ವ್ಹೀಲ್‌ಚೇರ್‌ನಲ್ಲಿ ಕುಳಿತು ವಿಜ್ಞಾನ ಲೋಕಕ್ಕೇ ಮಾರ್ಗದರ್ಶನ ನೀಡಿದ ಸ್ಟೀಫನ್ ಹಾಕಿಂಗ್
Team Udayavani, Oct 19, 2020, 7:42 PM IST
21ನೇ ವರ್ಷದಲ್ಲಿ ರೋಗ ಕಾಡಲು ಆರಂಭಿಸಿದಾಗ ನನ್ನ ಎಲ್ಲ ನಿರೀಕ್ಷೆಗಳು ಪಾತಾಳಕ್ಕೆ ಕುಸಿದವು.
ಅಲ್ಲಿಂದ ಮುಂದೆ ಲಭಿಸಿದ್ದೆಲ್ಲ ಬೋನಸ್’ -ಇದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನುಡಿಗಳು.
ಜಗತ್ತು ಕಂಡ ಮಹಾನ್ ಭೌತಶಾಸ್ತ್ರಜ್ಞರ ಮೊದಲ ಸಾಲಿನಲ್ಲಿ ನಿಲ್ಲುವವರು ಸ್ಟೀಫನ್ ಹಾಕಿಂಗ್. ಅಪ್ರತಿಮ ಭೌತಶಾಸ್ತ್ರಜ್ಞ, ಖಗೋಳ ವಿಜ್ಞಾನಿ, ಪ್ರಾಧ್ಯಾಪಕ, ವಿಜ್ಞಾನ ಬರಹಗಾರ ಹೀಗೆ ಹಲವು ಬಿರುದು, ವಿಶೇಷಣಗಳನ್ನು ನೀಡಿದರೂ ಅವರ ಪ್ರತಿಭೆಗೆ ಸಾಟಿ ಇಲ್ಲ.
55 ವರ್ಷಗಳ ಕಾಲ ವ್ಹೀಲ್‌ಚೇರ್‌ನಲ್ಲೇ ಜೀವನ ಕಳೆದರೂ ಜಗತ್ತು ವಿಸ್ಮಯಗೊಳ್ಳುವಂತಹ ಸಂಶೋಧನೆ ನಡೆಸಿದ ಸ್ಟೀಫನ್ ಹಾಕಿಂಗ್ ಬದುಕು ಸ್ಫೂರ್ತಿಯ ಚಿಲುಮೆಯಾಗಿದೆ.
ಈ ಅಪ್ರತಿಮ ಮೆಧಾವಿ ಫ್ರಾಂಕ್ ಮತ್ತು ಇಸಾಬೆಲ್ಲಾ ಹಾಕಿಂಗ್ ಅವರ ಮೊದಲ ಮಗನಾಗಿ ಜನವರಿ 8, 1942ರಂದು ಇಂಗ್ಲೆಂಡ್‌ನಲ್ಲಿ ಜನಿಸಿದರು (ಈ ದಿನದಂದು ಖ್ಯಾತ ಖಗೋಳ ಶಾಸ್ತ್ರಜ್ಞ ಗೆಲಿಲಿಯೋನ 300 ಪುಣ್ಯ ಸ್ಮರಣೆ ಆಚರಿಸಲಾಗಿತ್ತು).
ಬಾಲ್ಯದಿಂದಲೂ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು ಸ್ಟೀಫನ್. ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಭೌತಶಾಸ್ತ್ರಕ್ಕಿಂತ ಗಣಿತ ಹೆಚ್ಚು ಪ್ರಿಯವಾಗಿತ್ತು. ಆದರೆ ಆ ಸಮಯದಲ್ಲಿ ಆಕ್ಸ್ ಫರ್ಡ್ ವಿವಿಯ ಗಣಿತಶಾಸ್ತ್ರ ಪದವಿ ಇಲ್ಲದ ಕಾರಣ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ವಿಶ್ವ ವಿಜ್ಞಾನ ಅಥವಾ ಕಾಸ್ಮಾಲಾಜಿ (ಬ್ರಹ್ಮಾಂಡದ ಉಗಮ ಮತ್ತು ವಿಕಾಸ ಕುರಿತಾದ ಅಧ್ಯಯನ)ಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು ಮುಂದೆ ಈ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದರು. 32ನೇ ವರ್ಷದಲ್ಲಿ ಬ್ರಿಟನ್‌ನ ಪ್ರತಿಷ್ಠಿತ ರಾಯಲ್ ಸೊಸೈಟಿಯ ಅತ್ಯಂತ ಕಿರಿಯ ಸದಸ್ಯರಾಗಿ ನೇಮಕಗೊಂಡರು. 1979ರಲ್ಲಿ ಕೇಂಬ್ರಿಡ್ಜ್ ವಿವಿಯ ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡರು.
ದೌರ್ಬಲ್ಯಕ್ಕೆ ಸವಾಲೆಸೆದ ಸ್ಟೀಫನ್
ತನ್ನ 21ನೇ ವಯಸ್ಸಿನಲ್ಲಿ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ರೋಗಕ್ಕೆ ತುತ್ತಾದ ಸ್ಟೀಫನ್ ಹಾಕಿಂಗ್ ಇಂತಹ ಮಾರಕ ರೋಗವನ್ನು ಲೆಕ್ಕಿಸದೆ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ದ್ದಾರೆ. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಎಂಬುದು ಒಂದು ಅಪರೂ ಪದ ಕಾಯಿಲೆಯಾಗಿದ್ದು ಕೋಟಿಯಲ್ಲಿ ಒಬ್ಬರು ಇದಕ್ಕೆ ತುತ್ತಾಗುತ್ತಾರೆ. ನರನಾಡಿಗಳನ್ನು ನಿಯಂತ್ರಿಸುವ ಕೇಂದ್ರ ನರಮಂಡಲ ನಿಧಾನವಾಗಿ ತನ್ನ ಕಾರ್ಯವನ್ನು ನಿಲ್ಲಿಸುವುದು ಇದರ ಲಕ್ಷಣ(ಒಂದು ರೀತಿಯ ಪಾರ್ಶವಾಯು ಎನ್ನಬಹುದು). ವೈದ್ಯರು ಕೇವಲ ಎರಡು ವರ್ಷಗಳ ಕಾಲ ಮಾತ್ರ ಬದುಕಬಲ್ಲರು ಎಂದು ಹೇಳಿದ್ದರೂ ಜಗತ್ತು ಅಚ್ಚರಿನ ಪಡುವಂತೆ ಸ್ಟೀಫನ್ 76 ವಯಸ್ಸಿನ ವರೆಗೂ ಬದುಕಿದ್ದರು.
ಈಕ್ವಲೈಜರ್ ಎಂಬ ಸಂಗಾತಿ
1970ರ ವೇಳೆಗೆ ಸ್ಟೀಫನ್ ಅವರ ಮಾತು ಸಂಪೂರ್ಣ ಅಸ್ಪಷ್ಟವಾಗಿತ್ತು. ನಡೆಯುವುದು, ಬರೆಯುವುದಕ್ಕೆ ಬಹಳ ಕಷ್ಟವಾಗುತ್ತಿತ್ತು. ಈ ಸಮಯದಲ್ಲಿ ವಾಲ್ಟರ್ ವಾಲ್ಟೋಜ್ ಎಂಬ ವ್ಯಕ್ತಿ ಸ್ಟೀಫನ್‌ಗಾಗಿ ಈಕ್ವಲೈಜರ್ ಎಂಬ ಅತ್ಯಾಧುನಿಕ ವ್ಹೀಲ್‌ಚೇರ್ ತಯಾರಿಸಿಕೊಟ್ಟರು. ಈ ಈಕ್ವಲೈಜರ್ ಸ್ಟೀಫನ್‌ಗೆ ಮತ್ತಷ್ಟು ಜೀವನೋತ್ಸಾಹವನ್ನು ತಂದುಕೊಟ್ಟಿತು. ಈಕ್ವಲೈಜರ್ ವ್ಹೀಲ್‌ಚೇರ್‌ನ ವಿಶೇಷತೆ ಎಂದರೆ ಸ್ಟೀಫನ್ ಮೆದುಳಿನಲ್ಲಿ ಏನೆಲ್ಲ ಯೋಚಿಸುತ್ತಿದ್ದರು ಅದೆಲ್ಲ ಕಂಪ್ಯೂಟರ್ ಪರದೆಯ ಮೇಲೆ ಪ್ರದರ್ಶನಗೊಳ್ಳುತ್ತಿತ್ತು. ಇದರ ಸಹಾಯದಿಂದಲೇ ಇತರರೊಂದಿಗೆ ಸಂವಹನ ನಡೆಸುತ್ತಿದ್ದರು. ವೈಜ್ಞಾನಿಕ ಪುಸ್ತಕಗಳನ್ನೂ ಬರೆಯುತ್ತಿದ್ದರು.
ಸ್ಟೀಫನ್ ಬರೆದ ಪುಸ್ತಕಗಳು
ಸ್ಟೀಫನ್ ಜೀವನವೇ ಒಂದು ವಿಸ್ಮಯ. ಅವರ ಚಟುವಟಿಕೆ ವ್ಹೀಲ್‌ಚೇರ್‌ಗೆ ಸೀಮಿತವಾಗಿದ್ದರೂ 20ಕ್ಕಿಂತ ಹೆಚ್ಚು ಪುಸ್ತಕಗಳನ್ನುಬರೆದಿದ್ದಾರೆ. “ದ ಬಿಗ್ ಕ್ವಶನ್ಸ್’, “ಮೈ ಬ್ರಿಫ್ ಹಿಸ್ಟರಿ’, “ದಿ ಗ್ರ್ಯಾಂಡ್ ಡಿಸೈನ್’, “ಬ್ಲ್ಯಾಕ್ ಹೋಲ್ಸ್ ಆ್ಯಂಡ್ ಬೇಬಿ ಯೂನಿವರ್ಸ್’, “ದಿ ಯೂನಿವರ್ಸ್ ಇನ್ ಎ ನಾಟ್‌ಶೇಲ್’, “ಆನ್ ದಿ ಶೋಲ್ಡರ್ ಆಫ್ ಗೈನ್ಸ್’ ಇತ್ಯಾದಿ ಸ್ಟೀಫನ್ ಅವರ ಪ್ರಮುಖ ಪುಸ್ತಕಗಳು. “ಎ ಭ್ರೀಫ್ ಹಿಸ್ಟರಿ ಆಫ್ ಟೈಮ್’ ಇವರು ಬರೆದ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಇದರ ಪ್ರತಿಗಳು ಒಂದು ಕೋಟಿಗೂ ಹೆಚ್ಚು ಮಾರಾಟವಾಗಿವೆ. ಈ ಪುಸ್ತಕದಲ್ಲಿ ಬಿಗ್ ಬ್ಯಾಂಗ್ ಸಿದ್ಧಾಂತ, ಕಪ್ಪು ರಂಧ್ರ ಕುರಿತಾಗಿ ಬರೆದಿದ್ದಾರೆ. ಪುತ್ರಿ ಲೂಸಿ ಹಾಕಿಂಗ್ ಜತೆ ಸೇರಿ “ಜಾರ್ಜ್ ಸೀಕ್ರೆಟ್ ಕೀ ಟು ದ ಯೂನಿವರ್ಸ್’, “ಜಾರ್ಜ್ ಕ್ವಾಮಿಕ್ ಟ್ರೆಷರ್ ಹಂಟ್’ ಪುಸ್ತಕಗಳನ್ನು ಬರೆದಿದ್ದಾರೆ.
ಹಲವು ಸಿದ್ಧಾಂತ
ಹಾಕಿಂಗ್ ವಿಕಿರಣ, ಪೆನ್ಸೋಸ್-ಹಾಕಿಂಗ್ ಸಿದ್ಧಾಂತ, ಬೆಕ್ಸೆ$r„ನ್- ಹಾಕಿಂಗ್ ಫಾರ್ಮುಲಾ, ಹಾಕಿಂಗ್ ಎನರ್ಜಿ ಸಿದ್ಧಾಂತ ಹೀಗೆ ಹಲವು ಸೂತ್ರ, ತಣ್ತೀ, ಸಿದ್ಧಾಂತಗಳನ್ನು ಸ್ಟೀಫನ್ ಜಗತ್ತಿಗೆ ನೀಡಿದ್ದಾರೆ. ಹೀಗಾಗಿ ಇವರನ್ನು ವಿಜ್ಞಾನ ಲೋಕದ ಮಾರ್ಗದರ್ಶಕ ಎಂದು ಕರೆಯಲಾಗುತ್ತದೆ. ತಾವು ನಿಧನಹೊಂದುವ ಮುಂಚೆ ಜೆನೆಟಿಕ್ ಎಂಜಿಯರಿಂಗ್(ಡಿಎನ್‌ಎ ಮಾರ್ಪಾಡು)ನಿಂದ ಸೃಷ್ಟಿ ಮಾಡುವ ಜೀವಿಗಳ ಕುರಿತು ಹೇಳಿದ್ದರು. ಈ ಜೀವಿಗಳು ಮನುಕುಲದ ನಾಶ ಮಾಡುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.
ಕಪ್ಪುರಂಧ್ರ, ಅನ್ಯಗ್ರಹ ಜೀವಿಗಳ ಅಧ್ಯಯನ
2004ರಲ್ಲಿ ಕಪ್ಪುರಂಧ್ರ ಕುರಿತಾಗಿ ತಮ್ಮದೇ ಹೊಸ ಸಿದ್ಧಾಂತವನ್ನು ನೀಡಿ ಸುದ್ದಿಯಾಗಿದ್ದರು. ಅನ್ಯಜೀವಿಗಳ ಇರುವುವಿಕೆಯ ಕುರಿತೂ ಅಧ್ಯಯನ ನಡೆಸಿ ಅವುಗಳು ಭೂಮಿಗೆ ಬಂದರೆ ಅಪಾಯವಿದೆ ಎಂದಿದ್ದರು. ಬ್ರಹ್ಮಾಂಡ ರಚನೆ, ಉಗಮ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದ ಸ್ಟೀಫನ್ ಇದರ ಬಗೆಗೆ ಬಹಳಷ್ಟು ಸಂಶೋಧನೆಗಳನ್ನು ಕೂತಲ್ಲೇ ಮಾಡಿದ್ದಾರೆ. ಭೂಮಿ, ನಕ್ಷತ್ರ ಇವೆಲ್ಲ ಸಿದ್ಧ ಸೂತ್ರಗಳ ಪ್ರಕಾರ ರಚನೆಯಾಗಿದೆ ಎಂದು ಪ್ರತಿಪಾದಿಸಿದ್ದರು.
ಕುಂದದ ಜೀವನೋತ್ಸಾಹ
ಯಾರಿಗಾದರೂ ಒಂದು ಗಂಟೆ ಕುರ್ಚಿಯಲ್ಲಿ ಕುಳಿತರೆ ಬೇಜಾರು ಬಂದು ಬಿಡುತ್ತದೆ. ಆದರೆ ಸ್ಟೀಫನ್ ಜೀವಿತಾವಧಿಯ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಅಂದರೆ 1963ರಿಂದ 2018ರವರೆಗೆ ವ್ಹೀಲ್‌ಚೇರ್‌ನಲ್ಲಿ ಕಳೆದಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಹೇಳಿದ ಮಾತು ನೆನಪಾಗುತ್ತದೆ “ರೋಗಕ್ಕೆ ತುತ್ತಾಗುವ ಮೊದಲು ಜೀವನ ವೈರಾಗ್ಯ ಮೂಡಿಸಿತ್ತು. ರೋಗ ಭಾದಿಸಿದ್ದೆ ನನಗೆ ಲಾಭವಾಗಿದೆ. ನನಗೆ ವ್ಹೀಲ್‌ಚೇರ್‌ನಲ್ಲಿ ಕುಳಿದದ್ದು ಯಾವತ್ತು ಬೇಜಾರು ಎನಿಸಿಲ್ಲ’.
ಕುಟುಂಬ
ಸ್ಟೀಫನ್ ಅವರ ಮೊದಲ ಪತ್ನಿ ಜೇನ್ ವೈಲ್ಡ್. ಈ ದಂಪತಿಗೆ ಮೂವರು ಮಕ್ಕಳು. ಸ್ಟೀಫನ್ ತನ್ನನ್ನು ನೋಡಿಕೊಳ್ಳುತ್ತಿದ್ದ ನರ್ಸ್‌ಗಾಗಿ 30 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿ ಎಲೈನ್ ಮೇಸನ್‌ರನ್ನು 1995ರಲ್ಲಿ ವಿವಾಹವಾದರು. ಆದರೆ ಈ ವಿವಾಹವು 2007ರಲ್ಲಿ ಮುರಿದುಬಿತ್ತು. ದೀರ್ಘಕಾಲ ಅನಾರೋಗ್ಯ ಎದುರಿಸಿದ್ದ ಸ್ಟೀಫನ್ ಮಾರ್ಚ್ 14ರ 2018ರಂದು ತಮ್ಮ ಕೇಂಬ್ರಿಡ್ ಮನೆಯಲ್ಲಿ ನಿಧನ ಹೊಂದಿದರು.
ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.