Tribute: ಗಡಿ ಕಾಯುವ ಯೋಧನಿಗೆ ನಮನ
Team Udayavani, Aug 30, 2024, 3:18 PM IST
ಆಗ ತಾನೇ ಪಿಯುಸಿ ತರಗತಿ ಶುರುವಾಗಿತ್ತು… ಕಾಲೇಜಿಗೆ ಹೋಗುವುದೆಂದರೆ ಖುಷಿ ಆದರೆ ಅಲ್ಲಿ ಗೆಳೆತನ ಬೆಳೆಯುವುದು ವಿಶೇಷವಾಗಿರುತ್ತದೆ. ಎಲ್ಲರಂತೆ ನನಗೂ ಅಲ್ಲಿ ಅಲ್ಲಿ ಯಾರೂ ಪರಿಚಯವಿರಲಿಲ್ಲ. ಹೊಸ ಗೆಳೆಯ-ಗೆಳತಿಯರಿಗಾಗಿ ಕುತೂಹಲದಿಂದ ಕಾಯುತ್ತಿದ್ದೆ. ಅದರಂತೆ ಅನೇಕ ಗೆಳತಿಯರು, ಗೆಳೆಯರು ನನಗೆ ಪರಿಚಯವಾದರು. ಅಂತಹ ಅನೇಕರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ಸಾಧನೆ ಮಾಡಿದ್ದ ಗೆಳೆಯರ ಜತೆ ಸ್ನೇಹ ಬೆಳೆಸಿದ್ದರೆ ನಾವೇ ಧನ್ಯರೆಂಬ ಭಾವನೆ ನಮಗೆ ಇದ್ದೆ ಇರಲಿದೆ.
ಕಾಲೇಜಿನಲ್ಲಿ ಇಬ್ಬರಿಗೂ ಮುಖ ಪರಿಚಯವಿತ್ತಷ್ಟೇ. ಹೆಚ್ಚೇನೂ ಪರಿಚಯವಾಗುವ ಸಾಧ್ಯತೆ ಸಹಜವಾಗಿಯೇ ಕಡಿಮೆ. ಕಾಲೇಜು ಸಮಯದಲ್ಲಿ ಪರಸ್ಪರ ಮಾತನಾಡಿದವರಲ್ಲ. ಕಾಲೇಜು ಮುಗಿದರೂ ಜತೆಗೆ ಸಮಯ ಕಳೆದವರಲ್ಲ. ನಿಧಾನವಾಗಿ ವಾಟ್ಸ್‌ಆ್ಯಪ್ ಮೂಲಕವೇ ಗೆಳೆತನ ಶುರುವಾಯಿತು. ಅವನು ಆಗತಾನೆ ಸೈನ್ಯ ಸೇರಿದ್ದ. ನಾನು ಡಿಗ್ರಿಯಲ್ಲಿದ್ದೆ. ಮೆಸೇಜ್ ಮತ್ತು ಕಾಲ್ ಮೂಲಕ ನಮ್ಮ ಗೆಳೆತನ ಮುಂದುವರಿಯಿತು. ಅದೆಷ್ಟೋ ಕೆಲಸಗಳ ನಡುವೆ ನನ್ನನ್ನು ನೆನಪಿನಲ್ಲಿ ಇಟ್ಟುಕೊಂಡು ಒಂದಷ್ಟು ಸಮಯ ಕೊಡುತ್ತಿದ್ದ. ಇಂಥ ಗೆಳೆಯ ಸಿಗುವುದು ಕಡಿಮೆ.
ನನ್ನ ಗೆಳೆಯ ಸೈನಿಕ ಎಂದು ಹೇಳುವಾಗಲೆಲ್ಲಾ ಅದೇನೋ ಹೆಮ್ಮೆ, ಹಿರಿಮೆ ನನಗೆ…. ನಮ್ಮ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ನಮ್ಮ ಯುವ, ಉತ್ಸಾಹೀ ಸೈನಿಕರು ಹಗಲಿರುಳೆನ್ನದೆ ತಮ್ಮ ಕುಟುಂಬದ ನೆನಪದ ನೆನಪು ಕಾಡಿದರೂ ತೋರಿಸಿಕೊಳ್ಳದೆ, ರಾತ್ರಿ ಹಗಲೆನ್ನದೆ, ತಮಗೆ ಬೇಕಾದ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೆ, ನಮ್ಮನ್ನೆಲ್ಲಾ ಕಾಪಾಡುತ್ತಿದ್ದಾರೆ. ತಮ್ಮ ಗುರಿ ದೇಶದ ರಕ್ಷಣೆಯೊಂದೇ ಎಂಬುದು ನಮ್ಮ ಸೈನಿಕರ ಧ್ಯೇಯ ವಾಕ್ಯ, ಅದನ್ನವರು ಶಿರಸಾ ಪಾಲಿಸುತ್ತಿದ್ದಾರೆ.
ನನ್ನ ಸ್ನೇಹಿತ ಸೈನಿಕರಾಗಿರುವುದರಿಂದ ಯೋಧರ ತ್ಯಾಗದ ನನಗೆ ಅರಿವಾಗಿದೆ. ಅವರ ದೇಶಭಕ್ತಿ, ಹುಮ್ಮನಸ್ಸು ನನ್ನಲ್ಲೂ ಉತ್ಸಾಹ ತುಂಬಿದೆ. ಅವನು ಅಷ್ಟು ದೂರದಲ್ಲಿದ್ದರೂ, ಕರ್ತವ್ಯದ ನಡುವೆಯೂ ನಾನೊಬ್ಬ ನಿನ್ನ ಗೆಳೆಯ ಇಲ್ಲಿದ್ದೇನೆ ಅಂತಾನೆ, ನೆನಪು ಮಾಡುತ್ತಾನೆ. ಎಷ್ಟು ವರ್ಷದಿಂದ ಪರಿಚಯದಲ್ಲಿದ್ದಾರೆ, ಎಂಬುದಕ್ಕಿಂತ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಅನ್ನೋದು ನಿಜವಾದ ಸ್ನೇಹ….ನನ್ನ ಗೆಳೆಯನ ಬಗ್ಗೆ ನನಗೆ ಯಾವತ್ತೂ ಹೆಮ್ಮೆಯಿದೆ. ಇಂತಹ ಅನೇಕ ದೇಶಕಾಯುವ ಯೋಧರಿಗೆ ನನ್ನ ಕೋಟಿ ನಮನ.
-ದಿವ್ಯಶ್ರೀ
ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.