ಇಂಜಿನಿಯರ್‌ ಹುದ್ದೆ ಬಿಟ್ಟು ಮಣ್ಣಿನ ಮಗನಾದ ಯುವಕ; ವರ್ಷಕ್ಕೆ ಒಂದೂವರೆಯಿಂದ ಎರಡು ಕೋಟಿ ಆದಾಯ

Team Udayavani, Jun 8, 2020, 7:40 AM IST

ಇಂಜಿನಿಯರ್‌ ಹುದ್ದೆ ಬಿಟ್ಟು ಮಣ್ಣಿನ ಮಗನಾದ ಯುವಕ; ವರ್ಷಕ್ಕೆ ಒಂದೂವರೆಯಿಂದ ಎರಡು ಕೋಟಿ ಆದಾಯ

ಈಗಿನ ಕಾಲದಲ್ಲಿ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವುದು ಜೀವಮಾನದ ಮಹದಾಸೆಯಾಗಿರುತ್ತದೆ.

ಆದೂ ಬಿಟ್ಟರೇ ಡಾಕ್ಟರ್‌ ಅಥವಾ ಇಂಜಿನಿಯರ್‌ ಆಗಿ ಉತ್ತಮ ಜೀವನ ಕಟ್ಟಿಕೊಳ್ಳಬೇಕೆಂಬ ಕನಸು ಕಂಡಿರುತ್ತಾರೆ.

ಕೆಜಿಗೆ ಹೋಗುವ ಮಕ್ಕಳ ಬಾಯಿಯಲ್ಲಿಯೂ ನಾನು ದೊಡ್ಡವನಾದ ಮೇಲೆ ಇಂಜಿನಿಯರ್‌ ಡಾಕ್ಟರ್‌ ಆಗಬೇಕೆಂಬ ಉದ್ಗಾರಗಳೇ ಬರುತ್ತೇ. ಈ ಬೆಳವಣಿಗೆ ಆಧುನಿಕ ಜೀವನ ಶೈಲಿಯ ಪರಮಾವಧಿಯೋ ಅಥವಾ ಪೋಷಕರ ಪ್ರತಿಷ್ಟಿತೆಯೋ ಒತ್ತಡದ ಮಾತುಗಳೇ ಅರಿಯುತ್ತಿಲ್ಲ.

ಆದರೆ ಇಂತವರೇ ಮಧ್ಯೆ ನಗರದನ ಜೀವನಕ್ಕೆ ಟಾಟಾ ಬೈ ಹೇಳಿ, ಅದರಿಂದ ಎದುರಾಗುವ ಜಂಜಾಟಗಳನ್ನು ಗಂಟು ಮೂಟೆ ಕಟ್ಟಿ ಎಸೆದು ದೇಶದ ಬೆನ್ನೆಲಬಾಗಿರುವ ಕೃಷಿ ಕ್ಷೇತ್ರವನ್ನರಿಸಿ ಬಂದು ಬಂಗಾರದ ಜೀವನ ಕಟ್ಟಿಕೊಂಡಿದ್ದಾರೆ. ಹಾಗಾದರೆ ಆತ ಯಾರು? ಕೈಯಲ್ಲಿದ್ದ ಕೆಲಸ ಬಿಟ್ಟು  ಭೂ ತಾಯಿಯ ಮಡಿಲು ಸೇರಿದ್ದರ ಉದ್ದೇಶವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಸರಕಾರಿ ನೌಕರಿ ಬಿಟ್ಟ  ಯುವಕ
ಮೂಲತ: ರಾಜಸ್ಥಾನದ ಮೂಲದ ಜೈಸಲ್ಮೇರ್‌ ಗ್ರಾಮದನಾಗಿರುವ ಹರೀಶ್‌ ಧಾಂಡೇವಿ ಕೈಯಲ್ಲಿದ್ದ ಸರಕಾರಿ ಇಂಜಿನಿಯರ್‌ ಕೆಲಸ ಬಿಟ್ಟು  ಕೃಷಿಯತ್ತ ಮುಖಮಾಡಿದ್ದಾರೆ. ಈ ವೇಳೆ  ಬಂಧು ಬಳಗದವರಿಂದ ಸಾಕಷ್ಟು  ಟೀಕೆ-ಪ್ರಹಾರಗಳು ವ್ಯಕ್ತವಾದರೂ ತನ್ನ ಹಠ ಬಿಡದೇ ಕೃಷಿ ಕ್ಷೇತ್ರದಲ್ಲಿ  ಸಾಧನೆ ಮಾಡಿಯೇ ತೀರುತ್ತೇನೆ ಎಂದು ಮುಂದಾಗಿದ್ದಾರೆ.

ಹಾಗೇ ವ್ಯವಸಾಯ ಮಾಡಲು ಟೊಂಕ ಕಟ್ಟಿದ  ಹರೀಶ್‌ ಪ್ರಯತ್ನಕ್ಕೆ  ಫ‌ಲ ಸಿಕಿದ್ದು, ಸದ್ಯ ವರ್ಷಕ್ಕೆ ಸುಮಾರು ಒಂದೂವರೆಯಿಂದ ಎರಡು ಕೋಟಿ ಆದಾಯ ಗಳಿಸುತ್ತಿದ್ದಾರೆ . ಸ್ವತ: ಕುಟುಂಬದವರೇ ಗವರ್ನಮೆಂಟ್‌ ನೌಕರಿ ಬಿಟ್ಟು  ವ್ಯವಸಾಯ ಮಾಡುತ್ತೇನೆ ಎಂದು ಹೊರಟಾಗ ದಡ್ಡ  ಮೂರ್ಖ ಜೀವನ ಹಾಳು ಮಾಡಿಕೊಳ್ಳತ್ತಾನೆ ಎಂದು ದೂಷಿಸಿದ್ದರು ಎನ್ನುವ ಹರೀಶ್‌ ಅಂದು ಯಾರೇ ಏನೇ ಹೇಳಿದರೂ ಅದನ್ನು ಜೀರ್ಣಿಸಿಕೊಂಡು, ನನಗೆ ಇಷ್ಟ ಆದ ಕೆಲಸವನ್ನೇ ಮಾಡುತ್ತೇನೆ ಎಂಬ ಛಲಕ್ಕೆ ಬಿದ್ದದಕ್ಕೂ ಸಾರ್ಥಕವಾಯಿತು ಎನ್ನುತ್ತಾರೆ.

ಸ್ಪೂರ್ತಿಯಾದ ಕೃಷಿ ವಸ್ತು ಪ್ರದರ್ಶನ
ಹರೀಶ್‌ ದೆಹಲಿಯಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನಕ್ಕೆ ಒಮ್ಮೆ ಭೇಟಿ ನೀಡಿದ್ದು,  ಈ ಕೃಷಿ ವಸ್ತು ಪ್ರದರ್ಶನವೇ ಅವರು ವ್ಯವಸಾಯ ಬದುಕಿಗೆ ಅಡಿ ಹಿಡಲು ಸ್ಪೂರ್ತಿ. ಆ ಪ್ರದರ್ಶನಾಲಯಲ್ಲಿ ದೊರೆತ ಮಾಹಿತಿ ಮತ್ತು ಅಲ್ಲಿ  ಪ್ರಸ್ತುತ ಪಡಿಸಲಾಗಿದ್ದ  ರೈತರ ಯಶಸ್ಸಿನ ಚಿತ್ರಣಗಳು ಹರೀಶ್‌ ಅಲ್ಲಿ ಪ್ರೇರಣೆ ತುಂಬಿದ್ದು, ತಾನು ಕೃಷಿ ಕ್ಷೇತ್ರದಲ್ಲಿ  ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟಿಸಿತ್ತು. ಆ ಒಂದು ನಿರ್ಧಾರ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದು,  ಇದೀಗ ಯಶಸ್ಸು  ಮತ್ತು ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದಾರೆ.

ಸ್ವಂತ ಕಂಪನಿ ಪ್ರಾರಂಭ
ಸುಮಾರು ನೂರಾ ಇಪ್ಪತ್ತು ಎಕರೆ ಜಮೀನಿನಲ್ಲಿ ಅಲೋವೆರಾ ಮತ್ತು ಇತರೆ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿರುವ ಹರೀಶ್‌ ಕೃಷಿಯಿಂದ ವರ್ಷಕ್ಕೆ ಸುಮಾರು ಎರಡು ಕೋಟಿಯಷ್ಟು ವಹಿವಾಟು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮದೇ ಸ್ವಂತ ಕಂಪನಿಯನ್ನು ಸಹ ಪ್ರಾರಂಭಿಸಿದ್ದು, ರಾಜಸ್ಥಾನದ ಜೈಸಲ್‌ ಮೇರ್‌ನಿಂದ 45 ಕಿ.ಮೀ. ದೂರದಲ್ಲಿರುವ ಧೈಸರ್‌ನಲ್ಲಿ ನ್ಯೂಟ್ರೇನೋ ಆಗ್ರೋ ಎಂಬ ಕಂಪನಿಯನ್ನು ಆರಂಭಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬೇಡಿಕೆ
ಇನ್ನು ಥಾರ್ ‌ಮರಭೂಮಿಯಲ್ಲಿ ಇವರು ಬೆಳೆದ ಅಲೋವೆರಾ ಇಂದು ಪ್ರಸಿದ್ಧ ಪತಂಜಲಿ ಕಂಪನಿಗೆ ಭಾರಿ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದ್ದು, ಇದರಿಂದ ಪತಂಜಲಿ ಅಲೋವೆರಾ ಜ್ಯೂಸ್‌ ಕೂಡ ತಯಾರಾಗುತ್ತಿದೆ. ಇಲ್ಲಿ ಬೆಳೆದ ಅಲೋವೆರಾ ಒಳ್ಳೆಯ ಗುಣಮಟ್ಟದ್ದಾಗಿರುವುದರಿಂದ ಇವುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅಗಾಧ ಮಟ್ಟದ ಬೇಡಿಕೆ ಇದೆ. ಹರೀಶ್‌ ಅವರು ಬೆಳೆದ ಅಲೋವೆರಾ ಉತ್ತಮ ಗುಣಮಟ್ಟದ್ದಾಗಿರುವುದರಿಂದ ಪತಂಜಲಿ ಕಂಪನಿ ಸೇರಿದಂತೆ ದೇಶ ನಾನಾ ಮೂಲೆಗಳಿಂದ ಎಲೋವೆರ ಎಲೆಗಳಿಗೆ ಬೇಡಿಕೆ ಕೇಳಿ ಬರುತ್ತಿದೆ.

ನೂತನ ಪ್ರಯತ್ನ
ಸಾಮಾನ್ಯವಾಗಿ ಮರುಭೂಮಿಯಲ್ಲಿ ಜೋಳ, ಗೋಧಿ, ಹೆಸರು ಬೆಳೆ , ಸಾಸಿವೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ನಾನು ಹೊಸದನ್ನು ಏನನ್ನಾದರು ಬೆಳೆಯಬೇಕು ಎಂದು ತೀರ್ಮಾನ ಮಾಡಿದ ಹರೀಶ್‌  ಬೇಬಿ ಡೆನಿಸ್‌ ಎಂಬ ಅಲೋವೆರಾ ಬೆಳೆದರು. ಅತ್ಯುತ್ತಮ ಗುಣ ಮಟ್ಟದ ಎಲೆಗಳಾಗಿದ್ದು, ಬ್ರೆಜಿಲ್‌, ಅಮೆರಿಕಾದಲ್ಲಿ ಭಾರಿ ಬೇಡಿಕೆ ಗಳಿಸಿದೆ.  ಆರಂಭದಲ್ಲಿ ಹರೀಶ್‌ 80 ಸಾವಿರದಷ್ಟು  ಅಲೋವೆರಾ ಗಿಡಗಳನ್ನು  ಬೆಳೆದಿದ್ದು, ಈಗ ಅದರ ಪ್ರಮಾಣ 7 ಲಕ್ಷ ದಾಟಿದೆ.  ಒಟ್ಟಾರೆ ಸರಕಾರಿ ನೌಕರಿ ಬಿಟ್ಟು ಅಪ್ಪಟ ರೈತನಾದ ಹರೀಶ್‌ ಮಣ್ಣಿನ ಮಗ ಎನ್ನಿಸಿಕೊಂಡಿದ್ದು, ಇತರೆ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

– ಸುಶ್ಮಿತಾ ಜೈನ್‌, ಹಾಸನ

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.