ಸಾವನದುರ್ಗದಲ್ಲಿ ಗೆಳತಿಯರ ಜತೆಗೆ


Team Udayavani, Jun 22, 2021, 5:39 PM IST

ಸಾವನದುರ್ಗದಲ್ಲಿ ಗೆಳತಿಯರ ಜತೆಗೆ

ಬೆಟ್ಟವನ್ನು ಹತ್ತಲು ಬರುವುದಿಲ್ಲ ಎಂದುಕೊಂಡಿದ್ದ ನನಗೆ ಟ್ರಕ್ಕಿಂಗ್‌ನ ಮೋಡಿ ಹುಟ್ಟಿದ್ದು ಹೇಗೆ ಎಂಬುದೇ ಗೊತ್ತಿಲ್ಲ. ಕೊನೆ ಕ್ಷಣದವರೆಗೂ ಹೋಗಬೇಕಾ- ಹೋಗಬಾರದಾ.. ಚಿಕ್ಕಬೆಟ್ಟ ಆಗಿರುತ್ತಾ, ಇಲ್ಲ ದೊಡ್ಡ ಬೆಟ್ಟನಾ, ಶೂಸ್‌ ಹಾಕಿಕೊಳ್ಳೊದಾ ಅಥವಾ ಸ್ಲಿಪ್ಪರ್‌ ಹಾಕಿಕೊಂಡು ಹೋಗಲಾ, ಯಾವ ಬಟ್ಟೆ ಹಾಕಿಕೊಳ್ಳಲಿ. ಅಬ್ಬಬ್ಟಾ! ಒಂದ ಎರಡ ನೂರಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಒಂದೇ ಸಲ ದಾಳಿ ಮಾಡಿದವು. ಅಂತೂ ಇಂತೂ ಹೇಗೋ ನಾನು ನನ್ನ ಇಬ್ಬರು ಗೆಳತಿಯರು ಟ್ರಕ್ಕಿಂಗ್‌ ಹೋಗಲು ತೀರ್ಮಾನ ಮಾಡಿದೆವು. ಆದರೆ ಎಲ್ಲಿಗೆ ಹೋಗೋದು ? ಮುಖ್ಯಪ್ರಶ್ನೆ ಅದೇ ಅಲ್ವಾ, ಕೆಲವು ಸ್ನೇಹಿತರ ಸಹಾಯದ ಮೇರೆಗೆ ನಮಗೆ ಸಿಕ್ಕ ಸ್ಥಳದ ಹೆಸರು ಸಾವನದುರ್ಗ. ಹೆಸರು ಕೇಳ್ಳೋಕೆ ಸ್ವಲ್ಪ ವಿಚಿತ್ರ.

ಸಾವುಗಳಿಂದಲೇ ಆ ಬೆಟ್ಟ ಫೇಮಸ್‌. ಟಿಪ್ಪು ಸುಲ್ತಾನನ ಆಳ್ವಿಕೆಯ ಸಮಯದಲ್ಲಿ ಯಾರಾದರೂ ಬಹಳ ಘೋರ ಅಪರಾಧ ಮಾಡಿದ ಅಪರಾಧಿಗಳಿಗೆ ಈ ಬೆಟ್ಟದ ತುದಿಗೆ ಕರೆದುಕೊಂಡು ಬಂದು ಕೆಳಗೆ ನೂಕುತ್ತಿದ್ದರು. ಈ ಶಿಕ್ಷೆಯ ಮೂಲ ಉದ್ದೇಶವೇ ಮರಳಿ ಈ ರೀತಿಯ ಅಪರಾಧಗಳನ್ನು ಯಾರು ಮಾಡಬಾರದು. ಇದು ಬಹಳ ಆಸಕ್ತಿಕಾರಿ ವಿಷಯ. ಇದನ್ನು ತಿಳಿದುಹೋಗಲೇಬೇಕು ಎಂದು ರವಿವಾರ ಬೆಳಗ್ಗೆ ಸುಮಾರು ಐದು ಗಂಟೆಗೆ ನಾವು ತುಮಕೂರು ಬಿಟ್ಟಿದ್ದು. ಗಾಡಿ ವ್ಯವಸ್ಥೆ ಇದ್ದಿದ್ದರಿಂದ ನಮಗೆ ಯಾವುದೇ ತೊಂದರೆ ಕಾಣಿಸಿಕೊಳ್ಳಲಿಲ್ಲ, ರಾಮನಗರದಿಂದ 35 ಕಿ. ಮೀ. ಹಾಗೂ ಮಾಗಡಿಯಿಂದ 11 ಕಿ.ಮೀ. ದೂರ ಇರುವ ಏಕಶಿಲಾ ಬೆಟ್ಟ.

ಸುಮಾರು ಏಳುವರೆಗೆ ಸಾವನದುರ್ಗಕ್ಕೆ ತಲುಪಿದೆವು. ಮೊದಲಬಾರಿ ಬೆಟ್ಟವನ್ನು ನೋಡಿದ್ದು. ನೋಡಿದ ತತ್‌ಕ್ಷಣ ಹೇ.. ಬಹಳ ಚಿಕ್ಕದೇ ಅಂತ ಮನಸ್ಸಿಗೆ ಬಂತು. ಬೆಟ್ಟದ ಕೆಳಗೆ ಇದ್ದಂತಹ ಲಕ್ಷ್ಮೀ ನರಸಿಂಹಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಪ್ರಯಾಣ ಪ್ರಾರಂಭಿಸಿದೆವು. ಈ ಬೆಟ್ಟದ ಎತ್ತರ 1,435 ಅಡಿ. ನನ್ನ ಗೆಳತಿಯರಿಬ್ಬರು ಜಿಗಿದುಕೊಂಡು ಬೆಟ್ಟ ಹತ್ತುತ್ತಿದ್ದರೆ ನನ್ನ ಕೈಯಲ್ಲಿ ಇದು ಸ್ವಲ್ಪ ಕಷ್ಟ ಕೆಲಸವೇ ಆಗಿತ್ತು. ಮನಸ್ಸನ್ನು ಗಟ್ಟಿ ಮಾಡಿ ಮುಂದೆ ಸಾಗಿದೆ. ನಿಜವಾಗಿಯು ಅದು ಸಾವಿನ ದುರ್ಗವೇ ಸರಿ. ಆದರೂ ಛಲಬಿಡದೆ ಹತ್ತಲು ಶುರುಮಾಡಿದೆ. ಸ್ವಲ್ಪ ಬೆಟ್ಟದ ಮೇಲೆ ಹೋದಂತೆ ಸುತ್ತಲಿನ ಮನಮೋಹಕ ದೃಶ್ಯ ನನ್ನ ಕಣ್ಣಿನ ಕೆಮರಾದಲ್ಲಿ ಸೆರೆಯಾಯಿತು. ಅಲ್ಲಲ್ಲಿ ಮಂಟಪಗಳು, ನೀರಿಗಾಗಿ ಮಾಡಿದಂತಹ ಸಣ್ಣಸಣ್ಣ ಕೊಳಗಳ ರೀತಿಯ ಹಳ್ಳಗಳು ಕಾಣಸಿಗುತ್ತಿದ್ದವು. ಆ ಬೆಟ್ಟದಲ್ಲಿ ಯಾವುದೇ ರೀತಿಯ ಮೆಟ್ಟಿಲುಗಳಾಗಲಿ, ಹಿಡಿದುಕೊಳ್ಳಲು ಕಂಬಿಗಳಾಗಲಿ ಇರಲಿಲ್ಲ. ಬೆಟ್ಟ ಹತ್ತುವ ಸಮಯದಲ್ಲಿ ಎಲ್ಲಿ ನಾನು ಕಾಲು ಜಾರಿ ಕೆಳಗೆ ಬೀಳುತ್ತೇನೆ ಎನ್ನುವ ಭಯ ಕಾಡುತ್ತಿತ್ತು. ಆದರೂ ಛಲ ಬಿಡದೆ ನನ್ನ ಪ್ರಯಾಣ ಮುಂದುವರಿಸಿದೆ. ನಂಗೆ ಈ ಬೆಟ್ಟದಲ್ಲಿ ಸಿಕ್ಕಂತಹ ಬಹುದೊಡ್ಡ ಅನುಮಾನದ ವಿಷಯವೇನೆಂದರೆ ಬೆಟ್ಟದ ಮೇಲೆ ಸಣ್ಣದಾಗಿ ನೀರು ಹರಿಯುವ ದೃಶ್ಯ. ಬೆಟ್ಟದ ಸುಮಾರು ಭಾಗದಲ್ಲಿ ನಾನು ಇದನ್ನು ಕಂಡೆ. ಆದರೆ ಇದಕ್ಕೆ ನಂಗೆ ಸಿಕ್ಕ ಉತ್ತರ ಮಾತ್ರ ಶೂನ್ಯ. ಬೆಟ್ಟಗಳ ಮಧ್ಯೆ ತೊರೆ, ಅಲ್ಲಲ್ಲಿ ಸಿಗುವ ಮಣ್ಣಿನ ಗುಡ್ಡಗಳನ್ನು ಹತ್ತುತ್ತಾ, ಅಪರಿಚಿತರ ಸಹಾಯ ಪಡೆಯುತ್ತಾ ಕೊನೆಗೂ ಬೆಟ್ಟದ ತುದಿಗೆ ಮುಟ್ಟಿದೆವು, ದೂರದಲ್ಲಿ ಹರಿಯುತ್ತಿದ್ದ ಮಂಚನಬೆಲೆಯ ಡ್ಯಾಂನ ಹಿಂಭಾಗದ ನೀರು ಎಲ್ಲವೂ ಒಂದು ಕ್ಷಣ ನನ್ನ ಆಯಾಸ, ನಿಶ್ಯಕ್ತಿ ಎಲ್ಲವನ್ನು ಮರೆಸಿತ್ತು. ಅದಕ್ಕೆ ಹೇಳುವುದು ಪ್ರಕೃತಿಯು ವಿಸ್ಮಯದ ನಿರ್ಮಾಣವೆಂದು. ಜೀವನದಲ್ಲಿ ಯಾವುದು ಅಸಾಧ್ಯವಲ್ಲ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂಬುವುದಕ್ಕೆ ಇದೆ ಸಾಕ್ಷಿ.

 

ಸುಮಾ ನಾರಾಯಣ್‌

ಶ್ರೀ ಸಿದ್ಧಾರ್ಥ ಮಾ.ಅ. ಕೇಂದ್ರ ತುಮಕೂರು

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.