Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

Team Udayavani, Apr 18, 2024, 3:42 PM IST

15-mother

ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ನಮ್ಮ ಹಿಂದೂ ಪುರಾಣಗಳೆ ಹೇಳುತ್ತದೆ. ದೇವರು ಎಲ್ಲ ಕಡೆ ತಾನಿರಲು ಸಾಧ್ಯವಿಲ್ಲವೆಂದು ತಾಯನ್ನ ಸೃಷ್ಟಿಸಿರುತ್ತಾನೆ ಎಂದು ಎಲ್ಲೋ ಕೇಳಿದ ನೆನಪು. ಇದು ನಿಜವಾಗಿಯೂ ಹೌದಿರಬಹುದು. ಅಮ್ಮ ಈ ಒಂದು ಪದವೇ ಸಾಕು ಎಂಥವರಲ್ಲೂ ಮೈ ರೋಮಾಂಚನಗೊಳಿಸಲು . ನಿಮಗೂ ತಿಳಿದಿದೆ ಈ ಒಂದು ಶಬ್ದಕ್ಕೆ ಎಷ್ಟು ಶಕ್ತಿಯಿದೆ ಎಂದು. ನಾವು ಬಿದ್ದಾಗ ನಮ್ಮೊಂದಿಗೆ ಅತ್ತು ನಾವು ನಗುವಾಗ ನಮ್ಮೊಂದಿಗೆ ನಕ್ಕಿ ಸದಾ ನಮ್ಮೊಂದಿಗೆ ಇರುವ ಜೀವವೆಂದರೆ ನಮ್ಮ ಅಮ್ಮ ಮಾತ್ರ..

ಎಲ್ಲರಂತೆ ನನಗೂ ಕೂಡ ನನ್ನ ತಾಯಿಯೇ ಜೀವ ಜೀವನ ಎಲ್ಲವೂ ಹೌದು. ಒಬ್ಬಳೇ, ಅದು ಗ್ರಹಿಣಿಯಾಗಿ ತನ್ನ ಮಕ್ಕಳನ್ನು ಬೆಳೆಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾಳೆ. ಅಲ್ಲದೆ ಅದೆಷ್ಟೋ ತ್ಯಾಗಗಳನ್ನು ಮಾಡಿದ್ದಾಳೆ. ನಮ್ಮ ನಗುವಿನಲ್ಲಿ ಅವಳ ನೋವ ಮರೆತಳು… ಮರೆತಳ್ಳೋ ಅಥವಾ ಮರೆತಂತಿದ್ದಳು ನಾಕಾಣೆ… ಧೈರ್ಯದಿಂದ ಎಲ್ಲ ಸಮಯ ಸಂದರ್ಭವನ್ನ ಮೆಟ್ಟಿ ನಿಂತು ಯಾರ ಹೀಯಾಳಿಸುವಿಕೆಗೂ ತಲೆ ಕೆಡಿಸಿಕೊಳ್ಳದೆ, ಆಡಿಕೊಳ್ಳುವವರ ಬಾಯಿಗೆ ಆಹಾರವಾಗದೆ ನಮ್ಮನ್ನ ಉತ್ತಮವಾಗಿ ಬೆಳೆಸುವಲ್ಲಿ ಸಫ‌ಲಳಾಗಿದ್ದಾಳೆ ನನ್ನ ಅಮ್ಮ ಎನ್ನುವುದಕ್ಕೆ ಹೆಮ್ಮೆ ಇದೆ ನನಗೆ.

ನನಗೆ ಜೀವಿಸಲು ಬೇಕಾಗುವ ಒಳ್ಳೆಯ ಮೌಲ್ಯಗಳನ್ನು ಹೇಳಿಕೊಡುವಲ್ಲಿ ಎಲ್ಲಿಯೂ ಎಡವಲಿಲ್ಲ ನನ್ನಮ್ಮ. ಕೆಲವೊಂದಿಷ್ಟು ವಿಷಯಗಳನ್ನು ಕಲಿಯಲು ನಾನೇ ಹಿಂದೆಟು ಹಾಕಿದಾಗ ಪೆಟ್ಟುಕೊಟ್ಟು ಕಲಿಸಿದ್ದುಂಟು. ಅದಕ್ಕೆ ತಾನೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂದು ಹೇಳುವುದು. ಸಮಾಜದಲ್ಲಿ ಉತ್ತಮವಾಗಿ ಬದುಕಲು ಮೌಲ್ಯಗಳೇ ಮುಖ್ಯ, ಹೊರತಾಗಿ ಆಡಂಬರಗಳಲ್ಲ ಎಂದು ತಿಳಿಸಿಕೊಟ್ಟಳು.

ನನ್ನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲಿ ನಾನು ಎಡವುತ್ತಿದ್ದೇನೆ ಎಂದು ಹೇಳಿ ಸರಿಪಡಿಸಿದ್ದಾಳೆ. ಬಿದ್ದಾಗ ಸಮಾಧಾನಿಸಿ ಗೆದ್ದಾಗ ಪ್ರೋತ್ಸಾಹಿಸಿ ಸಹಕರಿಸುತ್ತಾಳೆ ನನ್ನ ಅಮ್ಮ.. ನನ್ನ ಪ್ರತಿಯೊಂದು ಸಣ್ಣ ಪುಟ್ಟ ಯಶಸ್ಸುಗಳನ್ನು ನನಗಿಂತಲೂ ಹೆಚ್ಚು ಸ್ವಾರ್ಥವಿಲ್ಲದೆ ಸಂಭ್ರಮಿಸಿದವಳೆಂದರೆ ಅದು ನನ್ನ ಅಮ್ಮ ಮಾತ್ರ.

ಒಂದು ದಿನ ಹುಷಾರಿಲ್ಲವೆಂದರೆ ರಾತ್ರಿ ಇಡೀ ನಿದ್ರೆ ಬಿಟ್ಟು ಹಾರೈಕೆ ಮಾಡಿ, ಕಾಣದ ದೇವರಿಗೆ ಅದೆಸ್ಟೋ ಹರಕೆ ಕಟ್ಟಿಕೊಳ್ಳುತ್ತಾಳೆ ಎಂದು ಅವಳಿಗೆ ಗೊತ್ತು. ನನ್ನ ಮಗಳನ್ನು ನಾನು ನಂಬಿದ ದೇವರು ಕಾಯುತ್ತಾನೆ ಎನ್ನುವುದು ಅವಳ ನಂಬಿಕೆ.

ಯಾವುದೇ ಸ್ವಾರ್ಥವಿಲ್ಲದೆ ಎಲ್ಲರ ಶ್ರೇಯೋಭಿವೃದ್ಧಿಯನ್ನು ಬಯಸುವವಳು ನನ್ನಮ್ಮ. ತನಗಾಗಿ ಅಲ್ಲದಿದ್ದರೂ ತನ್ನ ಮಕ್ಕಳಗಾಗಿ ಆದರೂ ಸುಖವಾಗಿರಬೇಕು ಎನ್ನುವುದು ಅವಳ ಕನಸು. ಅವಳ ಇಡೀ ಜೀವನವನ್ನೇ ನಮಗಾಗಿ ಮೂಡಿಪಾಗಿಟ್ಟಿದ್ದಾಳೆ ಎಂದರು ತಪ್ಪಿಲ್ಲ.. ಎಲ್ಲಿದ್ದರೂ ನನ್ನ ಮಕ್ಕಳು ಸುಖವಾಗಿರಲಿ ಎನ್ನುವುದೇ ಅವಳ ಪ್ರಾರ್ಥನೆ..

ನನ್ನ ಜೀವನದ ಪ್ರತಿಯೊಂದು ಸಿಹಿಕಹಿ ಅನುಭವಗಳಲ್ಲಿ ನನ್ನ ಅಮ್ಮನ ಪಾತ್ರ ಅಮೂಲ್ಯವಾದದ್ದು ಮತ್ತು ಮಹತ್ತರವಾದದ್ದು.. ಇಂತಹ ಅಮ್ಮನನ್ನು ವರವಾಗಿ ನನಗೆ ದಯಾಪಾಲಿಸಿದ್ದಕ್ಕೆ ಕಾಣದ ದೇವರಿಗೆ ಕೈ ಮುಗಿಯುವುದೋ.. ಅಥವಾ ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ನಿಗೆ ನಿನ್ನನ್ನ ಪಡೆದ ನಾನೇ ಪುಣ್ಯವಂತೆ ಎಂದು ಸಾಷ್ಟಾಂಗ ನಮಸ್ಕಾರಿಸುವುದೋ ನಾನ್‌ ಅರಿಯೆ..ಒಂದು ಮಾತ ಅಂತು ನಿಜ ಇಂತಹ ಅಮ್ಮನನ್ನ ಪಡೆದದ್ದು ನನ್ನ ಯಾವುದೋ ಜನ್ಮದ ಪುಣ್ಯವೇ ಸರಿ..

ಈಕೆಯ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದ್‌ ಅಂತು ಸತ್ಯ ನನ್ನ ಅಮ್ಮನಿಗೆ ಮಾತ್ರ ನನ್ನ ಜೀವನದ ದಿಕ್ಕನ್ನೇ ಬದಲಿಸಿರುವ ಮತ್ತು ಬದಲಿಸಲು ಸಾಮರ್ಥ್ಯ ಇರುವುದು ಎನ್ನುವುದು ನನ್ನ ಅನಿಸಿಕೆ.

-ಪ್ರಗತಿ ಎಸ್‌.

ಭಂಡಾರಕಾರ್ಸ್‌

ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.