UV Fusion: ಗುರುವಿನ ಗುಲಾಮನಾಗುವ ತನಕ
Team Udayavani, Sep 5, 2023, 2:00 PM IST
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮೂಕುತಿ ಎನ್ನುವ ಮಾತು ಅಕ್ಷರಶಃ ಸತ್ಯ. ನಾವು ನಮ್ಮ ಶಿಕ್ಷಣದ ಆರಂಭದ ಅವಧಿಯಿಂದ ಕೊನೆಯುಸಿರು ಇರುವ ತನಕ ಋಣಿಯಾಗಿರುವುದು ಹೆತ್ತ ತಂದೆ-ತಾಯಿ ಬಿಟ್ಟರೆ ನಾವೆಲ್ಲರೂ ಶಿಕ್ಷಕರಿಗೆ ಋಣಿಯಾಗಿರುತ್ತೇವೆ. ಅಂತಹ ಮಹತ್ವ ಪೂರ್ಣವಾದ ಸ್ಥಾನವನ್ನು ಗುರು ತುಂಬಿರುತ್ತಾರೆ. ಎಲ್ಲೋ ಓಡಾಡಿಕೊಂಡಿರುವ ನಮ್ಮನ್ನು ಕರೆ ತಂದು ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ಅಕ್ಷರ ಎನ್ನುವ ಪ್ರಸಾದವನ್ನು ಉಣಬಡಿಸುವ ಕಾರ್ಯ ಅದು ಶಿಕ್ಷಕರಿಂದ ಮಾತ್ರ ಸಾಧ್ಯವಾಗುವುದು.
ಅಕ್ಷರದ ಜ್ಞಾನವೇ ಇರದ ಮಕ್ಕಳಲ್ಲಿ ಅದನ್ನು ವಯಸ್ಸಿಗೆ ಅನುಗುಣವಾಗಿ ಕಲಿಸಿ ದೇಶದ ಸುಶಿಕ್ಷಿತ ಪ್ರಜೆಯನ್ನು ತಯಾರಿಸುವಲ್ಲಿ ಗಣನೀಯ ಪಾತ್ರವನ್ನು ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಶಿಕ್ಷಕರ ಮೇಲಿನ ಗೌರವ ಮಕ್ಕಳಲ್ಲಿ ಕಡಿಮೆ ಆಗುತ್ತಿರುವುದನ್ನು ಕಾಣುತ್ತೇವೆ. ಆದರೆ ವೇದ ಶಾಸ್ತ್ರಗಳಲ್ಲಿ ಹೇಳಿದಂತೆ ಒಂದು ಅಕ್ಷರ ಕಲಿಸಿದಾತ ಗುರು. ಅವರಿಗೆ ಅಗೌರವ ತೋರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕಿರುವುದು ಅನಿವಾರ್ಯವಾಗಿದೆ.
ಚಿಕ್ಕ ಮಗುವಿನಿಂದ ಹಿಡಿದು ನಾವು ಬೆಳೆದು ಉನ್ನತ ಹುದ್ದೆ ಪಡೆಯುವರೆಗೂ ನಮ್ಮ ಸಾಧನೆಯಲ್ಲಿ ಅವರ ಸಾಧನೆಯನ್ನು ಕಾಣುವ, ನನಗಿಂತ ನನ್ನ ವಿದ್ಯಾರ್ಥಿಗಳು ಮುಂದೆ ಬರಲಿ, ಹೆಸರು ಮಾಡಲಿ, ಒಳ್ಳೆಯ ಪ್ರಜೆಯಾಗಲಿ ಎಂದು ಬಯಸುವ ಏಕೈಕ ಜೀವಿ ಎಂದರೆ ಅದು ಶಿಕ್ಷಕರು ಮಾತ್ರ. ಅಷ್ಟೇ ಏಕೆ ಕೆಲವೊಂದು ಸಂದರ್ಭಗಳಲ್ಲಿ ಶಿಕ್ಷಕರು ವಿದ್ಯಾರ್ಥಿಯ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ಧೈರ್ಯ ತುಂಬುತ್ತ, ಮುನ್ನಡೆಸುವ ಕಾರ್ಯವನ್ನು ಮಾಡುತ್ತಾರೆ. ಇಂತಹ ಅಭೂತಪೂರ್ವ ಮಾಣಿಕ್ಯಗಳನ್ನು ಪಡೆದ ನಾವೇ ಧನ್ಯರು. ನನ್ನ ಎಲ್ಲ ಪರಮ ಪೂಜ್ಯ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
-ಕಾಶೀಬಾಯಿ ಗು.ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.