ಯುವಜನತೆಗೆ ಆತ್ಮಹತ್ಯೆಯ ಗೀಳು


Team Udayavani, Oct 5, 2020, 9:00 AM IST

dipreession

ವೇಗದ ಬದುಕಿನಲ್ಲಿ ಒತ್ತಡಗಳು, ಸಂಘರ್ಷಗಳು ಸರ್ವೇ ಸಾಮಾನ್ಯ ಅದನ್ನು ಸರಿಯಾಗಿ ನಿಭಾಯಿಸುವ ಮನೋಸ್ಥಿತಿ ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡಕ್ಕೂ ಸಂಬಂಧಿಸಿರುತ್ತದೆ.

ಒತ್ತಡವನ್ನು ನಿಭಾಯಿಸುವಲ್ಲಿ ವಿಫ‌ಲತೆ ಹೊಂದಿದಾಗ, ಮಾನಸಿಕ ಖನ್ನತೆಗೊಳಪಟ್ಟ ದುರ್ಬಲ ಮನಸ್ಥಿತಿಯವರು ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಮುಂದಾಗುತ್ತಾರೆ.

ಪ್ರತಿಯೊಂದು ಆತ್ಮಹತ್ಯೆಗೂ ವಿಭಿನ್ನ ಕಾರಣಗಳಿರುತ್ತವೆ. ಅದೊಂದು ಮಾನಸಿಕ ತುರ್ತು ಪರಿಸ್ಥಿತಿ ಇದ್ದಂತೆ. ಇದಕ್ಕೆ ವಯಸ್ಸು, ಶ್ರೀಮಂತಿಕೆ, ಬಡತನ ಇನ್ನಾವ‌ ಭೇದಭಾವವೂ ಇಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿಯ ದಾಖಲೆಯ ಪ್ರಕಾರ ಕಳೆದೊಂದು ದಶಕದ ಅವಧಿಯಲ್ಲಿ ಆತ್ಮಹತ್ಯೆಗೀಡಾದವರು 15ರಿಂದ 19 ವಯಸ್ಸಿನ ಯುವಜನರು. ಆತ್ಮಹತ್ಯೆಯಿಂದ ಒಂದು ವರ್ಷಕ್ಕೆ ಅಂದಾಜು ಒಂದು ಮಿಲಿಯನ್‌ ಸಾವುಗಳು ಸಂಭವಿಸುತ್ತವೆ. ಇದರರ್ಥ ವಿಶ್ವಾದ್ಯಂತ ಪ್ರತಿ 40 ಸೆಕೆಂಡಿಗೆ ಒಬ್ಬರಂತೆ ಸಾಯುತ್ತಿದ್ದಾರೆ. ಹದಿಹರೆಯದವರ ಸಾವಿಗೆ ಆತ್ಮಹತ್ಯೆ ಮೂರನೇ ಪ್ರಮುಖ ಕಾರಣವಾಗಿದೆಯಂತೆ.

ಹದಿಹರೆಯದವರಲ್ಲಿ ಆತ್ಮಹತ್ಯೆಗೆ ಆತಂಕ, ಖನ್ನತೆ, ನಿದ್ರಾಹೀನತೆ, ಮಾದಕ ವಸ್ತುಗಳ ಸೇವನೆ, ಕುಟುಂಬದ ಇತಿಹಾಸ ಇವೆಲ್ಲ ನೈಜ ಕಾರಣಗಳಾಗಿವೆ. ಮಾನಸಿಕ ಕಿರುಕುಳ, ಪೋಷಕರ, ಕುಟುಂಬದ ಬೆಂಬಲದ ಕೊರತೆ ಇವೆಲ್ಲ ತರಹೇವಾರಿ ಕಾರಣಗಳು. ಆತ್ಮಹತ್ಯೆಯಿಂದ ಸಾಯುವ ಶೇ. 99 ಜನರು ಸಾವಿನ ಸಮಯದಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುತ್ತಾರೆ.
ಮನಸ್ಸು ತುಂಬಾ ಸೂಕ್ಷ್ಮವಾದುದು. ಅದಕ್ಕೆ ಸ್ವಲ್ಪ ಘಾಸಿಯಾದರು ಉಂಟಾಗುವ‌ ಪರಿಣಾಮ ದೊಡ್ಡದು. ದುರ್ಬಲ ಮನಸ್ಸು ಸದಾ ಸಾವಿನ ಕಡೆಯೇ ಆಲೋಚಿಸುತ್ತದೆ. ಸಾಯಲು ಇಂತದ್ದೇ ಕಾರಣ ಬೇಕಿಲ್ಲ. ಎಷ್ಟೋ ಸಲ ಕ್ಷುಲ್ಲಕ ಘಟನೆಗಳು ಸಾವಿಗೆ ಕಾರಣವಾಗಿದ್ದನ್ನು ಗಮನಿಸಬಹುದು. ಅನೇಕರು ಹಲವಾರು ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಗಮನಿಸಬಹುದಾಗಿದೆ. ಆತ್ಮಹತ್ಯೆಯ ವಿಧಾನಗಳು ಬೇರೆ ಬೇರೆಯಾಗಿವೆ.

ಆತ್ಮಹತ್ಯೆಯ ಪ್ರಮಾಣ ಹುಡುಗಿಯರು ಮತ್ತು ಹುಡುಗರ ನಡುವೆ ಭಿನ್ನವಾಗಿರುತ್ತದೆ. ಹುಡುಗಿಯರು ಹುಡುಗರಿಗಿಂತ ಎರಡು ಪಟ್ಟು ಜಾಸ್ತಿ ಆಲೋಚಿಸುತ್ತಾರೆ ಮತ್ತು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ನಿದ್ದೆ ಮಾತ್ರೆಗಳು ಮತ್ತು ವಿಷ ಸೇವಿಸುವುದು, ನೀರಿನಲ್ಲಿ ಬಿದ್ದು ಸಾಯುವುದು ಇತ್ಯಾದಿ. ಸಾಮಾನ್ಯವಾಗಿ ಹುಡುಗರು ಮಾರಕ ವಿಧಾನಗಳಾದ ಬಂದೂಕಿನಿಂದ ಗುಂಡು ಹೊಡೆದುಕೊಳ್ಳುವದು, ಎತ್ತರದಿಂದ ಜಿಗಿಯುವುದು, ಮೊದಲಾದ ವಿಧಾನಗಳನ್ನು ಅನುಸರಿಸುತ್ತಾರೆ. ಹಾಗಾದರೆ ಈ ಹದಿಹರೆಯದವರ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯವೆ. ಈ ನಿಟ್ಟಿನಲ್ಲಿ ನಿಖರವಾದ ಅಧ್ಯಯನಗಳು ನಡೆಯುತ್ತಿವೆ. ಪ್ರಾಥಮಿಕ ಹಂತದಲ್ಲಿ ಆಗುವ ಬದಲಾವಣೆಗಳನ್ನು ಕುಟುಂಬದವರು ಪೋಷಕರು ಗಮನಿಸಿದಾಗ ಅವರಿಗೆ ಸೂಕ್ತ ತಿಳುವಳಿಕೆ ನೀಡುವುದು ಖನ್ನತೆಗೆ ಪರಿಹಾರವನ್ನು ಕೊಡಿಸುವ ಕ್ರಮಗಳ ಮೂಲಕ, ಮನೋವೈದ್ಯರ ಭೇಟಿ, ಕೌನ್ಸೆಲಿಂಗ್‌ ಕೊಡಿಸುವುದು ಮುಂತಾದ ಕ್ರಮಗಳ ಮೂಲಕ ಬದಲಾವಣೆ ತರಬಹುದು.

ಯೋಗ, ಧ್ಯಾನ, ಪ್ರಾಣಾಯಾಮದ ಮೂಲಕ ಮನಸ್ಸನ್ನು ಕ್ರಿಯಾಶೀಲವಾಗಿ ಇರಿಸಿಕೊಂಡು ದೈನಂದಿನ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಜನರೊಂದಿಗೆ ಸಾಮಾಜಿಕವಾಗಿ ಬೆರೆಯುವುದು, ಉತ್ತಮರೊಂದಿಗೆ ಒಡನಾಟ, ಹಿರಿಯರ ಸಲಹೆ, ಸೂಚನೆಗಳನ್ನು ಪಾಲಿಸುವುದು ಇತ್ಯಾದಿ ಕ್ರಮಗಳನ್ನು ಅಳವಡಿಸಿಕೊಂಡರೆ ಆತ್ಮಹತ್ಯೆಯ ಯೋಚನೆಯಿಂದ ವಿಮುಖರಾಗಬಹುದು. ಆತ್ಮಹತ್ಯೆ ಮಹಾಪಾಪ, ಅದು ನಿಷಿದ್ಧ ಎಂದು ಎಲ್ಲ ಧರ್ಮಗ್ರಂಥಗಳಲ್ಲೂ ಹೇಳಲಾಗಿದೆ. ಆತ್ಮಹತ್ಯೆಗೆ ಪ್ರಯತ್ನ ಪಟ್ಟವರನ್ನು ಕಾನೂನು ಸಹ ಶಿಕ್ಷಿಸುತ್ತದೆ.
ಇರುವುದೊಂದೆ ಜೀವನ ಕ್ಷುಲ್ಲಕ ಕಾರಣಗಳಿಗಾಗಿ ಜೀವ ತೆಗೆದುಕೊಳ್ಳುವಂತಹ ದುಡುಕಿನ ನಿರ್ಧಾರಕ್ಕೆ ಯುವಜನತೆ ಕೈಹಾಕಬಾರದು. ದುಡುಕಿ ನಿರ್ಣಯ ತೆಗೆದುಕೊಳ್ಳುವುದಕ್ಕೂ ಮುನ್ನ ಒಂದು ಸಲ ಆಲೋಚಿಸಿ.

 ಶ್ವೇತಾ ಪ್ರಸನ್ನ ಹೆಗ್ಡೆ, ಶಿರಸಿ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.