ಆತ ಬರೀ ಸಂತನಲ್ಲ, ಪ್ರಖರ ದೇಶಭಕ್ತ ಸಂತ!


Team Udayavani, Jan 12, 2021, 7:03 AM IST

swami vivekandanda

ಹೇ ಜಗನ್ಮಾತೆ !, ನನಗೆ ಸ್ವರ್ಗ ಬೇಡ, ಮುಕ್ತಿ ಬೇಡ, ನನ್ನ ಭಾರತದ ಕೋಟಿ, ಕೋಟಿ ದೀನ-ದರಿದ್ರ-ದಲಿತರನ್ನು ಮೇಲೆತ್ತುವ ಮಾರ್ಗ ತೋರು!

ಯಾರ ಪಾದ ಸ್ವರ್ಶದಿಂದ ಮೂರು ಸಾಗರಗಳೂ ಪುನೀತರಾಗಿವೆಯೋ ಅಂತಹ ಭಾರತ ಭೂಷಿರ ಮಂದಿರ ಸುಂದರಿಯಾಗಿ ವಿರಾಜಮಾನಳಾಗಿರುವ ಕನ್ಯಾಕುಮಾರಿಯ ಎದುರು ನಿಂತ ಸಂತರೊಬ್ಬರ ಹೃದಯಾಳದಿಂದ ಬಂದ ಪ್ರಾರ್ಥನೆ ಇದು!

ಯಾವ ವ್ಯಕ್ತಿ ಈ ಘಟನೆಯ ಕೆಲವು ವರ್ಷಗಳ ಹಿಂದೆಯಷ್ಟೇ ಆತ್ಮಸಾಕ್ಷಾತ್ಕಾರದ ಆಸೆ ಹೊತ್ತು ಸನ್ಯಾಸ ದೀಕ್ಷೆ ಪಡೆದಿದ್ದರೋ ಜೀವನದಲ್ಲಿ ಮುಕ್ತಿ ಪಡೆಯುವುದೇ ಅತ್ಯುತ್ತಮ ಧ್ಯೇಯವೆಂದು ನಂಬಿದ್ದರೋ ಮುಕ್ತಿ ದೊರಕಲಿಲ್ಲವಲ್ಲ ಎಂಬ ಕಾತುರದಿಂದ ಕೆಲವೊಮ್ಮೆ ಪ್ರಾಯೋಪವೇಶ (ನಿರಶನದ ಮೂಲಕ ಸಾಯಲು ಸಂಕಲ್ಪಿಸುವುದು) ಮಾಡಲೂ ನಿರ್ಧರಿಸಿಬಿಟ್ಟಿದ್ದರೋ! ಅಂತಹ ಸಂತ ಈಗ ಸಾಕ್ಷಾತ್‌ ಜಗನ್ಮಾತೆಯ ಎದುರು ನಿಂತು ಕೇಳುತ್ತಿರುವುದಾದರೂ ಏನನ್ನು!? ಮುಕ್ತಿಯನ್ನಲ್ಲ! ಸ್ವರ್ಗವನ್ನೂ ಅಲ್ಲ! ಬದಲಾಗಿ ತನ್ನ ದೇಶಬಾಂಧವರ ಅಭ್ಯುದಯವನ್ನ. ಅದಕ್ಕಾಗಿ ತಾನೂ ಕೈಗೊಳ್ಳಬೇಕಾದ ಕಾರ್ಯದ ದಿಕ್ಸೂಚಿಯನ್ನ.

ಹೀಗಾಗಿಯೇ ಸ್ವಾಮಿ ವಿವೇಕಾನಂದರು ಬರೀ ಸಂತನಾಗಿ ಬದುಕಿ ಹೋಗಲಿಲ್ಲ. ಒಬ್ಬ ಪ್ರಖರ ದೇಶಭಕ್ತ ಸಂತನಾಗಿ ಇಂದಿಗೂ ಜೀವಂತವಿದ್ದಾರೆ.

ದೇಶಭಕ್ತಿಯ ಬಗ್ಗೆ ಸ್ವಾಮೀಜಿಯ ವ್ಯಾಖ್ಯಾನ ಬಹಳ ಸ್ಪಷ್ಟವಾಗಿತ್ತು. ಸಕ್ರಿಯ ದೇಶಭಕ್ತಿ ಎಂದರೆ ಕೇವಲ ಭಾವುಕತೆಯಲ್ಲ; ಅಥವಾ ತಾಯ್ನಾಡಿನ ಮೇಲಿನ ಬರಿಯ ಪ್ರೀತಿಭಾವವೂ ಅಲ್ಲ. ಅದು ತನ್ನ ದೇಶಬಾಂಧವರ ಸೇವೆ ಮಾಡಬೇಕೆಂಬ ಉತ್ಕಟ ಉತ್ಸಾಹ… ಸರ್ವಕಾಲಕ್ಕೂ ಸಲ್ಲುವ ವ್ಯಾಖ್ಯಾನಲ್ಲವೇ ಇದು?

ವೀರ ಸನ್ಯಾಸಿಯಾಗಿ ವಿದೇಶಕ್ಕೆ ತೆರಳಿ ವಿಶ್ವವಿಜೇತರಾಗಿ ಸ್ವದೇಶಕ್ಕೆ ಮರಳಿದ ಸ್ವಾಮಿ ವಿವೇಕಾನಂದರು ಮದರಾಸಿನಲ್ಲಿ ದೇಶಬಾಂಧವರನ್ನುದ್ದೇಶಿಸಿ ಮಾಡಿದ ನನ್ನ ಸಮರ ನೀತಿ ಎಂಬ ಭಾಷಣದಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಸ್ವಲ್ಪ ವಿವರವಾದ ವಿಶ್ಲೇಷಣೆ ದೊರಕುತ್ತದೆ. ಈ ಭಾಷಣದಲ್ಲಿ ದೇಶಪ್ರೇಮದ ಬಗ್ಗೆ ತಮಗಿರುವ ಆದರ್ಶದ ಬಗ್ಗೆ ವಿವರಿಸುತ್ತಾ ಸ್ವಾಮೀಜಿ ದೇಶಭಕ್ತರು ಹಾಗೂ ಸಮಾಜ ಸುಧಾರಕರು ಮೊದಲು ಹೃದವಂತರಾಗಬೇಕು ಎನ್ನುತ್ತಾರೆ.

ದೇಶದ ಜನರು ಹಸಿವಿನಿಂದ ನರಳುತ್ತಿರುವುದನ್ನು ಕಂಡು, ಅಜ್ಞಾನದ ಅಂಧಕಾರದಲ್ಲಿ ಒದ್ದಾಡುತ್ತಿರುವುದನ್ನು ನೋಡಿ ನಮ್ಮ ಹೃದಯ ಮಿಡಿಯುತ್ತಿದೆಯೇ? ಈ ಬಗೆಗಿನ ಚಿಂತೆ ನಮ್ಮನ್ನು ಸದಾ ಕಾಡುತ್ತಿದೆಯೇ? ನಿದ್ರೆಗೆಡುವಂತೆ ಮಾಡಿದೆಯೇ? ಹಾಗಿದ್ದರೆ ಅದು ದೇಶಪ್ರೇಮದ ಮೊದಲ ಮೆಟ್ಟಿಲು! ಮೊಟ್ಟಮೊದಲ ಮೆಟ್ಟಿಲು! ಎಂದು ಸ್ವಾಮೀಜಿ ಹೇಳುತ್ತಾರೆ. ಅಂಥ ಹೃದಯವೇ ಅಂದು ಕನ್ಯಾಕುಮಾರೇಶ್ವರಿ ಎದುರು ನಿಂತು ತನ್ನ ದೇಶಬಾಂಧವರ ಅಭ್ಯುದಯಕ್ಕಾಗಿ ಬೇಡಿದ್ದು. ಒಮ್ಮೆಯಂತೂ ಸ್ವಾಮೀಜಿ ಹಾಗೂ ಅವರ ಸೋದರ ಸನ್ಯಾಸಿಗಳ ಮಧ್ಯೆ ಸೇವೆ ಹಾಗೂ ಸಾûಾತ್ಕಾರ ವಿಷಯ ಕುರಿತಾದ ವಾಗ್ವಾದ ತೀವ್ರ ಸ್ವರೂಪ ಪಡೆದಲಾಗಲಂತೂ ತನ್ನ ದೇಶಬಾಂಧವರ ಉದ್ಧಾರವಾಗುವುದಾದರೆ ತಾನು ಸಾವಿರ ಸಲಬೇಕಾದರೂ ನರಕಕ್ಕೆ ಸಂತೋಷದಿಂದಲೇ ಹೋಗುತ್ತೇನೆಂದು ಸ್ವಾಮೀಜಿ ತೀಕ್ಷ್ಣವಾಗಿ ಹೇಳಿದ್ದರು.

ಹಾಗಾದರೆ ಕೇವಲ ಹೃದಯವಂತರಾಗಿ ದೇಶದ ದುಃಸ್ಥಿತಿ ಕಂಡು ಮರುಕಪಟ್ಟರೆ ಸಾಕೇನು? ಹುಂ, ಸ್ವಾಮೀಜಿ ಮುಂದುವರೆದು ತಿಳಿಸುತ್ತಾರೆ, ಕೇವಲ ಹೃದಯವಂತರಾಗಿದ್ದು ಕೊರಗುವುದರಲ್ಲೇ ಕಾಲಹರಣ ಮಾಡಿದರೆ ಪ್ರಯೋಜನವಿಲ್ಲ. ಏನಾದರು ಉಪಯುಕ್ತವಾದ ಅನುಷ್ಠಾನ ಯೋಗ್ಯ ಮಾರ್ಗ ಹುಡುಕಬೇಕು. ಕೇವಲ ನಿಂದನೆಯಲ್ಲಿ ತೊಡಗದೆ ದೇಶದ ಉನ್ನತಿಗಾಗಿ ಕೆಲಸ ಮಾಡಬೇಕೆಂದರು. ಅದರಂತೆಯೇ ವ್ಯಕ್ತಿಯನ್ನು ಲೌಕಿಕ, ಬೌದ್ಧಿಕ ಹಾಗೂ ಅಧ್ಯಾತ್ಮಿಕವಾಗಿ ಉನ್ನತಕ್ಕೇರಿಸುವ ವಿದ್ಯೆಯನ್ನು ಪ್ರತಿಯೊಬ್ಬರಿಗೂ ನೀಡಿ ಭಾರತವನ್ನು ಮೇಲೇತ್ತಬೇಕೆಂದರಿತ ಸ್ವಾಮೀಜಿ. ಇದಕ್ಕಾಗಿ ಸೇವೆ ಹಾಗೂ ತ್ಯಾಗವೆಂಬ ಆದರ್ಶಗಳಿರುವ ಸನ್ಯಾಸಿಗಳ ಸಂಘ ಕಟ್ಟಿದರು. ಕಾರ್ಯ ಬೆಳೆಸಿದರು. ಹೀಗೆ ನುಡಿದಂತೆ ನಡೆದರು; ನಡೆದು ಹಾದಿ ತೋರಿದರು.

ಹೃದಯವಂತಿಕೆ ಹಾಗೂ ಭಾವನೆಯನ್ನು ಕಾರ್ಯಗತಗೊಳಿಸುವ ದಕ್ಷತೆ ಇವೆರಡರೊಟ್ಟಿಗೆ ಪರ್ವತದಂತಹ ಅಡ್ಡಿ ಆತಂಕಗಳು ಎದುರಾದರೂ ಎದುರಿಸಿ ನಿಲ್ಲಬಲ್ಲ ಬಹುಮುಖ್ಯವಾದ ಇಚ್ಛಾಶಕ್ತಿಯೂ ಬೇಕಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ. ಸಮಸ್ತ ಜಗತ್ತೇ ಕತ್ತಿ ಹಿರಿದು ಎದುರಾಗಿ ನಿಂತರೂ ಹೆಸರು ಕೀರ್ತಿ ಅಳಿದು ಹೋದರೂ ಸಂಪತ್ತೆಲ್ಲವೂ ಸೂರೆ ಹೋದರೂ ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಛಲವಿರಬೇಕೆಂದು ಸ್ವಾಮೀಜಿ ಹೇಳುತ್ತಾರೆ. ಹೀಗಿದ್ದಲ್ಲಿ ಆತನ ವಿಚಾರಧಾರೆಗಳು ಶಿಲೆಯ ಗೋಡೆಗಳನ್ನೂ ತೂರಿ ಜಗತ್ತಿನಾದ್ಯಂತ ತರಂಗಗಳಾಗಿ ಹರಡಿ ನೂರಾರು ವರ್ಷಗಳವರೆಗೂ ಸ್ಪಂದಿಸುತ್ತವೆ. ಮತ್ತೂಬ್ಬರ ಮೆದುಳು ಹೊಕ್ಕು ಕಾರ್ಯ ಮಾಡಿಸುತ್ತದೆ ಎನ್ನುತ್ತಾರೆ ಸ್ವಾಮೀಜಿ.

ಹೀಗೆ ಈ ಹೃದಯವಂತಿಕೆ, ಕಾರ್ಯ ದಕ್ಷತೆ ಹಾಗೂ ಪ್ರಖರ ಇಚ್ಛಾಶಕ್ತಿಯ ಮೂರ್ತರೂಪವಾಗಿ ಬದುಕಿದ ಸ್ವಾಮೀಜಿಯ ವಿಚಾರಧಾರೆಗಳು ಅವರ ದೇಹತ್ಯಾಗದ ಅನಂತರವೂ ಸಾವಿರಾರು ಹೃದಯಗಳನ್ನು ಹೊಕ್ಕಿ ಅನೇಕ ಸ್ವಾತಂತ್ರ್ಯ ಸೇನಾನಿಗಳನ್ನು, ಸಮಾಜ ಸುಧಾರಕರನ್ನು, ಅಧ್ಯಾತ್ಮ ಪುರುಷರನ್ನು ಆಯಾ ಕಾಲದಲ್ಲಿ ಸೃಷ್ಟಿಸುತ್ತಿದೆ. ಸೇವಾಕಾರ್ಯಗಳ ಸಾಗರವನ್ನೇ ಎಬ್ಬಿಸಿದೆ. ಕನ್ಯಾಕುಮಾರಿ ಎದುರಿನ ಅಂದಿನ ಪ್ರಾರ್ಥನೆ ಇಂದಿಗೂ ಫ‌ಲ ಕೊಡುತ್ತಿದೆ. ಸ್ವಾಮೀಜಿಯ ದೇಶಭಕ್ತಿಯ ದೇಶಪ್ರೇಮದ ಪ್ರಖರತೆ ಅಂತಹುದು. ಹಾಗಾಗಿಯೆ ಆತ ಬರೀ ಸಂತನಲ್ಲ ಪ್ರಖರ ದೇಶಭಕ್ತ ಸಂತ.

ಚೈತನ್ಯ ಕುಡಿನಲ್ಲಿ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.