ನಿಜಗುಣ ಗಾಂಧಿ ಬಹುಗುಣ ಸಂತ

Team Udayavani, Jun 5, 2021, 3:24 PM IST

ನಿಜಗುಣ ಗಾಂಧಿ ಬಹುಗುಣ ಸಂತ

ಸುಂದರ ಲಾಲ್‌ ಬಹುಗುಣ  ಎಂಬ ಹೆಸರು ಕೇಳಿದಾಕ್ಷಣ ಚಿಪ್ಕೋ ಚಳವಳಿ, ಖ್ಯಾತ ಪರಿಸರವಾದಿ ಚಳವಳಿಗಾರ… ಇತ್ಯಾದಿ ಪದಪುಂಜಗಳು ತತ್‌ಕ್ಷಣ ನೆನಪಾಗುತ್ತವೆ. ಆದರೆ, ತನ್ನಿಡೀ ಜೀವನವನ್ನೇ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಸಾಕಾರಕ್ಕೆ ಮುಡಿಪಾಗಿಟ್ಟು ಅದರ ಭಾಗವಾಗಿ ಪರಿಸರ ಸಂರಕ್ಷಣೆಗೆ ಕರೆಕೊಟ್ಟ ಬಹುಗುಣ ಅವರನ್ನು ಕೇವಲ ಪರಿಸರ ಚಳವಳಿಗಳಿಗಷ್ಟೇ ಸೀಮಿತಗೊಳಿಸುವುದು ಒಂದು ಆದರ್ಶಯುತ ಜೀವನಕ್ಕೆ ಮಾಡುವ ಅವಮಾನವೇ ಸರಿ. ಗಾಂಧೀಜಿಯವರ ಅಪ್ಪಟ ಅನುಯಾಯಿಯಾಗಿದ್ದುಕೊಂಡು ಅವರಂತೆಯೇ ನನ್ನ ಜೀವನವೇ ನನ್ನ ಸಂದೇಶವೆಂಬಂತೆ ಜೀವನ ನಡೆಸಿ, ನಿಜಗುಣ ಗಾಂಧಿ ಆಗಿ ಬಹುಗುಣ ಸಂತನಂತೆ ಬದುಕಿ ಇತ್ತೀಚೆಗೆ ನಮ್ಮನ್ನಗಲಿದ ಅವರ ವಿಚಾರಧಾರೆಯಲ್ಲಿ ಮಿಂದೇಳುವುದೇ ಒಂದು ಪ್ರೇರಣಾದಾಯಿ ಅನುಭವ.

ಸುಂದರ ಲಾಲ್‌ ಬಹುಗುಣ ಅವರು ಹುಟ್ಟಿದ್ದು ಹಿಮಾಲಯದ ತಪ್ಪಲಿನಲ್ಲಿ. ದೇವಭೂಮಿ ಎಂದೇ ಪ್ರಸಿದ್ಧವಾದ ಈಗಿನ ಉತ್ತರಾಖಂಡ (ಆಗಿನ ಉತ್ತರ ಪ್ರದೇಶ)ರಾಜ್ಯದ ಮರೋಡ ಎಂಬ ಪುಟ್ಟಹಳ್ಳಿ ಅವರ ಊರು. ತಮ್ಮ 13ನೇ ವಯಸ್ಸಿಗೆ ಅಸ್ಪೃಶ್ಯತೆ ನಿವಾರಣೆ ಹಾಗೂ ಮದ್ಯವಿರೋಧದಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಳಲ್ಲೂ ಭಾಗವ‌ಹಿಸಿದ್ದ ಬಹುಗುಣ ಅವರು ಮಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

ಗಾಂಧಿ ತತ್ವ ಬಾಳ ಸಣ್ತೀ ಬಹುಗುಣ ಅವರು ಅನೇಕರಂತೆ ಮಹಾತ್ಮಾ ಗಾಂಧೀಜಿ ಅವರ ವಿಚಾರಧಾರೆಗಳನ್ನು ಕೇವಲ ಸ್ವಾತಂತ್ರ್ಯ ಹೋರಾಟಕ್ಕಷ್ಟೇ ಸೀಮಿತಗೊಳಿಸಲಿಲ್ಲ. ಸ್ವಾತಂತ್ರ್ಯ ಹೋರಾಟದ ಅನಂತರವೂ ಗಾಂಧಿತತ್ವ ದ ಆಧಾರದ ಮೇಲೆಯೇ ಬದುಕು ನಡೆಸಬೇಕೆಂದು ನಿಶ್ಚಯಿಸಿದರು. ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಗ್ರಾಮಾಭಿವೃದ್ಧಿಗೆ ಮುಂದಾದರು. ಅಸ್ಪೃಶ್ಯತೆಯ ನಿವಾರಣೆಗೆ ಪಣತೊಟ್ಟು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಏಳಿಗೆಗಾಗಿ ಹಾಸ್ಟೆಲ್‌ ವ್ಯವಸ್ಥೆಯಿರುವ ಶಾಲೆ ತೆರೆದರು. ಹರಿಜನರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡುವ ಮೂಲಕ ಅಸ್ಪೃಶ್ಯತೆ ನಿವಾರಣೆಯ ಕಾರ್ಯ ಕೈಗೊಂಡರು. ಗ್ರಾಮಗಳನ್ನು ದುಃಸ್ಥಿತಿಗೆ ಕೊಂಡೊಯ್ಯುತ್ತಿದ್ದ ಮದ್ಯಪಾನದ ವಿರುದ್ಧ ಗ್ರಾಮದ ಹೆಣ್ಮಕ್ಕಳನ್ನು ಒಗ್ಗೂಡಿಸಿ ಮದ್ಯಪಾನ ವಿರೋಧಿ ಚಳವಳಿ ನಡೆಸಿದರು.

ಚಿಪ್ಕೋ ಚಳವಳಿಗೂ ಗಾಂಧಿ ಪ್ರೇರಣೆ :

ಚಿಪ್ಕೋ ಚಳವಳಿಯ ಪ್ರಾರಂಭದ ಬಗ್ಗೆ ಅನೇಕ ಗೊಂದಲವಿದೆಯಾದರೂ ಚಳವಳಿ ವೇಗ ಪಡೆದಿದ್ದು ಬಹುಗುಣ ಅವರ ಸೇರ್ಪಡೆಯ ಅನಂತರವೇ. ಹೀಗೆ ಚಿಪ್ಕೋ ಚಳವಳಿ ಮುನ್ನಡೆಸುವಂತೆ ಬಹುಗುಣ ಅವರಿಗೆ ಪ್ರೇರಣೆ ಸಿಕ್ಕಿದ್ದೂ ಗಾಂಧಿ ಚಿಂತನೆಗಳಿಂದ. ಮೂಲ ಅಗತ್ಯಗಳಲ್ಲಿ ಪ್ರತೀ ಗ್ರಾಮಗಳೂ ಸ್ವಾವಲಂಬಿಗಳಾಗಬೇಕೆಂಬ ಗಾಂಧೀಜಿಯವರ ಚಿಂತನೆಯ ಆಧಾರದ ಮೇಲೆಯೇ ನಮ್ಮ ಮೂಲ ಅಗತ್ಯಗಳಾದ ಗಾಳಿ, ನೀರು, ಮಣ್ಣು, ಆಹಾರ, ಉರುವಲು ಒದಗಿಸುವ ಕಾಡುಗಳನ್ನು ಉಳಿಸಿಕೊಳ್ಳುವ ಅಗತ್ಯದ ಬಗ್ಗೆ ಅವರಿಗೆ ಮನವರಿಕೆಯಾಯಿತು. ಈ ಮೂಲಕ ಸಮುದಾಯಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಿಜವಾದ ಆರ್ಥಿಕ ಸಶಕ್ತೀಕರಣ ಎಂಬುದಾಗಿ ಅರಿತರು. ಹೀಗೆ ಹುಟ್ಟು ಪಡೆದದ್ದೇ ಅವರ ಪ್ರಸಿದ್ಧ ಘೋಷಣೆ “”ಪರಿಸರವೇ ಶಾಶ್ವತ ಆರ್ಥಿಕತೆ”(ಇಕಾಲಜಿ ಈಸ್‌ ದಿ ಪರ¾ನೆಂಟ್‌ ಎಕಾನಮಿ). ಇದರ ಬಗ್ಗೆ ಹಿಮಾಲಯದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಚಿಪ್ಕೋ ಚಳವಳಿ ಮುಖಾಂತರ ಮಾಡಿದರು.

ಪಾದಯಾತ್ರೆ, ಸತ್ಯಾಗ್ರಹವೇ ಅಸ್ತ್ರ :

ಪರಿಸರ ಸಂರಕ್ಷಣೆಗಾಗಿ ಬಹುಗುಣರು ಪಾದಯಾತ್ರೆ, ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. 1980ರಲ್ಲಿ ಚಿಪ್ಕೋ ಚಳವಳಿ ಪ್ರಯುಕ್ತ ಹಿಮಾಲಯ ಪ್ರದೇಶದಲ್ಲಿ ಬರೋಬ್ಬರಿ 4,800 ಕಿ.ಮೀ. ಪಾದಯಾತ್ರೆ ಮಾಡಿದರು. ಇದೊಂದು ಐತಿಹಾಸಿಕ ಪಾದಯಾತ್ರೆಯಾಯಿತು. ಇದರ ಪರಿಣಾಮ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ಭಾಗದಲ್ಲಿ ಮುಂದಿನ 15 ವರ್ಷಗಳ ಕಾಲ ಮರ ಕಡಿಯದಂತೆ ಆದೇಶ ಹೊರಡಿಸಿದರು.

ಉತ್ತರಖಂಡದ ತೆಹ್ರಿ ಅಣೆಕಟ್ಟು ಯೋಜನೆಯ ವಿರುದ್ಧ ಅವರು 1995ರಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಪರಿಶೀಲನ ಸಮಿತಿ ರಚಿಸುವುದಾಗಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಕೊಟ್ಟ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ತ್ಯಜಿಸಿದರು. ಅನಂತರ ರಾಜ್‌ ಘಾಟ್‌ನ ಗಾಂಧೀಜಿ ಅವರ ಸಮಾಧಿಯಲ್ಲಿ ಬರೋಬ್ಬರಿ 74 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂದಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಭರವಸೆ ಮೇರೆಗೆ ಉಪವಾಸ ತ್ಯಜಿಸಿದರು. ಅನಂತರವೂ ಅಣೆಕಟ್ಟು ನಿರ್ಮಾಣ ಕೆಲಸ ಮುಂದುವರಿದ ಪರಿಣಾಮ ನದಿಯ ತಟದಲ್ಲೇ ಸತ್ಯಾಗ್ರಹ ಕೂತು ಜಲಸಮಾಧಿಯಾಗಲೂ ಸಿದ್ಧರಾಗಿದ್ದ ಅವರನ್ನು ಹಾಗೂ ಅವರ ಪತ್ನಿಯನ್ನು ಬಲ ಪ್ರಯೋಗಿಸಿ ಅಲ್ಲಿಂದ ತೆರವುಗೊಳಿಸಲಾಯಿತು.

ಅಧ್ಯಾತ್ಮದೊಟ್ಟಿಗೆ ವಿಜ್ಞಾನ ಮೇಳವಿಸೆ…

“ವಿಜ್ಞಾನದೊಟ್ಟಿಗೆ ಅಧ್ಯಾತ್ಮ ಸೇರಿದರೆ ಅದು ಸರ್ವೋದಯ, ವಿಜ್ಞಾನದೊಟ್ಟಿಗೆ ರಾಜಕೀಯ ಬೆರೆತರೆ ಅದು ಆಟಂ ಬಾಂಬ್‌ನಂತೆ ದುರಂತ’ ಎಂಬ ವಿನೋಭಾ ಭಾವೆ ಅವರ ಚಿಂತನೆಯನ್ನು ಬಹುಗುಣರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನನ್ನು ಕಾಣುವುದೇ ಅಧ್ಯಾತ್ಮ ಎಂದು ನಂಬಿದ್ದ ಅವರು ತಾವು ನಡೆಸುವ ಪರಿಸರ ಸಂಬಂಧಿತ ಹೋರಾಟಗಳೂ ಕೂಡ ಈ ತಣ್ತೀದ ಆಧಾರದ ಮೇಲಿದೆ ಎನ್ನುತ್ತಿದ್ದರು.

ಯುವಜನತೆಯೇ ಆಶಾಕಿರಣ :

ಯುವಜನಾಂಗದ ಮೇಲೇ ಬಹುಗುಣರು ಅಪಾರ ವಿಶ್ವಾಸವನ್ನಿಟ್ಟಿದ್ದರು. ನಮ್ಮ ಚಿಂತನೆಗಳನ್ನು ಯುವಕರ ಮುಂದಿಟ್ಟರೆ ಖಂಡಿತವಾಗಿಯೂ ಒಪ್ಪಿಕೊಂಡು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂದು ದೃಢವಾಗಿ ನಂಬಿದ್ದರು. ಹೀಗಾಗಿ ಯುವಜನಾಂಗದೊಂದಿಗಿನ ಸಂವಹನದ ಅವಕಾಶವನ್ನು ಅವರೆಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹಿರಿಯರ ಹೆಗಲ ಮೇಲೆ ಕೂತ ಹುಡುಗ ದೂರದಲ್ಲಿರುವುದನ್ನು ಕಾಣುವಂತೆ ಯುವಕರು ನಮಗಿಂತ ಹೆಚ್ಚಿನ ದೂರದೃಷ್ಟಿ ಹೊಂದಿದವರಾಗಿರುತ್ತಾರೆ ಹಾಗಾಗಿ ಅವರಲ್ಲಿಗೆ ನಮ್ಮ ಚಿಂತನೆಗಳನ್ನು ಮುಟ್ಟಿಸಬೇಕು ಎಂಬುದು ಅವರ ನಿಲುವು. ಆತ್ಮಸಂತೋಷವೇ ಅಭಿವೃದ್ಧಿ ಮಾದರಿ ಪ್ರಾಪಂಚಿಕ ಕೇಂದ್ರಿತ ಅಥವಾ ಆರ್ಥಿಕತೆ ಆಧಾರಿತ ಅಭಿವೃದ್ಧಿಗಳು ನಮ್ಮನ್ನು ಇನ್ನಷ್ಟು ಆಸೆಬುರುಕರನ್ನಾಗಿ ಮಾಡುತ್ತವೆ.

ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಕೃತಿಯ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತೇವೆ. ಹೀಗಾಗಿ ಪ್ರಕೃತಿಯ ಭಕ್ಷಕರಾಗುತ್ತೇವೆ. ಪ್ರಕೃತಿ ಕೊಟ್ಟಷ್ಟರಲ್ಲಿಯೇ ನೆಮ್ಮದಿ ಕಾಣುತ್ತ ಪ್ರತೀ ವ್ಯಕ್ತಿಯೂ ಸದಾ ಶಾಂತಿ, ಸಂತೋಷ, ಸಂತೃಪ್ತಿಯಿಂದ ಬದುಕನ್ನು ನಡೆಸುವುದೇ ಅಭಿವೃದ್ಧಿಯ ಮಾನದಂಡವಾದರೆ ಆಗ ಪ್ರಕೃತಿಯೊಟ್ಟಿಗೆ ಸಾಮರಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳುತ್ತೇವೆ ಎಂಬುದು ಬಹುಗುಣರು ಪ್ರತಿಪಾದಿಸುತ್ತಿದ್ದ ಅಭಿವೃದ್ಧಿ ಮಾದರಿ.

ಸ್ವಾತಂತ್ರ್ಯ ಅನಂತರ ಅಧಿಕಾರ ಹಿಡಿದ ಗಾಂಧೀಜಿ ಅನುಯಾಯಿಗಳು ಹಾಗೂ ಇತರ ನಾಯಕರು ಗಾಂಧೀ ಚಿಂತನೆಗಳಿಗೆ ತದ್ವಿರುದ್ಧವಾಗಿರುವ ಪಾಶ್ಚಾತ್ಯ ರಾಷ್ಟ್ರಗಳ ಅಭಿವೃದ್ಧಿ ಮಾದರಿಗಳನ್ನು ಅನುಷ್ಠಾನ ಗೊಳಿಸಿದರ ಬಗ್ಗೆ ಬಹುಗುಣರು ತೀವ್ರ ಬೇಸರ ಹೊಂದಿದ್ದರು.

ಪಾದಯಾತ್ರೆ, ಸತ್ಯಾಗ್ರಹವೇ ಅಸ್ತ್ರ :

ಪರಿಸರ ಸಂರಕ್ಷಣೆಗಾಗಿ ಬಹುಗುಣರು ಪಾದಯಾತ್ರೆ, ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. 1980ರಲ್ಲಿ ಚಿಪ್ಕೋ ಚಳವಳಿ ಪ್ರಯುಕ್ತ ಹಿಮಾಲಯ ಪ್ರದೇಶದಲ್ಲಿ ಬರೋಬ್ಬರಿ 4,800 ಕಿ.ಮೀ. ಪಾದಯಾತ್ರೆ ಮಾಡಿದರು. ಇದೊಂದು ಐತಿಹಾಸಿಕ ಪಾದಯಾತ್ರೆಯಾಯಿತು. ಇದರ ಪರಿಣಾಮ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ಭಾಗದಲ್ಲಿ ಮುಂದಿನ 15 ವರ್ಷಗಳ ಕಾಲ ಮರ ಕಡಿಯದಂತೆ ಆದೇಶ ಹೊರಡಿಸಿದರು.

ಉತ್ತರಖಂಡದ ತೆಹ್ರಿ ಅಣೆಕಟ್ಟು ಯೋಜನೆಯ ವಿರುದ್ಧ ಅವರು 1995ರಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಪರಿಶೀಲನ ಸಮಿತಿ ರಚಿಸುವುದಾಗಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಕೊಟ್ಟ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ತ್ಯಜಿಸಿದರು. ಅನಂತರ ರಾಜ್‌ ಘಾಟ್‌ನ ಗಾಂಧೀಜಿ ಅವರ ಸಮಾಧಿಯಲ್ಲಿ ಬರೋಬ್ಬರಿ 74 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂದಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಭರವಸೆ ಮೇರೆಗೆ ಉಪವಾಸ ತ್ಯಜಿಸಿದರು. ಅನಂತರವೂ ಅಣೆಕಟ್ಟು ನಿರ್ಮಾಣ ಕೆಲಸ ಮುಂದುವರಿದ ಪರಿಣಾಮ ನದಿಯ ತಟದಲ್ಲೇ ಸತ್ಯಾಗ್ರಹ ಕೂತು ಜಲಸಮಾಧಿಯಾಗಲೂ ಸಿದ್ಧರಾಗಿದ್ದ ಅವರನ್ನು ಹಾಗೂ ಅವರ ಪತ್ನಿಯನ್ನು ಬಲ ಪ್ರಯೋಗಿಸಿ ಅಲ್ಲಿಂದ ತೆರವುಗೊಳಿಸಲಾಯಿತು.

ಅಧ್ಯಾತ್ಮದೊಟ್ಟಿಗೆ ವಿಜ್ಞಾನ ಮೇಳವಿಸೆ… :

“ವಿಜ್ಞಾನದೊಟ್ಟಿಗೆ ಅಧ್ಯಾತ್ಮ ಸೇರಿದರೆ ಅದು ಸರ್ವೋದಯ, ವಿಜ್ಞಾನದೊಟ್ಟಿಗೆ ರಾಜಕೀಯ ಬೆರೆತರೆ ಅದು ಆಟಂ ಬಾಂಬ್‌ನಂತೆ ದುರಂತ’ ಎಂಬ ವಿನೋಭಾ ಭಾವೆ ಅವರ ಚಿಂತನೆಯನ್ನು ಬಹುಗುಣರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನನ್ನು ಕಾಣುವುದೇ ಅಧ್ಯಾತ್ಮ ಎಂದು ನಂಬಿದ್ದ ಅವರು ತಾವು ನಡೆಸುವ ಪರಿಸರ ಸಂಬಂಧಿತ ಹೋರಾಟಗಳೂ ಕೂಡ ಈ ತಣ್ತೀದ ಆಧಾರದ ಮೇಲಿದೆ ಎನ್ನುತ್ತಿದ್ದರು.

ಯುವಜನತೆಯೇ ಆಶಾಕಿರಣ :

ಯುವಜನಾಂಗದ ಮೇಲೇ ಬಹುಗುಣರು ಅಪಾರ ವಿಶ್ವಾಸವನ್ನಿಟ್ಟಿದ್ದರು. ನಮ್ಮ ಚಿಂತನೆಗಳನ್ನು ಯುವಕರ ಮುಂದಿಟ್ಟರೆ ಖಂಡಿತವಾಗಿಯೂ ಒಪ್ಪಿಕೊಂಡು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂದು ದೃಢವಾಗಿ ನಂಬಿದ್ದರು. ಹೀಗಾಗಿ ಯುವಜನಾಂಗದೊಂದಿಗಿನ ಸಂವಹನದ ಅವಕಾಶವನ್ನು ಅವರೆಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹಿರಿಯರ ಹೆಗಲ ಮೇಲೆ ಕೂತ ಹುಡುಗ ದೂರದಲ್ಲಿರುವುದನ್ನು ಕಾಣುವಂತೆ ಯುವಕರು ನಮಗಿಂತ ಹೆಚ್ಚಿನ ದೂರದೃಷ್ಟಿ ಹೊಂದಿದವರಾಗಿರುತ್ತಾರೆ ಹಾಗಾಗಿ ಅವರಲ್ಲಿಗೆ ನಮ್ಮ ಚಿಂತನೆಗಳನ್ನು ಮುಟ್ಟಿಸಬೇಕು ಎಂಬುದು ಅವರ ನಿಲುವು. ಆತ್ಮಸಂತೋಷವೇ ಅಭಿವೃದ್ಧಿ ಮಾದರಿ

ಪ್ರಾಪಂಚಿಕ ಕೇಂದ್ರಿತ ಅಥವಾ ಆರ್ಥಿಕತೆ ಆಧಾರಿತ ಅಭಿವೃದ್ಧಿಗಳು ನಮ್ಮನ್ನು ಇನ್ನಷ್ಟು ಆಸೆಬುರುಕರನ್ನಾಗಿ ಮಾಡುತ್ತವೆ.

ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಕೃತಿಯ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತೇವೆ. ಹೀಗಾಗಿ ಪ್ರಕೃತಿಯ ಭಕ್ಷಕರಾಗುತ್ತೇವೆ. ಪ್ರಕೃತಿ ಕೊಟ್ಟಷ್ಟರಲ್ಲಿಯೇ ನೆಮ್ಮದಿ ಕಾಣುತ್ತ ಪ್ರತೀ ವ್ಯಕ್ತಿಯೂ ಸದಾ ಶಾಂತಿ, ಸಂತೋಷ, ಸಂತೃಪ್ತಿಯಿಂದ ಬದುಕನ್ನು ನಡೆಸುವುದೇ ಅಭಿವೃದ್ಧಿಯ ಮಾನದಂಡವಾದರೆ ಆಗ ಪ್ರಕೃತಿಯೊಟ್ಟಿಗೆ ಸಾಮರಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳುತ್ತೇವೆ ಎಂಬುದು ಬಹುಗುಣರು ಪ್ರತಿಪಾದಿಸುತ್ತಿದ್ದ ಅಭಿವೃದ್ಧಿ ಮಾದರಿ.

ಸ್ವಾತಂತ್ರ್ಯ ಅನಂತರ ಅಧಿಕಾರ ಹಿಡಿದ ಗಾಂಧೀಜಿ ಅನುಯಾಯಿಗಳು ಹಾಗೂ ಇತರ ನಾಯಕರು ಗಾಂಧೀ ಚಿಂತನೆಗಳಿಗೆ ತದ್ವಿರುದ್ಧವಾಗಿರುವ ಪಾಶ್ಚಾತ್ಯ ರಾಷ್ಟ್ರಗಳ ಅಭಿವೃದ್ಧಿ ಮಾದರಿಗಳನ್ನು ಅನುಷ್ಠಾನ ಗೊಳಿಸಿದರ ಬಗ್ಗೆ ಬಹುಗುಣರು ತೀವ್ರ ಬೇಸರ ಹೊಂದಿದ್ದರು.

ಪ್ರಮುಖ ವಿಚಾರಧಾರೆಗಳು :

  1. ಪ್ರಕೃತಿಯಯನ್ನು ಹಣಕಾಸಿನ ವ್ಯವಹಾರದ ದೃಷ್ಟಿಯಲ್ಲಿ ನೋಡುವುದನ್ನು ವಿರೋಧಿಸುತ್ತಿದ್ದ ಅವರು ಚಿಪ್ಕೋ ಪಾದಯಾತ್ರೆ ಸಂದರ್ಭ ಮರಗಳಿಂದ ನಮಗೆ ಸಿಗುವ ಕೊಡುಗೆ ಏನು? ಗಾಳಿ, ಮಣ್ಣು, ನೀರು ಎಂಬ ಘೋಷಣೆಯನ್ನು ಪ್ರಸಿದ್ಧಗೊಳಿಸಿದ್ದರು.
  2. ಪ್ರಕೃತಿಯನ್ನು ಶೋಷಿಸಿ ಬದುಕುವುದು ನಾಗರಿಕತೆಯಲ್ಲ. ಪ್ರಕೃತಿ ಜತೆ ಸಾಮರಸ್ಯದೊಟ್ಟಿಗೆ ಬದುಕುವುದೇ ನಿಜವಾದ ನಾಗರಿಕತೆಯ ಲಕ್ಷಣ.
  3. ದೊಡ್ಡಮಟ್ಟದ ಯೋಜನೆಗಳು ಸದಾ ವಿನಾಶಕ್ಕೆ ನಾಂದಿ ಹಾಡುತ್ತವೆ. ಸರಳ ಬದುಕಿಗೆ ಪೂರಕವಾಗುವ ಸಣ್ಣಮಟ್ಟದ ಯೋಜನೆಗಳತ್ತ ಮಾತ್ರ ನಾವು ಗಮನ ನೀಡಬೇಕು.
  4. ನಮ್ಮ ಚಿಂತನೆಗಳು ಜಾಗತಿಕಮಟ್ಟದಲ್ಲಿರಬೇಕು ಹಾಗೂ ಕ್ರಿಯೆ ಸ್ಥಳೀಯವಾಗಿರಬೇಕು (ಥಿಂಕ್‌ ಗ್ಲೋಬಲಿ ಆ್ಯಕ್ಟ್ ಲೋಕಲಿ)

ಬಹುಗುಣರ ವಿಶೇಷ ಗುಣಗಳು  :

  1. ಬಾಲ್ಯದಲ್ಲಿಯೇ ಗಾಂಧೀಜಿಯಿಂದ ಪ್ರಭಾವಿತರಾಗಿದ್ದ ಅವರು ಸ್ಥಳೀಯ ಬ್ರಿಟಿಷ್‌ ಆಡಳಿತದ ಕಣ್ತಪ್ಪಿಸಲು ಸ್ನೇಹಿತರೊಟ್ಟಿಗೆ ಶ್ಮಶಾನಕ್ಕೆ ತೆರಳಿ ಚರಕದಿಂದ ನೂಲು ತೆಗೆಯುತ್ತಿದ್ದರಂತೆ.
  2. ತಾವು ಭಾಗಿಯಾಗಿದ್ದ ವಿನೋಭಾ ಭಾವೆ ಅವರ ಸರ್ವೋದಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ವಿಮಲಾರನ್ನು ಪತ್ನಿಯಾಗಿ ಸ್ವೀಕರಿಸಿದ್ದು, ಗ್ರಾಮೀಣ ಭಾಗದಲ್ಲೇ ನೆಲೆಗೊಳ್ಳಬೇಕೆಂಬ ತಮ್ಮ ಷರತ್ತು ಒಪ್ಪಿದ ಅನಂತರ.
  3. ಗಾಂಧೀಜಿಯವರ ಸರಳ ಜೀವನ ತಣ್ತೀದಂತೆ ತಮ್ಮ ಉಡುಗೆ-ತೊಡುಗೆಗಳಲ್ಲೂ ಸರಳತೆ ಅಳವಡಿಸಿಕೊಂಡಿದ್ದರು.
  4. ಅತೀ ಕಡಿಮೆ ನೀರಿನಲ್ಲಿ ಬೆಳೆಯುವ ಆಹಾರ ಧಾನ್ಯಗಳನ್ನಷ್ಟೇ ಸೇವಿಸುತ್ತಿದ್ದರು. ಕರ್ನಾಟಕಕ್ಕೆ ಬಂದಾಗ ಅಕ್ಕಿಯ ಬದಲಾಗಿ ರಾಗಿ ಸೇವಿಸುತ್ತಿದ್ದರು. ಎಳೆನೀರನ್ನು ಇಷ್ಟಪಟ್ಟು ಕುಡಿಯುತ್ತಿದ್ದರು.
  5. ತೆಹ್ರಿ ಅಣೆಕಟ್ಟು ವಿರೋಧ ಚಳವಳಿ ಸಮಯದಲ್ಲಿ ಸರಕಾರ‌ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.
  6. ಚಿಪ್ಕೋ ಚಳವಳಿಯ ಪಾದಯಾತ್ರೆ ಸಂದರ್ಭ ಜನರಲ್ಲಿ ಜಾಗೃತಿ ಮೂಡಿಸುವುದರೊಟ್ಟಿಗೆ ಹಿಮಾಲಯದ ಸಸ್ಯಸಂಕುಲಗಳ ಅಧ್ಯಯನವನ್ನೂ ನಡೆಸುತ್ತಿದ್ದರು.

ಕರ್ನಾಟಕದೊಂದಿಗಿನ ನಂಟು :

ಸುಂದರ್‌ಲಾಲ್‌ ಬಹುಗುಣ ಅವರು ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿಕೊಟ್ಟದ್ದು 1979ರಲ್ಲಿ. ಉತ್ತರ ಕನ್ನಡದಲ್ಲಿ ಆರಂಭಗೊಂಡ ಬೇಡ್ತಿ ನದಿಯ ಬೃಹತ್‌ ಜಲ ವಿದ್ಯುತ್‌ ಯೋಜನೆ ವಿರೊಧಿ ಚಳವಳಿಯ ಪ್ರಾರಂಭದ ಸಮಯದಲ್ಲಿ ಬಂದಿದ್ದರು. ಹೀಗೆ ಆರಂಭಗೊಂಡ ಕರುನಾಡಿನೊಂದಿಗಿನ ಅವರ ನಂಟು ಅನಂತರ ಬಹಳ ಗಾಢವಾಗಿ ಬೆಸೆದುಕೊಂಡಿತು.

1983ರಲ್ಲಿ ಉತ್ತರ ಕನ್ನಡದ ಅಪ್ಪಿಕೋ ಚಳವಳಿ, ತುಂಗಾಮೂಲ ಉಳಿಸಿ ಹೋರಾಟ, ಕೊಡಗಿನಲ್ಲಿ ನಡೆದ ಪರಿಸರ ಸಂರಕ್ಷಣೆಯ ಹೋರಾಟಗಳು, ಸುಳ್ಯ, ಮುಂಡಾಜೆ ಭಾಗಗಳ‌ ಮಂಗನ ಕಾಯಿಲೆ ಇರುವ ಪ್ರದೇಶಗಳಲ್ಲಿ ಪಾದಯಾತ್ರೆ… ಹೀಗೆ ಕರ್ನಾಟಕದ ಅನೇಕ ಪರಿಸರ ಸಂರಕ್ಷಣೆಯ ಹೋರಾಟಗಳಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದರು. ತಮ್ಮ ಗುರುಗಳಾದ ವಿನೋಬಾ ಭಾವೆ ಅವರ ಶಿಷ್ಯವರ್ಗದಲ್ಲಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಕರ್ನಾಟಕವೂ ಸಹಿತ ಇಡೀ ದಕ್ಷಿಣ ಭಾರತದ ಜನರಲ್ಲಿರುವ ಗಿಡ-ಮರಗಳನ್ನು ಬೆಳೆಸಿ, ಉಳಿಸುವ ಪರಿಪಾಠದ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು ಎಂದು ಅವರ ನಿಕಟವರ್ತಿ ಉತ್ತರ ಕನ್ನಡದ ಪರಿಸರವಾದಿ ಪಾಂಡುರಂಗ ಹೆಗಡೆ ನೆನಪನ್ನು ಮೆಲುಕು ಹಾಕುತ್ತಾರೆ.

ಪ್ರೇರಣಾದಾಯಿ ಜೀವನ :

ಹಿಂದಿನ ಕಾಲದ ಋಷಿಮುನಿಗಳಂತೆಯೇ ಬದುಕು ನಡೆಸಿದವರು. ಆಧುನಿಕ ಅಭಿವೃದ್ಧಿ ಮಾದರಿಯ ಪೊಳ್ಳುತನವನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಿದರು. ಗಾಂಧಿತತ್ತಾÌಧಾರಿತ ಜೀವನ ನಡೆಸಿ ಪ್ರೇರಣೆಯಾದ ಕೊನೆಯ ಕೊಂಡಿ ಕಳಚಿದಂತಾಗಿದೆ. ಪಾಂಡುರಂಗ ಹೆಗಡೆ, ಪರಿಸರವಾದಿ, ಸುಂದರಲಾಲ್‌ ಬಹುಗುಣ ಅವರ ನಿಕಟವರ್ತಿ

ಚೈತನ್ಯ ಕುಡಿನಲ್ಲಿ ,ಹವ್ಯಾಸಿ ಬರಹಗಾರರು

ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.