ಗುಜರಾತ್‌ ಪ್ರವಾಸೋದ್ಯಮದಲ್ಲಿ ನೋಡಲೇಬೇಕಾದ ಖ್ಯಾತ 5 ತಾಣಗಳು

Team Udayavani, Aug 19, 2020, 7:34 PM IST

Somanath

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತದ ವಿವಿಧ ರಾಜ್ಯಗಳು ತನ್ನದೇಯಾದ ಸಂಸ್ಕೃತಿಕ ವೈಭವ, ವೈವಿಧ್ಯತೆಗಳಿಂದ ಕೂಡಿರುತ್ತದೆ.

ಪ್ರವಾಸೋದ್ಯಮಕ್ಕೂ ತನ್ನದೇಯಾದ ಕೊಡುಗೆಗಳನ್ನು ನೀಡುತ್ತ ಬಂದಿದೆ.

ಭಾರತದ ಪಶ್ಚಿಮಭಾಗದಲ್ಲಿರುವ ಗುಜರಾತ್‌ ರಾಜ್ಯವು ತನ್ನದೇ ಆದ ವಿಶೇಷ ಭೌಗೋಳಿಕತೆಯಿಂದ ಕೂಡಿದೆ.

ಬಹಳಷ್ಟು ಪ್ರಸಿದ್ದ ಮತ್ತು ವೈಶಿಷ್ಟಗಳಿಂದ ಕೂಡಿದ ಪ್ರದೇಶಗಳನ್ನು ಗುಜರಾತ್‌ ಹೊಂದಿದ್ದು, ಪ್ರವಾಸೋದ್ಯಮದ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಸೋಮನಾಥ ದೇಗುಲ
ಇತಿಹಾಸ ಪ್ರಸಿದ್ಧ ಸೋಮನಾಥ ದೇಗಲ ಇಲ್ಲಿನ ಪ್ರಮುಖ ಆರ್ಕಷಕ ಕೇಂದ್ರಗಳಲ್ಲಿ ಒಂದು.  ಭಾರತದಲ್ಲಿ 7 ಬಾರಿ ಪುನರ್ನಿಮಾಣವಾದ ದೇಗುಲ ಇದು ಎಂಬ ಖ್ಯಾತಿಯನ್ನು ಹೊಂದಿದೆ. 11ನೇ ಶತಮಾನದಲ್ಲಿ ಸೋಲಂಕಿ ರಾಜಪೂತರಿಂದ ನಿರ್ಮಾಣಗೊಂಡಿದೆ. 1951ರಲ್ಲಿ ಕೊನೆಯ ಬಾರಿ ಪುನರ್‌ ನಿರ್ಮಾಣವಾಗಿದೆ. ಈ ದೇಗುಲದಲ್ಲಿ ಅಪಾರ ಶ್ರೀಮಂತಿಕೆ ಮತ್ತು ಕೀರ್ತಿಯ ಕಾರಣಕ್ಕೆ ಹಲವು ಬಾರಿ ಸತತವಾಗಿ ದಾಳಿಗೆ ಒಳಗಾಗಿತ್ತು. ಅದ್ಭುತವಾದ ಕೆತ್ತನೆ, ಬೆಳ್ಳಿಯ ಬಾಗಿಲು, ಶಿಬಲಿಂಗ, ನಂದಿಯ ಪ್ರತಿಮೆ ಬಹಳ ಪ್ರಸಿದ್ಧಿ ಹೊಂದಿದೆ.

ಗಿರ್‌ ಅಭಯಾರಣ್ಯ
ಗುಜರಾತಿನ ಗಿರ್‌ ಅಭಯಾರಣ್ಯದಲ್ಲಿ ಅತಿ ಹೆಚ್ಚು ಏಷ್ಯಾದ ಸಿಂಹಗಳ ಸಂತತಿ ಇದೆ. ಇಲ್ಲಿನ ಸಫಾರಿ ತುಂಬಾ ಖ್ಯಾತವಾಗಿದ್ದು, ಮೈ ರೋಮಾಂಚನಗೊಳ್ಳುವ ಅನುಭವಗಳನ್ನು ನೀಡುತ್ತದೆ. ಜುನಾಗಢ ಜಿಲ್ಲೆಯಲ್ಲಿರುವ ಗಿರ್‌ ಗಿರಿಶ್ರೇಣಿಯ ತಳಭಾಗದಲ್ಲಿರುವ ಅತ್ಯಂತ ಸುಂದರ ವರ್ಣಮಯ ಅರಣ್ಯ ಪ್ರದೇಶ ಇದಾಗಿದೆ. 1,412 ಕಿ.ಮೀ. ವಿಸ್ತ್ರೀರ್ಣ ಹೊಂದಿದೆ. ಸಫಾರಿ ಪ್ರಿಯರಿಗೆ ಬಲು ಇಷ್ಟದ ಅರಣ್ಯಗಳಲ್ಲಿ ಇದು ಒಂದಾಗಿದೆ.

ಗಾಂಧಿ ಆಶ್ರಮ
ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರು 1917ರಲ್ಲಿ ಸ್ಥಾಪಿಸಿದ ಸಾಬರಮತಿ ಆಶ್ರಮ ಕೂಡ ಅತೀ ಹೆಚ್ಚು ಪ್ರವಾಸಿಗಳು ಆಗಮಿಸುವ ಪ್ರವಾಸಿ ಸ್ಥಳವಾಗಿದೆ. ಅಹಮದಾಬಾದ್‌ ನ ಸಾಬರಮರಿ ನದಿ ದಂಡೆಯಲ್ಲಿ ಈ ಆಶ್ರಮವಿದೆ. ಸಾಬರಮತಿಯಲ್ಲಿ ಮಗನ್‌ ನಿವಾಸ್‌, ಉಪಾಸನಾ ಮಂದಿರ, ಹೃದಯ್‌ ಕುಂಜ್‌, ವಿನೋಬಾ -ಮೀರಾ ಕುಟೀರ್‌, ನಂದಿನಿ, ಉದ್ಯೋಗ್‌ ಮಂದಿರ್‌, ಸೋಮನಾಥ್‌ ಛಾತ್ರಾಲಯ, ಶಿಕ್ಷಕರ ನಿವಾಸ್‌, ಗಾಂಧೀ ಸ್ಮಾರಕ್‌ ಸಂಗ್ರಹಾಲಯ, ವರ್ಣಚಿತ್ರಗಳ ಗ್ಯಾಲರಿ ಇಲ್ಲಿ ಗಾಂಧೀಜಿಯವರಿಗೆ ಸೇರಿದ ಪತ್ರಗಳು ಮತ್ತು ಛಾಯಾಚಿತ್ರಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ.

ಕಂಕರಿಯ ಕೆರೆ
ಈ ಕೆರೆಯನ್ನು ಸುಲ್ತಾನ್‌- ಖುತುಬ್‌-ಉದ್‌-ದಿನ್‌ ನ ಕಾಲದಲ್ಲಿ ನಿರ್ಮಿಸಲಾಗಿದೆ. ಕೆಳಭಾಗದಲ್ಲಿ ನಗಿನ ವಾಡಿ ಎಂಬ ದ್ವೀಪದಲ್ಲಿ ಬೇಸಗೆ ಅರಮನೆಯನ್ನು ನಿರ್ಮಿಸಲಾಗಿದೆ. ಈ ಅರಮನೆಯ ಸುತ್ತ ಒಂದು ಸುಂದರವಾದ ಉದ್ಯಾನವನವಿದೆ. ಈ ಕೆರೆಯು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ದೋಣಿ ವಿಹಾರ ಕೇಂದ್ರ, ಮೃಗಾಲಯ ಮತ್ತು ಪ್ರಾಕೃತಿಕ ಇತಿಹಾಸದ ವಸ್ತು ಸಂಗ್ರಹಾಲಯವಿದೆ. ಇಡೀ ಕೆರೆಯ ಆವರಣದಲ್ಲಿ ಬಣ್ಣ ಬಣ್ಣದ ದೀಪದ ವ್ಯವಸ್ಥೆಯನ್ನು, ನೀರಿನ ಕಾರಂಜಿಗಳನ್ನು ಅಳವಡಿಸಲಾಗಿದೆ. ಮನಮೋಹಕ ಕೆರೆಗಳಲ್ಲಿ ಇದು ಒಂದಾಗಿದೆ.

ಏಕತಾ ಪ್ರತಿಮೆ
ವಿಶ್ವದ ಅತಿ ಎತ್ತರದ ಪ್ರತಿಮೆ ಎಂದೇ ಗುರುತಿಸಲ್ಪಟ್ಟ ಏಕತಾ ಪ್ರತಿಮೆ ಇರುವುದು ಗುಜರಾತಿನ ಕೆವಾಡಿಯಾ ಪಟ್ಟಣದಿಂದ 3.5 ಕಿ.ಮೀ. ದೂರದಲ್ಲಿದೆ. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾದ ಮತ್ತು ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 182 ಮೀಟರ್‌ ಎತ್ತರದ ಪ್ರತಿಮೆ ಇಲ್ಲಿದೆ. ಸದಾರರ್‌ ವಲ್ಲಭಭಾಯಿ ಪಟೇಲ್‌ ಅವರ 143ನೇ ಜನ್ಮ ದಿನಾಚರಣೆಯ ನೆನಪಿಗಾಗಿ ಅಕ್ಟೋಬರ್‌ 31, 2018ರಂದು ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. 3,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಹೀಗೆ ಗುಜರಾತ್‌ನಲ್ಲಿ 41ಕ್ಕೂ ಹೆಚ್ಚು ಪ್ರವಾಸಿತಾಣಗಳಿವೆ. ದೇಶ ವಿದೇಶಗಳಿಂದ ಸಾಕಾಷ್ಟು ಪ್ರಮಾಣದಲ್ಲಿ ಇಲ್ಲಿಗೆ ಜನ ಸಾಗರದಲ್ಲಿ ಹರಿ ಬರುತ್ತಾರೆ. ಇಲ್ಲಿನ ಸರಕಾರ ಕೂಡ ಪ್ರವಾಸೋದ್ಯಮವನ್ನು ಬಹಳಷ್ಟು ಅಭಿವೃದ್ಧಿ ಪಡಿಸಿದೆ. ಬಾಲಿವುಡ್‌ ಹೆಸರಾಂತ ನಟ ಅಭಿತಾಬ್‌ ಬಚ್ಚನ್‌ ಗುಜರಾತ್‌ ಪ್ರವಾಸೋದ್ಯಮದ ರಾಯಭಾರಿಯಾಗಿದ್ದಾರೆ.

 ಧನ್ಯಶ್ರೀ ಬೋಳಿಯಾರು 

ಟಾಪ್ ನ್ಯೂಸ್

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.