Tulasi Kalyana: ತುಳಸಿ ಕಲ್ಯಾಣಂ
Team Udayavani, Dec 5, 2023, 8:00 AM IST
ಪುರಾತನ ಕಾಲದಿಂದಲೂ ತುಳಸಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಆಯುರ್ವೇದದಲ್ಲಿ ಔಷಧವಾಗಿ ಬಳಕೆಯಾಗುವ ಈ ಗಿಡವನ್ನು ಹಿಂದೂಗಳು ದೇವರ ಸ್ವರೂಪವಾಗಿ ಆರಾಧಿಸುತ್ತಾರೆ. ಈ ರೀತಿಯಲ್ಲಿ ಬಹು ಉಪಯೋಗಿಯಾದ ತುಳಸಿಯಲ್ಲೂ ವಿವಿಧ ಪ್ರಬೇಧಗಳಿವೆ.
ಶ್ಯಾಮ ತುಳಸಿ – ಇದರ ಎಲೆಗಳು ನೇರಳೆ ಬಣ್ಣದಲ್ಲಿರುವುದರಿಂದ ಇದನ್ನು ಶ್ಯಾಮ ತುಳಸಿ ಎಂದು ಕರೆಯುವರು. ಇದು ಶ್ರೀ ಕೃಷ್ಣನಿಗೆ ಪ್ರಿಯಕರವಾಗಿರುವುದರಿಂದ ಇದನ್ನು ಕೃಷ್ಣ ತುಳಸಿ ಎಂದೂ ಕರೆಯಲಾಗುತ್ತದೆ.
ರಾಮ ತುಳಸಿ – ಇದರ ಎಳೆಗಳು ಹಸಿರು ಬಣ್ಣವಿರುತ್ತದೆ. ಇದು ರಾಮನಿಗೆ ಹತ್ತಿರವಾದದು.
ಶ್ವೇತ ತುಳಸಿ – ಇದರ ಎಳೆಗಳು ಬಿಳಿ ಬಣ್ಣದಲ್ಲಿರುತ್ತದೆ. ಇದನ್ನು ವಿಷ್ಣು ತುಳಸಿ ಎಂದು ಕರೆಯಲಾಗುತ್ತದೆ.
ತುಳಸಿ ಗಿಡವು ಹಲವು ವಿಶೇಷ ಗುಣಗಳನ್ನು ಹೊಂದಿದೆ. ಪ್ರತೀ ಮನೆಯಲ್ಲೂ ತುಳಸಿ ಗಿಡ ಇದ್ದೆ ಇರುತ್ತದೆ. ಇದು ಹಲವಾರು ರೋಗಗಳನ್ನು ನಿವಾರಣೆ ಮಾಡುವ ಔಷಧೀಯ ಗುಣಗಳನ್ನು ಹೊಂದಿದೆ. ತುಳಸಿ ಎಲೆಗಳಿಂದ ಮಾಡಿದ ಕಷಾಯ ತಲೆನೋವು, ಶೀತ, ಜ್ವರ, ಕಫ, ಹೊಟ್ಟೆ ನೋವು, ಅಲರ್ಜಿ ನಿವಾರಣೆಗೆ ರಾಮ ಬಾಣ ಎಂದೇ ಹೇಳಬಹುದು.
ಹಿಂದೂ ಧರ್ಮದಲ್ಲಿ ದೀಪಾವಳಿ ಬಳಿಕ ಬರುವ ಹಬ್ಬವೇ ತುಳಸಿ ಪೂಜೆ. ಕಾರ್ತಿಕ ಮಾಸದ ಶುಕ್ಲಪಕ್ಷದ ಹನ್ನೆರಡನೇ ದಿನದ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದೂ ಕರೆಯಲಾಗುತ್ತದೆ.
ತುಳಸಿ ವಿವಾಹಕ್ಕೆ ಪೌರಾಣಿಕ ಕಥೆಯಿದೆ. ವೃಂದಾ ಎಂಬ ಯುವತಿಯು ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗುತ್ತಾಳೆ. ಆಕೆಗೆ ವಿಷ್ಣುವಿನ ಮೇಲೆ ಅಪಾರ ಪ್ರೀತಿ ಹಾಗೂ ಭಕ್ತಿ ಇತ್ತು. ಆದರೆ ಇದು ಜಲಂಧರನಿಗೆ ಇಷ್ಟವಿರುವುದಿಲ್ಲ. ಒಮ್ಮೆ ವಿಷ್ಣುವು ಜಲಂಧರ ರೂಪ ತಾಳಿ ವೃಂದಾಳನ್ನು ಮೋಹಿಸುತ್ತಾನೆ. ಅನಂತರ ಶಿವನು ಆಕೆಯ ಗಂಡನನ್ನು ಸಂಹರಿಸುತ್ತಾನೆ. ಅನಂತರ ಆಕೆ ವಿಷ್ಣುವಿಗೆ ಶಾಪವನ್ನು ನೀಡಿ ಚಿತೆಗೆ ಹಾರಿ ಸಾಯುತ್ತಾಳೆ. ಅನಂತರ ವಿಷ್ಣು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ತುಳಸಿಯನ್ನು ವಿವಾಹವಾಗುತ್ತಾನೆ ಎಂಬ ಕಥೆಯಿದೆ.
ತುಳಸಿ ಪೂಜೆಯ ಸಂದರ್ಭ ತುಳಸಿ ಕಟ್ಟೆಯನ್ನು ರಂಗೋಲಿ, ಹೂವುಗಳಿಂದ ಅಲಂಕರಿಸುತ್ತಾರೆ. ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡ, ಹುಣಸೆ ಗಿಡ ಇಟ್ಟು ತುಳಸಿ ಕಟ್ಟೆಯ ಸುತ್ತಲೂ ದೀಪದ ಹಣತೆಗಳನ್ನು ಹಚ್ಚಲಾಗುತ್ತದೆ. ಅಕ್ಕ- ಪಕ್ಕದ ಮನೆಯವರೆಲ್ಲರೂ ಪೂಜೆಯಲ್ಲಿ ಸೇರುತ್ತಾರೆ. “ಪೂಜಿಪೇ ಶ್ರೀ ತುಳಸೀ ನರಹರಿ ಅರಸೀ’ ಹೀಗೆ ತುಳಸಿಗೆ ಸಂಬಂಧಪಟ್ಟ ಹಾಡುಗಳನ್ನು ಮನೆ ಹೆಂಗಸರು ಹಾಡುತ್ತಾ ಸಂತೋಷ ಪಡುತ್ತಾರೆ. ಹೀಗೆ ತುಳಸಿ ವಿವಾಹವು ಸರಳತೆಯಿಂದ ಕೂಡಿ ಎಲ್ಲರನ್ನೂ ಆಕರ್ಷಿಸುತ್ತದೆ.
ಕಾವ್ಯಾ ರಮೇಶ್ ಹೆಗಡೆ
ಎಂ.ಎಂ.,ಮಹಾವಿದ್ಯಾಲಯ ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.