ನಾನು ನನ್ನ ಕನಸು: ನಾನೂ ನನ್ನ ಕನಸೂ ಆಗಬೇಕು ನನಸು


Team Udayavani, May 31, 2020, 1:25 PM IST

ನಾನು ನನ್ನ ಕನಸು: ನಾನೂ ನನ್ನ ಕನಸೂ ಆಗಬೇಕು ನನಸು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಾನು ಪ್ರತಿ ದಿನ ಕಾಲೇಜಿಗೆ ಹೊರಟಾಗ “ನೀನೇಕೆ ಕಾಲೇಜಿಗೆ ಹೋಗಬೇಕು? ಎಂಬ ಪ್ರಶ್ನೆಯನ್ನು ನನ್ನಮನಸ್ಸು ಕೇಳುತ್ತಿತ್ತು.

ಪ್ರತಿ ದಿನ ಮನಸ್ಸಿನದ್ದು ಇದೇ ಪ್ರತಿಭಟನೆ. ನೀನು ಕಾಲೇಜಿಗೆ ಹೋಗಬೇಡ, ಥಿಯೇಟರ್‌ನಲ್ಲಿ ಹೊಸ ಸಿನೆಮಾ ಬಂದಿದೆ.

ಕಾಲೇಜಿಗೆ ಬಂಕ್‌ ಮಾಡಿ ಸ್ನೇಹಿತರ ಜತೆ ಸುತ್ತಾಡಲು ಹೋಗು ಎಂದು ಮನಸ್ಸು ಹೇಳುವುದಿದೆ. ಆದರೆ ನಾನು ಮನಸ್ಸಿನ ಎಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ, ಮನಸ್ಸನ್ನು ಕೇಂದ್ರೀಕರಿಸಿ ಕಾಲೇಜು ಮೆಟ್ಟಿಲೇರುತ್ತಿದ್ದೆ. ಯಾಕೆಂದರೆ ನನಗೆ ನನ್ನ ಜೀವನದ ಗುರಿ ಮುಟ್ಟುವುದು ಅನಿವಾರ್ಯ.

ಹಾಗೆಂದು ನಾನು ಮುಖ್ಯಮಂತ್ರಿಯ ಕುರ್ಚಿಗೋ ಅಥವಾ ಬಿಲಿಯನೇರ್‌ ಆಗುವ ಕನಸು ಕಾಣುತ್ತಿದ್ದೀನಿ ಅಂತ ಭಾವಿಸಬೇಡಿ. ನನ್ನ ಪ್ರಕಾರ ಇದ್ಯಾವುದೂ ಜೀವನದ ಗುರಿ ಎನ್ನಲು ಅರ್ಹವಾದುದಲ್ಲ. ನನ್ನ ಜೀವನದ ಗುರಿ ರಾಜನಾಗುವುದು ಎಂದಿದ್ದ ಒಬ್ಬ ಯುವಕ ತನ್ನಿಚ್ಛೆಯಂತೆ ರಾಜನಾದ. ಬಳಿಕ ಬುದ್ಧನ ಅವನಲ್ಲಿ ಕೇಳಿದ ಮೊದಲ ಪ್ರಶ್ನೆ ‘ನೀನು ಸಾವಿಗೆ ಸಿದ್ಧನಾಗಿದ್ದೀಯಾ’? ಎಂದು.

ಹೌದು. ಬುದ್ಧನ ಪ್ರಕಾರ ತಮ್ಮ ಬಯಕೆಯನ್ನು ಈಡೇರಿಸಿದ ಬಳಿಕ ಜೀವನ ಸಾರ್ಥಕವಾಗುತ್ತದೆ ಎಂಬುದು. ತನ್ನ ಗುರಿ ತಲುಪಿದ ಬಳಿಕ ನಾನು ಸಾವಿಗೆ ಅಂಜುವುದಿಲ್ಲ ಎಂಬ ಭಾವನೆ ಬಂದಾಗ ನಾವು ಗುರಿಯನ್ನು ಕ್ರಮಿಸಿದ್ದೇವೆ ಎಂದರ್ಥ.

ಹಾಗಂತ ನಾನು ನನ್ನ ಜೀವನದಲ್ಲಿ ಇಷ್ಟೊಂದು ತತ್ವ ಶಾಸ್ತ್ರದ ಸಿದ್ಧಾಂತಗಳನ್ನು ಅಳವಡಿಸಿದ್ದೇನೆ ಎಂದು ಭಾವಿಸಬೇಡಿ. ನನ್ನ ಗುರಿಯನ್ನು ಇಲ್ಲಿ ಪ್ರಸ್ತುತ ಪಡಿಸಲೆಂದು ಈ ಉದಾಹರಣೆಯನ್ನು ಬಳಸಿದ್ದೇನೆ. ಒಂದೇ ಮಾತಿನಲ್ಲಿ ಹೇಳುವುದಾದರೇ ನನ್ನ ಗುರಿ ನಾನು ಬೆಳಗಬೇಕು. ನನ್ನ ಜತೆ ಇತರರೂ ಬೆಳಗಬೇಕು. ನನ್ನ ಗುರಿ ಎಂದಾಗ ನೆನಪಾಗುವುದು ಅಬ್ದುಲ್‌ ಕಲಾಂ ಹೇಳಿದ ಮಾತು “ನೀನು ಸೂರ್ಯನಂತೆ ಬೆಳಗಬೇಕಾದರೆ ಮೊದಲು ಸೂರ್ಯನಂತೆ ಉರಿಯಬೇಕು.’

ಅಬ್ದುಲ್‌ ಕಲಾಂ ಅವರ ಪ್ರಕಾರ ಕಷ್ಟಪಟ್ಟರೆ ಮಾತ್ರವೇ ಇಷ್ಟಾರ್ಥ ಈಡೇರುವುದು. ಇದೇ ಕಾರಣದಿಂದಾಗಿ ನಾನು ನನ್ನ ಗುರಿಯನ್ನು ಹೊಂದಲು ನನ್ನ ಎಲ್ಲಾ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ ಕಾಲೇಜು ಮೆಟ್ಟಿಲೇರಿ ನನ್ನ ಗುರಿಯನ್ನು ತಲುಪಬೇಕೆಂಬ ಛಲ. ನನ್ನ ಕಣ್ಣುಗಳು ಕನಸುಗಳಿಂದ ತುಂಬಿಕೊಂಡಿದ್ದು, ನಿದ್ರೆಯ ಮಂಪರಿನಲ್ಲಿ ಆವರಿಸುವ ಕನಸುಗಳನ್ನು ಮೀರಿಸುವಂತೆ ನನ್ನ ನಿಜ ಜೀವನದ ಕನಸುಗಳು ನನ್ನನ್ನು ಎಚ್ಚರಿಸುತ್ತಿವೆ.

ಸರಳವಾಗಿ ಹೇಳುವುದಾದರೆ ನನ್ನ ತಂದೆ- ತಾಯಿ ಪಕ್ಕದ ಮನೆಯ ಹುಡುಗನಿಗೆ ಕೆಲಸ ಸಿಕ್ಕಿದ ಸಂಭ್ರಮವನ್ನು ಕಂಡು ನನ್ನ ಮಗಳಿಗೂ ಯಾವುದಾದರೂ ಒಳ್ಳೆಯ ಉದ್ಯೋಗ ಸಿಗ ಬೇಕು, ಕೈ ತುಂಬಾ ಸಂಬಳ ಇರಬೇಕು ಎಂದು ಬಯಸುತ್ತಾರೆ. ಅವರ ಕನಸುಗಳನ್ನು ನಾನು ಯಾವತ್ತಿಗೂ ನುಚ್ಚು ನೂರು ಮಾಡಲಾರೆ. ನಾನೂ ಅದೇ ರೀತಿ ಕನಸು ಕಾಣುತ್ತಿದ್ದೇನೆ. ತಂದೆ ತಾಯಿಯ ಆಸೆಗಳನ್ನು ಈಡೇರಿಸುವುದೂ ನನ್ನ ಗುರಿಯ ಭಾಗ.

ಕೇವಲ ನನ್ನ ಕುಟುಂಬಕ್ಕೇ ಉಪಕರಿಸಿದರೆ ಸಾಲದು. ನನ್ನಿಂದ ಈ ಸಮಾಜಕ್ಕೂ ಏನಾದರೂ ಉಪಕಾರವಾಗಬೇಕು. ನನ್ನ ಕುಟುಂಬ ಹಾಗೂ ಸಮಾಜ ಸೇವೆ ಮಾಡಲು ನಾನು ಉತ್ತಮ ಪತ್ರಕರ್ತೆಯಾಗಬೇಕು. ಕೇವಲ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತೆಯಲ್ಲ ಬದಲಾಗಿ ಸಮಾಜದ ನ್ಯೂನತೆಗಳನ್ನು ಮುಖ್ಯವಾಹಿನಿಯ ಗಮನಕ್ಕೆ ತರಬೇಕು. ಈ ಮೂಲಕ ಬಡ ಜನರ, ಮುಗ್ಧರ, ಹಿಂದುಳಿದ ವರ್ಗದವರ ಧ್ವನಿಯಾಗಬೇಕು.

ಇವೆಲ್ಲವೂ ಕೈಗೆಟಕದ ಆಕಾಶದ ನಕ್ಷತ್ರ ಎಂದು ಭಾವಿಸಬೇಡಿ. ಕಠಿನ ಪರಿಶ್ರಮ, ಉತ್ತಮ ಮಾರ್ಗದರ್ಶನ, ಏನೇ ಆದರೂ ಬದಲಾಯಿಸದ ಗುರಿ ಇದ್ದರೆ ಯಾವುದನ್ನೂ ಸಾಧಿಸಬಹುದು. ನಾನು ಸೂರ್ಯನಂತೆ ಹೊಳೆಯಬೇಕಾದರೇ ಸೂರ್ಯನಂತೆ ಉರಿಯಲೇಬೇಕು. ಈ ಗುರಿಯನ್ನು ಇಟ್ಟುಕೊಂಡು ಸಾಕಾರದತ್ತ ಹೊರಟಿದ್ದೇನೆ.

– ಶ್ರೀ ನಿಧಿ ರಾವ್‌, ಅಂಡಾರು, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ

ಟಾಪ್ ನ್ಯೂಸ್

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.