Spray fans: ಬಿಸಿ ಗಾಳಿಯೂ ತಂಪಾಯ್ತು
Team Udayavani, May 2, 2024, 4:30 PM IST
ಬೇಸಗೆಯ ತಾಪವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದ ಹೊತ್ತು ಸೆಕೆಯ ಅನುಭವವಾಗುತ್ತಿದ್ದ ನಮಗೆ ಈಗ ಬೆಳಗ್ಗಿನಿಂದಲೇ ಸೆಕೆಯ ಉರಿ ತಡೆಯಲು ಸಾಧ್ಯವಾಗುತ್ತಿಲ್ಲ. ಫ್ಯಾನ್ ಸ್ಪೀಡ್ 5 ರಲ್ಲಿ ಇದ್ದರೂ ಇನ್ನೂ ಸ್ವಲ್ಪ ಗಾಳಿ ಬೇಕು ಅನ್ನಿಸುತ್ತದೆ.
ಈಗಂತೂ ಮಾರುಕಟ್ಟೆಯಲ್ಲಿ ತರತರದ ಹೊಸ ಬ್ರ್ಯಾಂಡ್ ಕೂಲರ್‌ಗಳು ಲಭ್ಯವಿವೆ. ಆದರೆ ಬೆಲೆ ವಿಚಾರದಲ್ಲಿ ಚೌಕಾಶಿ ಮಾಡುವಂತಿಲ್ಲ. ಹೀಗಾಗಿ ಅಗ್ಗದ ಬೆಲೆಗೆ ಸ್ಪ್ರೆà ಫ್ಯಾನ್ ಈಗ ಬಹಳ ಬೇಡಿಕೆ ಪಡೆಯುತ್ತಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ನೀವು ಕೂಡ ಡಿಜಿಟಲ್ ಮಾರ್ಕೆಟ್‌ನ ಗ್ರಾಹಕರಾಗಿದ್ದರೆ ನಿಮಗೆ ಮಿನಿ ಫ್ಯಾನ್ ಬಗ್ಗೆ ತಿಳಿದೇ ಇರುತ್ತದೆ. ಆದರೆ ಈ ಸ್ಪ್ರೇ ಫ್ಯಾನ್ ಅನ್ನುವುದು ಅದಕ್ಕಿಂತ ಭಿನ್ನವಾಗಿದೆ. ಬಿಸಿಲಿನ ತಾಪವೂ ಹಗಲು ಮಾತ್ರವಲ್ಲದೇ ರಾತ್ರಿಯೂ ಕೂಡ ನಮ್ಮ ಸುಖ ನಿದ್ರೆಯನ್ನು ಕೆಡಿಸುತ್ತದೆ. ಹೀಗಾಗಿ ಈ ಸ್ಪ್ರೇ ಫ್ಯಾನ್ ಬಳಕೆಯು ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ. ವಿಶೇಷತೆ ಏನು?
ಈ ಫ್ಯಾನ್‌ನಲ್ಲಿ ನೀರಿನ ಸ್ಪ್ರೇ ಮಾದರಿ ಇರಲಿದ್ದು, ಅದರ ಮೂಲಕ ಗಾಳಿ ಬಿಸಿಯಾದಾಗಲೆಲ್ಲ ನೀರು ಕೂಡ ಸ್ಪ್ರೇ ಆಗಲಿದೆ. ಹಾಗಾಗಿ ಒಂದು ರೀತಿ ಮಿನಿ ಕೂಲರ್ ಎಂದೇ ಹೇಳಬಹುದು. ಇದರ ರಚನೆ ಗಮನಿಸುವುದಾದರೆ ಇದರಲ್ಲಿ ಟ್ಯಾಪ್ ಮಾದರಿ ಇರಲಿದೆ. ಇದರ ಸಣ್ಣ ರಂಧ್ರದ ಮೂಲಕ ನೀರು ಸ್ಪ್ರೇ ಆಗುತ್ತದೆ.
ಸಮಾರಂಭದಲ್ಲಿ ಅಧಿಕ ಬಳಕೆ
ಇದು ನೀರು ಚಿಮ್ಮಿಸುವುದರಿಂದ ಉಳಿದ ಫ್ಯಾನ್‌ಗಿಂತ ಇದನ್ನು ಭಿನ್ನ ಎನ್ನಲಾಗುತ್ತದೆ. ಮನೆಯೊಳಗೆ ಬಿಸಿ ಹೆಚ್ಚಿದ್ದರೆ ಸಾಮಾನ್ಯ ಫ್ಯಾನ್‌ನ ಗಾಳಿಯೂ ಬಿಸಿಯಾದ ಅನುಭವವೇ ನೀಡುತ್ತದೆ. ಆದರೆ ಇದರಲ್ಲಿ ನೀರಿನ ಸ್ಪ್ರೇ ಮೂಲಕ ಫ್ಯಾನ್ ಅನ್ನು ರಚಿಸಲಾಗಿದೆ. ಹಾಗಾಗಿ ತಂಪು ಗಾಳಿ ಬೀಸುತ್ತದೆ. ಮದುವೆ ಅಥವಾ ಪಾರ್ಟಿ ಸಂದರ್ಭದಲ್ಲಿ ಈ ಫ್ಯಾನ್ ಅಧಿಕವಾಗಿ ಬಳಕೆ ಮಾಡಲಾಗುವುದು.
ಬೆಲೆ ಎಷ್ಟಿದೆ?
ಸ್ಪ್ರೇ ಫ್ಯಾನ್ ಅನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಬಹುದು. 500-1,500 ರೂ.ನಿಂದ ಆರಂಭವಾಗಿ 4,000ರೂ. ವರೆಗೂ ವಿವಿಧ ದರಗಳಲ್ಲಿ ಲಭ್ಯವಿವೆ. ಇತ್ತೀಚಿನ ದಿನದಲ್ಲಿ ಕೆಲವು ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಕೂಡ ಈ ಸ್ಪ್ರೆ ಫ್ಯಾನ್ ಲಭ್ಯವಿದೆ.
-ಮಾನ್ಯ
ಸರಕಾರಿ ಪದವಿ ಪೂರ್ವ ಕಾಲೇಜು, ಉಪ್ಪುಂದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.