ಕನಸೆಂಬ ಮಾಯಾಲೋಕ: ಪ್ರಾಚೀನ ರೋಮ್‌ ಸಾಮ್ರಾಜ್ಯ ಮತ್ತು ಕನಸು


Team Udayavani, Jul 30, 2020, 8:07 PM IST

Digitallll

ಅದೊಂದು ದೊಡ್ಡ ಪರ್ವತ ನಾನಲ್ಲಿ ನಿಂತು ಕೆಳನೋಡುತ್ತಿದ್ದೆ ಮತ್ತೆ ಏನೋ ಯೋಚನೆ ಮಾಡಿ ಒಂದಡಿ ಮಂದಿಟ್ಟೆ, ದೊಪ್‌ ಎಂದು ಕೆಳಕ್ಕೆ ಬಿದ್ದೆ.

ಹೃದಯಬಡಿತ ಜೋರಾಗುತ್ತಲೇ ಇದೆ, ಬೆವೆತು ಆ ತಕ್ಷಣಕ್ಕೆ ಎದ್ದು ಬಿಟ್ಟೆ. ನೋಡಿದರೆ ಬರಿ ಕನಸಷ್ಟೇ. ಈ ಕನಸು ಎಷ್ಟು ಮಾಯೆ, ನಾನಿಲ್ಲೇ ಇದ್ದರೂ ದೂರದ ಮನೆಗೆ ಅರೆಗಳಿಗೆಯಲ್ಲಿ ಹೋಗಿ ಬರುತ್ತೇನೆ.

ಇಷ್ಟದ ಸ್ಥಳಗಳಲ್ಲಿ ನಿರ್ಭಿತಿಯಿಂದ ಸಂಚರಿಸುತ್ತೇನೆ. ಅದೇ ರೀತಿ ಒಳ್ಳೆ ಕನಸು ಬೀಳದೆ ಇಂತಹ ಭಯದ ಕನಸು ಬಿದ್ದರೆ ತಟ್ಟನೆ ಎದ್ದು ಸಹ ಕೂರುತ್ತೇವೆ. ಕನಸಿನಲ್ಲಿ ಮೇಲಿಂದ ಕೆಳಕ್ಕೆ ಬೀಳುವುದು, ಯಾರೋ ಅಟ್ಟಿಸಿಕೊಂಡು ಬಂದಂತಾಗುವುದು ಇಂತಹ ವಿಚಿತ್ರ ಕನಸಿಗೂ ವೈಜ್ಞಾನಿಕ ಕಾರಣಗಳಿವೆ.

ಪ್ರಾಚೀನ ರೋಮ್‌ ಸಾಮ್ರಾಜ್ಯದಲ್ಲಿ ಕನಸು ದೇವರು ಮುಂದಾಗಬಹುದಾದ ಘಟನೆಯ ಕುರಿತು ನೀಡಿದ ಸೂಚನೆ ಎಂದು ನಂಬಲಾಗುತ್ತಿತಂತೆ. ಅದೇ ರೀತಿ ಅಂದಿನ ಕನಸೆಲ್ಲ ಕಪ್ಪು ಬಿಳುಪಿನ ಛಾಯೆಯಿಂದ ಸೃಷ್ಟಿಯಾಗುತ್ತಿತಂತೆ. ಆದರೆ ಇಂದಿನ ವಿಜ್ಞಾನಿಗಳು, ಕವಿಗಳು, ಕಥೆಗಾರರಿಗೆ ಈ ಕನಸು ಪ್ರೇರಣೆಯಿದ್ದಂತೆ.

ಕನಸೆಂಬ ಮರೆಗುಳಿ
ನಾವು ಕಾಣುವ ಕನಸ್ಸೆಲ್ಲವು ನೆನಪುಳಿಯಲಾರದು ಬದಲಾಗಿ ಕೆಲವೊಂದು ಘಟನೆ, ಸನ್ನಿವೇಷವಷ್ಟೇ ನೆನಪುಳಿಯುತ್ತದೆ. ಆದರೆ ಬೆಳಗ್ಗೆ ಕನಸು ನೆನಪಾದರೆ ಈಡೀ ರಾತ್ರಿ ಅದೇ ಕನಸು ಬಿದ್ದಿರಬೇಕೆಂದು ಪರಿಭ್ರಮಿಸುತ್ತಾರೆ. ಆದರೆ ನಾವು ಕಾಣುವ ಕನಸಿನಲ್ಲಿ ಶೇ. 10ರಷ್ಟು ಮಾತ್ರ ನಮಗೆ ನೆನಪಿರುತ್ತದೆ ಉಳಿದವುಗಳೆಲ್ಲ ನಾವು ಮರೆತುಬಿಡುತ್ತೇವೆ. ಆದರೆ ತೀರ ಮಾನಸಿಕ ಸಮಸ್ಯೆಗೆ ಒಳಪಟ್ಟಿದ್ದರೆ ನಿಮಗೆ ಕನಸು ಬಿದ್ದರೂ ಅದು ನೆನಪಿರಲಾರದು. ಮರೆಯಬೇಕೆಂದ ವ್ಯಕ್ತಿ ಮತ್ತು ತುಂಬಾ ಇಷ್ಟ ಪಡುವವರು ನಮ್ಮೊಂದಿಗಿಲ್ಲದಾಗ ಅವರ ಕನಸೇ ಬೀಳುತ್ತದೆ. ಕೆಲವರು ಬಲವಂತವಾಗಿ ಕನಸು ಕಾಣಲು ಪ್ರಯತ್ನಿಸುತ್ತಾರೆ.

ಕುರುಡರಿಗೂ ಕನಸುಬೀಳುತ್ತಾ
ಬಹುತೇಕರಿಗೆ ಇಂತಹದೊಂದು ಪ್ರಶ್ನೆ ಕಾಡಿರುತ್ತದೆ. ಕನಸು ಎಲ್ಲರಿಗೂ ಬೀಳುವುದು ಸಹಜ, ಆದರೆ ಬೀಳುವ ರೀತಿಯಲ್ಲಿ ವ್ಯತ್ಯಾಸವಿರುತ್ತದೆ. ಅವರು ಹುಟ್ಟು ಕುರುಡರಾದರೆ ಧ್ವನಿ, ಸ್ಪರ್ಷ, ವಾಸನೆಯ ಗ್ರಹಿಕೆಯೊಂದಿಗೆ ಕನಸು ಬೀಳುತ್ತದೆ. ಅರೆ ಕುರುಡ (ಒಂದೇ ಕಣ್ಣಿರುವ)ರಿಗೆ ಸಾಮಾನ್ಯರಂತೆ ಕನಸು ಬೀಳುತ್ತದೆ.

ಕನಸಿಗೆ ಕಾರಣವೇನು?
ಕನಸು ಬೀಳಲು ಇದೇ ಕಾರಣ ಎಂದು ಬಹುತೇಕರಿಗೆ ತಿಳಿದಿರಲಾರದು. ಕೆಲಸದೊತ್ತಡ, ಕೌಟಂಬಿಕ ಸಮಸ್ಯೆ ಇತರ ಮಾನಸಿಕ ಒತ್ತಡದಿಂದ ಭಯ ಮಿಶ್ರಿತ ಕನಸು ಬೀಳುತ್ತದೆ. ಯಾರೊ ನಮ್ಮನ್ನು ದೂಡಿದಂತಾಗುವುದು, ಮೇಲಿಂದ ಕೆಳಬಿದ್ದಂತೆ ಕನಸು ಬೀಳಲು ಇದೇ ಒತ್ತಡಗಳೇ ಕಾರಣವಾಗಿದೆ. ಹಗಲಿನಲ್ಲಿ ನಾವು ಆಡಬೇಕೆಂದ ಮಾತುಗಳು ಹಾಗೇ ಉಳಿದಾಗಲೂ ಅದೇ ಸನ್ನಿವೇಶ ಮರುಕಳಿಸಿದಂತಾಗಿ ಬಾಯಿಬಿಟ್ಟು ಕನಸಿನಲ್ಲಿಯೇ ಗೊಣಗಾಡುತ್ತೇವೆ.

ನಿದ್ದೆಯಲ್ಲಿ ಮಾತನಾಡಲು ಸಹ ಇದೇ ಕಾರಣ ಎನ್ನಬಹುದು. ಭಯ, ನಿರುತ್ಸಾಹ, ಒಂಟಿತನ ಕಾಡುತ್ತಿದ್ದರೆ ನಾವು ಕಾಡಿನ ನಡುವೇ ಒಬ್ಬಂಟಿಯಾದಂತೆ ಅಥವಾ ಯಾರೋ ನನ್ನನ್ನು ಅಟ್ಟಿಸಿಕೊಂಡು ಬಂದಂತೆ ಕನಸು ಬೀಳುತ್ತದೆ. ಕೆಲವೊಂದು ಮರೆಯಲಾರದ ಘಟನೆ, ಹೇಳಿಕೊಳ್ಳಲಾಗದ ವಿಷಯಗಳು ವಿಚಿತ್ರ ಕನಸಿಗೆ ಕಾರಣವಾಗುತ್ತದೆ.

ಪರಿಹಾರ: ಕನಸಿಗೂ ಮಾನಸಿಕ ಒತ್ತಡಕ್ಕೂ ಸಂಬಂಧವಿದ್ದು ಅದನ್ನು ಸರಿಪಡಿಸಲು ನೀವು ನಿತ್ಯ ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ಮಲಗುವ ಮುನ್ನ ಕಂಪ್ಯೂಟರ್‌, ಮೊಬೈಲ್‌ಬಳಕೆಯನ್ನು ಕನಿಷ್ಠ ಅರ್ಧ ಗಂಟೆಗೆ ಮೊದಲು ನಿಲ್ಲಿಸುವುದು ಉತ್ತಮ.

-ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.