ಧೈರ್ಯ, ಸಾಹಸಕ್ಕೆ ಗ್ರೆನೇಡಿಯರ್‌ ರೆಜಿಮೆಂಟ್‌


Team Udayavani, Jul 18, 2021, 1:12 PM IST

ಧೈರ್ಯ, ಸಾಹಸಕ್ಕೆ ಗ್ರೆನೇಡಿಯರ್‌ ರೆಜಿಮೆಂಟ್‌

ಭಾರತೀಯ ಸೈನ್ಯದಲ್ಲಿ ವೀರಮರಣವನ್ನು ಹೊಂದಿದ ಸೈನಿಕರ ಹೆಸರುಗಳನ್ನು, ಅವರುಗಳ ವೀರಗಾಥೆಗಳನ್ನು ಆಲಿಸಿದಾಗ ಒಮ್ಮೆಯಾದರೂ ಮೈ ರೋಮಾಂಚನಗೊಂಡು ಕಣ್ಣುಗಳಲ್ಲಿ ಅಶ್ರು ಸುರಿಯದೇ ಇರದು. ಅಂತಹ ಪರಣತಿ ಸಿಂಹಪುರುಷರನ್ನು ರಾಷ್ಟ್ರ ಸೇವೆಗಾಗಿ ಗಟ್ಟಿಗುಂಡಿಗೆಯ ವೀರರನ್ನಾಗಿ ಶಕ್ತಿಸುವಲ್ಲಿ ದಿ ಗ್ರೆನೇಡಿಯರ್‌ ರೆಜಿಮೆಂಟ್‌ನ ಕಾರ್ಯ ಶ್ಲಾಘನೀಯ.

ದಿ ಗ್ರೆನೇಡಿಯರ್‌ ರೆಜಿಮೆಂಟ್‌ ಇತಿಹಾಸವನ್ನು ನೋಡ ಹೋದರೆ ಕಾಮನ್‌ವೆಲ್ತ್‌ನಲ್ಲಿನ ಸೈನ್ಯದ ಅತ್ಯಂತ ಹಳೆಯ ಗ್ರೆನೇಡಿಯರ್‌ ರೆಜಿಮೆಂಟ್‌ ಭಾರತೀಯ ಸೈನ್ಯಕ್ಕೆ ಸೇರಿದೆ. ನಮ್ಮ ಭಾರತೀಯ ಸೈನ್ಯದಲ್ಲಿ ಅತ್ಯಂತ ಹಳೆಯ, ನುರಿತ ಹಾಗೂ ತನ್ನ ಅಸ್ತಿತ್ವವನ್ನು ನಶಿಸಿಹೋಗದಂತೆ ಕಾರ್ಯ ನಿರ್ವಹಿಸಿಕೊಂಡು ಇಂದಿಗೂ ಇತಿಹಾಸದ ಪುಟಗಳಲ್ಲಿ ತನ್ನ ಇರುವಿಕೆಯನ್ನು ದಿ ಗ್ರೆನೇಡಿಯರ್‌ ರೆಜಿಮೆಂಟ್‌ ದೇಶ ಸೇವೆಗೆ ಆಧಾರವಾಗಿ ಉನ್ನತ ಮಟ್ಟದಲ್ಲಿ ನಿಂತಿದೆ.

ಈ ರೆಜಿಮೆಂಟ್‌ನ ಲಾಂಛನ  “ಜ್ವಾಲೆಯನ್ನು ಹೊರಹಾಕುವ ಗ್ರನೇಡ್‌’ ಆಗಿದೆ. ಬ್ರಿಟಿಷ್‌ ಹೆರಾಲ್ಡಿ†ಯ ಸಂಕೇತವಾದ ಹ್ಯಾನೋವರ್‌ನ ವೈಟ್‌ ಹಾರ್ಷ್‌ ಗ್ರನೇಡ್‌ ನ ಮಧ್ಯಭಾಗದಲ್ಲಿದೆ. “ಸರ್ವದಾ ಶಕ್ತಿಶಾಲಿ’ ಇದು ದಿ ಗ್ರೆನೇಡಿಯರ್‌ ರೆಜಿಮೆಂಟ್‌ನ ಧ್ಯೇಯವಾಕ್ಯ. ಭಾರತೀಯ ಗ್ರೆನೇಡಿಯರ್ಸ್‌ ಇತಿಹಾಸವು ಬಾಂಬೆ ಪ್ರಸಿಡೆನ್ಸಿಯ ಸೈನ್ಯಕ್ಕೆ ನೇಮಕಗೊಂಡ ಸೈನಿಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಗ್ರೆನೇಡಿಯರ್ಸ್‌ ಕಂಪೆನಿಯೊಂದರ ಮೊದಲ ಉಲ್ಲೇಖವು 1684ರಲ್ಲಿ ಕಾಣಸಿಗುತ್ತದೆ. ಬಾಂಬೆ ದ್ವೀಪವನ್ನು ಸ್ವಾಧೀನಪಡಿಸಿಕೊಂಡ ಮತ್ತು ಯುರೋಪಿಯನ್ನರನ್ನು ಹಾಗೂ ಸ್ಥಳೀಯ ಕ್ರಿಶ್ಚಿಯನ್ನರ ಮೂರು ಕಂಪೆನಿಗಳನ್ನು ಒಳಗೊಂಡ ಇಂಗ್ಲಿಷ್‌ ಸೈನ್ಯದ ಸ್ವಲ್ಪ ಭಾಗವು ಗ್ರೆನೇಡಿಯರ್‌ ಕಂಪೆನಿಯನ್ನು ಹೊಂದಿತ್ತು. ತರುವಾಯ ಈ ಘಟಕದ ಅಸ್ತಿತ್ವ ಪ್ರಚಲಿತದಲ್ಲಿ ಇರದೇ ಹೋಯಿತು. ಆದರೆ 1710ರಲ್ಲಿ ಬಾಂಬೆ ಸೈನ್ಯವು “ಯುರೋಪಿಯನ್ನರು ಟೋಪಾಸಗಳು( ಭಾರತೀಯ ಕ್ರಿಶ್ಚಿಯನ್ನರು ), ಮತ್ತು ಕಾಫಿರರು ಅಥವಾ ಆಫ್ರಿಕನ್‌ ಗುಲಾಮರು’ ಸಹಿತ ಐದು ಕಂಪೆನಿಗಳನ್ನು ಒಳಗೊಂಡಿತ್ತು. ಅದರಲ್ಲಿ ಮೊಟ್ಟಮೊದಲ ಕಂಪೆನಿ ಯುರೋಪಿಯನ್‌ ಗ್ರೆನೇಡಿಯರ್‌ ಆಗಿತ್ತು.

ಭಾರತದಲ್ಲಿ 1757 ರಲ್ಲಿ, ರಾಬರ್ಟ್‌ ಕ್ಲೈವ್‌ ಬಂಗಾಲ ಸ್ಥಳೀಯ ಕಾಲಾಳುಪಡೆ ಒಂದನೇ ರೆಜಿಮೆಂಟ್‌ನ್ನು ಬೆಳೆಸಿದರು. ಅದರಲ್ಲಿ ಎರಡು ಕಂಪೆನಿಗಳು ಗ್ರೆನೇಡಿಯರ್‌ ಕಂಪೆನಿಗಳಾಗಿವೆ. ಇದಾಗಿ 1779ರಲ್ಲಿ ಪುನಃ ರಚನೆಯಾಗುವ ವರೆಗೂ ಬಂಗಾಳ ಸೇನೆಯಿಂದ ಯಾವುದೇ ಗ್ರೆನೇಡಿಯರ್‌ ರೆಜಿಮೆಂಟ್‌ಗಳನ್ನು ರಚಿಸಲಾಗಿಲಿಲ್ಲ.

ಅನಂತರದ ದಿನಗಳಲ್ಲಿ ಬಾಂಬೆ ಸೈನ್ಯವು ಹಲವಾರು ಸಿಪಾಯಿ ಬೆಟಾಲಿಯನ್‌ಗಳನ್ನು ಒಳಗೊಂಡು, ಪ್ರತಿಯೊಂದು ಒಂದು ಅಥವಾ ಎರಡು ಗ್ರೆನೇಡಿಯರ್‌ ಕಂಪೆನಿಗಳಾಗಿ ರಚನೆಯಾಯಿತು. ಇವುಗಳನ್ನು ಬಾಂಬೆ ಸಿಪಾಯಿಯ ಬೆಟಾಲಿಯನ್‌ಗಳ ಗ್ರೆನೇಡಿಯರ್‌ ಕಂಪೆನಿಗಳನ್ನು ಒಳಗೊಂಡ ಸಂಯೋಜಿತ ಬೆಟಾಲಿಯನ್‌ನ ಆಗಿ ಕೊಡಿಸಲಾಯಿತು. 1778ರಲ್ಲಿ ಪ್ರಸಿದ್ಧ ಐತಿಹಾಸಿಕ ಯುದ್ಧಗಳ ಸಾಲಿನಲ್ಲಿ ನಿಲ್ಲುವ ತಲೇಗಾಂವ್‌ ಯುದ್ಧದಲ್ಲಿ ವಿಜಯ ಪತಾಕೆಯನ್ನು ಹಾರಿಸಿತ್ತು. ಈ ಸಂಯೋಜಿತ ಬೆಟಾಲಿಯನ್ನ ಕಾರ್ಯಕ್ಷಮತೆ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಬಾಂಬೆ ಪ್ರಸಿಡೆನ್ಸಿ ಗ್ರೆನೇಡಿಯರ್‌ ಬೆಟಾಲಿಯನ್‌ ಅನ್ನು ಶಾಶ್ವತವಾಗಿ ವರ್ಧಿಸಲು ಆದೇಶಿಸಿತು. ಮಾರ್ಚ್‌ 12, 1779 ರಂದು ಮೊದಲ ಬಾರಿಗೆ ಮೂವತ್ತಾರು ವರ್ಷಗಳ ಹಿಂದಿನ ಬ್ರಿಟಿಷ್‌ ಬೆಟಾಲಿಯನ್‌ ಗೆ “ಗ್ರೆನೇಡಿಯರ್‌” ಎಂದು ಕರೆಯುವ ಗೌರವವನ್ನು ನೀಡಲಾಯಿತು.

ಬಾಂಬೆಯ ಗವರ್ನರ್‌ಜನರಲ್‌ ನವೆಂಬರ್‌ 12, 1779ರಲ್ಲಿ ಈ ಆದೇಶವನ್ನು ಹೊರಡಿಸಿದರು. ಅದರ ಪ್ರಕಾರ ಐದು ರೆಜಿಮೆಂಟ್‌ಗಳ ಗ್ರೆನೇಡಿಯರ್‌ ಕಂಪೆನಿಗಳು ಸೇರಿ ವಿಶ್ವದ ಮೊಟ್ಟ ಮೊದಲ ಗ್ರೆನೇಡಿಯರ್‌ ರೆಜಿಮೆಂಟ್‌ ಅನ್ನು ರೂಪಿಸಿದವು. ಭಾರತದ ಅತ್ಯುನ್ನತ ಪದಕವಾದ ಪರಮವೀರ ಚಕ್ರಗಳನ್ನು ಪಡೆದಿರುವ ಗ್ರೆನೇಡಿಯರ್‌ರೆಜಿಮೆಂಟ್‌ಗೆ ವಿಶೇಷ ಗೌರವವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರೆನೇಡಿಯರ್ಸ್‌ನೊಂದಿಗೆ ಸೇವೆಸಲ್ಲಿಸಿದ ಬ್ರಿಟಿಷ್‌ ಅಧಿಕಾರಿಗಳು ನಾಲ್ಕು ವಿಕ್ಟೋರಿಯಾ ಕ್ರಾಸ್‌ಗಳನ್ನು ಗೆದ್ದು ಸಾಧನೆ ಮಾಡಿದ್ದು ವಿಶೇಷ. ಪ್ರತೀ ಗಾರ್ಡ್‌ ನ ರೆಜಿಮೆಂಟ್‌ನ ಸಾರ್ವಭೌಮ ಕಂಪೆನಿಯಲ್ಲಿ ಮೊದಲ ಬಾರಿಗೆ ಮಹಿಳೆಯರಿಗೂ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಉನ್ನತ ಘಟಕವು ಸಾಮಾನ್ಯವಾಗಿ ಬೆಟಾಲಿಯನ್‌ನ ಬಲಿಷ್ಠ ಹಾಗೂ ಎತ್ತರದ ಯೋಧರನ್ನು ಒಳಗೊಂಡಿರುತ್ತದೆ. ಅಂತಹ ಯೋಧರು ಸರಾಸರಿ 6 ಫೀಟ್‌, 2 ಇಂಚ್‌ ಇರುತ್ತಾರೆ.

ದಿ ಗ್ರೆನೇಡಿಯರ್‌ ರೆಜಿಮೆಂಟ್‌ ಮೊದಲನೆಯ ಮಹಾಯುದ್ಧದ ಮುನ್ನವೇ 17 ಪ್ರಮುಖ ಯುದ್ಧ ಗೌರವಗಳನ್ನು ಗಳಿಸಿತ್ತು. ಮೊದಲ ಮತ್ತು 2ನೇ  ಮಹಾಯುದ್ಧದಲ್ಲಿ ರೆಜಿಮೆಂಟ್‌ ಸುಮಾರು 22 ಗೌರವಗಳನ್ನು ಜಯಸಿತು. 2015ರಲ್ಲಿ 2ನೇ ಮಹಾಯುದ್ಧವನ್ನು ಕೊನೆಗೊಳಿಸಿದ ಯುರೋಪಿನಲ್ಲಿ ವಿಜಯದ 20ನೇ ವರ್ಷಾಚರಣೆಯ ನೆನಪಿಗೆ ನಡೆದ ಮಾಸ್ಕೋ ವಿಜಯ ದಿನದಂದು ದಿ ಗ್ರೆನೇಡಿಯರ್‌ ರೆಜಿಮೆಂಟ್‌ನ ಗ್ರೇನೆಡಿಯರ್ಸ್‌ಗಳು ನಮ್ಮ ಭಾರತವನ್ನು ಪ್ರತಿನಿಧಿಸಿದ್ದರು.

ಸಹನಾ

ತುಮಕೂರು ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.