UV Fusion: ತಂಡ ಕಟ್ಟಿದ, ಗೆದ್ದ…
Team Udayavani, Oct 30, 2024, 3:51 PM IST
ಒಟ್ಟಿಗೆ ಬರುವುದು ಆರಂಭ, ಒಟ್ಟಿಗೆ ಇರುವುದೇ ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು ಅನ್ನುವುದು ಅಮೆರಿಕದ ಕೈಗಾರಿಕೋದ್ಯಮಿ ಹೆನ್ರಿ ಫೋರ್ಡ್ ಅವರ ಅನಿಸಿಕೆ. ಅವರ ಈ ಮಾತು ಒಳ್ಳೆಯ ತಂಡ ಕಟ್ಟಿ ಗೆದ್ದವರೆಲ್ಲರೂ ನೆನಪಿಸಿಕೊಳ್ಳುತ್ತಾರೆ. ಸಂತೋಷವನ್ನಿಟ್ಟುಕೊಂಡೇ ಎಲ್ಲರೂ ಹುಟ್ಟಿರುವುದಿಲ್ಲ. ಆದರೆ ಅದನ್ನು ಸೃಷ್ಟಿಸಿಕೊಳ್ಳಬಲ್ಲ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರುತ್ತದೆ. ಪ್ರೀತಿಯಿಂದ ಮಾತನಾಡಿಸಿದರೆ ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸುತ್ತಾರೆ.
ನಮ್ಮ ಯಶಸ್ಸಿಗೆ, ನಗುವೂ ಕಾರಣವಾಗುತ್ತದೆ. ಖುಷಿ ಹಂಚಿ, ಯಶಸ್ಸನ್ನು ಪಡೆಯಿರಿ. ಜನರನ್ನೂ ಒಗ್ಗೂಡಿಸುವುದೂ ಕಲೆ. ಅದೂ ನಮ್ಮ ಸಾಮರ್ಥ್ಯವನ್ನೂ ಬಿಂಬಿಸುತ್ತದೆ. ಹಾಗೆಯೇ ಉತ್ತಮ ನಾಯಕನಿಗಿರಬೇಕಾದ ಅತೀಮುಖ್ಯ ಗುಣವೆನಿಸುತ್ತದೆ ಸಂಘಟನ ಶಕ್ತಿ. ಒಬ್ಬನಿಂದ ಸಾಧಿಸಲಾಗದ್ದು ತಂಡವಾಗಿ ಸಾಧಿಸಲು ಸುಲಭ. ನಾನಿಲ್ಲಿ ಹೇಳಲು ಹೊರಟಿರುವುದೂ ತಂಡ ಕಟ್ಟಿ ಯಶಸ್ಸು ಗಳಿಸಿದ ಮುಂಗೋಪಿಯ ಬಗ್ಗೆ…
ಆತನೊಬ್ಬನಿದ್ದ… ಕಾಲೇಜು ದಿನಗಳಿಂದಲೇ ಜಗಳಗಂಟ, ಸ್ವಾರ್ಥಿ, ಯಾರನ್ನೂ ಹತ್ತಿರವೂ ಸೇರಿಸಿಕೊಳ್ಳಲ್ಲ ಎಂದು ಆತನ ಓರಗೆಯವರೇ ಆತನ ಬಗ್ಗೆ ನಿತ್ಯ ದೂಷಣೆ ಮಾಡುತ್ತಿದ್ದರು. ಹೌದು ಆತ ಇದ್ದಿದ್ದೂ ಹಾಗೆಯೇ. ಯಾರನ್ನೂ ನಂಬುತ್ತಿರಲಿಲ್ಲ. ಎಲ್ಲವೂ ತನ್ನ ಪರವಾಗಿರಬೇಕೆಂದು ಬಯಸುತ್ತಿ¤ದ್ದ. ಹಾಗಂತ ಅದೇ ಆತನ ಬಲಹೀನತೆ ಎಂದು ತಿಳಿದುಕೊಂಡರೆ ತಪ್ಪಾಗುತ್ತದೆ. ಆತನ ಎಲ್ಲ ಬಲಹೀನತೆಯನ್ನೂ ಮೀರಬಲ್ಲಷ್ಟು ಸಾಮರ್ಥ್ಯ ಆತನಲ್ಲಿತ್ತು, ಎದುರಾಳಿ ಯಾರೇ ಇರಲಿ ಯಾವುದೇ ತಂಡವಾಗಿರಲಿ ಪಂದ್ಯಗಳನ್ನು, ಪಂಥಗಳನ್ನು ಲೀಲಾಜಾಲವಾಗಿ ಗೆದ್ದು ಬೀಗುತ್ತಿದ್ದ ಆತ. ಆದರೂ ಹಠಕ್ಕೆ, ಕೋಪಕ್ಕೇನೂ ಕಮ್ಮಿ ಇರಲಿಲ್ಲ. ಚಿಕ್ಕಂದಿನಿಂದಲೇ ರೂಢಿಯಾದ ಒರಟುತನ ಹಾಗೆಯೇ ಮುಂದುವರಿಯುತ್ತಿತ್ತು…
ತಾನೇ ಬ್ಯಾಟಿಂಗ್, ಬೌಲಿಂಗೂ ನಾನೇ…
ಆತನ ತಂಡಕ್ಕೆ ಸೇರಲು ಆತನ ಸಹವರ್ತಿಗಳಾರೂ ಬಯಸುತ್ತಿರಲ್ಲ. ಕ್ರಿಕೆಟ್ ಆಟವಾದರೆ ಆತನೇ ಮೊದಲು ಬ್ಯಾಟಿಂಗ್. ಆತ ಆಕಸ್ಮಾತ್ ಔಟ್ ಆದರೆ ಮಾತ್ರ ಇತರರಿಗೆ. ಹಾಗೆಯೇ ಬೌಲಿಂಗ್ ಕೂಡ. ಅವನಿಗೆ ಸುಸ್ತಾಗಿ ಇನ್ನು ಕೂಡಲ್ಲ ಅನಿಸಿದಾಗ ಮತ್ತೂಬ್ಬರಿಗೆ ಬೌಲಿಂಗ್. ಆತನಲ್ಲಿ ಸಾಮರ್ಥ್ಯವಿತ್ತು. ಎದುರಾಳಿ ಇಡೀ ತಂಡ ಹೊಡೆದ ರನ್ನನ್ನು ಎಷ್ಟೋ ಸಲ ಒಬ್ಬನೇ ಹೊಡೆದು ಬಿಡುತ್ತಿದ್ದ. ಆದರೆ ಗೆದ್ದರೂ ಈತನ ತಂಡದ ಸದಸ್ಯರಿಗೆ ಖುಷಿ ಆಗುತ್ತಲೇ ಇರಲಿಲ್ಲ. ಯಾಕೆಂದರೆ ಗೆಲುವು ತಮ್ಮದಲ್ಲ…ಆತನದು ಎಂಬ ಅರಿವು ಅವರಿಗೂ ಇತ್ತು. ಈ ರೀತಿಯಾಗಿ 10ರಲ್ಲಿ 6 ಪಂದ್ಯವಾದರೂ ಜಯಿಸಿ ಬಿಡುತ್ತಿದ್ದ. ಇವನೂ ಜಾಸ್ತಿ ಖುಷಿ ಪಡುವಂತಿರಲಿಲ್ಲ. 10ರಲ್ಲಿ ನಾಲ್ಕು ಸೋಲೂ ಈತನಿಗೆ ತುಂಬಾ ಹಿಂಸೆ ನೀಡುತ್ತಿತ್ತು. ಎಲ್ಲವನ್ನೂ ಗೆದ್ದು ಬಿಡಬಹುದಿತ್ತಲ್ಲವೆಂಬ ಕೊರಗು ಆತನನ್ನು ಕಾಡುತ್ತಿತ್ತು.
ವರ್ಕೌಟ್ ಆಗಲಿಲ್ಲ
ಹೀಗಿರಬೇಕಾದರೆ ಅಪ್ಪನ ಅಗಲುವಿಕೆ ಅವನಿಗಾಯಿತು. ಹಾಗಾಗಿ ಅವರು ನಡೆಸುತ್ತಿದ್ದ ಹಾಳೆ ಬಟ್ಟಲು ತಯಾರಿಸುವ ಉದ್ಯಮವನ್ನು ತಾನೇ ಮುಂದುವರಿಸಬೇಕಾದ ಅನಿವಾರ್ಯತೆ ಕಾಲೇಜು ದಿನಗಳಲ್ಲೇ ಇವನಿಗೆ ಒದಗಿಬಂತು. ಆತ ಮೊದಲು ಮಾಡಿದ ಕೆಲವೇನೆಂದರೆ ಅಪ್ಪನ ಕಾಲದಿಂದಲೂ ಇದ್ದ ಕೆಲಸಗಾರರನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಹೊರಗೆ ಹಾಕಿದ್ದು. ಏಕಾಂಗಿಯಾಗಿ ಸಾಧಿಸಬೇಕೆಂಬ ಹಠವೇ ಇವನಲ್ಲಿ ಹೆಚ್ಚಾಗಿತ್ತು. ಉತ್ಪಾದನೆ, ಮಾರುಕಟ್ಟೆ ವಿಭಾಗ ಹೀಗೆ ಎಲ್ಲ ವಿಭಾಗಳಲ್ಲೂ ತಾನಿಲ್ಲದಿದ್ದರೆ ಕಾರ್ಯವೇ ಸಾಗುವುದಿಲ್ಲ ಎಂಬ ಭಾವನೆ ಇವನಲ್ಲಿ. ಯಾರೊಬ್ಬರನ್ನೂ ನಂಬಲಿಲ್ಲ, ವಿಶ್ವಾಸಕ್ಕೂ ತೆಗೆದುಕೊಳ್ಳಲಿಲ್ಲ. ಒಬ್ಬನೇ ಎಷ್ಟೆಂದು ದುಡಿದಾನು, ಕಂಪೆನಿ ಕೈಕೊಟ್ಟಿತು. ರಾಶಿ ರಾಶಿ ಹಾಳೆ ಬಟ್ಟಲುಗಳು ಅಂಗಳದಲ್ಲಿ ಕೊಳೆಯುವಂತಾಯಿತು. ಆಗ ಅವನಿಗೆ ಜ್ಞಾನೋದಯವಾಗಿತ್ತು, ಒಬ್ಬನಿಂದಲೇ ಮಾರುಕಟ್ಟೆ ಆಳಲು ಸಾಧ್ಯವಿಲ್ಲ. ಅದಕ್ಕೊಂದು ಸರ್ವಸಜ್ಜಿತ ತಂಡ ಬೇಕು…
ತಂಡ ಕಟ್ಟಿದ, ಗೆದ್ದ…
ಬದುಕು ತುಂಬಾ ಕಲಿಸಿತ್ತು. ಉತ್ತಮ ತಂಡ, ಉನ್ನತ ನಡವಳಿಕೆಗಳಿಂದ ಎಲ್ಲರನ್ನೂ ಜನರನ್ನೂ ಗೆಲ್ಲಬಹುದೆಂಬ ಅರಿವು ಆತನಲ್ಲಿ ನಿತ್ಛಳವಾಯಿತು. ಹೌದು, ಅಂದಿನಿಂದಲೇ ತಂಡ ಕಟ್ಟಲು ಶುರು ಮಾಡಿದ. ಉನ್ನತ ಕೆಲಸಗಾರರಿಂದ ಹಾಳೆ ಬಟ್ಟಲು ತಯಾರಿಸಿದ. ಉತ್ತಮ ಮಾರ್ಕೆಟಿಂಗ್ ತಂತ್ರ ಅರಿತವನಿಗೆ ತನ್ನ ಉತ್ಪನ್ನ ಮಾರಾಟ ಮಾಡುವ ಜವಾಬ್ದಾರಿಯನ್ನು ಕೊಟ್ಟ. ತಾನು ಎಲ್ಲರೊಂದಿಗೆ ಬೆರೆಯುತ್ತಾ ಅವರನ್ನೂ ಹುರಿದುಂಬಿಸಲು ಪ್ರಾರಂಭಿಸಿದ.
ಈಗ ಎಲ್ಲರಿಗೂ ತಮ್ಮ ಬಾಸ್, ಕಂಪೆನಿ ಬಗ್ಗೆ ಗೌರವ ನೂರ್ಮಡಿಯಾಯಿತು. ಇಷ್ಟ ಪಟ್ಟು ಕೆಲಸ ಮಾಡಿದರು. ಕಂಪೆನಿ ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗಿ ಹಾಳೆ ಬಟ್ಟಲು ಮಾರಾಟದಲ್ಲಿ ಖ್ಯಾತಿಯನ್ನು ಗಳಿಸಿತು. ಅದೇ ವ್ಯಕ್ತಿತ್ವದ ಪ್ರತಿಫಲನ ಕಾಲೇಜು ಶಿಕ್ಷಣದಲ್ಲೂ ಸಾಧ್ಯವಾಯಿತು. ಒಬ್ಬನೇ ಕೂತು ಓದುತ್ತಿದ್ದವ ಎಲ್ಲರೊಂದಿಗೂ ಬೆರೆತು ತನಗಿದ್ದ ಗೊಂದಲಗಳನ್ನು ಪರಿಹರಿಸುತ್ತಿದ್ದ. ಇತರರಿಗೂ ನೆರವಾಗುತ್ತಿದ್ದ. ಆ ವರ್ಷದ ಕಲಿಕೆಯಲ್ಲೂ ಹಿರಿದಾದ ಪ್ರಗತಿಯಾಯಿತು.
-ಹಿರಣ್ಮಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.