Smell of First Rain: ಹೊಸಮಳೆಯ ಮೃಣ್ಮಯ ಗಂಧ


Team Udayavani, Apr 24, 2024, 3:33 PM IST

8-uv-fusion

ಕಾಲಕ್ಕನುಸಾರವಾಗಿ ಸಜ್ಜುಗೊಳ್ಳುವುದನ್ನು ಪ್ರಕೃತಿಯನ್ನು ನೋಡಿಯೇ ಕಲಿಯಬೇಕು. ಕುಡಿಯುವ ಸೆಖೆಯಿಂದ ತಂಪಿನ ಶೈತ್ಯದ ಹವಾಗುಣಗಳನ್ನು ಕಾಲಕ್ಕೆ ತಕ್ಕಂತೆ ಪ್ರಕೃತಿಯು ಅನುಸರಿಸಿ ಪಸರಿಸುತ್ತದೆ. ಸೆಖೆಯ ಧಗೆಗೆ ಬಸವಳಿಯುವ ಬಿಸಿಗಾಲದ ಮಧ್ಯಕಾಲದಲ್ಲಿ ಅಲ್ಲೊಂಂದು ಇಲ್ಲೊಂದು ಬೀಸಿದ ಮಳೆ ಸ್ವಲ್ಪಮಟ್ಟಿನ ಬದಲಾವಣೆಯಂತೂ ನೀಡಿವೆ.

ನೀವು ನೋಡಿರಬಹುದು, ಮೊದಲಮಳೆ ಬೀಸುವುದು ಸಂಜೆಯ ಮೇಲೆಯೇ. ಅಲ್ಲಲ್ಲಿ ಬಿಸಿಗಾಳಿಯ ಸುಳಿ ಸುಳಿದು, ತಂಪನೆಯ ಗಾಳಿ ಅಗಂತುಕನಂತೆ ಬಂದು ಧೂಳೆಬ್ಬಿಸಿದಾಗ ಮಳೆಬರುವ ಗುಮಾನಿ ಏರ್ಪಡುವುದು. ಮೊದಲ ಹನಿ ಬಿದ್ದಾಗಲೇ ಸಂಶಯ ನಿವಾರಿಸಿ ಸ್ಪಷ್ಟವಾಗುವುದು.

ಇಷ್ಟಕ್ಕಾಗಲೇ ಗುಡುಗು ತಡವರಿಸಿ ಢವಗುಟ್ಟುವುದು ಮಳೆಯ ಬರುವಿಕೆಯ ಪೂರ್ವರಂಗದ ಸಜ್ಜಿಕೆಯಂತೆಯೇ. ಮೊದಲ ಮಳೆಯ ಹನಿಗಳು ದೊಡ್ಡ ಗಾತ್ರದವು. ಕೆಲವೊಮ್ಮೆ ಮೋಡ ಕರಗುವ ಆತುರದಲ್ಲಿ ಆಲಿಕಲ್ಲಿನ ಮಳೆಯಾಗುವುದೂ ಮೊದಲ ಸೇಚನದಲ್ಲೇ. ಸಂಜೆಯಾಗುವ ಹೊತ್ತಿಗೆ, ಹಗಲು ಆರುವ ಸಂಧ್ಯೆಗೆ, ಜಗತ್ತೆಲ್ಲವೂ ಆತುರದಲ್ಲಿರುವಾಗುವಾಗಲೇ ಮೊದಲ ಮಳೆ ಭೇಟಿ ನೀಡುವುದು.

ಮಳೆ ದಬದಬನೆ ಹನಿಯುವುದು. ಅದು ಹನಿಸುವುದಕ್ಕಿಂತ ಹೆಚ್ಚಿನದೇ. ಗಾಳಿಯಾಡುವ ಹೊತ್ತಿಗೆ ಕಿಟಕಿ ಬಾಗಿಲುಗಳ ಸಂದಿಯಲ್ಲೆಲ್ಲಾ ನುಸುಳಿ ಮಳೆ ಮನ-ಮನೆ ಮುಟ್ಟುವುದು. ಮೂಲೆಯಲ್ಲಿಟ್ಟ, ಜಂತಿಗೆ ನೇತುಹಾಕಿದ, ಮೈಮುದುರಿ ಕುಳಿತಿದ್ದ ಕೊಡೆಗೆ ಮೈಕೊಡವಿ ಜಡ ತೆಗೆಯುವ ಸಮಯ. ರೈನ್‌ ಕೋಟ್‌, ಛತ್ರಿಯ ಆವಶ್ಯಕತೆಯನ್ನು ನೆನಪುಮಾಡುವ ಮಳೆಯದು. ಅರ್ಧ ತಾಸಿನ ಪಾಡಿಗೆ ಈ ಮಳೆ ಅಡ್ಡಿಯಿಲ್ಲ.

ರಸ್ತೆ, ಹಳ್ಳ, ಗುಂಡಿಗಳಲೆಲ್ಲಾ ಭೇದವೆಣಿಸದೆ ತುಂಬಿ ಹರಿಯುವುದು ಮಳೆ. ಮನೆಯೊಳಗೂ ನುಸುಳಿ ಪ್ರವಾಹವಾಗುವಷ್ಟು ಜೋರಿನ ಮಳೆಯಿದು. ಮಳೆಗೆ ಹೊಮ್ಮುವ ಮಣ್ಣಿನ ವಾಸನೆ, ನೆಲದ ಮೇಲಾಗುವ ಸುಮಪಾತದ ಚಂದ ಹೇಳತೀರದು. ಮಳೆ ಹನಿಗಳು ಮಣ್ಣಿಗೆ ತಾಕಿ, ಕಣಗಳಿಗೆ ಸ್ಪರ್ಶಿಸಿ ಧೂಳು ಸುಗಂಧವಾಗಿ ಹಬೆಯಾಡಲು ಆರಂಭವಾಗುತ್ತದೆ.

ಗಂಧವತೀ ಪೃಥ್ವೀ ಅಂದದ್ದು ಅದಕ್ಕೇ. ಅದರೊಡನೆ ಗಾಳಿ-ಮಳೆಗೆ ಭೂಮಿಯನ್ನು ಅಪ್ಪುವ ಬಗೆ-ಬಗೆಯ ಹೂವುಗಳು ಗಂಧವನ್ನು ಹೆಚ್ಚಿಸುತ್ತವೆ. ಈ ಮಾಸಕ್ಕೆ ಬಿರಿಯುವ ಕೆಂಪು ಹಳದಿ ಹೂಗಳು ನೆಲವನ್ನು ಅಲಂಕರಿಸಿ ಶೋಭಿಸುತ್ತವೆ. ಸಂಜೆಯ ಬೀದಿ ದೀಪಗಳ ಬೆಳಕನ್ನು ಮಳೆಯ ಹನಿಗಳು ಚದುರಿಸಿ ಹನಿಗಳು ಮಿನುಗುವುದನ್ನು ನೋಡುವುದೇ ಅಂದ. ಮಾರ್ಚ್‌ ಕೊನೆಗೆ ಏಪ್ರಿಲ್‌ ಆರಂಭಕ್ಕೆ ಶುರುವಾಗುವುದು ಪರಿಸರಣ ಮಳೆ.

ಸಂವಹನೀಯ ಮಳೆಯೆಂದು ಇನ್ನೊಂದು ಹೆಸರು. ವಾತಾವರಣ ಕುದಿದು, ರೇಜಿಗೆಯಾಗುವಷ್ಟು ಬೆವರಿ, ಸಂಜೆಗೆ ತಂಪ ತರುವ ಮಳೆ ಇದು. ಗಾಳಿ ಮತ್ತು ಮಳೆಗೆ ಆಸ್ತಿ-ಪ್ರಾಣ ಹಾನಿಗಳಾಗುವುದೂ ಇದೆ. ಮರಗಳ ಕೊಂಬೆ ಮುರಿದು ಬೀಳುವುದು, ನೀರ್ಗೊಳವೆಗಳು ತುಂಬಿ ಹರಿದು ಕಸವೆಲ್ಲಾ ರಸ್ತೆಗೆ ಪಸರಿಸುವುದು, ಹೂಗಳು ಪಾದಚಾರಿ ಪಥಕ್ಕೆಲ್ಲಾ ಹರಡಿ ಜಾರುವ ಸನ್ನಿವೇಶಗಳೆಲ್ಲವೂ ಮೊದಲ ಮಳೆಗೆ ದಾಖಲಾಗುವ ಸಂಗತಿಗಳು.

ನಗರವೊಂದು ಮಳೆಗಾಲಕ್ಕೆ ಹೇಗೆ ಸಜ್ಜುಗೊಳ್ಳಬೇಕೆಂಬ ದೀರ್ಘಾವಲೋಕನಗಳು ನಡೆಯುವುದೇ ಮೊದಲಮಳೆಯ ಹೊತ್ತಿಗೆ. ಹೋಳಿಹುಣ್ಣಿಮೆಯ ಅನಂತರ ವಸಂತಾಗಮನ ಶುರು. ಮಾವಿನ ಮಳೆ, ಚೈತ್ರದಮಳೆ, ಬೈಸಾಖೀ ಮಳೆ ತದನಂತರ ಆರಂಭವೇ. ಬಾರಿಯ ಹನಿಗಳು ಸೇಚನವಾದರೆ ಸೆಖೆ ದೀರ್ಘ‌ವಾಗುವ ನಂಬಿಕೆ. ಎಷ್ಟಾದರೂ ಸೆಖೆಗಾಲವಲ್ಲವೇ.

ಶಿಶಿರದ ಕೊನೆಗೆ ವರ್ಷದ ಹೊಸ ಮಳೆಯ ಆಗಮನ ರಾಜ್ಯಾದ್ಯಂತ ಆಗಿದೆ. ಸಂವತ್ಸರದ ಕೊನೆಯ ಮಳೆಯಿದು. ಆಯಾ ವರುಷದ ಜೂನ್‌ ಒಂದರಿಂದ ಗಣನೆಗೆ ಬರುವ ಜಲಶಾಸ್ತ್ರದ ಪ್ರಕಾರವೂ ಈ ಹೊಸ ಮಳೆ ಹಳತೇ. ಹೊಸಮಳೆಯ ಬೀಸಗೆ ಕೆರೆಕಟ್ಟೆ ತುಂಬದಿದ್ದರೂ, ಸೆಖೆ ದ್ವಿಗುಣವಾದರೂ, ವಿದ್ಯುತ್‌ ಸ್ಥಗಿತವಾದರೂ ಮೊದಲ ಮಳೆಯ ಅನುಭೂತಿ ವಿಶಿಷ್ಟ. ಮಳೆ ಚಂಚಲವಾಗಿಯಾದರೂ ಬರುತ್ತಿರಲಿ. ಏಕೆಂದರೆ ಮಳೆಯೆಂಬುದು ಸದಾ ಚಿಗುರೊಡೆಯುವ ಆಶಾಭಾವನೆ.

ವಿಶ್ವನಾಥ ಭಟ್‌

ಧಾರವಾಡ

ಟಾಪ್ ನ್ಯೂಸ್

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.