ಸಮಯವಿಲ್ಲ ಅಂದರೆ ಫಲವಿಲ್ಲ
Team Udayavani, Jul 27, 2020, 9:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಮಯವೆಂದರೆ ಜೀವನವನ್ನು ರೂಪಿಸುವ ಅಮೂಲ್ಯ ಸಾಧನ. ಅದ್ಯಾವತ್ತೂ ನಮ್ಮನ್ನು ಕಾಯುವುದೇ ಇಲ್ಲ.
ಓಡುವ ಸಮಯದ ಜತೆ ನಾವೂ ಹೆಜ್ಜೆ ಹಾಕಿದರಷ್ಟೇ ಬಂತು. ಸಮಯವಿಲ್ಲ ಎಂದು ದೂರುತ್ತಾ ಕುಳಿತರೆ ಫಲವಿಲ್ಲ. ನೆನಪಿಡಿ! ಸಮಯ ಯಾವತ್ತೂ ನಮ್ಮ ಹಿಂದೆ ಬರುವುದಿಲ್ಲ.
ಅದರಲ್ಲೂ ಸಾಧಿಸುವ ವಯಸ್ಸಿನಲ್ಲಿ ಸಮಯ ಅತ್ಯಮೂಲ್ಯ. ಇದರ ಸದ್ಬಳಕೆ ಮಾಡಿಕೊಂಡರೆ ಬಾಳೆಲ್ಲ ಬಂಗಾರವಾಗಬಹುದು.ಈ ಓಡುವ ಸಮಯದ ಮಹತ್ತ್ವ ನನಗೂ ತಿಳಿದಿರಲಿಲ್ಲ. ಸಮಯ ವ್ಯರ್ಥ ಮಾಡಬೇಡ ಎಂದು ಮನೆಯಲ್ಲಿ ಹಿರಿಯರು ಎಷ್ಟೇ ತಿಳಿಹೇಳಿದರೂ ಅವರೆದುರು ನಾಟಕವಾಡುತ್ತಿದ್ದೆ ಹೊರತು ಪಾಲಿಸುತ್ತಿರಲಿಲ್ಲ.
ವಿದ್ಯಾಭ್ಯಾಸ ಸಮಯದಲ್ಲಿ ಕಂಪ್ಯೂಟರ್, ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದೆ. ಊಟೋಪಹಾರ, ಆಟದ ಸಮಯವನ್ನು ಮಾತ್ರ ಸರಿಯಾಗಿ ಪಾಲಿಸುತ್ತಿದ್ದೆ. ಹೀಗಾಗಿ ಓದಲು ಸಮಯವಿಲ್ಲದೆ ಎಸೆಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದೆ. ಮನಸ್ಸಿಗೆ ಬೇಸರವಾದರೂ ಸಮಯ ಮೀರಿತ್ತು.
ಇನ್ನೆಂದೂ ಸಮಯ ವ್ಯರ್ಥ ಮಾಡಿ ಹೆತ್ತವರಿಗೆ ನಿರಾಸೆ, ನೋವು ತರಬಾರದೆಂದೂ ದೃಢ ನಿಶ್ಚಯಿಸಿದೆ. ಆಗಿಂದಲೇ ಸಮಯ ಪಾಲನೆಗೆ ಮುಂದಾದೆ. ಮನೋರಂಜನೆಗಿಂತ ವ್ಯಾಸಂಗಕ್ಕೆ ಹೆಚ್ಚಿನ ಗಮನಹರಿಸಿದೆ. ಹೀಗಾಗಿ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು. ನನಗಾದ ಅನುಭವ ಹಲವರಿಗೆ ಆಗಿರಬಹುದು. ಆದರೆ ಸಮಯದ ಮಹತ್ವ ಅರಿಯುವವರು ಕೆಲವರಷ್ಟೇ. ನನ್ನ ಸಮಯ ಪಾಲನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬ ಭರವಸೆಯಿದೆ.
ಸಮಯವೆಂಬುದು ಸದಾ ಖಾಲಿಯಾಗುತ್ತಲೇ ಇರುವ ಅಮೂಲ್ಯ ಖಜಾನೆ. ಈ ಖಜಾನೆ ಖಾಲಿಯಾಗುವುದರೊಳಗಾಗಿ ಸರಿಯಾಗಿ ಬಳಸಿಕೊಳ್ಳಬೇಕಷ್ಟೆ. ಸಮಯ ಪಾಲನೆ ರೂಢಿಸಿಕೊಂಡು ಒಳ್ಳೆಯ ಬದುಕು ರೂಪಿಸಿಕೊಳ್ಳೋಣ.
ಗಿರೀಶ್ ಎಂ., ವಿ.ವಿ. ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.