Stranger: ಅಪರಿಚಿತ
Team Udayavani, May 31, 2024, 1:45 PM IST
ಅದೊಂದು ಸುಂದರವಾದ ಸಂಜೆ. ಒಂದು ಕಡೆ ಗಾಢ ಬಿಸಿಲು, ಇನ್ನೊಂದು ಕಡೆ ತಂಪಾದ ಗಾಳಿ, ತಿಳಿನೀಲಿ ಆಗಸವೂ ಕೂಡ ಸೂರ್ಯನಿಗೆ ನಾಚಿ ಕೆಂಪು ಬಣ್ಣದತ್ತ ಮೆಲ್ಲನೆ ಜಾರುತ್ತಿತ್ತು… ಬಸ್‌ನಿಲ್ದಾಣ ಜನರಿಂದ ತುಂಬಿ ತುಳುಕಾಡುತ್ತಿತ್ತು. ಎಲ್ಲಿ ನೋಡಿದರೂ ಜನವೇ ಜನ. ಅಷ್ಟು ಜನಗಳ ಮಧ್ಯೆ ನಮ್ಮೂರಿಗೆ ಹೋಗುವ ಬಸ್ಸನ್ನು ಹುಡುಕಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತುಕೊಂಡೆ.
ಅದೇನೋ ಗೊತ್ತಿಲ್ಲ…ನಮ್ಮಂತ ಕಾಲೇಜು ಹುಡುಗರಿಗೆ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಇಯರ್ ಪೋನ್ ಹಾಕಿ ನಮಗಿಷ್ಪವಾದ ಹಾಡನ್ನು ಕೇಳುತ್ತಾ ತಂಪಾದ ಗಾಳಿಗೆ ಮುಖವೂಡ್ಡಿದರೆ ಈ ಲೋಕದ ಪರಿವೇ ಇರುವುದಿಲ್ಲ. ಎನೇ ಹೇಳಿ… ಎಸಿ ಕಾರಿನಲ್ಲಿ ಪ್ರಯಾಣಿಸಿದರೂ ಕೂಡ ಈ ರೀತಿ ಖುಷಿ ಸಿಗುವುದು ಅನುಮಾನವೇ…..
ತಡಮಾಡದೆ ನಾನು ಕಿವಿಗೆ ಇಯರ್ ಪೋನ್ ಸಿಕ್ಕಿಸಿ ಸೀಟಿಗೆ ತಲೆದೂರಿ ಮಲಗಿಕೊಂಡಿದ್ದೆ. ಇನ್ನೇನು ಬಸ್ ಬಿಡುವ ಸಮಯ ಎನ್ನುವಷ್ಟರಲ್ಲಿ Excuse Me..! Can I Sit Here..? ಎಂಬ ಧ್ವನಿ ಕೇಳಿಸಿತು.
ಮಲಗಿಕೊಂಡಿದ್ದ ನನಗೆ ಒಮ್ಮೆಲ್ಲೇ ಎಚ್ಚರವಾಗಿ ನೋಡಿದರೆ ಒಬ್ಬ ಯುವಕ. ಸುಮಾರು 25 ರಿಂದ 26 ವಯಸ್ಸಾಗಿಬಹುದು. ತಿಳಿ ಗುಲಾಬಿ ಬಣ್ಣದ ಅಂಗಿಯನ್ನು ಧರಿಸಿದ್ದ. ಶರ್ಟಿನ ಕೈ ತೋಳನ್ನು ಮಡಚಿ, ಇನ್ ಶರ್ಟ್ ಮಾಡಿಕೊಂಡಿದ್ದ. ಕೀಸೆಯಲ್ಲೋಂದು ಪೆನ್ನು ಕೈಯಲ್ಲೊಂದು ಬ್ಯಾಗು. ಒಟ್ಟಿನಲ್ಲಿ ಹೇಳುವುದಾದರೆ ಉದ್ಯೋಗಸ್ಥನ ಹಾಗೆ ಕಾಣುತ್ತಿದ್ದ.
ಎನ್ರೀ… ನಿಮ್ಮ ಕಡೆ ತುಂಬಾ ಸೆಖೆ ಇದೆ ಅಲ್ವಾ…? ಎನ್ನುತ್ತಾ ಪಕ್ಕದ ಸೀಟಿನಲ್ಲಿ ಕುಳಿತು ಮಾತಿಗಿಳಿದ. ಹೌದು ತುಂಬಾ ಸೆಖೆ ಎಂದು ಹೇಳಿದೆ.
ಮತ್ತೆ….. ನೀವು ಎನ್ ಓದುತ್ತಿದ್ದಿರೀ..ಎಂದು ಕೇಳಿದ. ಯಾರೋ ಎನೋ ಸುಮ್ಮನೆ ಮಾತಿಗಿಳಿತಿದ್ದಾನೆ. ಇವನಿಗೆ ಯಾಕೆ ಬೇಕು ಅಂದುಕೊಳ್ಳುತ್ತಲೇ.. BA Degree Final Year ಅಂದೆ.
ನೀವು ಏನ್ ಮಾಡ್ತಿದ್ದಿರಾ.. ಎಂದು ಕೇಳಿದೆ. ನಾನು ಇಂಜಿನಿಯರ್ ಕಂಡ್ರಿ.. ನಮ್ಮೂರು ಹಾನಗಲ್. ಕೆಲಸ ಮಾಡ್ತಿರೋದು ಹೊನ್ನಾವರದಲ್ಲಿ ಎಂದು ಹೇಳಿದ. ಡಿಗ್ರಿ ನಂತರ ಏನ್ ಮಾಡ್ತೀರಾ… ಮರು ಪ್ರಶ್ನಿಸಿದ… ನೋಡ್ಬೇಕು ಮುಂದೆ ಕಲಿಬೇಕು ಅಂತ ಇದೆ ಎಂದು ಹೇಳಿದೆ. ಹೌದ ಚೆನ್ನಾಗಿ ಕಲಿರಿ. All The Best.
ನೀವು ನಿಮ್ಮ ಜೀವನದಲ್ಲಿ ಯಾವಾಗಲೂ ಯಶಸ್ಸನ್ನೆ ಕಾಣಿ. ಆದರೆ ಎಲ್ಲೇ ಹೋದರು ನಿಮ್ಮ ಅಪ್ಪ, ಅಮ್ಮನ ಮರಿಬೇಡಿ. ಅವರನ್ನು ಚೆನ್ನಾಗಿ ನೋಡ್ಕೊಳಿ. ದಿನದಲ್ಲಿ ಅವರಿಗೆ ಅಂತ ಸ್ವಲ್ಪ ಸಮಯವನ್ನು ಮೀಸಲಿಡಿ… ನನ್ನ ಕೆಲಸದಲ್ಲಿ ನಾನು ಯಾವಾಗಲೂ ಬ್ಯೂಸಿ ಇರ್ತಿದೆ. ಅವರಿಗೆ ಸ್ವಲ್ಪನೂ ಸಮಯ ಕೊಡ್ತಾನೆ ಇರ್ಲಿಲ್ಲ. ಆದರೆ ಅವರೂ ಈಗ ನನ್ನ ಜತೆ ಇಲ್ಲ ರೀ… ಈಗ ನನಗೆ ಅವರ ಬೆಲೆ ಗೊತ್ತಾಗಿದೆ ಎಂದು ಬೇಸರದಲ್ಲಿ ಹೇಳಿದ.
ಏನೂ ಹೇಳಬೇಕು ಅಂತನೂ ತಿಳಿಯದ ನಾನು ಮೂಕ ಸ್ತಬ್ದನಾದೆ. ಅವನನ್ನು ಸಮಾಧಾನ ಮಾಡುವಷ್ಟು ಡೊಡ್ಡವಳು ನಾನಲ್ಲ ಎಂದು ಸುಮ್ಮನೆ ಇದ್ದೆ.. ಅಷ್ಟರೊಳಗೆ ಬಸ್ ಕೂಡ ನಮ್ಮೂರನ್ನು ತಲುಪಿತ್ತು… ನಾನು ಬಸ್ ಇಳಿದು ಮನೆ ಕಡೆ ಹೋಗುತ್ತಿರುವಾಗ ಅವನ ಮಾತುಗಳೇ ನೆನಪಾಗುತ್ತಿತ್ತು. ಅವನ ಆ ನೋವಿನ ಮಾತು ಒಂದು ಕಡೆಯಾದರೆ, ನನ್ನ ಮುಂದಿನ ವಿದ್ಯಾಬ್ಯಾಸಕ್ಕೆ ಆಶೀರ್ವದಿಸಿದ ರೀತಿ ಎಲ್ಲವೂ ಮನಸ್ಸಿಗೆ ಹತ್ತಿರವೆನಿಸಿತು. ಇಷ್ಟೆಲ್ಲ ಮಾತನಾಡಿದ ನಾವು ಒಬ್ಬರಿಗೊಬ್ಬರೂ ಹೆಸರನ್ನೂ ಕೇಳಿಕೊಳ್ಳಲಿಲ್ಲ…ಕೊನೆಯಲ್ಲಿ ಒಂದು ಬಾಯ್ ಕೂಡ ಹೇಳಿದೆ ಆತ ಅಪರಿಚಿತನಾಗೆ ಉಳಿದುಕೊಂಡ…
–ಕಾವ್ಯಾ ಹೆಗಡೆ
ಎಂಇಎಸ್ ಮಹಾವಿದ್ಯಾಲಯ ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.