TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ
Team Udayavani, Jan 11, 2025, 3:50 PM IST
ಹುಚ್ಚುಕೋಡಿ ಮನಸ್ಸು ಅದು ಹದಿನಾರರ ವಯಸ್ಸು ಈ ಹಾಡನ್ನು ಅನೇಕರು ಕೇಳಿರಬಹುದು. 16 ವಯಸ್ಸಿನಲ್ಲಿ ಮನಸ್ಸಿನಲ್ಲಿ ಆಗುವ ಅನೇಕ ಆಕರ್ಷಕ ಸಂಗತಿಗಳು ಬಹಳ ಅರ್ಥ ಗರ್ಭಿತವಾಗಿ ಈ ಭಾವಗೀತೆಯಲ್ಲಿ ತಿಳಿಸಲಾಗಿದೆ. ಇಂದು ಇಂತಹ ಅನೇಕ ಆಕರ್ಷಣೆ ಯುವ ಜನರಿಗೆ ಸರ್ವೇ ಸಾಮಾನ್ಯವಾಗಿದೆ. ಹರೆಯ, ಇದೊಂಥರಾ ಎಲ್ಲ ಒಳಿತಿಗೂ ಕೆಡುಕಿಗೂ ತೆರೆದ ವೇದಿಕೆ.
ಚಾರಿತ್ರ್ಯ ನಿರ್ಮಾಣದ ಬುನಾದಿ ಹಂತ. ಇದಕ್ಕೆ ಪುಷ್ಠಿನೀಡುವಂತೆ ಇಂದಿನ ಕಾಲೇಜು ಯುವಜನತೆಯಲ್ಲಿ ಸಾಮಾಜಿಕ ಜಾಲತಾಣಗಳ ಗೀಳು ಹಾದಿ ತಪ್ಪಿಸುತ್ತಿದೆ ಎನ್ನಬಹುದು. ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಖಾತೆಯೊಂದನ್ನು ತೆರೆದರೆ ನಮ್ಮ ಸಮಯದ ಖಾತೆ ಖಾಲಿಯಾಗುವುದಂತೂ ಖಂಡಿತ. ಹಾಗೆಂದ ಮಾತ್ರಕ್ಕೆ ಎಲ್ಲವೂ ಸಾಮಾಜಿಕ ಜಾಲತಾಣದ ಪ್ರಭಾವ ಎಂದು ದೂರುವಂತಿಲ್ಲ ಅದರ ಬಳಕೆಯ ಇತಿ ಮಿತಿಗಳ ಅರಿವು ಬಹಳ ಮುಖ್ಯ.
ಯುವ ಜನರಿಗೆ ಸಾಮಾಜಿಕ ಜಾಲತಾಣದ ಅನೇಕ ವೇದಿಕೆಯನ್ನು ಸರಿಯಾಗಿ ಬಳಕೆ ಮಾಡುವ ವ್ಯವಸ್ಥೆಯ ಅರಿವಿನ ಸಮಸ್ಯೆ ಇದೆ. ಅಪರಿಚಿತರ ಬಗ್ಗೆ ಸರಿಯಾಗಿ ತಿಳಿಯದೇ ಫೋಟೋ ಕಳುಹಿಸುವುದು ಎಷ್ಟರಮಟ್ಟಿಗೆ ಸುರಕ್ಷಿತ? ಎಂಬುದನ್ನು ಯೋಚಿಸಬೇಕು. ಸಾಮಾಜಿಕ ಜಾಲತಾಣಗಳ ನಕಲಿ ಪ್ರೀತಿ ಹಾವಳಿ ಇಂದು ಸಾಮಾನ್ಯವಾಗಿದೆ. ಹದಿನೆಂಟು ತುಂಬುವ ಮೊದಲೇ ಬೇರೊಬ್ಬರ ನಂಟಿನಲ್ಲಿರುವ ಈ ಹರೆಯದ ಮಕ್ಕಳಿಗೆ ಪ್ರಾಪಂಚಿಕ ಜ್ಞಾನ ಬೇಕಿದೆ. ಹರೆಯದಲ್ಲಿ ಆಕರ್ಷಣೆಗಳು ಸಹಜ .ಆದರೆ ಎಲ್ಲ ಆಕರ್ಷಣೆಗಳನ್ನು ನೀವು ಪ್ರೀತಿ ಎಂದು ತಿಳಿದುಕೊಂಡರೆ ಅದು ತಪ್ಪು.
ಇವೆರಡರ ಮಧ್ಯ ವ್ಯತ್ಯಾಸ ಇದೆ. ಆ ವ್ಯತ್ಯಾಸವನ್ನು ನೀವೇ ಕಂಡುಕೊಳ್ಳಬೇಕು. ತರಾತುರಿ ಇಂದ ಹೋಗಿ ನಿಮ್ಮೆಲ್ಲ ಭಾವನೆಗಳನ್ನು ಹೇಳಿಕೊಳ್ಳಬಾರದು.ಕೊಂಚ ತಡೆ ಹಿಡಿದು, ನಿಧಾನವಾಗಿಯೋಚಿಸಬೇಕು. ಪ್ರೀತಿ ಎಂಬುದು ಆಕರ್ಷಣೆಯಲ್ಲ,ವ್ಯಾಮೋಹವಲ್ಲ,ಕಾಮವೂ ಅಲ್ಲ.ಇದು ಯಾವ ಸಂಗತಿಯು ಅಲ್ಲ,ಸ್ವರೂಪವು ಅಲ್ಲ.ಇಂದಿನ ಪೀಳಿಗೆ ಇದನೆಲ್ಲ ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಗಂಡು -ಹೆಣ್ಣಿನ ಪ್ರಾಕೃತಿಕ ಹೊರತುಪಡಿಸಿ ಅದೆಷ್ಟೋ ಪ್ರೀತಿ ವಿಚಾರಗಳಿವೆ.ತಾಯಿ-ಮಗನ ಪ್ರೀತಿ,ತಂದೆ-ಮತ್ತು ಮಗಳ ನಡುವಿನ ಪ್ರೀತಿ, ಕುಟುಂಬಿಕ ಪ್ರೀತಿ,ಅಣ್ಣ-ತಂಗಿಯರ ಪ್ರೀತಿ ಎಂದೆಂದೂ ಅಜರಾಮರ.
ಹದಿಹರಿಯದ ವಯಸ್ಸು ,ಎಲ್ಲವನ್ನು ಹದ ಮಾಡಿಬಿಡುವಂತ ವಯಸ್ಸು .ನಮೆಲ್ಲ ಗುರಿಗಳನ್ನು ಜೀವನವನನ್ನು ರೂಪಿಸಿಕೊಳ್ಳುವಂತಹ ವಯಸ್ಸು. ಇಂತಹ ಅತ್ಯಮೂಲ್ಯ ಕಾಲಘಟ್ಟವನ್ನೂ,ವಿದ್ಯಾರ್ಥಿ ಜೀವನವನ್ನು ಚೆನ್ನಾಗಿ ಆದರ್ಶ ರೀತಿಯಿಂದ ರೂಪಿಸಿಕೊಳ್ಳಬೇಕು.
ಬದಲಾಗಿ ದುಡ್ಡು-ದೌಲತ್ತಿಗೆ ಬೆತ್ತಲಾಗಿ ಬಡವರಾಗಬಾರದು.ಅದ್ಯಾರ ಮೋಡಿಗೊ ಬಲಿಯಾಗಿ ನಮ್ಮ ತನವನ್ನು ಬಿಟ್ಟುಕೊಡಬಾರದು . ಯೌವ್ವನವೆಂಬ ಸುಗ್ಗಿಯ ಕಾಲ ಮತ್ತೆ ಬರಲಾರದು. ಯೌವ್ವನದಲ್ಲಿಉತ್ಸಾಹದಿಂದ ಎಲ್ಲ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಗುರಿಗಳತ್ತ ಮುನ್ನುಗ್ಗಬೇಕೆ ಹೊರತಾಗಿ ಪ್ರೀತಿ ಎಂಬ ಆಟದಲ್ಲಿ ಸಮಯ ವ್ಯರ್ಥಮಾಡಬಾರದು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಯುವಜನತೆ ಮುಂದುವರೆಯಬೇಕಿದೆ. ಜೀವನದ ದೋಣಿ ಒಂದು ಹಂತ ತಲುಪುವ ತನಕ ದೃಷ್ಟಿ ಬದಲಿಸದೆ ನೇರ ದೃಷ್ಟಿ ಇಂದ ಸಾಗಲೇಬೇಕು.ಇಲ್ಲವಾದರೆ ಜೀವನ ಮುಳುವಾಗುವುದಂತೂ ಖಂಡಿತ.
-ತೃಪ್ತಿ ಪಟಗಾರ
ಕುಮಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.