UV Fusion: ಶಕುನಿ, ರಾವಣರಿಗೂ ಇದೆ ದೇವಾಲಯ


Team Udayavani, Sep 1, 2024, 3:30 PM IST

16-uv-fusion

ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು ಇಂದಿಗೂ ಕೂಡ ಭಾರತದಲ್ಲಿ ಪೂಜ್ಯನೀಯ ಗ್ರಂಥ. ಈ ಮಾಹಾಕಾವ್ಯಗಳಲ್ಲಿ ನಾವು ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡು ರೀತಿಯ ಪಾತ್ರಧಾರಿಗಳನ್ನು ನೋಡುತ್ತೇವೆ. ದ್ವಾಪರ ಮತ್ತು ತ್ರೇತಾಯುಗದಲ್ಲಿ ಇದ್ದ ಅದೇಷ್ಟೋ ಪಾತ್ರಗಳೂ ಇಂದಿಗೂ ಕಲಿಯುಗದಲ್ಲೂ ಕೆಟ್ಟತನ ಮತ್ತು ಒಳೆತನಗಳಿಗೆ ನಿದರ್ಶನಗಳಾಗಿವೆ. ಅದರಂತೆ ಸಮಾಜದಲ್ಲಿ ಇನ್ನೊಬ್ಬರ ಕುರಿತು ಸಂಚು ಮಾಡುವವರು, ಅಸಹಾಯಕರ ವಿರುದ್ಧ ಅಟ್ಟಹಾಸ ಮೇರೆಯುವವರು ಹೀಗೆ ಅನೇಕ ದುಷ್ಟತನಗಳಿಗೆ ಉದಾಹರಣೆ ರೂಪದಲ್ಲಿ ಇರುವವರೇ ರಾವಣ, ಶಕುನಿ, ದುರ್ಯೋಧನತಂತಹ ಪಾತ್ರಧಾರಿಗಳು. ಹುಟ್ಟಿನಿಂದ ಯಾರೂ ಕೆಟ್ಟವರಲ್ಲ ಎಂಬ ಮಾತಿನಂತೆ ಇವರುಗಳು ಕೂಡ ಹುಟ್ಟಿನಿಂದ ಕೆಟ್ಟತನ ಹೊತ್ತು ಬಂದವರಲ್ಲ. ದುಷ್ಟತನದ ಜತೆಗೆ ಅಪಾರ ಪಾಂಡಿತ್ಯ, ಬುದ್ಧಿವಂತಿಕೆ, ಪರಾಕ್ರಮಗಳು ಇವರಲ್ಲಿ ಅಡಕವಾಗಿತ್ತು. ಸಮಾಜದಲ್ಲಿ ಇಂದಿಗೂ ಖಳನಾಯಕರ ಪಾತ್ರದಲ್ಲಿ ಇರುವ ಇವರಿಗೆ ದೇವಾಯಗಳನ್ನು ಕಟ್ಟಿ ಪೂಜಿಸಿಕೊಂಡು ಬರುತ್ತಿರುವುದು ವಿಶೇಷದ ಸಂಗತಿ.

ಎಲ್ಲಿದೆ ದೇವಾಲಯ?

ಮಹಾಭಾರತದ ಮಾಸ್ಟರ್‌ ಮೈಂಡ್‌ ಎಂದು ಕರೆಯಲ್ಪಡುವ ಶಕುನಿಯ ದೇವಾಲಯವು ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾಕರ್‌ ಬಳಿಯ ಪವಿತ್ರೇಶ್ವರಂನಲ್ಲಿರುವ ಮಾಯಂಕೊಟ್ಟು ಮಲಂಚರುವನಲ್ಲಿದೆ. ಕೊಲ್ಲಂನಲ್ಲಿರುವ ಶಕುನಿ ದೇವಾಲಯದ ಪಕ್ಕದಲ್ಲಿರುವ ಪೊರುವಜಿಯ ಮಲನಾಡ ದೇವಾಲಯವು ದುರ್ಯೋಧನನಿಗೆ ಸೇರಿದ್ದಾಗಿದೆ. ಇನ್ನು ದಶಕಂಠ ರಾವಣ ಕಾಕಿನಾಡ್‌ ಬೀಚ್‌ನಲ್ಲಿ ಶಿವನ ದೇಗುಲ ನಿರ್ಮಿಸಲು ಹೋಗಿ ಸ್ವತಃ ತನ್ನ ದೇವಾಲಯವನ್ನು ನಿರ್ಮಿಸಿಕೊಂಡ ಎಂದು ಹೇಳಲಾಗುತ್ತದೆ. ಇದರೊಂದಿಗೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ದಾವೆ ಬ್ರಾಹ್ಮಣರು ರಾವಣನ್ನು ವಿಶ್ವದ ಅಧಿಪತಿ ಮತ್ತು ಮಹಾಶಕ್ತಿಯೆಂಬ ರೂಪದಲ್ಲಿ ಪೂಜಿಸುತ್ತಾರೆ. ಆಂಧ್ರಪ್ರದೇಶ ಹೊರತುಪಡಿಸಿ, ಉತ್ತರ ಪ್ರದೇಶದ ಬಿಸ್ರಾಕ್‌, ಕಾನ್ಪುರ, ಮಧ್ಯಪ್ರದೇಶದ ವಿದಿಶಾ, ಮಂಡಸರ್‌ ಹಾಗೂ ರಾಜಸ್ಥಾನದ ಮಂಡೋರ್‌ನಲ್ಲಿ ರಾವಣನನ್ನು ಪೂಜಿಸಲಾಗುತ್ತದೆ.

 ಏನಿದರ ಹಿನ್ನೆಲೆ

ಶಕುನಿಯು ತನ್ನ ಸೋದರಳಿಯರಾದ ಕೌರವರ ಜತೆ ಭಾರತದಾದ್ಯಂತ ಪ್ರವಾಸ ಕೈಗೊಂಡನು. ಆ ಸಂದರ್ಭದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಆ ಸ್ಥಳದಲ್ಲಿ ಶಿವನನ್ನು ಪೂಜಿಸಿ ವರ ಪಡೆದನು. ಆ ಹಿನ್ನಲೆಯಲ್ಲಿ ಶಕುನಿ ದೇವಾಲಯವನ್ನು ನಿರ್ಮಿಸಲಾಯಿತು. ಕಥೆಗಳ ಪ್ರಕಾರ ಕೇರಳದ ಕೊಲ್ಲಂ ಪವಿತ್ರೇಶ್ವರಂ ಕುರುಕ್ಷೇತ್ರ ಯುದ್ಧದ ಮೊದಲು ಕೌರವರಿಗೆ ಶಸ್ತ್ರಾಸ್ತ್ರಗಳನ್ನು ವಿತರಿಸಿದ ಸ್ಥಳವಾಗಿದೆ. ಶಕುನಿಯನ್ನು ಇಲ್ಲಿ ಯಾವುದೇ ವಿಗ್ರಹ ರೂಪದಲ್ಲಿ ಪೂಜಿಸುವುದಿಲ್ಲ ಬದಲಾಗಿ ಕಿರೀಟದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಭಕ್ತರು ನಿಯಮಿತವಾಗಿ ಶಕುನಿಗೆ ತೆಂಗಿನ ಕಾಯಿ, ರೇಷ್ಮೆ ಮತ್ತು ಥಾಡಿ ತುಂಡುಗಳಿಂದ ಪೂಜಿಸುತ್ತಾರೆ. ಈ ದೇವಸ್ಥಾನದಲ್ಲಿ ಶಕುನಿಯ ಸಿಂಹಾಸನವೂ ಇದೆ.

ಕೊಲ್ಲಂನಲ್ಲಿ ಪೊರುವಜಿಯ ಮಲನಾಡ ದೇಗುಲ ದುರ್ಯೋಧನನಿಗೆ ಸೇರಿದ್ದಾಗಿದೆ. ಶಕುನಿಯ ದೇಗುಲವು ಇದರ ಪಕ್ಕದಲ್ಲಿದೆ. ಇದನ್ನು ಮಲನಾಡ ದೇಗುಲವೆಂದು ಕೂಡ ಕರೆಯುತ್ತಾರೆ. ಮಹಾಭಾರತದ ಕೌರವರಲ್ಲೇ ಜ್ಯೇಷ್ಠ ಪುತ್ರನಾದ ದುರ್ಯೋಧನ, ಕುರುಕ್ಷೇತ್ರ ಯುದ್ಧ ನಡೆಯಲು ಪ್ರಮುಖ ಕಾರಣಕರ್ತ. ಈ ದೇವರಿಗೆ ಭಕ್ತಾದಿಗಳು ಸ್ಥಳೀಯ ಸಾರಾಯಿಯಾದ ಶೇಂದಿ ಹಾಗೂ ವೀಳ್ಯದೆಲೆ, ಅಡಕೆ ಮತ್ತು ಕೆಂಪು ಬಟ್ಟೆಯನ್ನು ಅರ್ಪಿಸುತ್ತಾರೆ. ಕೇರಳ ಮಾತ್ರವಲ್ಲದೇ ಇತರ ಕಡೆಯಲ್ಲೂ ದುರ್ಯೋಧನ ಆರಾಧನೆ ಮಾಡಲಾಗುತ್ತದೆ, ಆದರೆ ಅಷ್ಟು ಪ್ರಸಿದ್ಧಿಯಾಗಿಲ್ಲ. ಕೇರಳ ದೇವಾಲಯದಲ್ಲಿ ಈತನ ಮೂರ್ತಿ ಪ್ರತಿಷ್ಠಾಪನೆಯಾಗಿಲ್ಲ. ಆದರೆ ವೇದಿಕೆ ಇದೆ. ಪ್ರತಿವರ್ಷ ಮಾರ್ಚ್‌ ತಿಂಗಳ ಎರಡನೇ ವಾರಾಂತ್ಯದಲ್ಲಿ ಮಲಕ್ಕುಡಾ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಚಿತ್ರವೆಂದರೆ ದುರ್ಯೋಧನನ ಹೆಸರಿನಲ್ಲಿ ಇಲ್ಲಿಯ ಭೂಮಿಗೆ ತೆರಿಗೆ ವಿಧಿಸಲಾಗುತ್ತಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾಜ ಶಿವಶಂಕರ್‌ ರಾವಣನ ದೇವಾಲಯವನ್ನು ನಿರ್ಮಿಸಿದನು. ಇದರ ಜತೆಗೆ ಬಿಸ್ರಾಖ್‌ ಹಿಂದುಗಳು ರಾವಣನನ್ನು ಪೂಜಿಸುತ್ತಾರೆ. ಜತೆಗೆ ತಮ್ಮ ಪಟ್ಟಣವನ್ನು ರಾವಣನ ಜನ್ಮಸ್ಥಳವೆಂದು ಹೇಳಿಕೊಳ್ಳುತ್ತಾರೆ. ಮಾಂಡೋರ್‌ ಪ್ರದೇಶದ ದಾವೆ ಬ್ರಾಹ್ಮಣರು ರಾವಣನನ್ನು ತಮ್ಮ ಅಳಿಯನೆಂದು ನಂಬುತ್ತಾರೆ.

ದಿವ್ಯ

ನಾಯ್ಕನಕಟ್ಟೆ

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.