Terrace Garden: ಮನೆಗೊಂದು ತಾರಸಿ ತೋಟ

Team Udayavani, Jul 5, 2024, 3:06 PM IST

13-uv-fusion

ಕೃಷಿ ಮೂಲ ದೇಶವಾಗಿರುವ ನಮ್ಮಲ್ಲಿ ಕಾಂಕ್ರೀಟ್‌ ಹಾಗೂ ಡಾಂಬರು ರಸ್ತೆಗಳ ನಡುವಿನ ಅಲ್ಪ ಜಾಗದಲ್ಲೇ ತಲೆ ಎತ್ತಿರುವ ತಾರಸಿ ಮನೆಯ ಮೇಲ್ಛಾವಣಿಯಲ್ಲಿ ಸ್ವಲ್ಪಮಟ್ಟಿಗೆ ಕೃಷಿ ನಡೆಸುವ ಕೆಲಸ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

ಈ ತಾರಸಿ ಕೃಷಿಯನ್ನು ಯೋಜನಾ ಬದ್ಧವಾಗಿ ನಡೆಸಿದರೆ ಅದರಿಂದ ಹೆಚ್ಚಿನ ಫ‌ಸಲನ್ನು ಆದಾಯವನ್ನು ಗಳಿಸಬಹುದೆಂಬ ಹೆಚ್ಚಿನ ತಿಳುವಳಿಕೆ ಜನಕ್ಕಿಲ್ಲ. ತಾರಸಿ ಕೃಷಿಯ ಮೂಲಕ ಮನಸ್ಸನ್ನು ಹೆಚ್ಚು ಸಂತೋಷ ಆದಾಯಕವಾಗಿಯೂ ಆರೋಗ್ಯದಾಯಕವಾಗಿಯೂ ಇಡುವುದೇ ಒಂದು ಹೆಚ್ಚಿನ ಲಾಭ.

ಹೂವುಗಳು ಮತ್ತು ಸಸ್ಯಗಳು ನಿಮ್ಮ ಅಪಾರ್ಟ್‌ಮೆಂಟ್‌ ಅನ್ನು ಬೆಳಗಿಸಲು ಮತ್ತು ಮನೆಯ ಅಂದವನ್ನು ಹೆಚ್ಚು ಮಾಡಲು ಉತ್ತಮ ಮಾರ್ಗವಾಗಿದೆ. ಹೂವುಗಳು ನಿಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಗಾಳಿಯನ್ನು ಸ್ವತ್ಛಗೊಳಿಸಲು ಸಹಾಯ ಮಾಡಬಹುದು.

ಕೆಲವು ಹೂವುಗಳು ಸುವಾಸನೆಯಿಂದ ಕೂಡಿರುತ್ತವೆ, ಇತರ ಹೂವುಗಳು ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳನ್ನು ಆಕರ್ಷಿಸುತ್ತವೆ, ಮತ್ತು ಜೇನುನೊಣ ಅಥವಾ ಚಿಟ್ಟೆ ಮಕರಂದವನ್ನು ಹುಡುಕುತ್ತಿರುವಾಗ ಹೂವುಗಳ ಮೇಲೆ ಬೀಸುವುದನ್ನು ವೀಕ್ಷಿಸಲು ಇದು ಸುಂದರವಲ್ಲವೇ.

ತಾರಸಿ ಕೃಷಿ ಎಂದರೆ ಸಾಮಾನ್ಯ ವಾಗಿ ಸೊಪ್ಪು ತರಕಾರಿ ಹಣ್ಣು ಇದಿಷ್ಟು ಕಣ್ಣ ಮುಂದೆ ಬರುತ್ತದೆ. ಆದರೆ ಮರ ಸ್ವರೂಪದ ಗಿಡಗಳನ್ನು ಕೂಡ ಟೆರೆಸ್‌ ನಲ್ಲಿ ಬೆಳೆಯಲು ಸಾಧ್ಯವಿದೆ. ಪಾಟ್‌ನಲ್ಲಿ ಬೆಳೆಸಿದ ಹಲಸಿನ ಗಿಡಗಳು ನೆಲದಲ್ಲಿ ಬೆಳೆಸಿದ ಹಲಸಿನ ಮರದ ರೀತಿಯಲ್ಲಿ ಹಣ್ಣು ನೀಡಿದ ಉದಾಹರಣೆಗಳಿವೆ.

ಬೆಂಗಳೂರಿನ ಶಾಖಕ್ಕೆ ಏರ್ ಕೂಲರ್‌ ಇದ್ದರೂ ಬೆಳಗ್ಗೆ 3 ರವರೆಗೆ ನಿದ್ರೆ ಬಾರದ ಪರಿಸ್ಥಿತಿಯಲ್ಲಿರುವ ಜನರಿಗೆ ತಂಪುದಾಯಕ ವಾತಾವರಣ ಬೇಕೆಂದಲ್ಲಿ ತಾರಸಿನ ಮೇಲೆ ಗಿಡ ನೆಡಲೇಬೇಕು! ಸಿಲಿಕಾನ್‌ ಸಿಟಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಬಿಸಿಲಿನ ಬೇಗೆಯಿಂದ ಮುಕ್ತಿ ಬೇಕಿದ್ದಲ್ಲಿ ಟೆರೆಸ್‌ ಮೇಲೆ ಗಾರ್ಡನ್‌ ನಿರ್ಮಾಣ ಮಾಡಬಹುದು.

ತಾರಸಿ ತೋಟವು ಮೇಲ್ಛಾವಣಿ ಅಥವಾ ಬಾಲ್ಕನಿಯನ್ನು ಹಸಿರು ಓಯಸಿಸ್‌ ಆಗಿ ಪರಿವರ್ತಿಸುತ್ತದೆ. ಪ್ರಕೃತಿಯನ್ನು ನಗರ ಪ್ರದೇಶಗಳಿಗೆ ತರಲು ಇದು ಪರಿಪೂರ್ಣ ಮಾರ್ಗವಾಗಿದೆ, ನಿಮ್ಮ ಮನೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ತಾರಸಿ ತೋಟಗಳು ಮನೆಯಲ್ಲಿಯೇ ಸಸ್ಯಗಳು ಮತ್ತು ತಾಜಾ ಗಾಳಿಯನ್ನು ಆನಂದಿಸಲು ಅವಕಾಶವನ್ನು ಒದಗಿಸುತ್ತದೆ.

ಟೆರೇಸ್‌ ಗಾರ್ಡನ್‌ ಅನ್ನು ಮಕ್ಕಳಿಗೆ ಆಕರ್ಷಕವಾಗಿಸಲು ಕೆಲವು ಸರಳ ವಿಧಾನಗಳು ಇಲ್ಲಿವೆ:

  1. ವರ್ಣರಂಜಿತ ಸಸ್ಯಗಳು ಮತ್ತು ಮಡಕೆಗಳು : ಪ್ರಕಾಶಮಾನವಾದ ಮತ್ತು ವರ್ಣರಂಜಿತ ಹೂವುಗಳು ಮತ್ತು ಮಡಕೆಗಳನ್ನು ಬಳಸಿ.
  2. ಮಿನಿ ಗಾರ್ಡನ್‌ ಏರಿಯಾ: ಮಕ್ಕಳು ಸ್ವಂತ ಸಣ್ಣ ವಿಭಾಗವನ್ನು ನೆಡಲು ಮತ್ತು ಆರೈಕೆ ಮಾಡಲು ಅವಕಾಶ ಮಾಡಿಕೊಡಿ.
  3. ಮಕ್ಕಳನ್ನು ಆಕರ್ಷಿಸಲು ಪಕ್ಷಿಗಳನ್ನ ನೇತುಹಾಕಿ.
  4. ಸಣ್ಣ ಸ್ಯಾಂಡಾºಕ್ಸ್‌ ಅಥವಾ ವಾಟರ್‌ ಪ್ಲೇ ಏರಿಯಾ ಸೇರಿಸಿ. ಈ ಆಲೋಚನೆಗಳು ಟೆರೇಸ್‌ ಗಾರ್ಡನ್‌ ಅನ್ನು ಮಕ್ಕಳಿಗೆ ಆಕರ್ಷಕವಾಗಿ ಮತ್ತು ವಿನೋದಮಯವಾಗಿ ಮಾಡಬಹುದು.

ತಾರಸಿ ಕೃಷಿಗೆ ಪ್ರಾರಂಭಿಕ ಸಿದ್ಧತೆ

1 ತಾರಸಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

2 ಸೂರ್ಯನ ಬೆಳಕು ಸರಿಯಾದ ರೀತಿಯಲ್ಲಿ ಬೀಳುವಂತಿರಬೇಕು.

3 “ನೀರಿನ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು.

4 “ನೀರು ಶೇಖರಣೆಯಾಗದೆ ತಾರಸಿಯಲ್ಲಿ ಸರಾಗವಾಗಿ ಹರಿದು ಹೋಗುವಂತ ವ್ಯವಸ್ಥೆ ಇರಬೇಕು.

5 “ಒಂದು ವೇಳೆ ನೀರು ನಿಲ್ಲುವಂತೆ ಅಥವಾ ಸೋರಿಕೆ ಸಾಧ್ಯತೆ ಇದ್ದರೆ ಟಾರ್ಪಲ್‌ ಸಿಗುತ್ತದೆ ಅದನ್ನು ತರಿಸಿನ ಮೇಲೆ ಹಾಕಿ ನಂತರ ಅದರ ಮೇಲೆ ಗಿಡ ನೆಡಲು ಬೇಕಾದ ವ್ಯವಸ್ಥೆ ಮಾಡಬಹುದು ಇದರಿಂದ ನೀರು ನೇರವಾಗಿ ತಾರಸಿಗೆ ತಲುಪುವುದು ತಪ್ಪುತ್ತದೆ.

6 “ಮಳೆಗಾಲದಲ್ಲಿ ಮಾತ್ರ ಕೃಷಿ ಮಾಡ ಬಯಸುವವರು ಗೋಣಿಚೀಲವನ್ನು ಸಹ ಬಳಸಬಹುದು.

7 “ಪಾಟ್, ಉದ್ದ ಚಟ್ಟಿ, ಉದ್ದನೆಯ ಬಾಕ್ಸ್‌ ಮಾದರಿಯ ಚಟ್ಟಿ, ಡಬ್ಬಿ, ಪ್ಲಾಸ್ಟಿಕ್‌ ಬಾಕ್ಸ್‌, ಪ್ಲಾಸ್ಟಿಕ್‌ ಬ್ಯಾಗ್‌, ಬಾಟಲ್‌ , ಮಾರುಕಟ್ಟೆ ಗಾರ್ಡನಿಂಗ್‌ ಪ್ಲಾಸ್ಟಿಕ್‌ ಬ್ಯಾಗ್ಗಳು ಲಭ್ಯವಿದೆ.

8 “ತಾರಸಿ ಮೇಲೆ ಪಾಲಿಹೌಸ್‌ ಹಾಕುವ ಮೂಲಕ ಕೃಷಿ ಮಾಡುವುದು ಮತ್ತೂಂದು ಬಗ್ಗೆ.

ಟಾಪ್ ನ್ಯೂಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

12

Bigg Boss: ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಕಪಾಳಮೋಕ್ಷ; ಬಿಗ್‌ ಬಾಸ್‌ ಮನೆಯಲ್ಲಿ ಹೈಡ್ರಾಮಾ

Karachi: ಪಾಕಿಸ್ತಾನ್‌ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ

Karachi: ಪಾಕಿಸ್ತಾನ್‌ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ

Why did he ignore the BCCI instruction to play Ranji? Ishaan replied

IshanKishan; ರಣಜಿ ಆಡಬೇಕೆಂಬ ಬಿಸಿಸಿಐ ಸೂಚನೆ ನಿರ್ಲಕ್ಷ್ಯ ಮಾಡಿದ್ದೇಕೆ? ಉತ್ತರಿಸಿದ ಇಶಾನ್

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-father

Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

15-

Father: ಅಪ್ಪನೆಂಬ ಆಕಾಶ

12-uv-fusion

UV Fusion: ಕಾಲೆಳೆಯುವ ಕೈಗಳು ನಮ್ಮದಾಗದಿರಲಿ…

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

‌Kollywood: ವಿಜಯ್‌ ಸೇತುಪತಿ 50ನೇ ಚಿತ್ರ ʼಮಹಾರಾಜʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Ranebennur: ‍‍‌‍ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು; ಗ್ರಾಮದಲ್ಲಿ ಆತಂಕ

Ranebennur: ‍‍‌‍ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು; ಗ್ರಾಮದಲ್ಲಿ ಆತಂಕ

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

Baba Waterfall:ಭಾರೀ ಫೇಮಸ್ಸು ಬಾಬಾ ಫಾಲ್ಸ್:ಅಂಬೋಲಿಗಿಂತ ಇಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ

12

Bigg Boss: ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಕಪಾಳಮೋಕ್ಷ; ಬಿಗ್‌ ಬಾಸ್‌ ಮನೆಯಲ್ಲಿ ಹೈಡ್ರಾಮಾ

Ronny

Ronny; ಕಿರಣ್‌ ರಾಜ್‌ ನಟನೆಯ ಸಿನಿಮಾದ ಹಾಡು ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.