UV Fusion: ಚಂದ್ರನಿಗೆ ಭಾರತದ ಅಪ್ಪುಗೆ
Team Udayavani, Sep 11, 2023, 10:56 AM IST
ಚಂದ್ರನ ಮೇಲೆ ವಿಕ್ರಮ್‌ನ ಹೆಜ್ಜೆ ಗುರುತು. ಇಸ್ರೋ ಕನಸು. ನಿಗದಿತ ಅವಧಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು.
ಇಸ್ರೋದ ಈ ಸಾಧನೆಯಿಂದ ಮೊದಲ ಬಾರಿಗೆ ದಕ್ಷಿಣ ಧ್ರುವದಲ್ಲಿ ಇಳಿಸಿದ ಮೊದಲ ಗಗನನೌಕೆ ಭಾರತ ದೇಶದ್ದು ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೇ ದೇಶ ಎಂಬ ಹಿರಿಮೆಗೆ ಸಪ್ತಾಹದ ಗರಿಮೆ ತೋರಿಸಿದೆ ಭಾರತ ದೇಶ. ಇದುವರೆಗೆ ಅಮೆರಿಕಾ, ರಷ್ಯಾ ಮತ್ತು ಚೀನಾ ಈ ಸಾಧನೆಯನ್ನು ಮಾಡಿದ್ದವು. ಇಸ್ರೋ ಶಶಿಭೂಷಣಪ್ರಾಯ ಸಾಧನೆ ಎಂದರು ತಪ್ಪಾಗಲಾರದು.
ಶಶಿಯ ನೆಲದಲ್ಲಿ ಇಸ್ರೋ ಮೈಲುಗಲ್ಲು. ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಎಲ್ ಐಬಿಎಸ್ ಚಂದ್ರನ ಖನಿಜ ಬಗ್ಗೆ ಮಾಹಿತಿ ನೀಡುವ ಕಾರ್ಯ ನಿರ್ವಹಿಸುತ್ತೆ. ಚಂದ್ರಯಾನ 3 ಹಿಂದೆ ಅದೆಷ್ಟೋ ವಿಜ್ಞಾನಿಗಳು ಕಠಿನ ಶ್ರಮದ ಫಲ ಇದೆ. ಅವಿರತ ಶ್ರಮ, ಯಶಸ್ವಿಯಾಗಿ ಹಗಲು ಇರುಳು ನೋಡದೆ ಕೆಲಸ ಮಾಡಿದೆ.
ಈ ವಿಜಯ ಹಿಂದೆ ಅದೆಷ್ಟೋ ನೋವು ಕಷ್ಟಗಳ ಯಶೋಗಾಥೆ ಇದೆ. ಚಂದ್ರಯಾನ 3 ಅಮೋಘ ಯಶಸ್ಸು ಸಾಧನೆ ಕಂಡು ಇಡೀ ದೇಶವನ್ನೇ ಭಾರತದ ಕಡೆಗೆ ಮುಖ ಮಾಡುವಂತೆ ಮಾಡುವುದಲ್ಲದೆ ಹುಬ್ಬೇರಿಸುವಂತೆ ಮಾಡಿದೆ.
ಶಶಿಯಜನಿಗೆ ಅಪ್ಪಿಗೆಯ ಘಳಿಗೆ ಎಸಕದ ಜಾಣಾತ್ಮಗೆ ಚೆಂದಳಿರು ಕಂಚತರಂಗ್ಕಂದುಕ ಚಂದ್ರರಿ ಅನುಬಂಧಕ್ಕೆ ನಮನ ವಿಜ್ಞಾನಿಗಳ ಹೊಸಾಲೋಚನೆಗಳಿಗೆ ಶರಣೋ
ಚಂದ್ರನ ಮೇಲೆ ಇಳಿದಿರುವ ಪ್ರಜ್ಞಾನ್ ರೋವರ್ ಭೂಮಿಗೆ ರವಾನಿಸಿಕೊಡುವ ಚಂದ್ರನ ಮೇಲಿರುವ ತಾಪಮಾನ, ಛಾಯಾಚಿತ್ರ, ಮಣ್ಣಿನ ಮಾದರಿ, ಚಿತ್ರಣವನ್ನು, ವಿಡಿಯೋ ಮಹತ್ವದ ಮಾಹಿತಿಗಳು ಲಭ್ಯವಾಗುತ್ತಿದೆ. ಚಂದ್ರನ ಮೇಲೆ ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಇಡೀ ಭಾರತವೇ ಹೆಮ್ಮೆ ಪಡುವಂತಹ ವಿಷಯ. ಚಂದ್ರಯಾನ-3 ಭಾರತದ ಆಸ್ಟ್ರಲ್ ಭರವಸೆ ಮತ್ತು ಅನ್ವೇಷಣೆಯ ಸಂಕೇತವಾಗಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ಚಂದ್ರಯಾನ 3 ವಿಜಯೋತ್ಸವದ ನೆನಪಿಗಾಗಿ ಪಿಎಂ ಮೋದಿ ಘೋಷಿಸಿದಂತೆ ಪ್ರತಿ ವರ್ಷ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತದೆ.
ಸಂತೋಷ ಕಾಖಂಡಕಿ
ಬಾದಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.