Traffic Jam- Patience: ತಾಳ್ಮೆ ಕಲಿಸಿದ ಟ್ರಾಫಿಕ್ ಜಾಮ್
Team Udayavani, Sep 15, 2024, 3:24 PM IST
ಜನರು ವಾಹನಗಳಿಗೆ ನೀಡುವ ಪ್ರಾತಿನಿಧ್ಯತೆ ಅಧಿಕ ಆದಂತೆ ವಾಹನಗಳ ಸಂಖ್ಯೆ ಕೂಡ ಅಧಿಕ ಆಗಿದೆ ಎನ್ನಬಹುದು. ಈಗ ಒಂದೊಂದು ಮನೆಯಲ್ಲಿಯೂ ಪ್ರತ್ಯೇಕ ಎರಡು ಮೂರು ವಾಹನಗಳ ಸಂಗ್ರಹವಿರುತ್ತದೆ. ಹೀಗಾಗಿ ವಾಹನಗಳ ಮಿತಿ ಮೀರಿದ ಬಳಕೆ ಪರಿಣಾಮ ಟ್ರಾಫಿಕ್ ಜಾಮ್ ಸಮಸ್ಯೆ ಇಂದು ಸಾಮಾನ್ಯವಾಗಿ ಬಿಟ್ಟಿದೆ. ದೊಡ್ಡ ದೊಡ್ಡ ನಗರ ಪ್ರದೇಶ ಮಾತ್ರವಲ್ಲದೆ ಇತ್ತೀಚೆಗೆ ಹಳ್ಳಿ ಭಾಗದಲ್ಲಿಯೂ ವಾಹನ ದಟ್ಟಣೆ ಸಮಸ್ಯೆ ಏರ್ಪಡುತ್ತಲೆ ಇರುತ್ತದೆ.
ಅದರಲ್ಲಿಯೂ ಹಬ್ಬ, ಉತ್ಸವ ಇತ್ತೆಂದರೆ ಟ್ರಾಫಿಕ್ ಜಾಮ್ ಸಮಸ್ಯೆ ಖಂಡಿತಾ ಇದ್ದೇ ಇರುತ್ತದೆ ಎಂದರ್ಥ. ಅದಕ್ಕೆ ಮೊದಲೇ ವಾಹನಗಳ ಓಡಾಟದ ಹಾದಿಯೇ ಬೇರೆ ಬೇರೆಯಾಗಿ ಮಾರ್ಪಡಿಸಿರುತ್ತಾರೆ. ಅಷ್ಟಮಿಯ ಸಂದರ್ಭದಲ್ಲಿ ಉಡುಪಿಯಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡ ಅನುಭವ ನಿಮ್ಮ ಮುಂದೆ ಬರಗಳ ಮೂಲಕ ತೆರೆದಿಡುತ್ತಿದ್ದೇನೆ. ಈ ಟ್ರಾಫಿಕ್ ಜಾಂ ನನಗೆ ಸಾಕಷ್ಟು ನಿರಾಸೆ ತರಿಸಿದರು ದೇವಾಲಯದ ಅಂದ ಚೆಂದ ಭಕ್ತರ ಸಮೂಹ ಕಂಡು ಬಹಳ ಖುಷಿಯಾಯಿತು.
ಇದೇ ದಿನದಂದು ನನ್ನ ತಂದೆ ತಾಯಿಯನ್ನು ಭೇಟಿಯಾಗಲು ಹೊರಟಿದ್ದೆ ನಾನು ಸಿಟಿ ತಲುಪುವವರೆಗೂ ಎಲ್ಲವೂ ಸುಗಮವಾಗಿತ್ತು ಇದ್ದಕ್ಕಿದ್ದಂತೆ ಬಸ್ ನಿಧಾನವಾಗಿ ಚಲಿಸಲು ಪ್ರಾರಂಭಿಸಿತು ರಸ್ತೆಯಲ್ಲಿ ಕಾರುಗಳು ಬಸ್, ಮೋಟರ್ ಸೈಕಲ್‌ಗಳು ಮತ್ತು ಕೆಲವು ಪಾದಚಾರಿಗಳು ವಾಹನಗಳ ನಡುವೆ ದಾಟಲು ಪ್ರಯತ್ನಿಸುತ್ತಿರುವುದನ್ನು ಕಂಡು ನಾನು ಸೇರಬೇಕಾದ ಸ್ಥಳ ಸೇರುತ್ತೇನೊ ಇಲ್ಲವೊ ಎಂಬ ಅನುಮಾನ ಕಾಡಿತು. ಹಾರ್ನ್ ಶಬ್ದವು ನಿರಂತರವಾಗಿತ್ತು ಇದರ ಮಧ್ಯೆ ಪೊಲೀಸರ ಕೊರತೆಯು ಕಾಣುತ್ತಿತ್ತು. ಎಲ್ಲ ಕಡೆಯಿಂದ ವಾಹನಗಳು ಬರುತ್ತಿದ್ದು ಜನರು ರಸ್ತೆಯ ಮೇಲಿರುವ ಚಿಕ್ಕದಾದ ಲೈನ್‌ಗಳ ಮೂಲಕ ಹೋಗಲು ಪ್ರಯತ್ನಿಸುತ್ತಿದ್ದರು ನಾನಂತೂ ಏನು ಮಾಡಲಾಗದೆ ಬಸ್‌ನಲ್ಲಿ ಇರುವುದು ಅನಿವಾರ್ಯವಾಯಿತು.
ಸಮಯ ಕಳೆದಂತೆ ಜಾಮ್ ನಿಧಾನವಾಗಿ ತೆರವುಗೊಳ್ಳಲು ಪ್ರಾರಂಭವಾಯಿತು. ಸುಮಾರು ಹೊತ್ತಿನ ಅನಂತರ ಬಸ್ ಮತ್ತೆ ಚಲಿಸಿತು. ಆದರೆ ಭವಿಷ್ಯದಲ್ಲಿ ಅಂತಹ ಸಂದರ್ಭಗಳನ್ನು ತಪ್ಪಿಸಲು ಉತ್ತಮ ಮೂಲ ಸೌಕರ್ಯ ಮತ್ತು ಯೋಜನೆಗಳ ಅಗತ್ಯತೆಯ ಅರಿವನ್ನು ತಿಳಿಸಿತು. ಇದಲ್ಲದೆ ಕೊನೆಯಲ್ಲಿ ಟ್ರಾಫಿಕ್ ಜಾಮ್ ನನಗೆ ತಾಳ್ಮೆಯನ್ನು ಕಳಿಸಿತು. ಆದರೆ ಉಡುಪಿಯಂತಹ ಬೆಳೆಯುತ್ತಿರುವ ನಗರಗಳು ತಮ್ಮ ಟ್ರಾಫಿಕ್ ಸಮಸ್ಯೆಗಳನ್ನು ನಿರ್ವಹಿಸಲು ಸರಿಯಾದ ಕ್ರಮ ನಿರ್ವಹಿಸುವ ಅಗತ್ಯತೆ ಬಹಳ ಇದೆ. ರಸ್ತೆಯಲ್ಲಿನ ವಾಹನಗಳನ್ನು ಇತಿ ಮಿತಿಯಲ್ಲಿ ಬಳಸಿ, ಉತ್ತಮ ಪರಿಹಾರ ಕ್ರಮ ಹೇಗೆ ಕಂಡುಹಿಡಿಯಬಹುದು ಎಂದು ಯೋಚಿಸುವುದು ಮುಖ್ಯವಾಗಿದೆ.
-ಗೀತು ಕೃಷ್ಣ
ವೀರಾಜಪೇಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.