ವ್ಯಕ್ತಿ ಚಿತ್ರಣ: ವಿಶ್ವನಾಥನ್ ಆನಂದ್
ಯುವಿ ಫ್ಯೂಷನ್ ; ಹದಿನೈದು ದಿನಗಳಿಗೊಮ್ಮೆ ಯುವ ಬೆಳದಿಂಗಳು
Team Udayavani, May 31, 2020, 1:48 PM IST
ವಿಶ್ವನಾಥನ್ ಆನಂದ್ ಚೆಸ್ ಆಟದ ಬಹುದೊಡ್ಡ ಪ್ರತಿಭೆ.
ತನ್ನ ಚಾಣಾಕ್ಷತನದಿಂದ ಹಲವು ಪಂದ್ಯಾಟಗಳಲ್ಲಿ ಗೆಲುವಿನ ನಗು ಬೀರಿದ ಅಪ್ರತಿಮ ಕ್ರೀಡಾ ಸಾಧಕ.
ಇವರ ಸಾಧನೆಯ ಕುರಿತು ಸಂದ ಹಲವು ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ವಿವರಿಸುತ್ತಾ ಹೋಗುತ್ತವೆೆ.
ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಈ ಗ್ರ್ಯಾಂಡ್ ಮಾಸ್ಟರ್ ದಾಖಲೆಗಳ ಸರದಾರನೂ ಹೌದು.
ಇವರು ಹುಟ್ಟಿದ್ದು 1969ರ ಡಿಸೆಂಬರ್ 11ರಂದು. ಬಾಲ್ಯದಲ್ಲಿರುವಾಗ ತಾಯಿ ಸುಶೀಲ ಅವರಿಂದ ಚೆಸ್ ಕಲಿತ ಆನಂದ್ ಬಳಿಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ದರು. ಮೊದಲ ವಿಶ್ವ ಚಾಂಪಿಯನ್ ಪಟ್ಟ ಗೆದ್ದಾಗ ಆನಂದ್ ಅವರ ವಯಸ್ಸು 37.
ಭಾರತದ ಮೊದಲ ವಿಶ್ವ ಚಾಂಪಿಯನ್
2000ರಿಂದ 2002ನೇ ಇಸವಿಯಲ್ಲಿ ನಡೆದ ಪೈಡ್ ವರ್ಲ್ಡ್ ಚೆಸ್ ಚಾಂಪಿಯನ್ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಕ್ಲಾಸಿಕಲ್ ಪಂದ್ಯಾಟಕ್ಕಿಂತ ಭಿನ್ನ ನಿಯಮಗಳ್ಳುಳ ಚೆಸ್ ವಿಭಾಗದಲ್ಲಿ ಆಟವಾಡಿ ‘ನಿರ್ವಿವಾದ ಆಟಗಾರ’ ಎಂಬ ಬಿರುದಿನೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 2008ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಪಂದ್ಯಾಟದಲ್ಲಿ ವಲ್ದಿಮೀರ್ ಕ್ರಾಮ್ನಿಕ್ ಎದುರು ಜಯ ಸಾಧಿಸುವ ಮೂಲಕ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಮೂರು ದಶಕಗಳ ಚೆಸ್ ಚಾಣಕ್ಷ
ಸುಮಾರು ಮೂರು ದಶಕಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಮಿಂಚಿ, ವಿಶ್ವ ಭೂಪಟದಲ್ಲಿ ಭಾರತೀಯ ಚೆಸ್‌ಗೆ ವಿಶೇಷ ಸ್ಥಾನ ಕಲ್ಪಿಸಿಕೊಡುವಲ್ಲಿ ಆನಂದ್ ಅವರ ಪಾತ್ರ ಅಗಾಧ. ಸತತವಾಗಿ 2010ರಲ್ಲಿ ವೆಸ್‌ಲಿನ್ ವಿರುದ್ಧ 6.5 – 5.5 ಅಂಕಗಳ ಅಂತರಲ್ಲಿ ಸ್ಪರ್ಧೆ ಗೆದಿದ್ದು, 2012ರಲ್ಲಿ ಬೊರಿಸ್ ಗೆಲ್‌ಪೆಂಡ್ ನಡುವೆ ನಡೆದ ಪಂದ್ಯದಲ್ಲಿ ಸಮಾನ ಅಂಕಗಳನ್ನು ಗಳಿಸುವ ಮೂಲಕ ಪಂದ್ಯ ಟೈ ಆಗಿತ್ತು. 2007 ರಿಂದ 2008ರ ವರೆಗೆ ನಾನಾ ಕಡೆ ನಡೆದ ಪಂದ್ಯಾವಳಿಗಳಲ್ಲಿ ಜಯ ಸಾಧಿಸಿದ್ದರು.
6 ಬಾರಿ ಚಾಂಪಿಯನ್‌ಶಿಪ್ 5ರಲ್ಲಿ ಆನಂದ
ಒಟ್ಟು ಆರು ಬಾರಿ ನಡೆದಿರುವ ವಿಶ್ವ ಚಾಂಪಿಯನ್ ಚೆಸ್ ಪಂದ್ಯಾಟದಲ್ಲಿ 5 ಬಾರಿ ಆನಂದ್ ಚಾಂಪಿಯನ್ ಆಗಿದ್ದಾರೆ. 2007ರಲ್ಲಿ ಮುಡಿಗೇರಿಸಿಕೊಂಡ ‘ವಿಶ್ವ ಗ್ರ್ಯಾಂಡ್ ಮಾಸ್ಟರ್’ ಎಂಬ ಪಟ್ಟವನ್ನು 15 ತಿಂಗಳುಗಳ ಕಾಲ ಕಾಯ್ದುಕೊಂಡಿದ್ದರು. 2008ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 8 ವರ್ಷಗಳ ಬಳಿಕ ಸೋಲುಂಡಿದ್ದರು.
ಪದ್ಮವಿಭೂಷಣ ಪುರಸ್ಕಾರ
ತನ್ನ ಕ್ರೀಡಾ ಪ್ರತಿಭೆಯಿಂದ ಆಟಗಾರರಿಗೆ ಸ್ಪೂರ್ತಿ ತುಂಬಿದ ಏಕೈಕ ‘ಗ್ರ್ಯಾಂಡ್ ಮಾಸ್ಟರ್’ ಅನ್ನು ಹೊಂದಿದ ಭಾರತದಲ್ಲಿ ಹಲವು ನಿಪುಣ ಚೆಸ್ ಆಟಗಾರರನ್ನು ಹುಟ್ಟು ಹಾಕಿದ ಕೀರ್ತಿ ಆನಂದ್‌ಗೆ ಸಲ್ಲುತ್ತದೆ. ಕ್ರೀಡಾ ಕ್ಷೇತ್ರಕ್ಕೆ ಆನಂದ್ ಸಲ್ಲಿಸಿದ ಸೇವೆಯನ್ನು ಗಮನಿಸಿದ ಭಾರತ ಸರಕಾರ 2007ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕರಿಸಿ ಗೌರವಿಸಿತ್ತು. 1991-92ರಲ್ಲಿ ‘ರಾಜೀವ್ ಗಾಂಧಿ ಖೇಲ್’ ಪ್ರಶಸ್ತಿಯೂ ಇವರಿಗೆ ಸಂದಿತ್ತು.
ಜನನ: 11 ಡಿಸೆಂಬರ್ 1969
ತಂದೆ: ಕೃಷ್ಣಮೂರ್ತಿ ವಿಶ್ವನಾಥನ್
ತಾಯಿ: ಸುಶೀಲಾ
ಪ್ರಮುಖ ಪುರಸ್ಕಾರಗಳು: ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ, ಚೆಸ್ ಆಸ್ಕರ್, ಅರ್ಜುನ ಅವಾರ್ಡ್, ರಾಜೀವ್‌ಗಾಂಧಿ ಖೇಲ್ ಹೀಗೆ ಹತ್ತು ಹಲವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.