UV Fusion: ಸಮಯದ ಸದುಪಯೋಗ ಅತೀ ಮುಖ್ಯ
Team Udayavani, Oct 2, 2023, 11:51 AM IST
ಸಮಯವೂ ಎಲ್ಲರ ಜೀವನದಲ್ಲಿ ಆಟವಾಡುವುದು ಸಹಜ. ಸರಿಯಾದ ಸಮಯ ಬರಲು ಎಲ್ಲರೂ ಕಾಯಲೇಬೇಕು. ಆದರೆ ಕೆಲವೊಮ್ಮೆ ಸಮಯ ಕೂಡಿಬಂದರು ಆ ಕೆಲಸವನ್ನು ಪೂರೈಸಲು ನಮಗೆ ಸಾಧ್ಯವಾಗಲ್ಲ.
ಎಷ್ಟೋ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಓದಲು ತಿಂಗಳಾನುಗಟ್ಟಲೆ ಸಮಯವಿರುತ್ತದೆ. ಆದರೆ ಇನ್ನೂ ಅಷ್ಟೆಲ್ಲ ಟೈಮ್ ಇದೆ, ನಾಳೆ ಓದಿ ಮುಗ್ಸಿದ್ರೆ ಆಯ್ತು, ಆರಾಮಾಗಿ ಓದಿ ಮುಗಿಸಬಹುದು. ಅಂತ ಸಮಯದ ವ್ಯಯ ಮಾಡಿ, ಪರೀಕ್ಷೆ ಹತ್ತಿರ ಬಂದಕ್ಷಣ ಎದ್ದು ಬಿದ್ದು ಓದಿ ಮುಗಿಸಲೇಬೇಕೆಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ಕುಳಿತರೆ ಅದು ಸಾಧ್ಯವಾಗಲ್ಲ. ಇರುವ ಸಮಯದಲ್ಲೇ ಓದಿದ್ರೆ ಹೀಗಾಗ್ತಾ ಇರ್ಲಿಲ್ಲ ಅಂತ ಆಮೇಲೆ ಎಷ್ಟೋ ವಿದ್ಯಾರ್ಥಿಗಳಿಗೆ ಮನವರಿಕೆ ಆಗೋದಂತೂ ನಿಜ.
ಇನ್ನೊಂದು ಸ್ವಲ್ಪ ಓದಿದ್ರೆ ಪಾಸಾಗ್ತಿದ್ದೆ, ಪಸ್ಟ್ ಕ್ಲಾಸ್ ಬರ್ತಿದ್ದೆ ಅಂತ ತುಂಬಾ ವಿದ್ಯಾರ್ಥಿಗಳು ಆಮೇಲೆ ದುಃಖಪಡ್ತಾರೆ. ಅದ್ರೆ ಕೈಯ್ಯಾರೆ ಅವರೇ ಮಾಡಿಕೊಂಡಿರೋ ತಪ್ಪು ಇದು.
ಇನ್ನೂ ಕೆಲ ಜನರು ಕೆಲಸದ ವಿಷಯದಲ್ಲೂ ಇದೆ ರೀತಿಯ ತಪ್ಪನ್ನು ಮಾಡ್ತಾರೆ. ಇವತ್ತು ಮಾಡಬೇಕಾದ ಕೆಲಸವನ್ನು ನಾಳೆ ಮಾಡಿದ್ರೆ ಆಯ್ತು ಅಂತ ಉಳಿಸಿಕೊಳ್ತಾರೆ. ಹೀಗಾದಾಗ ಇವತ್ತಿನ ಕೆಲಸ ಮಾಡಿ ಮುಗಿಸೋದೆ ಕಷ್ಟ ಆಗಿರತ್ತೆ. ಅದ್ರ ಜತೆ ನಿನ್ನೆ ಉಳಿಸಿಕೊಂಡಿರೋ ಕೆಲಸವನ್ನು ಮಾಡಿ ಮುಗಿಸಬೇಕು ಅಂದ್ರೆ ಅದು ಅಸಾಧ್ಯಾನೇ.
ನಿನ್ನೆ ಮಾಡಬೇಕಾಗಿರೋದನ್ನ ನಿನ್ನೇನೆ ಮುಗಿಸಿದ್ರೆ ಇವತ್ತು ಇಷ್ಟೊಂದು ಹೊರೆ ಆಗ್ತಾ ಇರ್ಲಿಲ್ಲ ಅಂತ ಅವರಿಗೆ ಆಮೇಲೆ ಜ್ಞಾನೋದಯವಾಗುತ್ತದೆ.
ಅಷ್ಟೆ ಅಲ್ಲ ತುಂಬಾ ಜನರಿಗೆ ಒಳ್ಳೆ ಸಮಯ ಅದಾಗೆ ಒಲಿದು ಬರತ್ತೆ. ಅದನ್ನಾದರೂ ಸರಿಯಾಗಿ ಬಳಸಿಕೊಳ್ಳಬೇಕು. ಅದು ಬಿಟ್ಟು ಮುಂದಿನ್ನೂ ಟೈಮ್ ಇದೆ ಅಂತ ಬಂದಿರೋ ಒಳ್ಳೆ ಅವಕಾಶ, ಸಮಯವನ್ನು ಕಳೆದುಕೊಳ್ಳುತ್ತಾರೆ.
ಸಮಯ ಯಾರನ್ನೇ ಆಗ್ಲಿ ಕಾಯ್ತಾ ಕೂರಲ್ಲ. ಅದು ಪ್ರತೀದಿನ ಪ್ರತೀ ನಿಮಿಷನು ನಡಿತಾನೆ ಇರುತ್ತೆ. ಸಿಕ್ಕಿರುವ ಒಳ್ಳೆ ಸಮಯವನ್ನೇ ನಾವು ಸರಿಯಾಗಿ ಬಳಸಿಕೊಳ್ಳುವುದು ಜಾಣತನ. ಗುರಿ ತಲುಪಲು ಎಷ್ಟೋ ವರ್ಷಗಳ ಪ್ರಯತ್ನವು ಮುಖ್ಯ. ಅದರಂತೆ ಗುರಿ ಹತ್ತಿರವಿದ್ದಾಗ ಮೈ ಮರೆತು ಕೂತರೆ ಪಟ್ಟ ಪ್ರಯತ್ನಕ್ಕೆ ಯಾವುದೇ ಫಲ ಸಿಗುವುದಿಲ್ಲ. ಸರಿಯಾಗಿ ಗುರಿ ತಲುಪಲು ಸರಿಯಾದ ಸಮಯದ ಅಗತ್ಯವಿರುತ್ತದೆ.
ಭಾವನಾ ಪ್ರಭಾಕರ್
ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.