![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Aug 22, 2023, 2:46 PM IST
ಭಾರತ ವಿವಿಧ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ ಬಹುದೊಡ್ಡ ಶ್ರೀಮಂತ ರಾಷ್ಟ್ರವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಮ್ಮ ರಾಷ್ಟ್ರದಲ್ಲಿ ಹೇಗೆ ವಿವಿಧ ಜಾತಿ-ಧರ್ಮ, ವರ್ಣ, ಲಿಂಗ, ಭಾಷೆ, ಭಾವ, ನಡೆ ನುಡಿ, ಆಚರಣೆ ಸಂಪ್ರದಾಯ ಹೀಗೆ ಹಲವಾರು ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಯ ವಿಧಾನಗಳನ್ನು ಹೊಂದಿದ ಒಂದು ವಿಶೇಷ ರಾಷ್ಟ್ರವಾಗಿರುವಂತೆ ಸಸ್ಯ ಸಂಪತ್ತು, ಪ್ರಾಣಿ ಸಂಕುಲ ಹೀಗೆ ಭಾರತೀಯ ನೆಲದಲ್ಲೂ ಕೂಡ ವಿಶೇಷ ಮತ್ತು ಸಂಪದ್ಭರಿತವಾದ ಮಣ್ಣಿನ ವರ್ಗಗಳ ವಿಧಗಳನ್ನು ಕಾಣಬಹುದು, ಒಂದೊಂದು ಭಾಗದಲ್ಲಿ ವಿಭಿನ್ನ ತೆರನಾದ ವಿಶೇಷ ಮಣ್ಣಿನ ಗುಣಗಳನ್ನು ಕಾಣಬಹುದಾಗಿದೆ.
ಇಂತಹ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಮ್ಮ ಬಹುವಿಖ್ಯಾತ ಸಂಪತ್ತಿನ ನೆಲ ಜಲದ ನಾಡಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಈ ಎಲ್ಲ ಸಂಪತ್ತನ್ನು ಉಳಿಸಿ ಬೆಳೆಸುವುದಾಗಿದೆ. ಇಂತಹ ಮಾನವ ನಿರ್ಮಿತ, ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಯವರೆಗೂ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಇಂತಹ ಸಂಪನ್ಮೂಲಗಳನ್ನು ಮಿತಿಯಾಗಿ ಬಳಸಿ ಅವಶ್ಯಕತೆಯ ಮೇರೆಗೆ ಉಪಯೋಗಿಸಿ ಯಾವುದೇ ಕಾರಣಕ್ಕೂ ಈ ನೆಲ ಜಲದ, ಪ್ರಾಣಿ ಪಕ್ಷಿ ಸಂಕುಲ ಹಾಗೂ ಸಸ್ಯ ಸಂಪತ್ತಿಗೂ ಧಕ್ಕೆ ಭರದಂತೆ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಹಾಗೂ ಮೇಲಾಗಿ ಅದು ಹಕ್ಕು ಕೂಡ ಆಗಿದೆ.
ಒಂದು ವೇಳೆ ಅಂತಹ ಸಂಪನ್ಮೂಲಗಳಿಗೆ ಧಕ್ಕೆ ತಂದರೆ ಕೆಲವು ಮಾನದಂಡಗಳನ್ನು 1972ರ ವನ್ಯಜೀವಿ ಸಂರಕ್ಷಣ ಕಾಯ್ದೆ ಹಾಗೂ 1986ರ ಪರಿಸರ ಸಂರಕ್ಷಣ ಕಾಯ್ದೆ ಇಂತಹ ಹಲವಾರು ಕಾಯ್ದೆಗಳಲ್ಲಿ ಕಾಣಬಹುದು. ಇದರ ಜತೆಗೆ ಪ್ರತೀ ವರ್ಷ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಿ ಮಣ್ಣಿನ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದೆ.
ಈ ಎಲ್ಲ ವಿಚಾರಗಳ ಉದ್ದೇಶಗಳನ್ನು ಗಮನಮನದಲ್ಲಿಟ್ಟುಕೊಂಡು ದೇಶದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅವುಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಳ್ಳಲಾಗುತ್ತಿರುವ ಬಹುಮುಖ್ಯ ಯೋಜನೆ ಎಂದರೆ ಅದು ನನ್ನ ನೆಲ, ನನ್ನ ದೇಶ ಅಭಿಯಾನ.
ಈ ಅಭಿಯಾನದ ಮುಖ್ಯ ಉದ್ದೇಶವೇನೆಂದರೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ನೆನೆಯುವ ಮತ್ತು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ 22 ದಿನಗಳ ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಮಾರ್ಚ್ 12 2021 ರಂದು ಈಗಾಗಲೇ ಚಾಲನೆ ನೀಡಲಾಗಿತ್ತು ಮತ್ತು ಇದರ ಅಂಗವಾಗಿ ರಾಷ್ಟ್ರದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನೂ ನಡೆಸಲಾಗಿದೆ. ಹಾಗಾಗಿ ಈ ಯೋಜನೆಯ ಭಾಗವಾಗಿ ನನ್ನ ನೆಲ, ನನ್ನ ದೇಶ ಎಂಬ ಅಭಿಯಾನವನ್ನು ಆಯೋಜಿಸಲಾಗುತ್ತಿದೆ.
ಇದು ಪ್ರತಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಗುರಿಯನ್ನು ಹೊಂದಿದೆ. ಈ ಮಹತ್ತರ ಕಾರ್ಯಕ್ರಮವನ್ನು ಇದೇ 30 ಆಗಸ್ಟ್ 2023ರಂದು ದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿಕ ಅಮೃತ ವಾಟಿಕಾ ಉದ್ಯಾನದ ಬಳಿ ಕರ್ತವ್ಯ ಪಥದಲ್ಲಿ ಸಮಾರೋಪ ಸಮಾರಂಭವನ್ನು ನಡೆಸುವ ಮೂಲಕ ಇದನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದೆ.
ದೇಶಾದ್ಯಂತ 7,500 ಸ್ಥಳಗಳಿಂದ 7,500 ಕುಂಡಲಗಳಲ್ಲಿ ಮಣ್ಣು, ಸಸಿಗಳನ್ನು ಇರಿಸಿ ಯುದ್ಧ ಸ್ಮಾರಕದ ಬಳಿ ಅಮೃತ ವಾಟಿಕಾ ಉದ್ಯಾನವನ ನಿರ್ಮಿಸಲಾಗುವ ಮಹತ್ತರವಾದ ಪ್ರಯತ್ನವನ್ನು ನಡೆಸಲಾಗುತ್ತಿದೆ. ಇಂತಹ ವಿಭಿನ್ನ ಕಾರ್ಯಕ್ರಮಗಳು ಹಾಗೂ ಯೋಜನೆಗಳು ನಮ್ಮ ದೇಶದ ವಿವಿಧತೆಯಲ್ಲಿನ ಏಕತೆಯನ್ನು ರಕ್ಷಿಸಿಕೊಳ್ಳಲು ಮತ್ತು ಎಲ್ಲ ನೈಸರ್ಗಿಕ ಹಾಗೂ ಕೃತಕ ಸಂಪನ್ಮೂಲಗಳನ್ನು ಹಿಡಿದಿಟ್ಟುಕೊಳ್ಳುವ ಕಾರಣಕ್ಕಾಗಿ ಹಲವಾರು ವಿಚಾರಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆ ವಿಚಾರಗಳನ್ನು ಮತ್ತು ನೆಲ ಜಲದ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯ, ಹಕ್ಕು ಆಗಿದೆ ಎಂದು ಈ ಮೂಲಕ ನಾವೆಲ್ಲರೂ ಅರಿತುಕೊಳ್ಳಬೇಕಿದೆ ಮತ್ತು ಈ ಕಾರ್ಯಕ್ರಮದ ಧ್ಯೇಯೋದ್ದೇಶಕ್ಕೆ ನಾವೆಲ್ಲರೂ ಕೈಜೋಡಿಸಿ ಸಹಕರಿಸಬೇಕಿದೆ.
ಹನುಮಂತ ದಾಸರ, ಧಾರವಾಡ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.