ಪ್ರತಿಭೆಯಲ್ಲಿ ಪ್ರತಿಭಾನ್ವಿತೆ ಅನ್ವಿತಾ


Team Udayavani, Jun 29, 2021, 10:00 AM IST

ಪ್ರತಿಭೆಯಲ್ಲಿ ಪ್ರತಿಭಾನ್ವಿತೆ ಅನ್ವಿತಾ

ಸಣ್ಣ ಪ್ರಯತ್ನದಿಂದಲೇ ಸಾಧನೆಯ ಮೆಟ್ಟಿಲನ್ನು ಹತ್ತಲು ಪ್ರತಿಯೊಂದು ಪ್ರತಿಭೆಗಳಿಗೆ ಮೊದಲ ಹೆಜ್ಜೆ ಆಗಿರುತ್ತದೆ. ಕಲೆ ಎಂಬುದು ಹುಟ್ಟಿನಿಂದಲೇ ಬರುವುದಲ್ಲ. ನಮ್ಮ ಆಸಕ್ತಿಯಿಂದ ಹುಟ್ಟಿಕೊಳ್ಳುವುದು. ಆಸಕ್ತಿ ಎನ್ನುವುದು ಸಣ್ಣ ವಯಸ್ಸಿನಲ್ಲೇ ಬಂದರೆ ಸಾಧನೆಯ ಉತ್ತುಂಗಕ್ಕೇರಲು ಬಹಳ ಸುಲಭ.

ಹೆಣ್ಣುಮಕ್ಕಳು ಎಂದಾಗ ಕೆಲವರ ಮನಸ್ಸಲ್ಲಿ ಆಕೆ ಏನು ಸಾಧನೆ ಮಾಡುತ್ತಾಳೆ? ಎನ್ನುವುದೊಂದು ಭಾವನೆ ಇದ್ದೆ ಇರುತ್ತದೆ. ಆದರೆ ನಮ್ಮ ಸಮಾಜದಲ್ಲಿ ಇಂದು ಹೆಣ್ಣು ಮಕ್ಕಳು ಎಲ್ಲದರಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ. ಸಮಾಜದಲ್ಲಿ ತಾನು ಕೂಡ ಗುರುತಿಸಿಕೊಳ್ಳಬೇಕು ಎಂದು ಹಲವಾರು ಕಲೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ಈ ಹುಡುಗಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುತ್ತಾರೆ.

ಈಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರಿನಲ್ಲಿ ಮತ್ತು ಪ್ರೌಢ ಶಾಲೆಯನ್ನು ನವೋದಯ ಶಾಲೆ ಬೆಟ್ಟಂಪ್ಪಾಡಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿ ಇಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಬಿಎಸ್‌ಡಬ್ಲ್ಯು ಕಲಿಯುತ್ತಿದ್ದು, ಇವರು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ನಾಕಪ್ಪಾಡಿಯ ಮಂಜಪ್ಪ ಪೂಜಾರಿ ಹಾಗೂ ಪವಿತ್ರಾ ದಂಪತಿ ಪುತ್ರಿ ಅನ್ವಿತಾ.

ಸಣ್ಣವಯಸ್ಸಿನಲ್ಲೇ ಬಣ್ಣದ ಪೆನ್ಸಿಲ್‌ಗ‌ಳನ್ನು ಹಿಡಿಯಲು ಶುರು ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಆಸಕ್ತಿ ತೋರಿದ ಕಾರಣ ಇವರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಂತೆ ಆಗಿದೆ. ಚಿತ್ರಕಲೆ ಅಲ್ಲದೆ ನೃತ್ಯ ಮಾಡಲು ಸೈ ಎನ್ನುವ ಇವರು ರಂಗೋಲಿ, ಲೇಖನ, ವ್ಯಕ್ತಿ ಚಿತ್ರ, ಮೆಹಂದಿ ಹೀಗೆ ಮೊದಲಾದ ಕಲೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ.

ಈಕೆ 2016-17ನೇ ಸಾಲಿನಲ್ಲಿ ಕರ್ನಾಟಕ ಸೆಕೆಂಡರಿ ಪರೀಕ್ಷಾ ಮಂಡಳಿಯವರು ನಡೆಸಿದ ಚಿತ್ರಕಲೆಯ ಲೋವರ್‌ಗ್ರೇಡ್‌ ಪರೀಕ್ಷೆ ಬರೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು, ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು. ಹಲವಾರು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.

ಈಕೆಗೆ ಹೆಚ್ಚು ಆಸಕ್ತಿ ಮಂಡಲ ಕಲೆಯಲ್ಲಿ, ಇನ್ನು ಹೆಚ್ಚು ವಿಭಿನ್ನವಾಗಿ ರಚಿಸಬೇಕೆಂಬುದು ಇವರ‌ ಆಶಯ. ಹಾಗೆಯೇ ಹೇರ್‌ಸ್ಟೈಲ್‌, ರಂಗು ರಂಗಿನ ರಂಗೋಲಿಯಲ್ಲೂ ಆಸಕ್ತಿ ಹೊಂದಿರುವ ಈಕೆ ಅದ್ಭುತವಾದ ಮಂಡಲ ಚಿತ್ರಗಳನ್ನು ರಚಿಸುತ್ತಾರೆ.

ಈಕೆಗೆ ಪೆನ್‌, ಪೆನ್ಸಿಲ್‌ ಶೀಟ್‌ ಪೇಪರ್‌ಕಂಡರೆ ಸಾಕು ಏನಾದರು ಡ್ರಾಯಿಂಗ್‌ ಬಿಡಿಸಬೇಕೇನ್ನುವ ಹಂಬಲ. ಈಕೆ ಮೂರನೇ ತರಗತಿಯಲ್ಲಿರುವಾಗ ಒಂದು ಗಣಪತಿಯ ಡ್ರಾಯಿಂಗ್‌ ಬಿಡಿಸಿದ್ದನ್ನು ಈಕೆಯ ಶಾಲೆಯ ಸರ್‌ನೊàಡಿ ಪೇಪರ್‌ನಲ್ಲಿ ಪ್ರಕಟ ಮಾಡಿದ್ದರು, ಅಲ್ಲಿಂದ ಈಕೆಗೆ ಚಿತ್ರ ಕಲೆಯಲ್ಲಿ ಇನ್ನು ಆಸಕ್ತಿ ಹೆಚ್ಚುತ್ತಲೇ ಹೋಯಿತು.

ಪ್ರಸ್ತುತ ಇವರು ಸಿ ಆರ್‌ಕ್ರಿಯೇಷನ್‌ ಎಂಬ ಯುಟ್ಯೂಬ್‌ ಚಾನೆಲ್‌ ಅಲ್ಲಿ ಸದಸ್ಯರಾಗಿದ್ದು, ಅದೇ ತಂಡದಿಂದ ಮುಂದೆ ಬರುವಂತಹ ಕಿರು ಚಿತ್ರಗಳಲ್ಲಿ ಅಭಿನಯಿಸುವ ಆಸಕ್ತಿ ಹೊಂದಿದ್ದಾರೆ.

ಕಲೆಗೆ ಆಸಕ್ತಿ ಇರುವುದರಿಂದ ಸಣ್ಣ ವಯಸ್ಸಿನಲ್ಲಿ ತಾನೇ ಚಿತ್ರಕಲೆಯನ್ನು ಬಿಡಿಸುತ್ತ ಬಂದವರು. ನವೋದಯ ಪ್ರೌಢ ಶಾಲೆಯಲ್ಲಿ ಐ. ಗೋಪಾಲಕೃಷ್ಣರಾವ್‌ ಅವರಿಂದ ಚಿತ್ರಕಲೆ ಅಭ್ಯಾಸ ಮಾಡಿದ್ದರು. ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಮಂಡಲ ಚಿತ್ರ ಕಲೆಗೂ ಹೆಚ್ಚು ಒಲವು ಬಂತು ಎಂದು ಅನ್ವಿತಾ ಹೇಳುತ್ತಾರೆ. ಬಹಳ ಸುಂದರವಾಗಿ, ಚಿತ್ರ ರಚಿಸುತ್ತಾರೆ. ಆಸಕ್ತಿ ಇದ್ದರೆ ಯಾವ ಕೆಲಸಗಳನ್ನು ಮಾಡಬಹುದು. ನಮ್ಮಲ್ಲಿ ನಂಬಿಕೆ ಮತ್ತು ಆಸಕ್ತಿ ಇರಬೇಕು. ಈಕೆಯ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸುವ.

 

ರಸಿಕಾ ಮುರುಳ್ಯ

ಪತ್ರಿಕೋದ್ಯಮ ವಿಭಾಗ,

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.