Mirror: ಮನಸ್ಸಿನ ಕನ್ನಡಿ


Team Udayavani, May 31, 2024, 9:54 AM IST

5-uv-fusion

ಕನ್ನಡಿ ಯಾರಿಗೆ ಗೊತ್ತಿಲ್ಲ ಹೇಳಿ? ಮುಖವನ್ನು ಮನಸಿನ ಕನ್ನಡಿ ಎನ್ನುತ್ತಾರೆ. ಆದರೆ ಮುಖವನ್ನು ನೋಡಲು ಕನ್ನಡಿ ಬೇಕೇ ಬೇಕು. ಕನ್ನಡಿಯು ನಮ್ಮ ದೈನಂದಿನ ಬದುಕಿನಲ್ಲಿ ಅತಿ ಹೆಚ್ಚಾಗಿ ಬಳಸುವ ವಸ್ತುವಾಗಿದೆ. ಅದು ಜೀವನದ ಅವಿಭಾಜ್ಯ ಅಂಗದಂತಾಗಿದೆ ಎಂದರೆ ತಪ್ಪಿಲ್ಲ. ಇನ್ನು ಕೆಲವರಿಗೆ ಕನ್ನಡಿ ಇಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ. ಮನೆಯಿಂದ ಹೊರಡುವ ಮೊದಲು ನಾವು ಹೇಗೆ ಕಾಣಿಸುತ್ತೇವೆ, ಹಾಕಿರುವ ಬಟ್ಟೆ ಹೇಗಿದೆ. ಮುಖ ಹೇಗೆ ಕಾಣುತ್ತಿದೆ, ತಲೆ ಕೂದಲು ಸರಿಯಾಗಿದೆಯೋ ಹೀಗೆ ನೂರೆಂಟು ಪ್ರಶ್ನೆಗಳಿಗೆ ಉತ್ತರಿಸುವುದು ಜೀವವಿಲ್ಲದ ಇದೇ ಕನ್ನಡಿ. ಯಾವುದೇ ನಿಸ್ವಾರ್ಥ ತೋರದೆ ಉತ್ತಮ ಗೆಳತಿಯನ ರೀತಿ ಆತ್ಮ ವಿಶ್ವಾಸ ನೀಡುತ್ತದೆ.

ಹೆಣ್ಣು ಮತ್ತು ಕನ್ನಡಿಯದು ಜನುಮ ಜನುಮದ ಅನುಬಂಧ. ಎಂದಿಗೂ ಮುರಿಯದ ಸಂಬಂಧ. ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಶಿಲಾಬಾಲಿಕೆಯೊಬ್ಬಳು ಕನ್ನಡಿ ಹಿಡಿದು ಮುಖ ನೋಡಿಕೊಳ್ಳುತ್ತ ಬಳುಕಿ ನಿಂತಿರುವ ಕೆತ್ತನೆ ಅದ್ಭುತವೇ ಹೌದು. ಯುವತಿಯರು ಕನ್ನಡಿಯೆದುರು ನಿಂತಾಗ ಆ ಕ್ರಿಯೆಯಲ್ಲಿ ಯಾವ ಪರಿ ತನ್ಮಯರಾಗುತ್ತಾರೆ ಎಂಬುದಕ್ಕೆ ಆ ಕೆತ್ತನೆ ಸಾಕ್ಷಿರೂಪದಂತಿದೆ.

ಹೆಣ್ಣು ಮಕ್ಕಳು ಕನ್ನಡಿ ಮುಂದೆ ನಿಂತರೆ ಮುಗೀತು ಸಮಯದ ಪರಿವೇ ಇರುವುದಿಲ್ಲ. ಎಷ್ಟು ನೋಡಿಕೊಂಡರೂ ಸಮಾಧಾನವಾಗುವುದಿಲ್ಲ. ಹಾಗಂತ ಗಂಡು ಮಕ್ಕಳು ಏನು ಕಮ್ಮಿ ಇಲ್ಲ. ಎÇÉೇ ಕನ್ನಡಿ ಸಿಕ್ಕರೂ ಅಟಿÉಸ್ಟ್‌ ತಮ್ಮ ತಲೆಕೂದಲನ್ನು ಸರಿಮಾಡಿಕೊಂಡು ಚೆನ್ನಾಗಿ ಕಾಣುತ್ತೀನಾ ಎಂದು ನೋಡಿ ಮುಂದೆ ಸಾಗುವರು. ಆದರೆ ಈಗ ಕನ್ನಡಿ ಇಲ್ಲದೆ ಜೀವನವಿಲ್ಲ ಎನ್ನುವ ಹಾಗೆ ಆಗಿದೆ.

ಹಾಗಾಗಿ ಕನ್ನಡಿಗೆ ತುಂಬಾ ಡಿಮ್ಯಾಂಡ್‌. ಏನೇ ಹೇಳಿದರೂ ನನ್ನ ಪಾಲಿಗೆ ಕನ್ನಡಿ ಒಳ್ಳೆಯ ಗೆಳತಿಯಾಗಿದ್ದಾಳೆ. ನನ್ನೆಲ್ಲ ನೋವುಗಳಿಗೆ ಸ್ಪಂದಿಸದಿದ್ದರೂ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳಲು ಸದಾ ನನ್ನ ಜತೆ ಇರುವ ಗೆಳತಿ. ಕೆಲವೊಮ್ಮೆ ಬದುಕಿನ ಪರಿಸ್ಥಿತಿ ಕಂಡು ಅವಳೊಂದಿಗೆ ಹೇಳಿಕೊಳ್ಳುವಾಗ ನಾನೇಕೆ ನಿನ್ನ ಹಾಗೆ ಮೌನಿಯಾಗಬಾರದು ಎಂದೆನಿಸುತ್ತದೆ.

ಈಗೆಲ್ಲ ಕನ್ನಡಿ ಹಾಕಬೇಕಾದರೆ ವಾಸ್ತು ನೋಡಿ ಹಾಕುತ್ತಾರೆ. ವಾಸ್ತುವಿನಲ್ಲಿ ಕನ್ನಡಿ ಎನ್ನುವುದು ತುಂಬಾ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳುತ್ತಾರೆ. ಮನೆಯಲ್ಲಿ ಹಿರಿಯರು ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು ಎಂದು ಹೇಳುತ್ತಾರೆ ಹಾಗೂ ಒಡೆದರೆ ಅಪಶಕುನ ಎಂದು ಹೇಳುತ್ತಾರೆ. ನಂಬಿಕೆಗಳೇನೇ ಇದ್ದರೂ ಕನ್ನಡಿ ನಮ್ಮ ವ್ಯಕ್ತಿತ್ವವನ್ನು ನಮಗೆ ತೋರಿಸುತ್ತದೆ ಎಂಬುದಂತೂ ನಿಜ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಕನ್ನಡಿ ಬೇಕೇ ಬೇಕು.

-ಸಿಂಧು ಬಿ.ಯು.

ಬೇಲೂರು

ಟಾಪ್ ನ್ಯೂಸ್

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈರ್‌ ಬ್ರ್ಯಾಂಡ್‌ʼ ಎಂಟ್ರಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

042174

WFI: ಕುಸ್ತಿಪಟುಗಳಿಗೆ ಡಬ್ಲ್ಯುಎಫ್ಐ ತಡೆ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.