ಕಾರ ಹುಣ್ಣಿಮೆ ; ಮುಂಗಾರು ಆರಂಭದ ಮೊದಲ ಹಬ್ಬ

Team Udayavani, Jun 27, 2020, 2:00 PM IST

ಕಾರ ಹುಣ್ಣಿಮೆ ; ಮುಂಗಾರು ಆರಂಭದ ಮೊದಲ ಹಬ್ಬ

ಈ ಕಾರ ಹುಣ್ಣಿಮೆ ಮುಗಿದ ಮೇಲೆಯೇ ಮಳೆಗಾಲ ಆರಂಭವಾಗುವುದು. ಇದಕ್ಕೆ ಬೇಂದ್ರೆ ಅಜ್ಜ ಮೇಘದೂತ ಕವನದಲ್ಲಿ ಕಾರ ಹುಣ್ಣಿಮೆಯನ್ನು ಹೀಗೆ ಬಣ್ಣಿಸಿದ್ದಾರೆ.

“ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ’

ಬಿರು ಬೇಸಗೆ ಕಳೆದು ಮುಂಗಾರು ಮನೆ ಬಾಗಿಲಿಗೆ ಬರುವ ಹಬ್ಬವೇ ಕಾರ ಹುಣ್ಣಿಮೆ. ಇದು ಮುಂಗಾರು ಆರಂಭದ ಮೊದಲ ಹಬ್ಬ. ಜತೆಗೆ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿದೆ. ಬೇಸಗೆಯಲ್ಲಿ ಹೊಲವನ್ನು ಉತ್ತು, ಹದ ಮಾಡಿದ ಎತ್ತುಗಳಿಗೆ ಈ ಹಬ್ಬದ ಅನಂತರ ವಿಶ್ರಾಂತಿ ನೀಡಲಾಗುತ್ತದೆ. ಕಾರು ಹುಣ್ಣಿಮೆಯೂ ಮನುಷ್ಯ ಮತ್ತು ಪಶುಗಳ ನಡುವಿನ ಅನೂಹ್ಯ ಸಂಬಂಧವನ್ನು ತಿಳಿಸುತ್ತದೆ. ಅಲ್ಲದೇ ಕೃಷಿ ಸಂಸ್ಕೃತಿಯ ದ್ಯೋತಕವಾಗಿದೆ.

ಕಾರ ಹುಣ್ಣಿಮೆಯ ದಿನದಂದು ಸೂರ್ಯನ ತೇಜೋರಶ್ಮಿ ಕಿರಣಗಳನ್ನು ಸ್ವಾಗತಿಸಿದ ಬಳಿಕ ಎತ್ತುಗಳನ್ನು ಸ್ನಾನಕ್ಕೆಂದು ಹಳ್ಳ, ನದಿ, ಕೆರೆಗೆ ಕರೆದೊಯ್ಯಲಾಗುತ್ತದೆ. ಎತ್ತುಗಳಿಗೆ ಸ್ನಾನ ಮಾಡಿಸಿ, ವಿಧ ವಿಧವಾದ ಬಣ್ಣಗಳಲ್ಲಿ ಗುಲಾಲ್‌ ಹಚ್ಚಲಾಗುತ್ತದೆ.

ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫ‌ರಾರಿಯನ್ನು ಕಟ್ಟಿ ಮನೆಯವರೆಲ್ಲ ಸೇರಿ ಎತ್ತಿಗೂ ಪೂಜೆ ಮಾಡುತ್ತಾರೆ. ಬಳಿಕ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಇಡೀ ಊರಿಗೆ ಊರೇ ಸೇರಿ ಒಗ್ಗಟ್ಟಾಗಿ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತದೆ.

ಕಾರು ಹುಣ್ಣಿಮೆ ಹಬ್ಬವು ಚಿಕ್ಕವರಿಂದಲೂ ನಮಗೆ ಖುಷಿ ತರುವ ಹಬ್ಬ. ಮನೆಯ ಎತ್ತುಗಳಿಗೆ ಅಲಂಕಾರ ಮಾಡಿ, ನಾವು ಹೊಸ, ಹೊಸ ಬಟ್ಟೆ ತೊಟ್ಟು ಹೋಳಿಗೆ, ತುಪ್ಪದ ಊಟ ಮಾಡಿ ಸಂಭ್ರಮಿಸುವುದು ಜೀವಮಾನದ ಖುಷಿಗಳಲ್ಲಿ ಒಂದು. ಇನ್ನೂ ಒಂದು ವಿಶೇಷ ಏನೆಂದರೆ ಈ ಹಬ್ಬದ ದಿನದಂದು ಮನೆಯಲ್ಲಿರುವ ಎಣ್ಣೆ ತೆಗೆಯುವ ಗಾಣಕ್ಕೆ ಸೀರೆ ತೊಡಿಸಿ, ಅಲಂಕಾರ ಮಾಡಿ ಪೂಜೆ ಮಾಡುವುದು ಕೂಡ ಇದೇ ದಿನದಂದು.

ಸಂಗಮೇಶ ಸಜ್ಜನ , ಉದ್ಯೋಗಿ, ಬೆಂಗಳೂರು

ಟಾಪ್ ನ್ಯೂಸ್

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-frndshp

Friendship: ಸ್ನೇಹವೇ ಸಂಪತ್ತು

12-uv-fusion

UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು

11-uv-fusion

Friendship: ವಿಶ್ವದ ಸುಂದರ ಸಂಬಂಧ ಗೆಳೆತನ

10-karata

Kota Shivarama Karanth: ಅನುಭವದ ಬುತ್ತಿ ಕೊಟ್ಟ ಕಾರಂತರು…

9-uv-fusion

Smile: ಚಿಂತೆಯನ್ನು ದೂರಮಾಡಿ ಒಮ್ಮೆ ನೀ ನಗು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.