Traditional Toy: ಸಾಂಪ್ರದಾಯಿಕ ಆಟಿಕೆ ಪೇಟ್ಲ ಮುದ್ದು


Team Udayavani, Sep 1, 2024, 3:45 PM IST

17-uv-fusion

ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನೂರಾದ ಉಡುಪಿಯ ಕೃಷ್ಣ ಮಠ, ರಥಬೀದಿ, ಪೇಟೆ ಸೇರಿದಂತೆ ಇಡೀ ನಗರವೇ ಸಡಗರ ಸಂಭ್ರಮದಿಂದ ಕಳೆಗಟ್ಟಿತ್ತು. ಹೀಗೆ ಮಠದ ರಥಬೀದಿಯಲ್ಲಿ ಅಲೆದಾಡುವಾಗ ವಿಶೇಷವಾಗಿ ಕಂಡಿದ್ದು ಪೆಟ್ಲ ಅನ್ನೋ ಸಾಂಪ್ರದಾಯಿಕ ಆಟಿಕೆ. ಬಾಲ್ಯದ ಆಯುಧ, ಹಿರಿಯ ಜೀವಗಳ ಆಟಿಕೆಯೆಂದೇ ಹೆಸರಾದ ಪೇಟ್ಲ ಮದ್ದು ಈ ಬಾರಿಯ ಅಷ್ಟಮಿಯಲ್ಲಿ ಕಂಡಿದ್ದು ವಿಶೇಷವೆನಿಸಿತು.

ಅಷ್ಟಮಿ ಎಂದರೆ ಪೇಟ್ಲ, ಪೇಟ್ಲ ಎಂದರೆ ಅಷ್ಟಮಿ ಎಂಬ ಮಾತು ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಉಡುಪಿಯ ಸುತ್ತಮುತ್ತ ಜನಪ್ರಿಯವಾಗಿತ್ತು. ಆದರೆ ಇತ್ತೀಚಿನ ಪೀಳಿಗೆಗೆ ಈ ಆಟಿಕೆಯ ಅರಿವೇ ಇಲ್ಲದಂತಾಗಿದೆ.

ಪೇಟ್ಲ ಮದ್ದಿನ ಹಿನ್ನೆಲೆ

ಈ ಹಿಂದೆ ಮಠದಲ್ಲಿ ಶ್ರೀ ಕೃಷ್ಣನಿಗೆ ಪೂಜೆ, ಮಂಗಳಾರತಿ ನಡೆಯುವ ಸಂದರ್ಭದಲ್ಲಿ ಪೇಟ್ಲ ಹೊಡೆಯುವುದು ಸಾಂಪ್ರದಾಯಿಕ ರೂಢಿಯಾಗಿತ್ತು. ಹಾಗೆಯೇ ಕೃಷ್ಣನ ಕೈಯಲ್ಲಿ ಅದನ್ನು ಕೊಟ್ಟು ಪೂಜಾ ಕೈಂಕರ್ಯಗಳು ನೆರೆವೇರಿಸುತ್ತಿದ್ದರು. ಅನಂತರ ಅದು ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ ಇಂದಿಗೂ ನಗರದಲ್ಲಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅಷ್ಟಮಿ ಹಾಗೂ ವಿಟ್ಲ ಪಿಂಡಿಯ ಸಂದರ್ಭದಲ್ಲಿ ಅತೀ ವಿರಳವಾಗಿ ಪ್ರಮುಖ ಆಕರ್ಷಣೆಯಾಗಿ ಕಂಡುಬರುತ್ತಿದೆ.

ಪೇಟ್ಲ ಮದ್ದಿನ ಕುರಿತ ಅರಿವು ಇತ್ತೀಚಿನ ಪೀಳಿಗೆಗೆ ಕ್ರಮೇಣ ಕಡಿಮೆಯಾಗುತ್ತಿದ್ದು, ಸದ್ಯ ಈ ಬಾರಿಯ ಅಷ್ಟಮಿಯಲ್ಲಿ ಮಠದ ಆವರಣದ ರಥಭೀದಿಯಲ್ಲಿ ಕೇವಲ ಸೀಮಿತ ಮಾರಾಟಗಾರರು ಕಂಡುಬಂದಿದ್ದು ಬೇಸರವೇನಿಸಿತು.

ಪೇಟ್ಲ ತಯಾರಿಕೆ ಹೇಗೆ?

ಸೀಮೆ ಕೋಲು, ಬಿದರಿನ ಕೋಲು ಮತ್ತು ತಗಡನ್ನು ಬಳಸಿ ಮಾಡುವ ಕೋವಿಯಂತ ಆಟಿಕೆ ಇದು. ಬಿದಿರಿನಲ್ಲಿ ರಂಧ್ರದೊಳಗೆ ಕಾಡಿನಲ್ಲಿ ಸಿಗುವ ಕಮಟೆಕಾಯಿ ಅಥವಾ ಪೇಟ್ಲಕಾಯಿ ಹಾಕಿ ಇನ್ನೊಂದು ಕೋಲಿನಿಂದ ಬಿದರಿನ ರಂಧ್ರದೊಳಗೆ ಹಾಕಿ ಜೋರಾಗಿ ತಳ್ಳುವುದು. ಆಗ ಪೇಟ್ಲಕಾಯಿ ಅತ್ಯಂತ ರಭಸದಿಂದ ಹೊರಬಂದು ದೂರಕ್ಕೆ ಚಿಮ್ಮುತ್ತದೆ. ಸುಮಾರು ವರ್ಷಗಳ ಹಿಂದೆ ಸೀಮೆ ಕೋಲು, ಬಿದಿರಿನ ಕೋಲು ಮತ್ತು ತಗಡನ್ನು ಬಳಸಿ ಪೇಟ್ಲ ಮದ್ದನ್ನು ತಯಾರಿಸಲಾಗುತ್ತಿತ್ತು. ಆದರೆ ಆಧುನಿಕತೆಯ ಬದಲಾವಣೆಗೆ ತಕ್ಕಂತೆ ಪ್ಲಾಸ್ಟಿಕ್‌ ಹಾಗೂ ಪ್ಲಾಸ್ಟಿಕ್‌ ಪೈಪ್‌ಗ್ಳನ್ನು ಬಳಸಿ ತಯಾರು ಮಾಡಲಾಗುತ್ತಿದೆ.

ಅದ್ದೂರಿಯಾಗಿ ಜರಗುತ್ತಿರುವ ಅಷ್ಟಮಿಯಲ್ಲಿ ಈ ಬಾರಿ ಕೆಲವೇ ಕೆಲವು ಪೇಟ್ಲ ಮದ್ದಿನ ಮಾರಾಟಗಾರರು ಕಂಡುಬಂದಿದ್ದು. ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಈಗ ಬಿದಿರಿನ ಅಲಭ್ಯತೆ, ಕಾಡುನಾಶ, ತಯಾರಕರ ಕೊರೆತೆ ಹಾಗೂ ಖರೀದಿದಾರರ ನಿರಾಸಕ್ತಿಯಿಂದ ಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.

ಇನ್ನೊಂದು ವಿಶೇಷ ಮಾರಾಟಗಾರರೊಬ್ಬರು ಕಸದಿಂದ ರಸ ಎಂಬ ಆಲೋಚನಾದೃಷ್ಟಿಯಿಂದ, ಪೇಟ್ಲ ಮದ್ದಿನ ಆಟಿಕೆಯನ್ನು ಬಳಸಿ ಬಿಸಾಡಲಾದ ಪ್ಲಾಸ್ಟಿಕ್‌ ಬಾಟಲ್‌ಗ‌ಳಿಂದ ತಯಾರಿಸುತ್ತಿರುವುದು ಕಂಡು ವಿಶೇಷವೆನಿಸಿತು.

ಆಧುನಿಕ ತಂತ್ರಜ್ಞಾನದ ಪ್ರಭಾವಕ್ಕೆ ಸಿಕ್ಕ ಈಗಿನ ಮಕ್ಕಳಲ್ಲಿ ತಾಳ್ಮೆ ಇಲ್ಲದಿರುವುದು, ನಿರಾಸಕ್ತಿ ಮತ್ತು ಅರಿವಿನ ಕೊರತೆ, ಮಾಹಿತಿ ಇಲ್ಲದೇ ಇರುವುದು ಇತ್ಯಾದಿ ಕಾರಣದಿಂದ ಹಳೆಯ ಸಾಂಪ್ರದಾಯಿಕ ಆಟಿಕೆಗಳು ಮರೆಯಾಗುತ್ತಿವೆ. ಮಕ್ಕಳಿಗೆ ಇಂತಹ ಸಂಪ್ರದಾಯಿಕ ಹಾಗೂ ಪರಿಸರ ಸ್ನೇಹಿ ಆಟಿಕೆಗಳ ಕುರಿತ ಪರಿಚಯ ಮಾಡಿಸುವ ಕೆಲಸಗಳು ಹಿರಿಯರಿಂದ ಆಗಬೇಕಿದೆ. ಆಗ ಮಾತ್ರ ಇಂತಹ ವಿಶೇಷ ಆಟಿಕೆಗಳು ಅಳಿವು ಉಳಿವು ಸಾಧ್ಯ.

-ವಿಜಯ ಹಿರೇಮಠ

ಗದಗ

ಟಾಪ್ ನ್ಯೂಸ್

CM-Siddu–EX-CM-BSY

Covid Scam: ನ್ಯಾ.ಮೈಕೆಲ್ ಡಿ ಕುನ್ಹಾ ಸಮಿತಿ ವರದಿ ಆಧರಿಸಿ ಸರಕಾರದಿಂದ ಕ್ರಮ: ಸಿದ್ದರಾಮಯ್ಯ

1-pa

Pankaj Advani; ದಾಖಲೆಯ 28ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಂಕಜ್

1-wqqwe

Davanagere:ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು!

covid

Covid scam: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು

06

Ullala: ಟ್ಯಾಂಕರ್-ಸ್ಕೂಟರ್ ಅಪಘಾತ; ಮಹಿಳೆ ಸ್ಥಳದಲ್ಲೇ ಮೃತ್ಯು!

Uddav 2

Uddhav; 30 ವರ್ಷ ಮೈತ್ರಿಯಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ,ಕಾಂಗ್ರೆಸ್ ಹೇಗಾಗುತ್ತದೆ?

1-kkk

Australia series; ಕೊಹ್ಲಿ ಅವರನ್ನು ಈಗಿನ ಫಾರ್ಮ್ ನಲ್ಲಿ ನಿರ್ಣಯಿಸಬೇಡಿ: ಪಾಂಟಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಹಟ್ಟಿ ಹಬ್ಬ ಗ್ರಾಮೀಣ ಸೊಗಡಿನ ಸಂಸ್ಕೃತಿಯ ಕೊಂಡಿ

12-uv-fusion

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

11-uv-fusion

Teacher: ಟೀ ಫಾರ್‌ ಟೀಚರ್‌

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

CM-Siddu–EX-CM-BSY

Covid Scam: ನ್ಯಾ.ಮೈಕೆಲ್ ಡಿ ಕುನ್ಹಾ ಸಮಿತಿ ವರದಿ ಆಧರಿಸಿ ಸರಕಾರದಿಂದ ಕ್ರಮ: ಸಿದ್ದರಾಮಯ್ಯ

Unofficial Test: ಭಾರತ “ಎ’ ತಂಡಕ್ಕೆ ಮತ್ತೂಂದು ಸೋಲು

Unofficial Test: ಭಾರತ “ಎ’ ತಂಡಕ್ಕೆ ಮತ್ತೂಂದು ಸೋಲು

FIH Star Awards: ಹರ್ಮನ್‌ಪ್ರೀತ್‌, ಶ್ರೀಜೇಶ್‌ಗೆ ಹಾಕಿ ಗೌರವ

FIH Star Awards: ಹರ್ಮನ್‌ಪ್ರೀತ್‌, ಶ್ರೀಜೇಶ್‌ಗೆ ಹಾಕಿ ಗೌರವ

Pro Kabaddi: ಬೆಂಗಾಲ್‌ಗೆ ಬಾಗಿದ ಬೆಂಗಳೂರು ಬುಲ್ಸ್‌

Pro Kabaddi: ಬೆಂಗಾಲ್‌ಗೆ ಬಾಗಿದ ಬೆಂಗಳೂರು ಬುಲ್ಸ್‌

21

Ranji Trophy: ಕರ್ನಾಟಕ-ಬಂಗಾಲ ಪಂದ್ಯ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.