ್ತರಿಸಿ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸಮಪ್ರಮಾಣದಲ್ಲಿ ಸಿಂಪಡಿಸಿ ಇಡೀ ತರಗತಿಗೆ ಒಂದೊಂದು ತುಂಡುಗಳನ್ನು ಕೊಡುತ್ತಿದ್ದೆವು. ಇಂದು ಮಾವಿನ ಕಾಯಿಯಾದರೆ ಮರುದಿನ ಪೇರಳೆ, ಬಿಂಬುಳಿ, ಹುಣಸೇ ಹಣ್ಣು, ಹಣವಿದ್ದರೆ ಅನಾನಸು ಹೀಗೆ ಒಂದಲ್ಲಾ ಒಂದು ರೀತಿಯ ತಿಂಡಿ ತಿನಿಸುಗಳನ್ನು ಹಂಚಿ ತಿನ್ನುತ್ತಿದ್ದೆವು.

ಕೆಲವೊಮ್ಮೆ ಉಪ್ಪು – ಮೆಣಸಿನ ಹುಡಿ ಸಿಂಪಡಿಸುವಾಗ ಹೆಚ್ಚುಕಮ್ಮಿಯಾಗಿ ನಮ್ಮ ಬಾಯಲ್ಲಿ ಖಾರ ಸ್ಫೋಟವಾದ್ದೂ ಇದೆ. ಇವೆಲ್ಲಾ ನಮಗೆ ತರಗತಿಯ ಮಧ್ಯೆ ನಮ್ಮದೇ ರೀತಿಯ ಪಾರ್ಟಿಯಂತಿತ್ತು. ಕೆಲವೊಮ್ಮೆ ಶಿಕ್ಷಕರು ಇಲ್ಲಿ ಯಾರೋ ಉಪ್ಪು ಖಾರ ಹಾಕಿ ಏನೋ ತಿನ್ನುತ್ತಿತ್ತಾರೆ ಎಂದು ಹೇಳಿದ್ದೂ ಇದೆ. ನಾವು ನಮ್ಮ ತಪ್ಪನ್ನು ಮುಚ್ಚಿ ಹಾಕಲು, ಮೇಡಂ ಬಹುಶಃ ಅದು ಪಕ್ಕದ ತರಗತಿಯಲ್ಲಿರಬಹುದೋ ಏನೋ ಎಂದು ಇನ್ನೊಂದು ತರಗತಿಯವರನ್ನು ದೂರಿದ್ದೂ ಇದೆ.

ಹೀಗೆ ತರಗತಿಗಳು ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ವಿದ್ಯಾರ್ಥಿಗಳ ಸಾವಿರಾರು ಕೀಟಲೆ, ಮೋಜು ಮಸ್ತಿಯ ನೆನಪುಗಳಿವೆ. ಮೊದಲ ದಿನ ಅಪರಿಚಿತರಾಗಿದ್ದ ನಾವುಗಳು ದಿನ ಕಳೆದಂತೆ ಪರಿಚಿತರಾಗಿ ಅನಂತರ ಗೆಳೆಯರಾಗುತ್ತೇವೆ ಹಾಗೂ ಸ್ನೇಹ ಸಂಬಂಧಗಳು ಬೆಳೆಯುತ್ತದೆ. ಗುಂಪು ಚರ್ಚೆಗಳಿಂದ ಮೋಜಿನ ಚಟುವಟಿಕೆಗಳವರೆಗೆ ತರಗತಿಗಳು ಶೈಕ್ಷಣಿಕ ವಾತಾವರಣಕ್ಕೆ ಪರಿಪೂರ್ಣ ಸ್ಥಳವಾಗಿದೆ.

-ಸನ ಶೇಕ್‌ ಮುಬಿನ್‌

ಸಂತ ಅಲೋಶಿಯಸ್‌ಕಾಲೇಜು ಮಂಗಳೂರು

ಟಾಪ್ ನ್ಯೂಸ್

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.