Film Review: ಸಿಹಿ ಖಾರ ಗುಂಟೂರು ಖಾರಂ
Team Udayavani, Feb 2, 2024, 3:18 PM IST
ಗುಂಟೂರು ಮೆಣಸಿನಕಾಯಿ ತನ್ನ ಖಾರ ಮತ್ತು ರುಚಿಗೆ ಪ್ರಸಿದ್ದವಾಗಿದೆ. ಇದೆ ಹೆಸರಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ನಟಿಸಿರುವ ಗುಂಟೂರು ಖಾರಂ ಚಿತ್ರ ತೆರಕಂಡಿದ್ದು, ಸದಾ ಚಿರಯುವಕನಂತೆ ಕಂಗೊಳಿಸುವ ಮಹೇಶ್ ಬಾಬು ಮತ್ತು ಕ್ಯೂಟ್ ನಟಿ ಶ್ರೀಲಿಲಾರ ಮೈಸೂರು ಪಾಕ್ ನಂತ ಜೋಡಿ ಗುಂಟೂರು ಖಾರಂ ನೋಡುವ ಪ್ರೇಕ್ಷಕರಿಗೆ ಸಿಹಿಯಾದ ಖಾರವನ್ನು ಸವಿಯುವಂತೆ ಮಾಡುತ್ತದೆ.
ಕೌಟುಂಬಿಕ ಸಮಸ್ಯೆಗಳಿಂದ ದೂರವಾದ ತಾಯಿ ಮಗ ಮತ್ತೆ ಒಂದಾಗುವುದೆ ಗುಂಟೂರು ಖಾರಂ ಚಿತ್ರದ ಸಾರಾಂಶ. ಚಿತ್ರದ ಕಥೆ ಒಂದು ದಶಕದಷ್ಟು ಹಳೆಯದೆಂದೆನಿಸಿದರು ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಚಿತ್ರದ ನಿದೇರ್ಶಕ ತ್ರೀವಿಕಂ ಶ್ರೀನಿವಾಸ ಚಿತ್ರಿಕರಿಸಿದ್ದಾರೆ.
ಗುಂಟೂರು ಖಾರಂ ಚಿತ್ರದ ಮುಖ್ಯ ಆಕರ್ಷಣೆಯೆ ಮಹೇಶ್ ಬಾಬು ತಮ್ಮ ವಿಶಿಷ್ಟ ಉಡುಗೆ,ವಿಭಿನ್ನ ಮ್ಯಾನರಿಜಂ, ಡೈಲಾಗ್ ಡೀಲವರಿ, ಆ್ಯಕ್ಷನ್ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಾರೆ. ನಲವತ್ತೇಂಟು ತುಂಬಿದರು ಇಪ್ಪತ್ತೇಂಟರ ಯುವಕನಂತೆ ಕಾಣುವ ಮಹೇಶ್ ಬಾಬುರ ಅಭಿನಯ, ಅವರ ಲುಕ್ ಇಗಲೂ ಪ್ರಶ್ ಆಗಿದೆ.
ಚಿತ್ರದ ನಟಿ ಶ್ರೀಲಿಲಾ ತುಂಬಾ ಗ್ಲಾಮರಸ್ ಆಗಿ ಈ ಚಿತ್ರದಲ್ಲಿ ಕಾಣುತ್ತಾರೆ , ಶ್ರೀಲೀಲಾರ ಹಾವಬಾವ ನೋಡುಗರಿಗೆ ಎರಡು ದಶಕದ ಹಿಂದೆ ತೆರೆಕಂಡ ಪೋಕರಿ ಚಿತ್ರದ ಇಲಿಯಾನರನ್ನು ನೆನಪಿಸುತ್ತದೆ. ಗುಂಟೂರು ಖಾರಂ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಹೆಚ್ಚು ಮಹತ್ವವಿಲ್ಲದಿದ್ದರು ತಮ್ಮ ಸೀಮಿತ ಪರಿಧಿಯಲ್ಲಿ ಶ್ರೀಲಿಲಾ ತಮ್ಮ ನಟನೆ ಮತ್ತು ಸೌಂದರ್ಯದ ಛಾಪು ಚಿತ್ರ ನೋಡಿದವರಲ್ಲಿ ಮೂಡಿಸುತ್ತಾರೆ.
ಚಿತ್ರದಲ್ಲಿನ ಹಿರಿಯ ಕಲಾವಿದರಾದ ಜಯರಾಂ , ಪ್ರಕಾಶ್ ರೈ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದು ಚಿತ್ರದ ಯಶಸ್ವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಚಿತ್ರದಲ್ಲಿನ ಮುಖ್ಯ ಆಕರ್ಷಣೆ ತಾಯಿಯ ಪಾತ್ರಧಾರಿ ರಮ್ಯಾಕೃಷ್ಣರವರು ಇವರ ನಟನೆಗೆ ಯಾರದೆ ಸರ್ಟಿಫಿಕೇಟ್ ಬೇಡವಾಗಿದೆ.
ರಮ್ಯಾ ಕೃಷ್ಣರ ತಾಯಿಯ ಪ್ರಾತದಲ್ಲಿನ ಗಾಂಭೀರ್ಯ, ಘನತೆ, ಕರುಣೆ ಎಲ್ಲವನ್ನೂ ಚಿತ್ರದಲ್ಲಿ ಧಾರೆ ಎರದಂತೆ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಮುಟ್ಟುವ ನಟನೆಯನ್ನು ಮಾಡಿದ್ದಾರೆ. ಚಿತ್ರದ ಸಂಗೀತ ನಿದೇರ್ಶಕ ತಮನ್ ರ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಪ್ರಯತ್ನ ಮಾಡಿದ್ದರೆ ಇನ್ನೂ ಚೆನ್ನಾಗಿ ಮೂಡಿಬರುವಂತೆ ಮಾಡಬಹುದಿದ್ದರು ಒಮ್ಮೆ ಪ್ರೇಕ್ಷಕರರು ಕೇಳುವ ಹಾಗೆ ಇದೆ.
ಒಂದು ದಶಕದ ಹಿಂದೆ ಈ ಚಿತ್ರ ಮೂಡಿಬಂದಿದ್ದರೆ ಸೂಪರ್ ಹಿಟ್ ಅಗುವುದರಲ್ಲಿ ಯಾವುದೇ ಸಂಶಯವಿರಲಿಲ್ಲ , ಆದರು ಮಹೇಶ್ ಬಾಬುರ ಅಭಿಮಾನಿಗಳಿಗೆ ಬೇಕಾದ ಪಂಚ್ ಡೈಲಾಗ್ , ಸ್ಟಂಟ್ ಚಿತ್ರದಲ್ಲಿದ್ದು , ಇಡೀ ಕುಟುಂಬ ಒಮ್ಮೆ ನೋಡುವ ಚಿತ್ರ ಗುಂಟೂರು ಖಾರಂ.
-ರಾಸುಮ ಭಟ್
ಕುವೆಂಪು ವಿ.ವಿ., ಶಿವಮೊಗ್ಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.