ಕರುಣೆ ತೋರು ಕೋವಿಡ್…!

ಕೋವಿಡ್ ಕಾಲದ ಊರಿನ ಕಥೆಯಿದು..!

Team Udayavani, Jun 27, 2020, 10:30 AM IST

ಕರುಣೆ ತೋರು ಕೋವಿಡ್…!

ಸಾಂದರ್ಭಿಕ ಚಿತ್ರ

ಲಗಾಮುಇಲ್ಲದ ಕುದುರೆ ಯಂತೆ ಓಡುತ್ತಿದ್ದ ನಮ್ಮ ಬದುಕು ಒಮ್ಮೆಲೆ ಮುಗ್ಗರಿಸಿ ಬಿದ್ದಿದೆ. ಮಂಗಳನ ಅಂಗಳದಲ್ಲೊಂದು ಸೈಟ್‌ ಖರೀದಿಸುವ ಸಾಹಸಕ್ಕೆ ಮುಂದಾಗಿದ್ದ ನಾವಿಂದು ನಮ್ಮ ಮನೆಯ ಅಂಗಳಕ್ಕೆ ಕಾಲಿಡುವುದಕ್ಕೂ ಭಯಪಡುವಂತಾಗಿದೆ. ಎಲ್ಲೆಡೆಯೂ ನೀರವ ಮೌನ. ಲಂಗು-ಲಗಾಮಿಲ್ಲದೆ ಅಲೆಯುತ್ತಿದ್ದ ಮನಸು ಇಂದು ತನ್ನೆಲ್ಲಾ ಆಡಂಬರದ ಜೀವನವನ್ನು ಮರೆತು ಮಕಾಡೆ ಮಲಗಿದೆ.  ಅದೆಲ್ಲೋ ದೂರ ದೇಶದಲ್ಲಿ ಕಣ್ಣಿಗೆ ಕಾಣದ ವೈರಸ್‌ ಒಂದು ನಮ್ಮೆಲ್ಲ ಮೂರ್ತ ಕಾರ್ಯಗಳನ್ನು ಬುಡಮೇಲು ಮಾಡಿ, ಮಾನವ ಕುಲಕ್ಕೆ ವೈರಿಯಾಗಿ ನಿಂತಿದೆ. ಮನುಜಕುಲದ ಉಳಿವಿಗೆ ಮಾನ ವೀಯತೆಯೇ, ಮನುಷ್ಯತ್ವವೇ ಹೋರಾಡುವಂತಾಗಿದೆ. ವಿಶ್ವಾದ್ಯಂತ ಸಾವಿನ ರಣಕೇಕೆ ಬಾರಿಸುತ್ತಾ ದಿನದಿಂದ ದಿನಕ್ಕೆ ತನ್ನ ರಾಕ್ಷಸತನದ ರುದ್ರ ನರ್ತನವಾಡುತ್ತಿರುವ ಕೋವಿಡ್ ನಮಗೆ ನಿಜಕ್ಕೂ ಬದುಕೆಂದರೆ ಇಷ್ಟೇನಾ ಎಂಬ ಪಾಠ ಕಲಿಸುತ್ತಿದೆ.

ಕೊರೊನಾ ಜೀವಜಗತ್ತಿಗೆ ಸವಾ ಲೊಡ್ಡುವ ಜತೆಗೆ ಬದುಕಿನ ನೈಜ ಚಿತ್ರಣ ವನ್ನು ನಮ್ಮ ಕಣ್ಮುಂದೆ ತರುತ್ತಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ನಾವಿಂದು ನಮ್ಮದೇ ಪ್ರಕೃತಿಯೊಂದಿಗೆ ಬದುಕುವ ಯಾವ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ. ನಮ್ಮ ಒತ್ತಡದ ಜೀವನಕ್ಕೆ ಪ್ರಕೃತಿಯೇ ಬ್ರೇಕ್‌ ಹಾಕಿ ಶಿಕ್ಷೆ ನೀಡಿದೆ. ಅದುವೇ ಈ ಲಾಕ್‌ಡೌನ್‌. ಈ ಗೃಹಬಂಧನ ನಮ್ಮನ್ನು ಭೌತಿಕವಾಗಿ ಬಂಧಿಸಿಟ್ಟಿರಬಹುದು, ಆದರೆ ಮಾನಸಿಕ ವಾಗಿ ಭಾವನಾತ್ಮಕವಾಗಿ ಅಲ್ಲ. ಮನೆ ಯಿಂದ ಹೊರ ಹೋಗಲಾಗುತ್ತಿಲ್ಲ. ಆದರೆ ಮನದೊಳಗೆ ಇಳಿಯೋಣ ಆತ್ಮವಿಮರ್ಶೆ ಮಾಡಿಕೊಳ್ಳೋಣ. ವೇಗದ

ಬದುಕಿನ ಓಟದಲ್ಲಿ ನಮ್ಮ ಬದುಕು ಕಟ್ಟಿಕೊಳ್ಳುವ ಭರದಲ್ಲಿ ನಾವು ಎಗ್ಗಿಲ್ಲದೆ ಎಸಗಿರುವ ಪಾಪಕೃತ್ಯಗಳೆಷ್ಟು ಎನ್ನುವು ದನ್ನು ಲೆಕ್ಕ ಹಾಕೋಣ. ಪ್ರಕೃತಿಗೆ ನಮ್ಮ ಆಸೆಗಳನ್ನು ಪೂರೈಸುವ ಶಕ್ತಿ ಇದೆಯೇ ವಿನಃ ಮನುಷ್ಯನ ದುರಾಸೆಗಳನ್ನಲ್ಲ. ಮನುಷ್ಯ ಪ್ರಾಣಿ ಪ್ರಕೃತಿಯ ಒಂದು ಭಾಗವಷ್ಟೇ. ನಮಗೆ ಪ್ರಕೃತಿಯ ಅನಿ ವಾರ್ಯತೆ ಇದೆಯೇ ವಿನಃ ಪ್ರಕೃತಿಗೆ ನಮ್ಮ ಅಗತ್ಯವಿಲ್ಲ. ಜಗತ್ತನ್ನು ಬದಲಾಯಿಸುವ ಶಕ್ತಿ ಇರುವುದು ಭಯಕ್ಕೆ ಮಾತ್ರ ಎನ್ನುವು ದನ್ನು ಕೋವಿಡ್ ಸಾಬೀತುಪಡಿಸಿದೆ.

ಲಾಕ್‌ಡೌನ್‌ನಿಂದಾಗಿ 3 ತಿಂಗಳು ಮನೆಯಲ್ಲಿದ್ದ ನಾವು ಸದ್ಯ ಈಗ ಮಾಸ್ಕ್ ಹಾಕಿಕೊಂಡೇ ರಸ್ತೆಗಿಳಿದಿದ್ದೇವೆ. ಕಣ್ಣಿಗೆ ಕಾಣದ ಈ ವೈರಸ್‌ನ್ನು ಸಂಹರಿಸಲು ಕಣ್ಣಗೆ ಕಾಣುವ ಅದೆಷ್ಟೋ ದೇವರುಗಳು ಪ್ರತಿನಿತ್ಯ ಹೋರಾಡುತ್ತಲೇ ಇದ್ದಾರೆ. ಅದೇನೆ ಇರಲಿ ಪ್ರಕೃತಿಯ ಮುಂದೆ ನಾವು ಯಾರೂ ಕೆಮ್ಮಂಗಿಲ್ಲ ಬಿಡಿ.

n  ಮಹೇಶ್‌ ಎಂ.ಸಿ. ದಾವಣಗೆರೆ
ಮಹೇಶ್‌ ಎಂ.ಸಿ. ದಾವಣಗೆರೆ

ಟಾಪ್ ನ್ಯೂಸ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.