Tourism: ಪ್ರಕೃತಿಯ ಮಡಿಲಲ್ಲಿ ಜಟಂಗಿ ರಾಮೇಶ್ವರ


Team Udayavani, Feb 6, 2024, 8:15 AM IST

11-uv-fusion-1

ನಾಡಿನಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲೂ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳು ಇದ್ದೇ ಇರುತ್ತವೆ  ರಾಮಾಯಣ ಮತ್ತು ಮಹಾಭಾರತದ ಹಲವು ಸಂದರ್ಭಗಳಿಗೆ ಹಿನ್ನೆಲೆಯಾಗಿರುವಂಥ ಸ್ಥಳಪುರಾಣ ಹೊಂದಿರುವ ಸ್ಥಳಗಳು ಎಲ್ಲೆಡೆಯೂ ಕಾಣಸಿಗುವುದಕ್ಕೆ ಇಂಥ ನಂಬಿಕೆಗಳೇ ಮುಖ್ಯ ಕಾರಣ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದೇ ರೀತಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿರುವ ಜಟಂಗಿ ರಾಮೇಶ್ವರ ದೇವಸ್ಥಾನ.

ಬೆಟ್ಟದ ಸುತ್ತ ಎತ್ತನೋಡಿದರತ್ತ ಹಾಸುಬಂಡೆಗಳ ರಾಶಿ ಕಣ್ಣಿಗೆ ರಾಚುತ್ತದೆ, ಇಲ್ಲಿರುವ ಕಲ್ಲಿನ ಕೋಟೆ, ಕೊತ್ತಲಗಳು, ಗುಹಾಂತರ ದೇಗುಲಗಳು, ಶಿಲ್ಪ ಕಲೆಗಳ ವೈಭವ ಮೇಲಿಂದ ಕಾಣುವ ಪ್ರಾಕೃತಿಕ ಸೊಬಗು, ಹೊಲ, ಕೆರೆ, ಅಂಕುಡೊಂಕಾಗಿ ಕಾಣುವ ರಸ್ತೆಗಳು, ದೂರದಿಂದ ಕಾಣುವ ರಾಂಪುರದ ಪರಿಸರದ ವೈಭವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಈ ಬೆಟ್ಟ – ಗುಡ್ಡ ನಡುವೆ ಅಪರೂಪದ ತಾಣವೊಂದಿದೆ.

ಮೊಳಕಾಲ್ಮೂರು ತಾಲೂಕು ರೇಷ್ಮೆಗಳಿಗೆ ಖ್ಯಾತಿ ಪಡೆದಿರುವಂತೆಯೇ ಪ್ರಾಗೈತಿಹಾಸಿಕವಾಗಿ ಮತ್ತು ಐತಿಹಾಸಿಕವಾಗಿಯೂ ಖ್ಯಾತಿಯನ್ನು ಪಡೆದು ಚರಿತ್ರೆಯ ಪುಟಗಳಲ್ಲಿ ವಿಶೇಷ ಸ್ಥಾನ ಹೊಂದಿದೆ. ಇಲ್ಲಿನ ಪ್ರಾಗೈತಿಹಾಸಿಕ ನೆಲೆ, ದೇಗುಲಗಳು, ಕೋಟೆ  ಕೊತ್ತಲಗಳು, ಶಾಸನ, ವೀರಗಲ್ಲುಗಳು ಮೊದಲಾದ ಆಕರಗಳು ಪುರಾತತ್ವಜ್ಞರನ್ನು ಹಾಗೂ ವಿದ್ವಾಂಸರನ್ನು ಬಡಿದೆಬ್ಬಿಸುವಂತಿದೆ.

ಪೌರಾಣಿಕ ಹಿನ್ನೆಲೆ

ಜಟಂಗಿ ರಾಮೇಶ್ವರ ದೇವಾಲಯವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದ್ದು, ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವ ಸಂದರ್ಭದಲ್ಲಿ ಜಟಾಯು ಪಕ್ಷಿ ಹೋರಾಟ ನಡೆಸುತ್ತದೆ, ಇದೇ ಸಮಯದಲ್ಲಿ ಪಕ್ಷಿಯ ರೆಕ್ಕೆಯನ್ನು ರಾವಣ ಕತ್ತರಿಸುತ್ತಾನೆ. ಗಾಯಗೊಂಡ ಪಕ್ಷಿಯ ಬೆಟ್ಟದ ಮೇಲೆ ಬೀಳುತ್ತದೆ. ಕೆಲ ದಿನಗಳ ತರುವಾಯ ಶ್ರೀರಾಮನು ಸೀತೆಯನ್ನು ಹುಡುಕಿಕೊಂಡು

ಇದೇ ಮಾರ್ಗನುಸಾರವಾಗಿ ಬಂದು, ರಾವಣ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸಿಕೊಂಡು ಹೋದ ಬಗ್ಗೆ ಜಟಾಯು ಪಕ್ಷಿ ಶ್ರೀರಾಮನಿಗೆ ತಿಳಿಸುತ್ತದೆ. ಆ ಪಕ್ಷಿಯ ಭಕ್ತಿಗೆ ಮೆಚ್ಚಿದ ರಾಮನು ಅದಕ್ಕೆ ಮೋಕ್ಷವನ್ನು ಕರುಣಿಸುತ್ತಾನೆ ಹಾಗೂ ಅದರ ಕೋರಿಕೆಯಂತೆ ಬೆಟ್ಟದಲ್ಲಿ 108 ಶಿವಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ ಎಂದು ಐತಿಹ್ಯವಿದೆ.

ವಿಸ್ಮಯಗಳ ಗಣಿ 

ಬೆಟ್ಟದ ತುತ್ತತುದಿಯಲ್ಲಿ ಸುತ್ತಲೂ ಕಲ್ಲಿನ ಕೋಟೆಯನ್ನು ನಿರ್ಮಿಸಲಾಗಿದ್ದು, ಒಳ ಹೋಗುತ್ತಿದ್ದಂತೆ ಮೆಟ್ಟಿಲುಗಳು ಕಾಣಸಿಗುತ್ತವೆ. ಮೆಟ್ಟಿಲುಗಳ ಇಕ್ಕೆಲಗಳಲ್ಲಿರುವ ಪಟ್ಟಿಕೆಗಳಲ್ಲಿ, ಒಂದು ಕಡೆ ಆನೆಗಳ ಸಾಲು ಹಾಗೂ ಮತ್ತೂಂದು ಕಡೆ ಸುಂದರವಾದ ಹೂವಿನ ಸಾಲಿನ ಕೆತ್ತನೆಗಳಿವೆ. ಮೆಟ್ಟಿಲುಗಳನ್ನೇರಿ ಮುಂದೆ ಸಾಗುತ್ತಿದ್ದಂತೆ ಮಹಾದ್ವಾರವಿದೆ. ಇಲ್ಲಿಂದಲೇ ಶ್ರೀ ಸ್ವಾಮಿಯ ದೇವಸ್ಥಾನ ಬಂಗಾರ ವರ್ಣದ ಗೋಪುರ ಕಾಣಿಸುತ್ತದೆ.

ದೇವಾಲಯದ ಪ್ರಾಂಗಣವನ್ನು ತಲುಪುತ್ತಿದ್ದಂತೆ ಹಲವಾರು ಉಪ ದೇಗುಲಗಳ ದರ್ಶನವಾಗುತ್ತದೆ. ಸೂರ್ಯನಾರಾಯಣ, ಗಣೇಶ ಗುಡಿಗಳಲ್ಲದೆ, ಈಶ್ವರನ ವಿವಿಧ ರೂಪಗಳಾದ ವೀರಭದ್ರ, ಮಹಾಬಲೇಶ್ವರ, ಚಂದ್ರಮೌಳೀಶ್ವರ, ಸೋಮೇಶ್ವರ ಮುಂತಾದ ದೇವರುಗಳ ಗುಡಿಗಳಿವೆ. ಪುಟ್ಟ ಗುಡಿಗಳ ಮಧ್ಯಭಾಗದಲ್ಲಿ ರಾಮೇಶ್ವರ ದೇವಾಲಯವಿದ್ದು, ಗರ್ಭಗೃಹ, ಅಂತರಾಳವಿರುವ ದೇವಾಲಯದ ಮುಂಭಾಗದಲ್ಲಿ ಸುಮಾರು 40 ಅಡಿ ಎತ್ತರವುಳ್ಳ ಏಕಶಿಲಾ ದೀಪಸ್ತಂಭವಿದೆ.

ದೇವಾಲಯದ ಮುಂಬದಿಯಲ್ಲಿ ನಾಗರ ಕಲ್ಲುಗಳು ಹಾಗೂ ಶಿಲಾಶಾಸನಗಳಿವೆ. ಅದಲ್ಲದೆ ಸೀತಾಕೊಳ, ತಾವರೆಕೊಳ ಹಾಗೂ ಏಕಾಂತ ತೀರ್ಥದ ನೀರಿನ ಕೊಳಗಳು ಕಾಣಸಿಗುತ್ತವೆ.ಪ್ರಾಚೀನ ಕಾಲದಿಂದಲೂ ಈ ಭಾಗದ ಜನರು ಶ್ರೀ ಸ್ವಾಮಿಯನ್ನು ಪೂಜಿಸುತ್ತಿದ್ದು, ಇಲ್ಲಿರುವ ಶಾಸನಗಳಲ್ಲಿ ಶ್ರೀರಾಮೇಶ್ವರ, ಜಟಂಗಿ ರಾಮಯದೇವ ಮುಂತಾದ ಹೆಸರುಗಳ ಉಲ್ಲೇಖಗಳಿವೆ. ಬಳೆಗಾರರ ಗುಂಡಿನಲ್ಲಿ ಸಾಮ್ರಾಟ್‌ ಅಶೋಕನ ಶಿಲಾಶಾಸನಗಳು, ವೀರಗಲ್ಲು ಮುಂತಾದ ಪುರಾತಣ್ತೀ ಆಧಾರಗಳು ಇಲ್ಲಿವೆ.

ಜಟಂಗಿ ರಾಮೇಶ್ವರ ಬೆಟ್ಟವನ್ನು ಹೊಂದಿಕೊಂಡು ಜಟಾಯು ಪಕ್ಷಿಯ ಸಮಾಧಿಯಿರುವ ದೊಡ್ಡ ಜಟಂಗಿ ಬೆಟ್ಟವಿದೆ. ಬೆಟ್ಟವನ್ನೇರಲು ಮೆಟ್ಟಿಲುಗಳಿಲ್ಲದ ಕಾರಣ ಕಲ್ಲು ಬಂಡೆಗಳ ಮೇಲೆ ನಡೆದುಕೊಂಡು, ಕೆಲವು ಕಡೆ ತೆವಳಿಕೊಂಡು ಹೋಗಬೇಕಾಗುತ್ತದೆ.  ಬಳ್ಳಾರಿಯಿಂದ 40 ಕಿ.ಮೀ,  ಮೊಳಕಾಲ್ಕೂರುನಿಂದ 30 ಕಿ.ಮೀ  ರಾಂಪುರಕ್ಕೇ ಬಂದು ಅಲ್ಲಿಂದ ದೇವಸಮುದ್ರ ಗ್ರಾಮದವರೆಗೆ ಸಾಗಿದರೆ ನಾಮಫ‌ಲಕ ಕಾಣಸಿಗುತ್ತದೆ.

ಜಟಂಗಿ ರಾಮೇಶ್ವರ ಬೆಟ್ಟದ ಸಮೀಪಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ವಿರಳವಾಗಿರುವುದರಿಂದ ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳುವುದು ಉತ್ತಮ, ಹತ್ತಿರದಲ್ಲಿ ಹೋಟೆಲ್‌ಗ‌ಳು ಇಲ್ಲ. ನೀರು, ಊಟ, ತಿಂಡಿ ವ್ಯವಸ್ಥೆಯನ್ನು ಮಾಡಿಕೊಂಡು ಹೋಗುವುದು ಉತ್ತಮ.

ಎಂ.ವಿ. ಶಿವಯೋಗಿ

ರಾಂಪು

ಟಾಪ್ ನ್ಯೂಸ್

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.