UV Fusion: ನಿಧಿ ಶೋಧ

Team Udayavani, Oct 2, 2023, 2:51 PM IST

15-fusion treasure

ಗ್ರಾಮೀಣ ಜೀವನ ಎಷ್ಟೊಂದು ಸೊಗಸು. ಅಲ್ಲಿನ ಆಚಾರ – ವಿಚಾರಗಳು, ಉಡುಗೆ-ತೊಡುಗೆಗಳು, ಪ್ರಕೃತಿ ಸೌಂದರ್ಯ ಎಲ್ಲವೂ ಅದ್ಭುತ. ಈ ಜೀವನವನ್ನು ಮತ್ತಷ್ಟು ಹಸನಾಗಿಸುವುದು ಗ್ರಾಮೀಣ ಆಟಗಳು. ಈ ಆಟಗಳು ಕೇವಲ ಮನೋರಂಜನೆಗಾಗಿ ಮಾತ್ರ ಸೀಮಿತವಾಗಿರದೆ ಅವರ ಜೀವನದ ಬವಣೆಗಳನ್ನು, ದುಃಖ – ದುಮ್ಮಾನಗಳನ್ನು ಮರೆಯಲು ಈ ಆಟಗಳನ್ನು ಆಡುವುದುಂಟು. ಅಂತಹ ಆಟಗಳಲ್ಲಿ ಈ ನಿಧಿ ಶೋಧವೂ ಒಂದು.

ಇಲ್ಲಿ ಆಟಗಾರನ್ನು ಎರಡು ತಂಡಗಳಾಗಿ ವಿಂಗಡಣೆ ಮಾಡಲಾಗುತ್ತೆ.ಬಳಿಕ ಎರಡೂ ತಂಡಗಳಿಂದ ನಾಯಕರನ್ನು ಆಹ್ವಾನಿಸಿ ಒಬ್ಬೊಬ್ಬರಿಗೆ ಒಂದೊಂದು ಚೀಟಿ ನೀಡಬೇಕು. ಈ ಚೀಟಿಯನ್ನು ಕೊಟ್ಟ ತತ್‌ಕ್ಷಣ ತೆರೆಯುವಂತಿಲ್ಲ. ಎರಡೂ ತಂಡದ ನಾಯಕರು ತಮ್ಮ ತಂಡಗಳಿಗೆ ಹಿಂದಿರುಗಿದ ಅನಂತರ ತಂಡದ ಸದಸ್ಯರ ಜತೆಗೂಡಿ ಈ ಚೀಟಿಯನ್ನು ತೆರೆಯಬೇಕು.

ಉದಾಹರಣೆಗೆ ಎ ತಂಡ ಮತ್ತು ಬಿ ತಂಡ ಎಂದು ಗುರುತಿಸಿದ್ದೇವೆ ಎಂದು ಇಟ್ಟುಕೊಳ್ಳುವ, ಈಗ ಎರಡೂ ತಂಡಗಳಿಗೆ ಬೇರೆ ಬೇರೆ ಚೀಟಿ ಕೊಟ್ಟ ಕಾರಣ ಅದರಲ್ಲಿ ಬೇರೆ ಬೇರೆ ವಿಷಯಗಳನ್ನು ಒಳಗೊಂಡ ಸುಳಿವುಳಿರುತ್ತದೆ. ತಂಡ ಇದರ ಮೊದಲು ಚೀಟಿಯಲ್ಲಿ “ಗಾಳಿ ನೀಡುವ ಸಾಧನ ಎಂದಿದೆ’ ಎಂದಾಗ ಅವರು ಗಾಳಿ ನೀಡುವ ಸಾಧನಗಳು ಯಾವುವು ಎಂದು ಹುಡುಕುತ್ತಾ ಹೋಗಬೇಕು, ಅಲ್ಲಿ ಫ್ಯಾನ್‌, ಬೀಸಣಿಕೆ , ಹೀಗೆ ಹಲವಾರು ಗಾಳಿ ನೀಡುವ ಸಾಧನಗಳು ಆಟವಾಡಲು ನಿರ್ಧರಿಸಿದ ಜಾಗದಲ್ಲಿ ಇರಬಹುದು ಆಗ ತಂಡದ ಎಲ್ಲ ಸದಸ್ಯರು ಈ ವಸ್ತುಗಳನ್ನು ಸರಿಯಾಗಿ ಪರಿಶೀಲಿಸಿದರೆ ಅಲ್ಲಿ 2ನೇ ಚೀಟಿಯನ್ನು ಪಡೆಯುತ್ತಾರೆ. ಹೀಗೆ ಬೇರೆ ಸುಳಿವು ಇರುವ ಬೇರೆ ಬೇರೆ ಚೀಟಿಗಳು ಬೇರೆ ಬೇರೆ ವಸ್ತುಗಳ ಬಳಿ ಸಿಗುತ್ತಾ ಹೋಗುತ್ತದೆ. ಇಲ್ಲಿ ಆಟ ಆಡಿಸುವವರು ಮೊದಲೇ ಈ ಚೀಟಿಯನ್ನು ತಯಾರಿಸಿ ನಾವು ಯೋಜನೆ ಮಾಡಿದ ಜಾಗದಲ್ಲಿ ಇಟ್ಟುಕೊಂಡಿರಬೇಕು. ಇದು ಆಟ ಆಡುವ ತಂಡದ ಯಾವುದೇ ಒಬ್ಬ ಸದಸ್ಯನಿಗೂ ತಿಳಿಯುವಂತೆ ಇಲ್ಲ. ತಯಾರಿಸುವ ಚೀಟಿಯ ಸಂಖ್ಯೆ ಎಷ್ಟು ಬೇಕಾದರೂ ಇರಬಹುದು.

ಹೀಗೆ ಆಟ ಮುಂದುವರೆದಂತೆ ಕೊನೆಯ ಚೀಟಿಯ ಸುಳಿವು ಒಂದೇ ಆಗಿರುತ್ತದೆ. ಅಂದರೆ ಎರಡೂ ತಂಡ ಕೊನೆಯದಾಗಿ ಹುಡುಕುವ ವಸ್ತು ಒಂದೇ ಆಗಿರುತ್ತದೆ. ಅಂತಿಮ ವಸ್ತುವಿನ ಬಳಿ ಮತ್ತೂಂದು ಚೀಟಿ ಇಟ್ಟಿರುತ್ತಾರೆ. ಮೊದಲಿಗೆ ಆ ಚೀಟಿಯನ್ನು ಹುಡುಕಿದ ತಂಡ ಗೆಲ್ಲುತ್ತದೆ.

ಆ ಚೀಟಿಯಲ್ಲಿ ಯಾವುದೇ ಸುಳಿವುಗಳು ಇರುದಿಲ್ಲ. ಬದಲಿಗೆ ನಿಧಿ ಎಂದು ಬರೆದಿರುತ್ತದೆ ಇದು ಗ್ರಾಮೀಣ ಜೀವನದಲ್ಲಿ ನೋಡ ಸಿಗುವ ಒಂದು ಅಪರೂಪದ ಆಟವಾಗಿದ್ದು, ಇದನ್ನು ನಿಧಿ ಶೋಧ, ಹಿರಣ್ಯ ಶೋಧ ಎಂದು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.

ಹೆಸರುಗಳು ಬೇರೆ ಬೇರೆ ಆದರೂ ಆಟ ಮತ್ತು ಆಟ ಆಡುವ ವಿಧಾನ ಒಂದೇ. ಹೀಗೆ ನಮ್ಮ ನಿಮ್ಮೆಲ್ಲರ ನಡುವೆ ಕಾಲದ ಅಡಿಯಲ್ಲಿ ಹುದುಗಿ ಹೋಗಿದ್ದ ಒಂದು ಗ್ರಾಮೀಣ ಆಟದ ನೆನಪನ್ನು ಮರುಕಳಿಸುವ ಒಂದು ಪುಟ್ಟ ಪ್ರಯತ್ನ ಇದಾಗಿದೆ.

-ಬಿ. ಶಶಾಂಕ ಪೈ

ಕಾರ್ಕಳ

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.