Clay Pots: ಮಣ್ಣಿನ ಮಡಕೆಯಲ್ಲಿದೆ ಜೀವ ಸಾರ
Team Udayavani, Sep 1, 2024, 4:15 PM IST
ಜೀವನಶೈಲಿ ಬದಲಾಗಿದೆ. ಒತ್ತಡದ ಬದುಕು, ಆರಾಮದಾಯಕವಲ್ಲದ ಆಹಾರ, ಗಾಳಿ, ನೀರು ಮತ್ತು ಪರಿಸರ ಆರೋಗ್ಯವನ್ನು ಹದಗೆಡುವಂತೆ ಮಾಡುತ್ತಿದೆ.
ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಜಗತ್ತು ಸುಂದರ. ಅದೇ ಆರೋಗ್ಯ ಹದಗೆಟ್ಟು ಬಿಟ್ಟರೆ, ಬದುಕು ನರಕವೇ ಸರಿ. ಕೆಲವೊಂದು ಕಾಯಿಲೆಗಳು ಯಾತನೆಯಲ್ಲಿ ನರಳುವಂತೆ ಮಾಡುತ್ತದೆ. ನಾವು ಸೇವಿಸುವ ಆಹಾರದಲ್ಲಿ ನಮ್ಮ ಆರೋಗ್ಯವಿದೆ. ಆಹಾರ ಸತ್ವಭರಿತವಾಗಿರಬೇಕು ಮತ್ತು ಪೋಷಕಾಂಶಯುಕ್ತವಾಗಿರಬೇಕು. ಇಂದಿನ ದಿನಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕಗಳೇ ಹೆಚ್ಚು.
ಮೃಷ್ಟಾನ್ನಭೋಜನವಿದ್ದರೆ ಏನು ಪ್ರಯೋಜನ, ಅದನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲದ ಮೇಲೆ? ನಮ್ಮ ಆರೋಗ್ಯ ಹಾಳಾಗುತ್ತಿರುವುದಕ್ಕೆ ಕಾರಣಗಳು ನಾವು ಬಳಸುವ ಪಾತ್ರೆ, ಗ್ಯಾಸ್, ರಾಸಾಯನಿಕ ಸಿಂಪಡಿಸಿದ ತರಕಾರಿ, ಹಣ್ಣುಗಳು, ಕುಡಿಯುವ ನೀರು ಇತ್ಯಾದಿ.
ಹಿಂದಿನ ಕಾಲದಲ್ಲಿ ಅಡುಗೆ ಮಾಡುತ್ತಿದ್ದ ಮಣ್ಣಿನ ಮಡಿಕೆಯಲ್ಲಿ ಸತ್ವವಿತ್ತು. ಅದ್ಭುತ ರುಚಿ ಇರುತ್ತಿತ್ತು. ಮಣ್ಣಿನ ಮಡಕೆಯಲ್ಲಿ ಕ್ಯಾಲ್ಸಿಯಂ, ಮೆಗ್ನಿàಷಿಯಂ, ಕಬ್ಬಿಣದಂತಹ ಆರೋಗ್ಯಕ್ಕೆ ಪುಷ್ಠಿ ಕೊಡುವ ಅಂಶವಿರುತ್ತದೆ. ಪಿ.ಎಚ್. (ಆಹಾರದಲ್ಲಿರುವ ಅಮ್ಲಿàಯತೆ) ಅನ್ನು ಇದು ಸಮತೋಲನಗೊಳಿಸುತ್ತದೆ. ಈ ಮೂಲಕ ನಾವು ಆರೋಗ್ಯವಂತರಾಗಿರುತ್ತಿದ್ದೆವು.
ಮಣ್ಣಿನ ಮಡಕೆಯಿಂದ ಮಾಡಿದ ಆಹಾರ ಮತ್ತು ಮಣ್ಣಿನ ಮಡಕೆಯ ನೀರು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸೂಕ್ತವಾಗಿದೆ ಮತ್ತು ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪ್ಲಾಸ್ಟಿಕ್ ಬಾಟಲಿ ನೀರಿನಲ್ಲಿ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ಕಣ ಸೇರಿಕೊಂಡಿರುತ್ತವೆ. ಇದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವುದಂತು ಖಂಡಿತ.
ಇಂದಿನ ದಿನಗಳಲ್ಲಿ ಮಣ್ಣಿನ ಮಡಕೆಗಳು ಕಣ್ಮರೆಯಾಗುತ್ತಿದೆ. ಇಂದು ಇವು ಕೇವಲ ಅಗತ್ಯ ಶಾಸ್ತ್ರ ಸಂಪ್ರದಾಯಗಳಿಗೆ, ಅಲಂಕಾರಿಕ ವಸ್ತುವಾಗಿ ಮಾತ್ರ ಬಳಸಲಾಗುತ್ತಿದೆ. ಈ ಮಣ್ಣಿನ ಮಡಕೆಯಲ್ಲಿ ಮಾಡಿದ ಆಹಾರ ಖಾದ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದೇ ಕಾರಣದಿಂದ ನಮ್ಮ ಪೂರ್ವಜರು ಆರೋಗ್ಯವಂತರಾಗಿರುತ್ತಿದ್ದರು. ಆದರೆ ಇಂದಿನ ಯುಗದ ಜನರು ಬಗೆ ಬಗೆಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಮಣ್ಣು ನಮ್ಮ ಜೀವ ಉಳಿಸುವ ಸಂಜೀವಿನಿ. ಮಣ್ಣು ನಮ್ಮ ಜೀವ ಮತ್ತು ಜೀವನದ ಸಾರ. ಇನ್ನಾದರೂ ಮಣ್ಣಿನ ಮಡಕೆಗಳು ಉಸಿರಾಡಲಿ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಣ್ಣಿನ ಮಡಕೆಗಳನ್ನು ಬಳಸುವುದು ಅತ್ಯಗತ್ಯ.
- ವಾಣಿ
ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.