ಕೋವಿಡ್ ಕಾಲದ ಊರಿನ ಕಥೆಯಿದು..! Stay At Home


Team Udayavani, Jun 27, 2020, 11:00 AM IST

ಕೋವಿಡ್ ಕಾಲದ ಊರಿನ ಕಥೆಯಿದು..! Stay At Homeಕೋವಿಡ್ ಕಾಲದ ಊರಿನ ಕಥೆಯಿದು..! Stay At Home

ಇಡೀ ಜಗತ್ತಿನಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚಿರುವ ಅಪಾಯಕಾರಿ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತೆಗೆ ಲಾಕ್‌ಡೌನ್‌ ಘೋಷಿಸಲಾಗಿತ್ತು. ನಗರದಲ್ಲಿದ್ದ ಅದೆಷ್ಟೋ ಜನರು ತಮ್ಮೂರಿನತ್ತ ಧಾವಿಸಿದರು. ಶಾಲೆ ಕಲಿತು ಊರು ಬಿಟ್ಟು ಹೋಗಿದ್ದ ಮಗ, ಶಿಕ್ಷಣ ತಲೆಗೆ ಹತ್ತದೆ ಊರು ಬಿಟ್ಟು ದುಡಿಯಲು ಹೋದ ಯುವಕ, ಹಳ್ಳಿ ಬೇಡವೆಂದು ಪೇಟೆ ಸೇರಿದ್ದ ಸೊಸೆ, ಜತೆಗೆ ಮೂಕ ಬಸವನಂತಿರುವ ಆಕೆಯ ಗಂಡ, ದುಡಿಮೆ ಇಲ್ಲವೆಂದೂ ನೆಪ ಹೇಳಿ ಪಟ್ಟಣಕ್ಕೆ ಹೋಗಿದ್ದ ಹಿರಿಯರು.. ಹೀಗೆ ಒಂದೊಂದು ನೆಪದಿಂದ ಮೂಲ ಊರನ್ನು ತೊರೆದು ಹೋದವರು ಈಗ ಮತ್ತೇ ಊರು ಸೇರುತ್ತಿದ್ದಾರೆ.

ಇವರೆಲ್ಲ ಬಹಳ ದಿನಗಳ ಮೇಲೆ ಊರಿಗೆ ಬಂದರೆಂದು ಖುಷಿ ಪಡುವುದೋ ಅಥವಾ ಇಂತಹ ಸಂಕಷ್ಟ ಕಾಲದಲ್ಲಿ ಊರು ನೆನಪಾಯಿತೇ? ಎಂದು ವ್ಯಥೆಪಡುವುದೋ ಒಂದು ತಿಳಿಯದಾಗಿದೆ.

ಇದು ಒಂದು ಕಥೆಯಾದರೆ ಇನ್ನು ಊರಿನ ಪಂಚಾಯತ್‌ ಕಟ್ಟೆ ಮೇಲೆ ಕುಳಿತು ಊರಿನ ಉಸಾಬರೀ ಮಾತನಾಡುವ ನಮ್ಮೂರಿನ ಹಿರಿಯರು, ವೃದ್ಧರದು ಇನ್ನೊಂದು ಕಥೆ. ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಎಂಬ ಪದಗಳನ್ನೇ ಮೊದಲ ಬಾರಿಗೆ ಕೇಳಿದ ಇವರು ಕೊರೊನಾಕ್ಕೆ ಅಂಜಿ ಮನೆಯ ಬಾಗಿಲಿನಲ್ಲೇ ಕುಳಿತುಕೊಳ್ಳುವ ಹಾಗೆ ಆಗಿದೆ. ಮೂರು ಹೊತ್ತು ಮೊಬೈಲ್‌ನಲ್ಲೇ ಕಾಲ ಕಳೆಯುವ ಯುವಕರು, ಹಪ್ಪಳ ಸಂಡಿಗೆ ಹಾಕುವಲ್ಲಿಯೇ ನಿರತರಾಗಿರುವ ಮನೆಯ ಹೆಣ್ಮಕ್ಕಳು.. ಹೀಗೆ ಊರಿನ ಎಲ್ಲರನ್ನೂ ಮನೆ ಬಿಟ್ಟು ಹೊರಬರದಂತೆ ಮಾಡಿದೆ ಈ ಕೋವಿಡ್.

ಯಜಮಾನರು ದಮ್ಮು, ಕೆಮ್ಮು ಅಂತ ಕೆಮ್ಮಿದರೂ ಎಲ್ಲರೂ ದೂರ ಸರಿಯುತ್ತಾರೆ. ಸ್ವಲ್ಪ ಹುಷಾರಿಲ್ಲ ಎಂದು ಆಸ್ಪತ್ರೆಗೆ ಹೋಗಬೇಕು ಅಂದ್ರೂ ಅದಕ್ಕೂ ಭಯ. ಇನ್ನು ಅಪ್ಪ-ಅಮ್ಮ ಅವರು ಬೇರೆ ಊರಿನಲ್ಲಿರುವ ತಮ್ಮ ಮಗಳ ಮನೆಗೆ ಹೋದರೆ ಕೂಡ ಕೋವಿಡ್ ಭಯ. ಅವರಿಗೆ ಅಪ್ಪ-ಅಮ್ಮ ಬಂದರು ಅನ್ನೋ ಖುಷಿಗಿಂತ ಕ್ವಾರಂಟೈನ್‌, ಹೋಂ ಕ್ವಾರಂಟೈನ್‌ ಎಲ್ಲಿ ಮಾಡ್ತಾರೋ ಎಂಬ ಭಯ. ಹೀಗೆ ಇಡೀ ಊರು ಊರನ್ನೇ ದಿಕ್ಕು ತೋಚದೇ ಹಾಗೇ ಮಾಡಿದೆ ಕಣ್ಣಿಗೆ ಕಾಣದ ವೈರಸ್‌. ಇದರ ಮಧ್ಯೆಯೇ ನಾವು ಬದುಕಿ ತೋರಿಸಬೇಕಿದೆ. ಮುಂಜಾಗ್ರತೆಯೊಂದಿದ್ದರೆ ಎಲ್ಲವೂ ಸಾಧ್ಯ.


ಶುಭಾ ಹತ್ತಳ್ಳಿ

ಎಸ್‌.ಬಿ.ಕಲಾ ಮತ್ತು ಕೆ.ಸಿ.ಪಿ.  ವಿಜ್ಞಾನ ಮಹಾವಿದ್ಯಾಲಯ ವಿಜಯಪುರ

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.