Deepavali Festival: ಸಂಭ್ರಮದ ಮೆರವಣಿಗೆ
Team Udayavani, Nov 3, 2024, 3:30 PM IST
ದೀಪಾವಳಿ ಹಬ್ಬ ಎಂದ ಕೂಡಲೆ ನಮ್ಮ ಬಾಲ್ಯ ದಿನಗಳು ಮತ್ತೆ ಮರುಕಳಿಸಬಾರದೇ ಎಂದು ಅನಿಸುತ್ತದೆ. ಆಗ ಹಬ್ಬವೆಂದು ಬಂದು ಬಳಗ ಒಂದೆಡೆ ಸೇರುವುದೇ ಬಹಳ ಖುಷಿ ಎನ್ನಬಹುದು. ನಾವು ಮಕ್ಕಳಿದ್ದಾಗ ಪಟಾಕಿಯನ್ನು ರಾತ್ರಿವರೆಗೂ ಕಾದು ಬಿಡುವ ಪ್ರಮೇಯ ಬಹಳ ಕಮ್ಮಿ. ಬೆಳಗ್ಗೆಯೇ ಪಟಾಕಿ ಹೊತ್ತಿಸಿದರೆ ರಾತ್ರಿ ತನಕ ಕಾಯುವಂತೆ ಮನೆ ಹಿರಿಯರ ಸಲಹೆ ಪಾಲಿಸಲೇ ಬೇಕಿತ್ತು. ದೀಪಾವಳಿ ಹಬ್ಬಕ್ಕೆ ಮೂರು ನಾಲ್ಕು ಬಾಕ್ಸ್ ಪಟಾಕಿ ಹೊಡೆದರು ನಮಗೆ ಸಮಧಾನವೇ ಆಗುತ್ತಿರಲಿಲ್ಲ. ಅದರಲ್ಲಿ ಬೇರೆ ತುಳಸಿ ಪೂಜೆಗೂ ಪಟಾಕಿ ಉಳಿಸಿಡುವಂತೆ ಬರುವ ಸಲಹೆ ಕೂಡ ಪಾಲಿಸಬೇಕಿತ್ತು. ಈಗ ಆ ಉತ್ಸಾಹದ ದಿನಗಳು ಮರೆಯಾಗಿವೆ.
ಹಿಂದೆಲ್ಲ ಪಟಾಕಿ ಸಿಡಿಸುವ ಬರದಲ್ಲಿ ನಮ್ಮ ಪ್ರಕೃತಿ ನಾವೇ ಹಾಳು ಗೆಡವುತ್ತಿದ್ದೇೆವೆ ಎಂಬ ಪರಿವೆ ನಮಗಿರಲಿಲ್ಲ ಆದರೆ ಈಗ ಹಸುರು ಪಟಾಕಿಗೆ ಆಧ್ಯತೆ ನೀಡುವ ಕಾಲ ಬಂದಿದೆ. ಹಬ್ಬದ ಆಚರಣೆಯ ಹಿಂದಿನ ಮಹತ್ವ ಅರಿತಷ್ಟು ಅವುಗಳಿಗೆ ನಾವು ನೀಡುವ ಪ್ರಾಮುಖ್ಯತೆ ಕೂಡ ಹೆಚ್ಚಾಗುತ್ತದೆ.
ಹಬ್ಬದ ಮೊದಲ ದಿನ ಮಹಾಕಾಳಿ ನರಕಾಸುರನನನ್ನು ಕೊಂದ ದಿನ ಎಂದು ಹೇಳುತ್ತಾರೆ. ಈ ದಿನ ಉತ್ತರ ಭಾರತದಲ್ಲಿ ಕಾಳಿ ದೇವಿಯನ್ನು ಪೂಜಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ದೀಪಗಳ ಹಣತೆ ಬೆಳಗಲಾಗುವುದು. ಲಕ್ಷ್ಮೀ ಪೂಜೆ, ಅಭ್ಯುಂಜನ ಸ್ನಾನ, ಬಲಿಪಾಡ್ಯಮಿ ಎಲ್ಲವನ್ನು ಕೂಡ ಆಚರಿಸಲಾಗುವುದು.
ಇನ್ನು ನಮ್ಮ ಊರಾದ ಹೊಸ ಉಂಡವಾಡಿಯಲ್ಲಿ ಹಬ್ಬವನ್ನು ಆಚರಣೆ ಮಾಡುವಾಗ ಸ್ವತ್ಛತೆಗೂ ಆಧ್ಯತೆ ನೀಡುತ್ತೇವೆ. ರಸ್ತೆಯಲ್ಲೆ ಸ್ವತ್ಛ ಗೊಳಿಸಿ ನೀರೆರಚಿ ರಂಗೋಲಿ ಬಿಟ್ಟು ಸಂಭ್ರಮದ ಮೆರವಣಿಗೆಗೆ ಸಿದ್ಧತೆ ಮಾಡುತ್ತೇವೆ. ಈ ಮೂಲಕ ಬಸವಣ್ಣನ ಆಗಮನ ಊರಿಗಾಯ್ತು ಎಂಬ ನಂಬಿಕೆಯೂ ಇದೆ. ಮೂರು ದಿನಗಳ ರಾತ್ರಿ ಸಮಯ ಈ ಆಚರಣೆ ಇರಲಿದ್ದು ಅನೇಕ ಜನರು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ.
-ಕಿರಣ್ ಪಿ. ಕೌಶಿಕ್, ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.