ಭ್ರಷ್ಟಾಚಾರ ಇದೆಂದಿಗೂ ಮಗಿಯದ ಕಥೆ…


Team Udayavani, Mar 31, 2021, 8:35 PM IST

Corruption

ಅನಾದಿ ಕಾಲದಿಂದಲೂ ಉತ್ತಮ ಚಾರಿತ್ರೆ, ಸಾಂಸ್ಕೃತಿಕತೆ ಮತ್ತು ತನ್ನದೇ ಆದ ಗೌರವ ಹೊತ್ತು ಮೆರೆವ ಭಾರತ ದೇಶಕ್ಕೆ ಸದಾ ಕಪ್ಪುಚುಕ್ಕಿಯಂತೆ ಎಲ್ಲೆಡೆ ವಿಜೃಂಭಿಸುತ್ತಿರುವ ಮತ್ತು ಸಮಾಜದ ಎಲ್ಲ ಭಾಗಗಳಲ್ಲೂ ಸ್ವತಂತ್ರವಾಗಿ ತನ್ನ ಕರಿನೆರಳನ್ನು ಚೆಲ್ಲಿರುವ ಭ್ರಷ್ಟಾಚಾರವೆಂಬ ಪಿಡುಗಿನ ಕತೆ ಇಂದಿನದಲ್ಲ.

ಪ್ರತೀ ಸಾರಿ ಭ್ರಷ್ಟಾಚಾರದ ಬಗ್ಗೆ ಸದನಗಳಲ್ಲಿ ಚರ್ಚೆಯಾದರು ಭ್ರಷ್ಟಾಚಾರಕ್ಕೆ ಮಾತ್ರ ಶಾಶ್ವತ ತಡೆಗೊಡೆ ಕಟ್ಟಿದ ಸರದಾರರು ಎಲ್ಲೂ ಕಾಣುವುದೇ ಇಲ್ಲ. ಇದು ವಿಪರ್ಯಾಸವಾಗಿದೆ.

ರಾಜಪ್ರಭುತ್ವದ ಮತ್ತು ಬ್ರಿಟಿಷ್‌ ಆಡಳಿತದ ಸಮಯದಲ್ಲಿ ಭ್ರಷ್ಟಾಚಾರಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿರಲಿಲ್ಲ. ಕಾರಣ ಅಲ್ಲಿಯ ಧರ್ಮ, ರಾಜನೀತಿ, ಪಾಪ-ಪುಣ್ಯ, ನ್ಯಾಯಗಳಂತಹ, ನಿಯಮಾವಳಿಗಳ ಸಮಾಜದ ಸರಪಳಿ ಭ್ರಷ್ಟಾಚಾರಕ್ಕೆ ಅವಕಾಶವನ್ನು ನೀಡುತ್ತಿರಲಿಲ್ಲ. ಹಾಗಾಗಿ ರಾಷ್ಟ್ರದಲ್ಲಿ ಸಮಾನತೆಯು ಕಂಡುಬರುತ್ತಿತ್ತು. ಅಲ್ಲದೆ ಭ್ರಷ್ಟಾಚಾರ ಕಂಡು ಬಂದಲ್ಲಿ ಕಠಿನ ಶಿಕ್ಷೆ ನೀಡಲಾಗುತ್ತಿದ್ದರಿಂದ ಯಾರು ಭ್ರಷ್ಟಾಚಾರದ ಗೊಡವಿಗೆ ಹೋಗುವ ಪ್ರಯತ್ನವು ಮಾಡುತ್ತಿರಲಿಲ್ಲ. ನಮ್ಮ ರಾಷ್ಟ್ರದಲ್ಲಿ ಸರಕಾರ ನೀಡುವ 1 ರೂ. ಅಲ್ಲಿ ಕೇವಲ 15 ಪೈಸೆಯಷ್ಟು ಮಾತ್ರ ಸರಿಯಾಗಿ ಸೇರಬೇಕಾದ ಸ್ಥಳ, ವ್ಯಕ್ತಿಯನ್ನು ತಲುಪುತ್ತದೆ. ಮಿಕ್ಕ 85 ಪೈಸೆಯಷ್ಟು ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ಭ್ರಷ್ಟಾಚಾರದ ಒಟ್ಟು ನಿಲುವನ್ನು ಹಿಂದೆ ಪ್ರಧಾನಮಂತ್ರಿಯಾಗಿದ್ದ ರಾಜೀವ್‌ ಗಾಂಧಿಯವರೇ ಸ್ವತಃ ಭ್ರಷ್ಟಾಚಾರದ ಸ್ಪಷ್ಟತೆಯನ್ನು ವ್ಯಕ್ತಪಡಿಸಿದ್ದರು.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ
ನಮ್ಮ ಅಜ್ಜ ಅಪ್ಪಂದಿರ ಕಾಲದಿಂದಲೂ ಭಾರತ ಒಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೇ ಆಗಿದೆ. ಭಾರತ ಇಂದಿಗೆ ಪೂರ್ಣವಾಗಿ ಅಭಿವೃದ್ಧಿ ಹೊಂದಿದ್ದರೆ ಭಾರತ ಇಂದು ಅಮೆರಿಕ, ಚೀನದಂತಹ ರಾಷ್ಟ್ರಗಳಿಗೆ ಸಮಸ್ಥಾನಿ ಆಡಳಿತ ನಡೆಸುತ್ತಿತ್ತು. ದುರಾದೃಷ್ಟ ಎಂದರೆ ಭಾರತದ ರಾಜಕೀಯ ಆಶ್ವಾಸನೆಗಳು ಮಾತ್ರ ಭಾರತವನ್ನು ಶ್ರೀಮಂತಗೊಳಿಸುತ್ತಿವೆ. ಯಾವುದೇ ಒಬ್ಬ ವ್ಯಕ್ತಿ ಅಥವಾ ಅಧಿಕಾರಿ ತನ್ನ ವೃತ್ತಿಯಲ್ಲಿ ತನ್ನ ಅಧಿಕಾರದ ಮಿತಿಯನ್ನು ಮೀರಿ ಸಾರ್ವಜನಿಕರಿಂದ ಹಣ, ವಸ್ತು, ಕಾಣಿಕೆ, ಮತ್ತು ತನ್ನ ವೈಯಕ್ತಿಕ ಕಾರ್ಯಗಳಿಗಾಗಿ ಅಧಿಕಾರವನ್ನು ಬಳಸಿಕೊಂಡರೆ ಅದು ಭ್ರಷ್ಟಾಚಾರದ ರೂಪವೊಂದು ಪರಿಗಣಿಸಲಾಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ನಮ್ಮ ದೇಶದಲ್ಲಿ ರಾಜಕಾರಣಿ, ಮಂತ್ರಿಮಂಡಲ, ಸಾರ್ವಜನಿಕ ಸೇವಕರು ಉನ್ನತ ಹು¨ªೆಯ ಅಧಿಕಾರಿಗಳಂತಹ ಪ್ರತಿಯೊಬ್ಬರ ಮೇಲೆ ಭ್ರಷ್ಟಾಚಾರದ ಕರಿನೆರಳು ಬೀಳುತ್ತಲೇ ಬರುತ್ತಿರುತ್ತಿದೆ. ಭಾರತ ಇಂದಿಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದೇ ಪರಿಗಣಿಸಲಾಗುತ್ತಿದೆ.

ವಾಸ್ತವದ ಭ್ರಷ್ಟಾಚಾರದ ಸ್ಪಷ್ಟತೆ
ಏಷ್ಯಾ ಖಂಡದ180 ರಾಷ್ಟ್ರಗಳ ಪೈಕಿ, ಭ್ರಷ್ಟಾಚಾರದಲ್ಲಿ ನಂಬರ್‌ 1 ಸ್ಥಾನದಲ್ಲಿ ರಾರಾಜೀಸುತ್ತಿದೆ. 2019ರಲ್ಲಿ 80ನೇ ಸ್ಥಾನದಲ್ಲಿದ್ದ ಭಾರತವು, 2020ರಲ್ಲಿ 86ನೇ ಸ್ಥಾನಕ್ಕೆ ಏರಿದೆ ಸಿ.ಪಿ.ಐ. ವರದಿಯ ಪ್ರಕಾರ ಭಾರತದಲ್ಲಿ ಶೇ. 39ರಷ್ಟು ಜನರು ಸರಕಾರಿ ಸೇವೆಗಳನ್ನು ಪಡೆಯಲು ಲಂಚ ನೀಡಿದ್ದಾರೆ ಮತ್ತು ಶೇ. 32ರಷ್ಟು ಜನ ಸರಕಾರಿ ಸೇವೆಗಾಗಿ, ಸರಕಾರದ ನೀತಿಗಳ ಉಲ್ಲಂಘನೆ ಮಾಡಿ ತಮ್ಮ ವೈಯಕ್ತಿಕ ಸಂಪರ್ಕವನ್ನು ಬಳಸಿಕೊಂಡಿದ್ದಾರೆ.

ಯಾರಿಗೇನಾದರೂ ನಮಗೇನು, ನಾನು ಹಣ ಮಾಡಿದರೆ ಸಾಕು ಎಂಬ ಮನೋಭಾವ ಇರುವ ವ್ಯಕ್ತಿಗಳು ಇದ್ದಷ್ಟೂ ದೇಶದಲ್ಲಿ ಭ್ರಷ್ಟತೆ ಹೆಚ್ಚುತ್ತಲೇ ಹೋಗುತ್ತದೆ. ಭಾರತದಲ್ಲಿ ಭ್ರಷ್ಟಾಚಾರದಿಂದ ಹಣ ಗಳಿಸಿ ಅನ್ಯ ರಾಷ್ಟ್ರದಲ್ಲಿ ಹೊಟೇಲ್‌ ನಿರ್ಮಿಸುವುದು, ಕಪ್ಪು ಹಣವನ್ನು ಆ ದೇಶದ ಬ್ಯಾಂಕುಗಳಲ್ಲಿ ಇರಿಸಿ, ನಾಟಕ ಆಡುವವರೆದುರು ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ತುಂಬಾ ಉದಾಹರಣೆಗಳಿವೆ.

ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಮೂಲ ಸೌಕರ್ಯಗಳೆಲ್ಲ ಹಣವಿದ್ದವರ ಪಾಲಾದಾಗ, ಸಾರ್ವಜನಿಕರು ಅವಶ್ಯವಾಗಿ ಸರಕಾದ ಸೌಲಭ್ಯ ಗಳಿಂದ ವಂಚಿತರಾಗುವರು. ದುಡ್ಡಿದ್ದವರು ತಮ್ಮ ಸ್ವಾರ್ಥಕ್ಕಾಗಿ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡಾಗ ದೇಶದಲ್ಲಿ ಶಿಕ್ಷಣದ ಕೊರತೆ, ಸಂಪನ್ಮೂಲಗಳ ಕೊರತೆ, ಹಣದ ತೀವ್ರ ಅಗತ್ಯತೆ ಸೃಷ್ಟಿಯಾಗುತ್ತವೆ. ಹೀಗೆ ಮೊದಲಾದ ಕಾರಣಗಳಿಂದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಸಿಗುತ್ತಿದೆ. ಮುಖ್ಯವಾಗಿ ದೇಶ ಸ್ಥಿರತೆಯಲ್ಲಿ ವ್ಯತ್ಯಾಸ ಕಂಡುಬರುವುದು. ನಮ್ಮ ದೇಶದ ಹಣವನ್ನು ಈ ರೀತಿಯಲ್ಲಿ ಕೊಳ್ಳೆ ಹೊಡೆದು ಬೇರೆ ದೇಶದ ಮಾಲ್‌, ಹೊಟೇಲ್‌ಗ‌ಳನ್ನು ನಿರ್ಮಿಸಿ ಸ್ವದೇಶಕ್ಕೆ ಉದ್ಯೋಗಗಳ ಬರ ಸೃಷ್ಟಿಸುತ್ತಾರೆ. ಹೀಗಾಗಿ ಆರ್ಥಿಕತೆಯಲ್ಲಿ ಏರು ಪೇರಿನ ಸಮಸ್ಯೆಗಳನ್ನು ಸಾರ್ವಜನಿಕರೇ ಅನುಭವಿಸುಂತ್ತಾಗಿದೆ.

ನನ್ನದೊಂದು ಸಲಹೆ
ರಾಜ್ಯದಲ್ಲಿನ ಅನ್ಯಾಯ, ಅಕ್ರಮ ,ಅವ್ಯವಹಾರಗಳ ವಿರುದ್ದವಾಗಿ ನಿಲ್ಲಲು, ಕೆ.ಅರ್‌.ಎಸ್‌. (ಕರ್ನಾಟಕ ರಾಷ್ಟ ಸಮಿತಿ) ಅಡಿಯಲ್ಲಿ ಭ್ರಷ್ಟಾಚಾರ ತಡೆ ಸಮಿತಿಯನ್ನು, ಪ್ರತೀ ತಾಲೂಕಿನಲ್ಲೂ ರಚಿಸಿಬೇಕು. ವರ್ಷಕ್ಕೆ, ತಿಂಗಳಿಗೆ ಇಂತಿಷ್ಟು ಮಿತಿಯ ಭ್ರಷ್ಟರ ಪಟ್ಟಿಯನ್ನು ಸರಕಾರಕ್ಕೆ ನೀಡಬೇಕು ಎಂಬ ನೀತಿ ಮಾಡಬೇಕು. ಒಂದು ವೇಳೆ ಆ ಸಮಿತಿಗಳ ನಡುವೆ ಭ್ರಷ್ಟತೆ ನಡೆದಿದ್ದರೂ ಸಮಿತಿಯ ವರದಿಯನ್ನು ಸ್ವೀಕರಿಸಿ, ಪ್ರತೀ ಮೂರು ತಿಂಗಳಿಗೊಮ್ಮೆ, ಒಂದು ತಿಂಗಳ ಕಾಲಾವಧಿಯಲ್ಲಿ ತಾಲೂಕಿನ ಪ್ರತೀ ಹಳ್ಳಿಯ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮಸ್ಥರನ್ನು ವಾಸ್ತವಿಕ ವಿಷಯದ ಬಗ್ಗೆ ಮಾಹಿತಿ ನೀಡುವುದು ಮತ್ತು ಅವರ ದೂರುಗಳನ್ನು ತೆಗೆದುಕೊಳ್ಳಬೇಕು.

ಇದಾಗ್ಯೂ ಯವುದೇ ಸಾರ್ವಜನಿಕರಿಂದ ಸಂಬಂಧಪಟ್ಟ ಇಲಾಖೆ, ಕಚೇರಿಗಳಿಗೆ ದೂರು ಬಂದು ಅದು ದೃಢಪಟ್ಟರೆ ಆ ದೂರಿನ ಅಡಿಯಲ್ಲಿ ಬರುವ ಸಮಿಗೆ ಮತ್ತು ಪ್ರತಿಯೊಬ್ಬ ಸದಸ್ಯನಿಗೆ ಪರಿಣಾಮಕಾರಿ ಶಿಕ್ಷೆಯನ್ನು ನೀಡಬೇಕು. ಹೀಗೆ ಆದಲ್ಲಿ ಮಾತ್ರ ಮುಂಬರುವ ದಿನಗಳಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಭ್ರಷ್ಟಾಚಾರ ಎಂಬ ಪಿಡುಗನ್ನು ಸಂಪೂರ್ಣವಾಗಿ ನಾಶ ಮಾಡಬಹುದಾಗಿದೆ.

 ಶಿವರಾಜ ಎಂ.ಕೆ., ಮಾಚೇನಹಳ್ಳಿ 

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.